Seema.RSeema.R
|
news18-kannada Updated:September 23, 2020, 4:21 PM IST
ಪ್ರಿಯಾಂಕಾ ಚೋಪ್ರಾ
ಮುಖದ ಅಂದ ಹೆಚ್ಚಿಸಲು ಯುವತಿಯರು ಮಹಿಳೆಯರು ಮಾಡುವ ಕಸರತ್ತು ಒಂದೆರಡಲ್ಲ. ಅದರಲ್ಲಿಯೂ ಮಳೆಗಾಲ ಬಂತೆಂದರೆ ಚರ್ಮಕ್ಕೆ ಇನ್ನಷ್ಟು ಆರೈಕೆ ಅಗತ್ಯ. ಕೊರೋನಾ ಸಂದರ್ಭದಲ್ಲಿಯಂತೂ ಬ್ಯೂಟಿ ಪಾರ್ಲರ್ಗೆ ಹೋಗಲು ಸಾಕಷ್ಟು ಅಂಜಿಕೆ ಕೂಡ. ಸಾಮಾಜಿಕ ಅಂತರದ ಜವಾಬ್ದಾರಿ ಜೊತೆ ಮುಖದ ಅಂದ ಹೆಚ್ಚಿಸಿಕೊಳ್ಳವುದು ಕೂಡ ಮುಖ್ಯವಾಗುತ್ತದೆ. ಇನ್ನು ಸಿನಿಮಾ ನಟ-ನಟಿಯರನ್ನು ನೋಡಿದಾಕ್ಷಣ ಅವರಷ್ಟೇ ಹೊಳಪಿನ ಮೈ ಕಾಂತಿ ಪಡೆಯಬೇಕೆಂಬ ಹಂಬಲ ಮೂಡುವುದು ಸಹಜ. ಅವರೆಲ್ಲಾ ಇದಕ್ಕಾಗಿ ದುಬಾರಿ ಖರ್ಚು ಮಾಡುತ್ತಾರೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ, ನಟ-ನಟಿಯರು ಕೂಡ ತಮ್ಮ ಅಮ್ಮ, ಅಜ್ಜಿಯರಿಂದ ಬಳುವಳಿಯಾಗಿ ಬಂದ ನೈಸರ್ಗಿಕ ವಿಧಾನದ ಮೂಲಕ ಮೈ ಕಾಂತಿ ಹೆಚ್ಚಿಸಿಕೊಂಡವರೇ. ಈ ಗುಟ್ಟನ್ನು ಬಾಲಿವುಡ್, ಹಾಲಿವುಡ್ನಲ್ಲಿ ಜನಪ್ರಿಯರಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಕೂಡ ನೀಡಿದ್ದಾರೆ.
ನೈಸರ್ಗಿಕ ಮುಖದ ಅಂದಕ್ಕೆ ಏನು ಮಾಡಬೇಕು ಎಂಬ ಕುರಿತು ವಿಡಿಯೋದಲ್ಲಿ ತಿಳಿಸಿರುವ ಅವರು, ಸಹಜ ಸೌಂದರ್ಯಕ್ಕೆ ಕಡಲೆಹಿಟ್ಟು ಪರಿಣಾಮಕಾರಿಯಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಹೇಗೆ ಇದು ತ್ವಚ್ಚೆ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸಿದ್ದಾರೆ. ಮನೆಯಲ್ಲಿಯೇ ಸಿಗುವ ಈ ವಸ್ತುಗಳು ಹೆಚ್ಚು ಉಪಯುಕ್ತವಾಗಿದ್ದು, ಸಹಕಾರಿಯಾಗಿದೆ. ಇದು ನಿಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ
ಮುಖದ ಅಂದ
ಕಡಲೆಹಿಟ್ಟು, ಅರಿಶಿನ, ಮೊಸರು, ನಿಂಬೆ ಹುಳಿ, ಹಾಲು, ಚೆಂದನದ ಪುಡಿಯನ್ನು ಚೆನ್ನಾಗಿ ಕಲೆಸಿ ಮುಖ ಹಾಗೂ ಕೈಕಾಲಿಗೆ ಹಚ್ಚಿದರೆ, ಕಾಂತಿ ಹೆಚ್ಚಲಿದೆ.
ಸಮುದ್ರದ ಉಪ್ಪು, ವೆಜಿಟೆಬಲ್ ಗ್ಲಿಸರಿನ್, ರೋಸ್ವಾಟರ್ ಸ್ಕ್ರಬ್ ಬಳಸುವುದರಿಂದ ನಿಮ್ಮ ತುಟಿ ಅಂದದ ಜೊತೆ ಮಾಶ್ಚರೈಸರ್ ಕಾಪಾಡುವಲ್ಲಿ ಸಹಾಯಕಾರಿಯಾಗುವುದು.
ಕೂದಲಿನ ಆರೈಕೆ
ಮೊಸರು, ಜೇನುತುಪ್ಪ, ಮೊಟ್ಟೆ ಮಿಶ್ರಣ ಮಾಡಿ ತಲೆ ಕೂದಲಿಗೆ ಹಚ್ಚುವುದರಿಂದ ಹೊಟ್ಟಿನ ಸಮಸ್ಯೆ ಇಲ್ಲದಂತೆ ಆಗುತ್ತದೆ. ಅಲ್ಲದೇ ತಲೆ ಕೂದಲು ಇದರಿಂದ ಶೈನಿಯಂತೆ ಮಿಂಚಲಿದೆ.
Published by:
Seema R
First published:
September 23, 2020, 4:16 PM IST