Fitness Tips: ನಲವತ್ತರ ಹರೆಯದಲ್ಲೂ ಯಂಗ್ ಆಗಿ ಕಾಣುವ ನಟಿ ಸೋಹಾ ಅಲಿ ಖಾನ್ ಫಿಟ್ನೆಸ್ ಗುಟ್ಟು ನೀವೂ ತಿಳಿದುಕೊಳ್ಳಿ!

ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿ ಊಟದವರೆಗೆ ನಟಿ ಸೋಹಾ ಅಲಿ ಖಾನ್ ಅವರ ಪ್ರತಿ ಊಟವೂ ತುಂಬಾ ಆರೋಗ್ಯಕರ ಆಗಿರುತ್ತದೆ. ಕರೋನಾ ಸಾಂಕ್ರಾಮಿಕದ ನಂತರ ಸೋಹಾ, ತನ್ನ ಆಹಾರದಲ್ಲಿ ಕೆಲವು ಸೂಪರ್‌ಫುಡ್‌ಗಳನ್ನು ಸೇರಿಸಿದ್ದಾರೆ.

ನಟಿ ಸೋಹಾ ಅಲಿ ಖಾನ್

ನಟಿ ಸೋಹಾ ಅಲಿ ಖಾನ್

  • Share this:
    ಬಾಲಿವುಡ್ (Bollywood) ಸೆಲೆಬ್ರಿಟಿಗಳು (Celebrity) ತಮ್ಮನ್ನು ತಾವು ಫಿಟ್ (Fit) ಆಗಿಟ್ಟುಕೊಳ್ಳಲು ತುಂಬಾ ಶ್ರಮ ಪಡುತ್ತಾರೆ. ತಮ್ಮ ದೈಹಿಕ ಸೌಂದರ್ಯ (Beauty), ಫಿಟ್ನೆಸ್ ಗಾಗಿ ಹಲವು ರೀತಿಯ ವರ್ಕೌಟ್, ವ್ಯಾಯಾಮ, ಡಯಟ್ (Diet) ಮಾಡಿ ತಮ್ಮ ಅಂದವನ್ನು ಮೆಂಟೇನ್ ಮಾಡುತ್ತಾರೆ. ತಮ್ಮ ಆರೋಗ್ಯದ ಜೊತೆಗೆ ದೈಹಿಕ ಸೌಂದರ್ಯಕ್ಕೆ ಮಹತ್ವ ನೀಡುವ ಅನೇಕ ನಟ ನಟಿಯರು ಇದ್ದಾರೆ, ಅವರ ಫಿಟ್‌ನೆಸ್ ಮತ್ತು ಉತ್ತಮ ಆರೋಗ್ಯವನ್ನ ನೋಡಿದ್ರೆ ಅವರ ವಯಸ್ಸು ಇಷ್ಟೇ ಅಂತಾ ಹೇಳೋಕೆ ಆಗೋದೇ ಇಲ್ಲ. ಅಂತವರ ಸಾಲಿನಲ್ಲಿದ್ದಾರೆ ಬಾಲಿವುಡ್ ನಟಿ ಸೋಹಾ ಅಲಿ ಖಾನ್. ನಟಿ ಸೋಹಾ ಅಲಿ ಖಾನ್ ಅವರನ್ನು ಕಂಡರೆ ಅವರ ವಯಸ್ಸು 43 ಎಂದು ಊಹಿಸೋಕು ಕೂಡ ಸಾಧ್ಯವಿಲ್ಲ.

    ನಟಿ ಸೋಹಾ ಅಲಿ ಖಾನ್ ಫಿಟ್ನೆಸ್ ಸೀಕ್ರೆಟ್

    ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿ ಊಟದವರೆಗೆ ನಟಿ ಸೋಹಾ ಅಲಿ ಖಾನ್ ಅವರ ಪ್ರತಿ ಊಟವೂ ತುಂಬಾ ಆರೋಗ್ಯಕರ ಆಗಿರುತ್ತದೆ. ನಟಿ ಸೋಹಾ ಅಲಿ ಖಾನ್, ಕಾಫಿ, ಬೆಣ್ಣೆ ಅಥವಾ ಜಾಮ್ನೊಂದಿಗೆ ಬೆಳಿಗ್ಗೆ ಟೋಸ್ಟ್ ಮತ್ತು ಮೊಟ್ಟೆಗಳನ್ನು ಉಪಾಹಾರವಾಗಿ ಸೇವನೆ ಮಾಡುತ್ತಾರೆ. ಇದು ಉತ್ತಮ ಆಹಾರ ಸಂಯೋಜನೆಯಾಗಿದೆ. ಅವಳು ಮೊದಲಿನಿಂದಲೂ ತನ್ನ ಆಹಾರದ ಬಗ್ಗೆ ತುಂಬಾ ಜಾಗ್ರತೆ ವಹಿಸುತ್ತಾರೆ.

    ಇದನ್ನೂ ಓದಿ: ಗರ್ಭಾಶಯ ಡಿಡೆಲ್ಫಿಸ್ ಎಂದರೇನು? ಈ ಕಾಯಿಲೆ ಇದ್ದರೆ ಗರ್ಭಧಾರಣೆ ಕಷ್ಟಕರ ಏಕೆ?

    ಆದರೆ ಕರೋನಾ ಸಾಂಕ್ರಾಮಿಕದ ನಂತರ ನಟಿ ಸೋಹಾ ಅಲಿ ಖಾನ್, ತನ್ನ ಆಹಾರದಲ್ಲಿ ಕೆಲವು ಸೂಪರ್‌ಫುಡ್‌ಗಳನ್ನು ಸೇರಿಸಿದ್ದಾಳೆ. ಅದು ದೇಹವನ್ನು ಪೋಷಿಸಲು ಮಾತ್ರವಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    ನಟಿ ಸೋಹಾ ಅಲಿ ಖಾನ್, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರವನ್ನು ಸೇವಿಸುತ್ತಾಳೆ, ಅದು ಅವಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ನೀವೂ ಸಹ ಉತ್ತಮ ಆರೋಗ್ಯ ಹೊಂದಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ತಿನ್ನಬಹುದು ಎನ್ನುತ್ತಾರೆ ತಜ್ಞರು.

    ಬಾದಾಮಿ

    ಬಾದಾಮಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳನ್ನು ದೇಹ ಪಡೆಯುತ್ತದೆ. ಇದು ಗೊತ್ತಿಲ್ಲದವರೇ ಇಲ್ಲ. ಬಾದಾಮಿಯಲ್ಲಿ ತಾಮ್ರ, ಸತು, ಕಬ್ಬಿಣ ಮತ್ತು ಇತರ ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ. ನಟಿ ಸೋಹಾ ಅಲಿ ಖಾನ್, ತನ್ನ ಕುಟುಂಬಕ್ಕೆ ಪ್ರತಿದಿನ ಬೆಳಗಿನ ಉಪಾಹಾರದ ಮೊದಲು ಬಾದಾಮಿ ತಿನ್ನಲು ಅವಕಾಶ ಮಾಡಿ ಕೊಡುತ್ತಾಳೆ.

    ಬಾದಾಮಿಯು ಪೌಷ್ಟಿಕಾಂಶದ ಸಂಪತ್ತಾಗಿದೆ. ಹಾಗಾಗಿ ಅದು ಅನೇಕ ರೋಗಗಳನ್ನು ಹೊಡೆದೋಡಿಸಲು ಸಹಾಯ ಮಾಡುತ್ತದೆ.

    ಚಿಯಾ ಬೀಜಗಳು

    ಈ ಸಣ್ಣ ಬೀಜಗಳು ಎಷ್ಟು ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ, ಆದ್ದರಿಂದ ನಟಿ ಸೋಹಾ ಅಲಿ ಖಾನ್, ಕೂಡ ಚಿಯಾ ಬೀಜಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾರೆ. ಅವಳು ಅವುಗಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ತಿನ್ನುತ್ತಾಳೆ. ಇದರಿಂದ ಅವರು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿರುತ್ತದೆ. ಮತ್ತು ದೇಹಕ್ಕೆ ಹೆಚ್ಚಿನ ಪ್ರಯೋಜನ ಸಿಗುತ್ತದೆ.

    ಪಪ್ಪಾಯಿ

    ಪಪ್ಪಾಯಿ ಎಂದರೆ ತುಂಬಾ ಇಷ್ಟ ಎಂದು ಸೋಹಾ ಹೇಳ್ತಾರೆ. ಇದು ಬಹಳಷ್ಟು ಫೈಬರ್ ಹೊಂದಿದೆ.  ಅವರು ಪಪ್ಪಾಯಿ ಮತ್ತು ಬೆಳಗಿನ ಉಪಾಹಾರದ ನಡುವೆ ಸುಮಾರು 45 ನಿಮಿಷಗಳ ಅಂತರ ಹೊಂದುತ್ತಾರೆ.

    ಕಲ್ಲಂಗಡಿ

    ಪ್ರತಿಯೊಬ್ಬರೂ ಬೆಳಗಿನ ಉಪಾಹಾರದಲ್ಲಿ ಹಣ್ಣು ಸೇವಿಸಬೇಕೆಂದು ತಜ್ಞರು ಯಾವಾಗಲೂ ಶಿಫಾರಸು ಮಾಡುತ್ತಾರೆ. ಅದಕ್ಕಾಗಿಯೇ ನಟಿ ಸೋಹಾ ಅಲಿ ಖಾನ್ , ಬೆಳಗಿನ ಉಪಾಹಾರದಲ್ಲಿ ಕಲ್ಲಂಗಡಿ ಸೇವಿಸುತ್ತಾರೆ.

    ಇದನ್ನೂ ಓದಿ: ಬಾಲಿವುಡ್ ನಟಿ ಮಹಿಮಾ ಮಕ್ವಾನಾ ಗ್ಲಾಮರಸ್ ಲುಕ್ ಮತ್ತು ಅಂದದ ತ್ವಚೆಯ ರಹಸ್ಯ ಇಲ್ಲಿದೆ

    ಬೆಚ್ಚಗಿನ ನೀರು ಮತ್ತು ಜೇನು

    ಸೋಹಾ ಅಲಿ ಖಾನ್, ಬೆಳಿಗ್ಗೆ ಎದ್ದಾಗ 1 ಚಮಚ ಜೇನುತುಪ್ಪ ಮತ್ತು ಅರ್ಧ ನಿಂಬೆಯೊಂದಿಗೆ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುತ್ತಾರೆ. ಇದು ಜೀರ್ಣಕ್ರಿಯೆ ಸುಧಾರಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
    Published by:renukadariyannavar
    First published: