• Home
  • »
  • News
  • »
  • lifestyle
  • »
  • Weight Loss: ಮೂವತ್ತು ಸೆಕೆಂಡ್ ಟ್ರೆಡ್ ಮಿಲ್ ನಿಲ್ಲಲು ಸಾಧ್ಯವಾಗದ ನಟಿ ಸೋನಾಕ್ಷಿ ಸಿನ್ಹಾ ತೂಕ ಇಳಿಸಿದ್ದು ಹೇಗೆ?

Weight Loss: ಮೂವತ್ತು ಸೆಕೆಂಡ್ ಟ್ರೆಡ್ ಮಿಲ್ ನಿಲ್ಲಲು ಸಾಧ್ಯವಾಗದ ನಟಿ ಸೋನಾಕ್ಷಿ ಸಿನ್ಹಾ ತೂಕ ಇಳಿಸಿದ್ದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಟಿ ಸೋನಾಕ್ಷಿ ಸಿನ್ಹಾ ಅವರ ಡಬಲ್ ಎಕ್ಸ್‌ ಎಲ್ ಚಲನಚಿತ್ರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸ್ಥೂಲಕಾಯ ಮಹಿಳೆಯರ ದೇಹದ ಚಿತ್ರಣವನ್ನು ಆಧರಿಸಿದ ಸಿನೆಮಾ ಡಬಲ್ ಎಕ್ಸ್ ಎಲ್ ಆಗಿದೆ. ಈ ಮಧ್ಯೆ ನಟಿ ಸೋನಾಕ್ಷಿ ಸಿನ್ಹಾ, ತಾವು ಬಾಡಿ ಶೇಮಿಂಗ್ ನ್ನು ಹೇಗೆ ಎದುರಿಸಿದರು ಮತ್ತು ತೂಕ ಇಳಿಸಿದ್ದೇಗೆ ಎಂದು ಹೇಳಿದ್ದಾರೆ.

ಮುಂದೆ ಓದಿ ...
  • Share this:

    ವಿಶ್ವದ ಖ್ಯಾತ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ ಹಾಗೂ ನಟಿ ಸೋನಾಕ್ಷಿ ಸಿನ್ಹಾ (Actress Sonakshi Sinha) ತೂಕ ಇಳಿಸುವ (Weight Loss) ಮೂಲಕ ಸಾಕಷ್ಟು ಚರ್ಚೆಯಲ್ಲಿದ್ದಾರೆ. ನಟಿ ಸೋನಾಕ್ಷಿ ಸಿನ್ಹಾ ತಮ್ಮ ಸಿನಿ ಕೆರಿಯರ್ ನ್ನು (Cinema Career) ದಬಂಗ್ ಚಿತ್ರದ ಮೂಲಕ ಆರಂಭಿಸಿದ್ರು. ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಮುಖ್ಯ ಭೂಮಿಕೆಯಲ್ಲಿ ನಟಿಸುವ ಮೂಲಕ ಬಾಲಿವುಡ್ ನಲ್ಲಿ ತಮ್ಮ ಸಿನಿ ಜರ್ನಿ ಆರಂಭಿಸಿದ್ರು ಸೋನಾಕ್ಷಿ ಸಿನ್ಹಾ. ಈಗ ಸೋನಾಕ್ಷಿ ಸಿನ್ಹಾ ಅವರ ಸಿನಿಮಾ ಡಬಲ್ ಎಕ್ಸ್ ಎಲ್ (Double XL Movie) ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸೋನಾಕ್ಷಿ ಸಿನ್ಹಾ ತೂಕ ಇಳಿಕೆ ಮೂಲಕ ತುಂಬಾ ಜರನ್ನು ಆಶ್ಚರ್ಯಚಕಿತಗೊಳಿಸಿದ್ರು.


    ನಟಿ ಸೋನಾಕ್ಷಿ ಸಿನ್ಹಾ ನಟನೆಯ ಡಬಲ್ ಎಕ್ಸ್‌ ಎಲ್ ಚಲನಚಿತ್ರ


    ಈಗ ನಟಿ ಸೋನಾಕ್ಷಿ ಸಿನ್ಹಾ ಅವರ ಡಬಲ್ ಎಕ್ಸ್‌ ಎಲ್ ಚಲನಚಿತ್ರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸ್ಥೂಲಕಾಯ ಮಹಿಳೆಯರ ದೇಹದ ಚಿತ್ರಣವನ್ನು ಆಧರಿಸಿದ ಸಿನೆಮಾ ಡಬಲ್ ಎಕ್ಸ್ ಎಲ್ ಆಗಿದೆ. ಈ ಚಿತ್ರದ ಬಗ್ಗೆ ಮಾತನಾಡಿರುವ ನಟಿ ಸೋನಾಕ್ಷಿ ಸಿನ್ಹಾ, ತಾವು ಬಾಡಿ ಶೇಮಿಂಗ್ ನ್ನು ಹೇಗೆ ಎದುರಿಸಿದರು ಎಂದು ಹೇಳಿದ್ದಾರೆ.


    ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋನಾಕ್ಷಿ ಸಿನ್ಹಾ ತಮ್ಮ ತೂಕದಿಂದಾಗಿ ಹೇಗೆ ಮುಜುಗರಕ್ಕೆ ಒಳಗಾಗುತ್ತಿದ್ದರು ಎಂದು ತಿಳಿಸಿದ್ದಾರೆ. ತಾಯಿ ಪೂನಂ ಸಿನ್ಹಾ ಯಾವಾಗಲೂ ತೂಕ ಇಳಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ: ಬಲಿಷ್ಠ ಮೂಳೆಗಳಿಗಾಗಿ ಬೇಕು ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ, ಇವು ಹೇಗೆ ಕೆಲಸ ಮಾಡುತ್ತವೆ?


    ಬಾಲಿವುಡ್‌ ಪ್ರವೇಶಕ್ಕೂ ಮೊದಲು 95 ಕೆಜಿ ತೂಕ ಹೊಂದಿದ್ದ ನಟಿ ಸೋನಾಕ್ಷಿ ಸಿನ್ಹಾ


    ಎಂಟರ್‌ ಟೈನ್‌ ಮೆಂಟ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ನಟಿ ಸೋನಾಕ್ಷಿ ಸಿನ್ಹಾ, ತನ್ನ ಮೊದಲ ಚಿತ್ರಕ್ಕಾಗಿ 30 ಕೆಜಿ ತೂಕ ಕಳೆದುಕೊಂಡಿದ್ದೆ ಎಂದು ಹೇಳಿದ್ದಾರೆ. ಅವರು 18 ನೇ ವಯಸ್ಸಿನಲ್ಲಿ ತೂಕ ಇಳಿಕೆಗೆ ಪ್ರಯತ್ನ ಮಾಡ ತೊಡಗಿದ್ರು. ಸೋನಾಕ್ಷಿ ಅಧಿಕ ತೂಕ ಹೊಂದಿದ್ದಾಗ ಜಿಮ್‌ನಲ್ಲಿ 30 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಟ್ರೆಡ್‌ ಮಿಲ್‌ ನಲ್ಲಿ ನಿಲ್ಲಲು ಸಾಧ್ಯ ಆಗ್ತಿರಲಿಲ್ಲ ಎಂದು ಹೇಳಿದ್ದಾರೆ.


    ಆಮೇಲೆ ತಾವು ಕಠಿಣವಾಗಿ ತೂಕ ಇಳಿಸಲೇಬೇಕು ಅಂತಾ ನಿರ್ಧಾರ ಮಾಡಿದ್ದಾಗಿ ತಿಳಿಸಿದ್ದಾರೆ. ತೂಕ ಇಳಿಸಲು ನಿರ್ಧಾರ ಮಾಡಿದ್ದು, ನಟಿಸಬೇಕು ಎಂಬ ಕಾರಣದಿಂದಲ್ಲ. ಆದ್ರೆ ತೂಕ ಇಳಿಕೆ ಅನಿವಾರ್ಯ ಅಂತಾ ಹಾಗೂ ಅದರ ಅಗತ್ಯತೆ ತಮಗಿತ್ತು ಎಂದು ಎಂದು ನಟಿ ಸೋನಾಕ್ಷಿ ಹೇಳಿದ್ದಾರೆ.


    ಸ್ಥೂಲಕಾಯತೆಯಿಂದ ಬಾಡಿ ಶೇಮಿಂಗ್ ಅನುಭವ


    ಸ್ಥೂಲಕಾಯದಿಂದಾಗಿ ಶಾಲೆಯಲ್ಲಿ ಹುಡುಗರು ಬೇರೆ ಬೇರೆ ಹೆಸರುಗಳಿಂದ ಚುಡಾಯಿಸುತ್ತಿದ್ದರು. ಅದನ್ನು ನಿರ್ಲಕ್ಷಿಸಿ ನನ್ನ ಗುರಿ ತೂಕ ಇಳಿಕೆಯತ್ತ ಗಮನ ಕೇಂದ್ರೀಕರಿಸಿ ತೂಕ ಇಳಿಸಿದೆ ಎಂದಿದ್ದಾರೆ.


    ನಟಿ ಸೋನಾಕ್ಷಿ ಸಿನ್ಹಾ ತೂಕ ಇಳಿಸಿದ್ದು ಹೇಗೆ?


    ತಾನು ಕೂಲ್ ಆಗಿ, ಸ್ಲಿಮ್ ಆಗಲು ಜಿಮ್‌ಗೆ ಸೇರಿದ್ದೆ. ಆದರೆ ಜಿಮ್ ನಲ್ಲಿ ವರ್ಕೌಟ್ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ ನಟಿ ಸೋನಾಕ್ಷಿ. ಮುಂದೆ ಅವರು ಅವರಿಗೆ ಮಾಡಲು ಸರಳ ಹಾಗೂ ಕೆಲವು ತಾಲೀಮು ಆಯ್ಕೆ ಮಾಡಿಕೊಂಡ್ರು. ಅವುಗಳಲ್ಲಿ ಪೈಲೇಟ್ಸ್ ಒಂದಾಗಿದೆ.


    ನಟಿ ಸೋನಾಕ್ಷಿ ಸಿನ್ಹಾ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 30 ರಿಂದ 45 ನಿಮಿಷ ಕಾರ್ಡಿಯೋ ಮಾಡುತ್ತಿದ್ದರು. ನಂತರ 20 ನಿಮಿಷ ವೇಗವಾಗಿ ವಾಕಿಂಗ್ ಮಾಡ್ತಾ ಇದ್ದೆ ಎಂದಿದ್ದಾರೆ.


    ಕಾರ್ಡಿಯೋ ಪ್ರಯೋಜನಗಳು


    ತೂಕ ನಷ್ಟಕ್ಕೆ ಕಾರ್ಡಿಯೋ ಉತ್ತಮ ವ್ಯಾಯಾಮ ಆಗಿದೆ. ಸಿಡಿಸಿ ಪ್ರಕಾರ, ಕಾರ್ಡಿಯೋ ದೇಹದ ಹೆಚ್ಚುವರಿ ಕೊಬ್ಬನ್ನು ಸುಡುವ ಸುಲಭ ಮಾರ್ಗ ಆಗಿದೆ. ಕಾರ್ಡಿಯೋ ಮಾಡುವ ಸಮಯವು ಪ್ರತಿಯೊಬ್ಬರಿಗೂ ವಿಭಿನ್ನ ಆಗಿರುತ್ತದೆ. ತೂಕ ಇಳಿಸಲು ವಾರದಲ್ಲಿ ಕನಿಷ್ಠ ಐದು ದಿನ ಕಾರ್ಡಿಯೋ ಮಾಡಬೇಕು.


    ತೂಕ ನಷ್ಟದ ಜೊತೆಗೆ ಸ್ನಾಯುಗಳನ್ನು ಬಲಪಡಿಸಲು ಮತ್ತು ದೇಹದ ನಮ್ಯತೆ ಹೆಚ್ಚಿಸಲು ಪೈಲೆಟ್ಸ್ ವ್ಯಾಯಾಮ ಮಾಡಲಾಗುತ್ತದೆ. ತೀವ್ರ ತಾಲೀಮು ಮಾಡಲು ಇಷ್ಟಪಡದವರು ಪೈಲೇಟ್ಸ್ ತುಂಬಾ ಪ್ರಯೋಜನಕಾರಿ ಆಗಿದೆ. ನೆಲದ ಮೇಲೆ ಚಾಪೆ ಹಾಕಿ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ ಶಾಂತವಾಗಿ ಚಲನೆ ಮಾಡುವುದಾಗಿದೆ.


    ಇದನ್ನೂ ಓದಿ: ಚಳಿಗಾಲದಲ್ಲಿ ಶೀತ, ಜ್ವರವನ್ನು ನಿರ್ಲಕ್ಷ್ಯ ಮಾಡ್ತೀರಾ? ಹುಷಾರ್, ಇವು ನಿಮ್ಮ ಜೀವಕ್ಕೆ ಕುತ್ತು ತಂದೀತು!


    ಮನೆಯಲ್ಲಿ ಚುರುಕಾಗಿ ವಾಕಿಂಗ್ ಮಾಡಿ


    ಬ್ರಿಸ್ಕ್ ವಾಕಿಂಗ್ ಉತ್ತಮ ಮತ್ತು ಪರಿಣಾಮಕಾರಿ ವ್ಯಾಯಾಮ ಆಗಿದೆ. ನೀವು ಇದನ್ನು ಮನೆಯಲ್ಲಿಯೂ ಸಹ ಮಾಡಬಹುದು. ವೇಗದ ನಡಿಗೆ ತೂಕ ನಷ್ಟ ಸೇರಿದಂತೆ ಹಲವು ಪ್ರಯೋಜನ ನೀಡುತ್ತದೆ. ಇದು ಅಧಿಕ ರಕ್ತದೊತ್ತಡ, ಅಧಿಕ ರಕ್ತದ ಸಕ್ಕರೆ, ಹೃದ್ರೋಗದ ತಡೆಗಟ್ಟುತ್ತದೆ.

    Published by:renukadariyannavar
    First published: