ಸಾಮಾನ್ಯವಾಗಿ ಹಳ್ಳಿಗಳಲ್ಲಿ (Villages) ಚಹಾದ ಎಲೆ (Tea Leaves) ಎಂದು ಕರೆಯುವ ಸೊಪ್ಪಿದೆ. ಅದು ಗರಿಕೆಯಂತಿರುವ ದೊಡ್ಡ ಎಲೆಗಳನ್ನ ಹೊಂದಿದ್ದು, ಚಹಾ ತಯಾರಿಸಲು ಬಳಕೆ ಮಾಡ್ತಾರೆ. ಅದನ್ನ ಇಂಗ್ಲೀಷ್ ನಲ್ಲಿ ಲೆಮನ್ ಗ್ರಾಸ್ (Lemongrass) ಎಂದು ಕರೆಯುತ್ತಾರೆ. ಇದಕ್ಕೆ ಮಜ್ಜಿಗೆ ಹುಲ್ಲು ಅಂತಾನೂ ಕರೆಯುತ್ತಾರೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯ (Home) ಹಿತ್ತಲಲ್ಲಿ ಸುವಾಸನೆ ಭರಿತ ಈ ಚಹಾದ ಎಲೆ ಅಂದ್ರೆ ಲೆಮನ್ ಗ್ರಾಸ್ ನ್ನು ಕಾಣಬಹುದು. ಬೆಳಗ್ಗೆ ಮತ್ತು ಸಂಜೆ ಲೆಮನ್ ಗ್ರಾಸ್ ಹಾಕಿ ಚಹಾ ಮಾಡಿದ್ರೆ ಅದರ ಪರಿಮಳ, ರುಚಿ ಅಮೋಘವಾಗಿರುತ್ತದೆ. ಅಲ್ಲದೇ ಲೆಮನ್ ಗ್ರಾಸ್ ನ್ನು ನೆಗಡಿ, ಕಫ ಆದಾಗ, ಶುಂಠಿ ಚಹಾ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ.
ಲೆಮನ್ ಗ್ರಾಸ್ ಆರೋಗ್ಯ ಪ್ರಯೋಜನಗಳು
ಲೆಮನ್ ಗ್ರಾಸ್ ಚಹಾ ಮೂಡ್ ಫ್ರೆಶ್ ಆಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ನೆಗಡಿ, ಕಫ ದೂರವಾಗುತ್ತದೆ. ಇಡೀ ಕುಟುಂಬದ ಆರೋಗ್ಯಕ್ಕೆ ಲೆಮನ್ ಗ್ರಾಸ್ ತುಂಬಾ ಪ್ರಯೋಜಕಾರಿಯಾಗಿದೆ. ಲೆಮನ್ ಗ್ರಾಸ್ ನ್ನು ಬೇಸಿಗೆಯಲ್ಲಿ ಡಿಟಾಕ್ಸ್ ಪಾನೀಯವಾಗಿಯೂ ಬಳಸುತ್ತಾರೆ. ಚಳಿಗಾಲದಲ್ಲಿ ಲೆಮನ್ ಗ್ರಾಸ್ ಟೀ ಸೇವನೆ ದೇಹದ ಉರಿಯೂತ ಕಡಿಮೆ ಮಾಡುತ್ತದೆ.
ಲೆಮನ್ ಗ್ರಾಸ್ ಚಹಾವನ್ನು ಔಷಧವಾಗಿ ಬಳಕೆ ಮಾಡ್ತಾರೆ. ಲೆಮನ್ ಗ್ರಾಸ್ ಕ್ಲೋರೊಜೆನಿಕ್ ಆಸಿಡ್, ಐಸೊರೆಂಟಿನ್ ಮತ್ತು ಸ್ವಾರ್ಟಿಯಾಜಪೋನಿನ್ ಉರಿಯೂತ ಸಂಯುಕ್ತ ಒಳಗೊಂಡಿದೆ. ದೇಹವನ್ನು ಸದೃಢವಾಗಿಡುತ್ತದೆ. ಇದರ ಸೇವನೆ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ.
ಗಂಭೀರ ಕಾಯಿಲೆಗಳನ್ನು ತಡೆಗಟ್ಟುತ್ತದೆ
ಲೆಮನ್ ಗ್ರಾಸ್ ಆಹಾರದ ಭಾಗವಾಗಿ ಮಾಡಿದ್ರೆ ಗಂಭೀರ ಕಾಯಿಲೆಗಳನ್ನು ತಡೆಯಬಹುದು. ಅದರಲ್ಲಿರುವ ಫ್ಲೇವನಾಯ್ಡ್ಗಳು ಮತ್ತು ಫೀನಾಲಿಕ್, ಉತ್ಕರ್ಷಣ ನಿರೋಧಕಗಳು ರೋಗಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಇದು ಉತ್ತಮ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಲೆಮನ್ ಗ್ರಾಸ್ ಸೇವನೆ ದೀರ್ಘಕಾಲದವರೆಗೆ ಆರೋಗ್ಯವಾಗಿರಲು ಸಹಕಾರಿ ಆಗಿದೆ.
ಒತ್ತಡ ನಿವಾರಿಸುತ್ತದೆ
ಲೆಮನ್ ಗ್ರಾಸ್ ಟೀ ಸೇವಿಸಿದರೆ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಸಂಶೋಧನೆಯೊಂದರ ಪ್ರಕಾರ, ಲೆಮನ್ ಗ್ರಾಸ್ ವಾಸನೆ ಒತ್ತಡ ನಿವಾರಿಸುತ್ತದೆ. ವಿಶ್ರಾಂತಿ ಮತ್ತು ಮನಸ್ಸನ್ನು ರಿಲ್ಯಾಕ್ಸ್ ಆಗಿಸುತ್ತದೆ ಎಂದು ಹೇಳಿದೆ.
ಬಾಯಿಯ ಆರೋಗ್ಯ ಸುಧಾರಿಸುತ್ತದೆ
ಹಲ್ಲಿನ ಸಮಸ್ಯೆ ನಿವಾರಣೆಗೆ ಲೆಮನ್ ಗ್ರಾಸ್ ಬಳಸ್ತಾರೆ. ಲೆಮನ್ ಗ್ರಾಸ್ ಬಳಕೆಯು ಬಾಯಿ ವಾಸನೆ ಮತ್ತು ಇತರ ಸಮಸ್ಯೆಯಿಂದ ರಕ್ಷಣೆ ನೀಡುತ್ತದೆ. ವರದಿಯೊಂದರ ಪ್ರಕಾರ, ಲೆಮನ್ ಗ್ರಾಸ್ ಬಾಯಿ ಆರೋಗ್ಯ ಕಾಪಾಡಲು ಅತ್ಯುತ್ತಮ ಔಷಧ ಅಂತಾ ಹೇಳಿದೆ.
ಚರ್ಮದ ಸಮಸ್ಯೆ ಕಡಿಮೆ ಮಾಡುತ್ತದೆ
ಲೆಮನ್ ಗ್ರಾಸ್ ಎಣ್ಣೆಯು ಆಂಟಿಫಂಗಲ್ ಉರಿಯೂತದ ಗುಣಲಕ್ಷಣ ಹೊಂದಿದೆ. ಚರ್ಮದ ಮೇಲೆ ಲೆಮನ್ ಗ್ರಾಸ್ ಎಣ್ಣೆ ಬಳಕೆ ಪರಿಣಾಮಕಾರಿ ಆಗಿದೆ. ವೆಬ್ಮೆಡ್ ಸಂಶೋಧಕರು ಇಲಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಲೆಮನ್ ಗ್ರಾಸ್ ಎಣ್ಣೆ, ಶಿಲೀಂಧ್ರ ಸೋಂಕು ಮತ್ತು ಉರಿಯೂತಕ್ಕೆ ಚಿಕಿತ್ಸೆ ನೀಡಲು ಉತ್ತಮವಾಗಿದೆ ಎಂದು ಕಂಡುಕೊಂಡಿದ್ದಾರೆ. ಲೆಮನ್ ಗ್ರಾಸ್ ಬಳಕೆ ಚರ್ಮವನ್ನು ಉತ್ತಮವಾಗಿಸುತ್ತದೆ.
ಲೆಮನ್ ಗ್ರಾಸ್ ತೂಕ ನಷ್ಟಕ್ಕೆ ಸಹಕಾರಿ
ಲೆಮನ್ ಗ್ರಾಸ್ ತೂಕ ಇಳಿಸುವ ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ. ದೇಹವನ್ನು ಒಳಗಿನಿಂದ ನಿರ್ವಿಷಗೊಳಿಸುತ್ತದೆ. ಚಯಾಪಚಯ ಹೆಚ್ಚಿಸುತ್ತದೆ. ಲೆಮನ್ ಗ್ರಾಸ್ ಸೇವನೆಯು ತೂಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ರಕ್ತದ ಕೊರತೆ ನಿವಾರಿಸುತ್ತೆ ಪಾಲಕ್ ಸೂಪ್, ಕಣ್ಣುಗಳ ಆರೋಗ್ಯಕ್ಕೂ ಇದರಿಂದ ಲಾಭ!
ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿಡುತ್ತದೆ
ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ತಡೆಯುತ್ತದೆ. ಲೆಮನ್ ಗ್ರಾಸ್ ಎಣ್ಣೆಯು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ