Stroke: ಪಾರ್ಶ್ವವಾಯುವಿನ ಅಪಾಯದಿಂದ ದೂರವಿರಲು ನಿತ್ಯ ಇವುಗಳನ್ನು ತಪ್ಪದೆ ಸೇವಿಸಿ..!

ಪ್ರತಿದಿನ ತಪ್ಪದೆ ಹಣ್ಣು, ತರಕಾರಿಗಳು ಮತ್ತು ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಿದರೆ ಪಾರ್ಶ್ವವಾಯು ಅಪಾಯದಿಂದ ದೂರವಿರಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಎಲ್ಲಾ ಕಾಯಿಲೆಗಳಿಗಿಂತಲೂ ಪಾರ್ಶ್ವವಾಯು ಸ್ವಲ್ಪ ವಿಭಿನ್ನ ರೀತಿಯದ್ದು ಎಂದು ಹೇಳಬಹುದು. ಏಕೆಂದರೆ ಯಾವ ವಯೋಮಾನದವರಿಗೆ ಯಾವಾಗ ಪಾರ್ಶ್ವವಾಯು ಹೊಡೆಯುತ್ತದೆ ಎಂದು ಊಹಿಸುವುದು ಕಷ್ಟ. ಸಾಮಾನ್ಯವಾಗಿ ಮೆದುಳಿನ ಜೀವಕೋಶಗಳಿಗೆ ಹಾನಿಯುಂಟಾದಾಗ ಉದ್ಬವಿಸುವ ದೈಹಿಕ ತೊಂದರೆಯನ್ನು ಪಾರ್ಶ್ವವಾಯು ಎಂದು ಹೇಳುತ್ತೇವೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಅಂಗಾಂಗಗಳ ಸ್ವಾಧೀನ ತಪ್ಪುವಿಕೆ, ಸಮತೋಲನ, ಮಾತು ಮತ್ತು ದೃಷ್ಟಿ ಸಾಮರ್ಥ್ಯಗಳು ಮಂಕಾಗುವುದು. ಈ ಲಕ್ಷಣಗಳು ಮೆದುಳಿನ ಹಾನಿಯಾದ ಭಾಗ ಮತ್ತು ಪ್ರಮಾಣದ ಮೇಲೆ ಅವಲ೦ಬಿತವಾಗಿರುತ್ತದೆ. ಆದ್ದರಿಂದ ಎಲ್ಲ ಪಾರ್ಶ್ವವಾಯು ಪೀಡಿತರಲ್ಲಿ ಒಂದೇ ಬಗೆಯ ಲಕ್ಷಣಗಳು ಕಂಡು ಬರುವುದಿಲ್ಲ. ಆದರೆ ,ಪಾರ್ಶ್ವವಾಯು ಬರದಂತೆ ನೋಡಿಕೊಳ್ಳುವುದು ಹೇಗೆ ಎಂದು ನೋಡಿದರೆ , ಅದಕ್ಕೆ ಇಲ್ಲಿದೆ ಒಂದು ನೈಸರ್ಗಿಕ ಪರಿಹಾರ.

ಪ್ರತಿದಿನ ತಪ್ಪದೆ ಹಣ್ಣು, ತರಕಾರಿಗಳು ಮತ್ತು ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಿದರೆ ಪಾರ್ಶ್ವವಾಯು ಅಪಾಯದಿಂದ ದೂರವಿರಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ವಿವಿಧ ರೀತಿಯ ಆಹಾರವು ನಾನಾ ರೀತಿಯ ಪಾರ್ಶ್ವವಾಯುವಿನ ಅಪಾಯಗಳಿಗೆ ಸಂಬಂಧಿಸಿದೆ ಎಂದು ಸಂಶೋಧಕರು ಹೇಳುತ್ತಾರೆ. ಹಣ್ಣು, ತರಕಾರಿಗಳು ಮತ್ತು ಡೈರಿ ಉತ್ಪನ್ನಗಳ ಹೆಚ್ಚಿನ ಸೇವನೆಯು ‘ಇಸ್ಕೀಮಿಕ್ ಸ್ಟ್ರೋಕ್’ ನ ಅಪಾಯಕ್ಕೆ ಸಂಬಂಧಿಸಿದೆ ಎಂದು ಹೇಳುತ್ತಾರೆ.

Stroke management: Expert suggests alternative therapies
ಸಾಂದರ್ಭಿಕ ಚಿತ್ರ


ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನಕ್ಕಾಗಿ, ಸಂಶೋಧಕರು 9 ಯುರೋಪಿಯನ್ ದೇಶಗಳಲ್ಲಿ ಸುಮಾರು 4,18,000ಕ್ಕೂ ಹೆಚ್ಚು ಜನರನ್ನು ಆಯ್ಕೆ ಮಾಡಿದರು ಮತ್ತು ಇಸ್ಕೀಮಿಕ್ ಸ್ಟ್ರೋಕ್ ಮತ್ತು ರಕ್ತಸ್ರಾವದ ಪಾರ್ಶ್ವವಾಯುವನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಿದ್ದಾರೆ.

ಇದನ್ನೂ ಓದಿ: ಶಾಸ್ತ್ರಿ ಖ್ಯಾತಿಯ ಮಾನ್ಯಾ ನಾಯ್ಡುಗೆ ಪಾರ್ಶ್ವವಾಯು: ಬೇಗನೆ ಮಗಳೊಂದಿಗೆ ಡ್ಯಾನ್ಸ್​ ಮಾಡುತ್ತೇನೆ ಎಂದ ನಟಿ..!

ಈ ಅಧ್ಯಯನವು ಹಣ್ಣು, ತರಕಾರಿಗಳು, ನಾರು, ಹಾಲು, ಚೀಸ್ ಅಥವಾ ಮೊಸರಿನ ಹೆಚ್ಚಿನ ಸೇವನೆಯು ಇಸ್ಕೀಮಿಕ್ ಸ್ಟ್ರೋಕ್‌ನ ಅಪಾಯವನ್ನು ಕಡಿಮೆ ಮಾಡಿದೆ. ಆದರೆ, ಇದು ರಕ್ತಸ್ರಾವದ ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡಬಹುದಾದ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ಈ ಅಧ್ಯಯನದಿಂದ ತಿಳಿದು ಬಂದಿದೆ.

"ನಮ್ಮ ಅಧ್ಯಯನವು ಮುಖ್ಯವಾಗಿ ಪಾರ್ಶ್ವವಾಯುವಿನ ಉಪ ಪ್ರಕಾರಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುವ ಉದ್ದೇಶ ಹೊಂದಿದ್ದು, ಇಸ್ಕೀಮಿಕ್ ಮತ್ತು ರಕ್ತಸ್ರಾವದ ಪಾರ್ಶ್ವವಾಯುವಿನ ಅಪಾಯದಿಂದ ದೂರವಿರಲು ಬೇರೆ ಬೇರೆ ಆಹಾರಗಳನ್ನು ನಾವು ಸೇವಿಸಬೇಕಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟ ಅಥವಾ ಬೊಜ್ಜು ಸಹ ಈ ಎರಡು ಪಾರ್ಶ್ವವಾಯುವಿನ ಉಪ ಪ್ರಕಾರಗಳ ಮೇಲೆ ವಿಭಿನ್ನವಾಗಿ ಪ್ರಭಾವ ಬೀರುತ್ತವೆ ಎಂದು ಯುಕೆಯ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಲೇಖಕ ಟಮ್ಮಿ ಟಾಂಗ್ ಹೇಳುತ್ತಾರೆ.

ರಕ್ತಹೆಪ್ಪುಗಟ್ಟುವಿಕೆಯಿಂದ ಮೆದುಳಿಗೆ ರಕ್ತ ಪೂರೈಸುವ ಅಪಧಮನಿಯನ್ನು ನಿರ್ಬಂಧಿಸಿದಾಗ ಅಥವಾ ಮೆದುಳಿಗೆ ಹೋಗುವ ರಕ್ತದ ಹರಿವನ್ನು ನಿರ್ಬಂಧಿಸಿದಾಗ ಇಸ್ಕೀಮಿಕ್ ಸ್ಟ್ರೋಕ್ ಸಂಭವಿಸುತ್ತದೆ.

ಇದನ್ನೂ ಓದಿ: Stroke management: ಸ್ಟ್ರೋಕ್​​ನಿಂದ ಚೇತರಿಸಿಕೊಳ್ಳಲು ಈ 6 ನೈಸರ್ಗಿಕ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿ

ಮೆದುಳಿನಲ್ಲಿ ರಕ್ತಸ್ರಾವವಾದಾಗ ರಕ್ತಸ್ರಾವದ ಪಾರ್ಶ್ವವಾಯು ಸಂಭವಿಸುತ್ತದೆ, ಅದು ಹತ್ತಿರದ ಜೀವಕೋಶಗಳನ್ನು ಹಾನಿಗೊಳಿಸುತ್ತದೆ. ಸುಮಾರು 85 ಪ್ರತಿಶತ ಸ್ಟ್ರೋಕ್‌ಗಳು ಇಸ್ಕೀಮಿಕ್ ಮತ್ತು ಶೇಕಡಾ 15ರಷ್ಟು ರಕ್ತಸ್ರಾವ ಪಾರ್ಶ್ವವಾಯುದಿಂದ ಬಳಲುತ್ತಿರುತ್ತಾರೆ. ಪಾರ್ಶ್ವವಾಯು ವಿಶ್ವದಾದ್ಯಂತ ಸಂಭವಿಸುವ ಸಾವುಗಳಿಗೆ ಎರಡನೇ ಪ್ರಮುಖ ಕಾರಣವಾಗಿದೆ ಎಂದು ಹೇಳುತ್ತಾರೆ.

ಜನರು ಹಣ್ಣು, ತರಕಾರಿ, ಸಿರಿ ಧಾನ್ಯ, ದ್ವಿದಳ ಧಾನ್ಯಗಳು ಮತ್ತು ನಾರು ಸೇರಿದಂತೆ ಅನೇಕ ರೀತಿಯ ಆಹಾರ ಪದಾರ್ಥ ಸೇವಿಸುವುದರಿಂದ ಇಸ್ಕೀಮಿಕ್ ಪಾರ್ಶ್ವವಾಯುವಿನ ಅಪಾಯದಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಂಶೋಧಕರು ಅಧ್ಯನದಿಂದ ಕಂಡುಕೊಂಡಿದ್ದಾರೆ.
Published by:Anitha E
First published: