Health Tips: ಬಸಳೆ ಸೊಪ್ಪಿನಲ್ಲಿ ಎಷ್ಟೆಲ್ಲಾ ಔಷಧೀಯ ಗುಣಗಳು ಇವೆ, ಇದರ ಸೇವನೆ ಆರೋಗ್ಯಕ್ಕೆ ಲಾಭ

ಹಳ್ಳಿ ಮನೆಯ ಹಿತ್ತಿಲಲ್ಲಿ ಸಾಮಾನ್ಯವಾಗಿ ಬಸಳೆ ಸೊಪ್ಪಿನ ಬಳ್ಳಿ ಕಾಣಸಿಗುತ್ತದೆ. ಬಸಳೆ ಸೊಪ್ಪು ಸಸ್ಯಹಾರಗಳ ಬಗ್ಗೆ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಇದು ಕೇವಲ ಬಾಯಿಗೆ ರುಚಿ ಮಾತ್ರ ಕೊಡುವುದಲ್ಲ. ಇದರಲ್ಲಿ ಅಡಕವಾಗಿರುವ ಕಬ್ಬಿಣದಂಶ ಕ್ಯಾಲ್ಸಿಯಂ ಪ್ರೋಟಿನ್ ಮತ್ತು ವಿಟಮಿನ್ ಎ ವಿಟಮಿನ್ ಸಿ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಳ್ಳಿ ಮನೆಯ ಹಿತ್ತಿಲಲ್ಲಿ ಸಾಮಾನ್ಯವಾಗಿ ಬಸಳೆ ಸೊಪ್ಪಿನ ಬಳ್ಳಿ ಕಾಣಸಿಗುತ್ತದೆ. ಬಸಳೆ ಸೊಪ್ಪು (Spinach leaves) ಸಸ್ಯಹಾರ ಗಳ ಬಗ್ಗೆ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಇದು ಕೇವಲ ಬಾಯಿಗೆ ರುಚಿ ಮಾತ್ರ ಕೊಡುವುದಲ್ಲ. ಇದರಲ್ಲಿ ಅಡಕವಾಗಿರುವ ಕಬ್ಬಿಣದಂಶ ಕ್ಯಾಲ್ಸಿಯಂ ಪ್ರೋಟಿನ್ (Protein) ಮತ್ತು ವಿಟಮಿನ್ ಎ ವಿಟಮಿನ್ ಸಿ (Vitamin C) ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ಬಸಳೆಸೊಪ್ಪಿನ ಅಡಕವಾಗಿರುವ ಅನೇಕ ಗುಣಗಳು ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲ ಇದರಲ್ಲಿ ಅಡಕವಾಗಿರುವ ಮೆಗ್ನೀಷಿಯಂ (Magnesium) ಅಂಶವು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಎಂದು ಕೂಡ ಅಧ್ಯಯನ ಹೇಳುತ್ತದೆ. ಆದ್ದರಿಂದ ಬಸಳೆ ಸೊಪ್ಪಿನಲ್ಲಿರುವ ಇತರ ಆರೋಗ್ಯ ಗುಣಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

    ವಿಟಮಿನ್ ಸಿ, ಕಬ್ಬಿಣ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ

    ಬಸಳೆ ಸೊಪ್ಪಿನಲ್ಲಿ ವಿಟಮಿನ್ ಎ ಅಧಿಕವಾಗಿದೆ. (100 ಗ್ರಾಂನಲ್ಲಿ ಸರಿಸುಮಾರು 8,000 ಘಟಕಗಳು) ಇದರಲ್ಲಿ ಉತ್ತಮ ಪ್ರಮಾಣದ ಆ್ಯಂಟಿಆಕ್ಸಿಡೆಂಟ್‌ಗಳಿವೆ, ವಿಶೇಷವಾಗಿ ಬೀಟಾ ಕ್ಯಾರೋಟಿನ್ ಮತ್ತು ಲುಟೀನ್, ನೈಸರ್ಗಿಕವಾಗಿ ಸಿಗುವ ರಾಸಾಯನಿಕಗಳು ನಿಮ್ಮ ಜೀವಕೋಶಗಳನ್ನು ವಯಸ್ಸಾಗದಂತೆ ನೋಡಿಕೊಳ್ಳುತ್ತವೆ. ಇದರ ಜೊತೆಗೆ ವಿಟಮಿನ್ ಸಿ, ಕಬ್ಬಿಣ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ.

    ಇದನ್ನೂ ಓದಿ: Turmeric Tips: ಅರಿಶಿನವನ್ನು ಬಳಸುವಾಗ ಈ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿದಿರಲಿ, ಇಲ್ಲವಾದಲ್ಲಿ ಪ್ರಯೋಜನಕ್ಕಿಂತ ಹಾನಿ ಹೆಚ್ಚು

    ಮೂಳೆಗಳ ಆರೋಗ್ಯಕ್ಕೆ ಸಹಾಯ ಮಾಡುತ್ತದೆ

    ಬಸಳೆ ಸೊಪ್ಪಿನ ಅಡಕವಾಗಿರುವ ವಿಟಮಿನ್ ಕೆ ಮೂಳೆಯ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದು ದೇಹದಿಂದ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಮತ್ತು ಬಸಳೆಸೊಪ್ಪು ಪ್ರತಿ 250 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಆದ್ದರಿಂದ ಈ ಕ್ಯಾಲ್ಸಿಯಂಗಳು ನಿಮ್ಮ ಮೂಳೆಗಳು ಮತ್ತು ಹಲ್ಲುಗಳಿಗೆ ಹೆಚ್ಚು ಅಗತ್ಯವಾಗಿರುತ್ತದೆ. ಮೂಳೆಗಳ ವೃದ್ಧಿಗಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ಬಸಳೆ ಸೊಪ್ಪನ್ನು ಸೇವಿಸಬಹುದು ಮೂಳೆಗಳ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಮೂಳೆಗಳನ್ನು ಬಲಪಡಿಸುವ ಕೆಲಸವನ್ನು ಕೂಡ ಮಾಡುತ್ತದೆ.

    ಚರ್ಮದ ಕಾಂತಿಯನ್ನು ಹೆಚ್ಚಿಸುವ ಗುಣ ಹೊಂದಿದೆ

    ಚರ್ಮ ದೇಹದ ಅತಿ ಸೂಕ್ಷ್ಮವಾದ ಭಾಗವಾಗಿದೆ. ಸಾಮಾನ್ಯವಾಗಿ ಎಲ್ಲರೂ ಚರ್ಮದ ಕಾಂತಿಗಾಗಿ ಎಲ್ಲಾ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ. ನಿಮಗೆ ಹೊಳೆಯುವ ಚರ್ಮವನ್ನು ಪಡೆಯಬೇಕು ಎಂದರೆ ನೀವು ಆಗಾಗ ಬಸಳೆ ಸೊಪ್ಪನ್ನು ಸೇವಿಸಬೇಕು. ಇದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಅಗತ್ಯವಾದ ಪೋಷಕಾಂಶಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ. ಬಸಳೆಸೊಪ್ಪು ಒಳಗೊಂಡಿರುವ ಕೆಲವು ಪ್ರಮುಖ ಪೋಷಕಾಂಶಗಳು ವಿಟಮಿನ್ ಎ, ವಿಟಮಿನ್ ಸಿ ವಿಟಮಿನ್ ಹಾಗೂ ವಿಟಮಿನ್ ಕೆ ಇವೆಲ್ಲವೂ ಚರ್ಮದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

    ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ

    ಹೌದು ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ಒಳಗೊಂಡು ಸಮೃದ್ಧವಾಗಿರುವ ಬಸಳೆಯು ರಕ್ತದ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೆ ಹೃದಯದ ಸ್ನಾಯುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ರಕ್ತದೊತ್ತಡವನ್ನು ಕೂಡ ಇದು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

    ಕಣ್ಣುಗಳ ಆರೋಗ್ಯ ಸುಧಾರಿಸಲು ನೆರವಾಗುತ್ತದೆ

    ಬಸಳೆ ಸೊಪ್ಪಿನಲ್ಲಿ ವಿಟಮಿನ್ ಎ ಪ್ರಮಾಣವು ಅಧಿಕವಾಗಿದ್ದು ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ. ಹಾಗೆ ಬಸಳೆಸೊಪ್ಪು ಕಣ್ಣಿನ ಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಈ ಜನರೇಶನ್ ಮತ್ತು ಇತರ ಕಣ್ಣಿನ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

    ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಹೆಲ್ದಿ ಮಿಲ್ಕ್​ ಶೇಕ್​

    ಬಾಯಿ ಹುಣ್ಣು ಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ

    ಬಸಳೆಯ ರಸವು ಗುಳ್ಳೆಗಳು ಅಥವಾ ಯಾವುದೇ ಬಾಯಿ ಹುಣ್ಣು ಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿರು ಲೋಳೆರಸ ಕರುಳಿನಲ್ಲಿ ಉಂಟಾಗುವ ಹುಣ್ಣುಗಳನ್ನು ನಿವಾರಿಸಲು ನೆರವಾಗುತ್ತದೆ.
    Published by:Swathi Nayak
    First published: