ಟ್ರಾಫಿಕ್ ಪೊಲೀಸರ ದಂಡಂ ದಶಗುಣಂ ವಿರುದ್ಧ ಧ್ವನಿಯೆತ್ತಿದ ಕಿರಿಕ್ ಬೆಡಗಿ ಸಂಯುಕ್ತಾ

ತಮ್ಮ ಟ್ವಿಟರ್​ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸಂಯುಕ್ತ, ದಂಡ ಪಾವತಿಸುವಾಗ ಫೈನ್ ಮೊತ್ತ ಎಷ್ಟು ದುಬಾರಿಯಾಗಿದೆ ಎಂದು ಅನೇಕರು ನಿಯಮಗಳನ್ನು ಪಾಲಿಸುತ್ತಾರೆ.

zahir | news18-kannada
Updated:September 25, 2019, 10:57 AM IST
ಟ್ರಾಫಿಕ್ ಪೊಲೀಸರ ದಂಡಂ ದಶಗುಣಂ ವಿರುದ್ಧ ಧ್ವನಿಯೆತ್ತಿದ ಕಿರಿಕ್ ಬೆಡಗಿ ಸಂಯುಕ್ತಾ
ಸಂಯುಕ್ತಾ ಹೆಗ್ಡೆ
  • Share this:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆ ನಿಯಮದ  ಪರ-ವಿರೋಧ ವಾದಗಳು ವ್ಯಕ್ತವಾಗುತ್ತಲೇ ಇದೆ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ 'ಕಿರಿಕ್ ಪಾರ್ಟಿ' ನಟಿ ಸಂಯುಕ್ತಾ ಹೆಗ್ಡೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಚಾಲಕರ ಪರ ಧ್ವನಿಯೆತ್ತಿರುವ ಕಿರಿಕ್ ಸುಂದರಿ, ಭ್ರಷ್ಟಚಾರ ವ್ಯವಸ್ಥೆಯಲ್ಲಿ ದಂಡದ ನಿಯಮ ಯಾವ ರೀತಿಯಾಗಿ ಜಾರಿಯಾಗುತ್ತದೆ ಎಂಬ ಬಗ್ಗೆ ಪ್ರಶ್ನೆಯೆತ್ತಿದ್ದಾರೆ.

ನಟಿ ಸಂಯುಕ್ತಾ ಹೆಗ್ಡೆ


ತಮ್ಮ ಟ್ವಿಟರ್​ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸಂಯುಕ್ತ, ದಂಡ ಪಾವತಿಸುವಾಗ ಫೈನ್ ಮೊತ್ತ ಎಷ್ಟು ದುಬಾರಿಯಾಗಿದೆ ಎಂದು ಅನೇಕರು ನಿಯಮಗಳನ್ನು ಪಾಲಿಸುತ್ತಾರೆ. ಇದಕ್ಕಿಂತ ಉತ್ತಮ ನಿಯಮಗಳು ಬೇರೆ ದೇಶಗಳಲ್ಲೂ ಇದೆ. ಅಲ್ಲೂ ದುಬಾರಿ ಮೊತ್ತದ ದಂಡ ಇದೆ. ಆದರೆ ಆ ದೇಶಗಳ ಪೊಲೀಸರು ಭ್ರಷ್ಟಚಾರದಲ್ಲಿ ತೊಡಗುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 600 ಕೋಟಿ ಬಜೆಟ್​​ನಲ್ಲಿ ಬೆಳ್ಳಿತೆರೆ ಮೇಲೆ ರಾಮಾಯಣ: ರಾಮ ಮತ್ತು ರಾವಣ ಪಾತ್ರಕ್ಕೆ ಸ್ಟಾರ್ ನಟರು ಫಿಕ್ಸ್..!

ಅಂದರೆ ಮೋಟಾರು ವಾಹನ ಕಾನೂನಿನಲ್ಲಿ ಹೆಚ್ಚಿನ ದಂಡ ವಿಧಿಸಿರುವುದರಿಂದ ಬದಲಾವಣೆ ಆಗುತ್ತಿರುವುದು ಟ್ರಾಫಿಕ್ ಪೊಲೀಸರ ಲಂಚ ಅಷ್ಟೇ.  ಹೆಚ್ಚಿನ ದಂಡ ವಿಧಿಸಿದರೆ ಪೊಲೀಸರು 100 ರಿಂದ 500 ಲಂಚದ ಅಮೀಷ ಒಡ್ಡುತ್ತಾರೆ. ಜನರು ಕೂಡ ಲಂಚದ ರೂಪದಲ್ಲಿ ಕಡಿಮೆ ಮೊತ್ತ ಪಾವತಿಸಲು ಮುಂದಾಗುತ್ತಾರೆ ಎಂದು ಸಂಯುಕ್ತ ಹೆಗ್ಡೆ ತಿಳಿಸಿದ್ದಾರೆ.

ಶಿಕ್ಷೆಯ ಭಯವಿದ್ದರೆ ತಪ್ಪು ಮಾಡುವ ಸಂಭವ ಕಡಿಮೆ ಇರುವುದು ನಿಜ. ಹಾಗೆಯೇ ಕಾನೂನಿನ ಚೌಕಟ್ಟಿನಲ್ಲಿ ಪೊಲೀಸರು ಸಹ ಕೆಲಸ ನಿರ್ವಹಿಸಬೇಕಲ್ಲವೇ. ಶಿಕ್ಷೆಯ ಭಯವು ಲಂಚದ ರೂಪಕ್ಕೆ ಮಾರ್ಪಡುವುದು ಕೂಡ ಕಾನೂನುಬಾಹಿರ. ಇಂತಹ ನಿಯಮಗಳಿಂದ ಲಂಚಕ್ಕೆ ಮತ್ತಷ್ಟು ಆಹ್ವಾನ ನೀಡಿದಂತಾಗುತ್ತದೆ ಎಂದು ಸಂಯುಕ್ತಾ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಸ್ಯಾಂಡಲ್​ವುಡ್ ನಟಿ ಸೋನು ಗೌಡ ಕೂಡ ಹೊಸ ಮೋಟಾರು ಕಾಯ್ದೆ ಕಾನೂನಿನಿಂದ ಬಡ ವಾಹನ ಸವಾರರು ಹೆಚ್ಚಿನ ದಂಡ ಪಾವತಿಸಬೇಕಾಗಿದೆ. ಅದೇ ರೀತಿ ರಸ್ತೆ ಸರಿ ಮಾಡದ ಸರ್ಕಾರಕ್ಕೆ ದಂಡ ಎಷ್ಟು ಹಾಕಬೇಕು ಎಂದು ಪ್ರಶ್ನಿಸಿದ್ದರು.ಚೆಂದುಟಿಯ ಚೆಲುವೆ ಶುಭಾ ಪೂಂಜಾ ಮುಂದಿದೆ ಖಾಲಿ ದೋಸೆ
First published:September 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ