ನಟಿ ಸನ್ನಿ ಲಿಯೋನ್​ನ​ನ್ನು ಹಿಂಬಾಲಿಸುತ್ತಿರುವ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್

news18
Updated:August 28, 2018, 4:08 PM IST
ನಟಿ ಸನ್ನಿ ಲಿಯೋನ್​ನ​ನ್ನು ಹಿಂಬಾಲಿಸುತ್ತಿರುವ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್
news18
Updated: August 28, 2018, 4:08 PM IST
-ನ್ಯೂಸ್ 18 ಕನ್ನಡ

ಬಾಲಿವುಡ್​ನ ಮಾದಕ ಚೆಲುವೆ ಸನ್ನಿ ಲಿಯೋನ್ ಕಳೆದ ಮಾರ್ಚ್​ನಲ್ಲಿ 'ಸ್ಟಾರ್ ಸ್ಟ್ರಕ್ ಬೈ ಸನ್ನಿ ಲಿಯೋನ್' ಎಂಬ ಲಿಪ್ ಸ್ಟಿಕ್ ಉತ್ಪನ್ನವನ್ನು ಬಿಡುಗಡೆ ಮಾಡಿದ್ದರು. ಪತಿ ಡ್ಯಾನಿಯಲ್ ವೆಬರ್​ನೊಂದಿಗೆ ಮೇಕಪ್​ ಬ್ರಾಂಡ್​ ಹುಟ್ಟು ಹಾಕಿದ್ದ ಸನ್ನಿ ಇದೀಗ ಬಿಟೌನ್​ನ ಉದ್ಯಮಿ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ಸನ್ನಿಯ ಪ್ರಾಡಕ್ಟ್​ ಪ್ರಸಿದ್ಧಿ ಪಡೆಯುತ್ತಿದ್ದಂತೆ ಬಾಲಿವುಡ್ ಬೇಬೊ ಕರೀನಾ ಕಪೂರ್ ಸಹ ಸೌಂದರ್ಯ ವರ್ಧಕ ಉತ್ಪನ್ನವನ್ನು ಬಿಡುಗಡೆಗೊಳಿಸಿದ್ದಾರೆ.'ಕರೀನಾ ಕಪೂರ್ ಖಾನ್ ಲಾಕ್ಮೆ ಅಬ್ಸಲ್ಯೂಟ್' ಎಂಬ ಹೊಸ ಮೇಕಪ್ ಉತ್ಪನ್ನಗಳ ಮೂಲಕ ಸನ್ನಿಗೆ ಪೈಪೋಟಿ ನೀಡಲು ಕರೀನಾ ಮುಂದಾಗಿದ್ದಾರೆ.


Loading...


ಲಾಕ್ಮೆ ಮೇಕಪ್​ ಉತ್ಪನ್ನಗಳ ರಾಯಭಾರಿಯಾಗಿರುವ ಕರೀನಾ ಕಪೂರ್ ತಮ್ಮ ಬ್ಯೂಟಿ ಲೈನ್​ನಲ್ಲೇ ಸೌಂದರ್ಯ ವರ್ಧಕಗಳನ್ನು ಪರಿಚಯಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. 800 ರೂ.ನಿಂದ 1500 ರೂ.ವರೆಗಿನ ಉತ್ಪನ್ನಗಳು ಕರೀನಾ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಲಭಿಸಲಿದೆ. ಇದರಲ್ಲಿ ಪೌಟ್ ಡಿಫೈನರ್, ಲಿಪ್ ಡಿಫೈನರ್, ಐ ಡಿಫೈನರ್, ಬೊ ಡಿಫೈನರ್ ಮತ್ತು ಮಸ್ಕರಾಗಳು ಒಳಗೊಂಡಿದೆ.'ಹಲವು ವರ್ಷಗಳಿಂದ ಲಾಕ್ಮೆ ಬ್ರಾಂಡ್ ಉತ್ಪನ್ನಗಳ ರಾಯಭಾರಿಯಾಗಿದ್ದೆ. ಇದೀಗ ಅದೇ ಕಂಪನಿ ತನ್ನ ಸೌಂದರ್ಯದ ಲೈನ್​ನ ಸೌಂದರ್ಯ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುವುದು ಸಂಸ್ಥೆಯ ಮೇಲಿನ ಪ್ರೀತಿ ಹೆಚ್ಚಿಸಿದೆ. ಅಭಿಮಾನಿಗಳು ತನ್ನ ಸೌಂದರ್ಯದ ರಹಸ್ಯಗಳನ್ನು ತಿಳಿಯಲು ಇಚ್ಛಿಸುತ್ತಿದ್ದರು. ​'ಕರೀನಾ ಕಪೂರ್ ಖಾನ್ ಲಕ್ಮೆ ಅಬ್ಸಲ್ಯೂಟ್' ಉತ್ಪನ್ನಗಳ ಮೂಲಕ ಇದೀಗ ನನ್ನ ನೆಚ್ಚಿನ ಕಲೆಕ್ಷನ್​ಗಳನ್ನು ನೀವು ಬಳಸಬಹುದು. ಈ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್​ಗೆ ಕಾರಣವಾಗಲಿದೆಯೇ ಎಂಬುದನ್ನು ತಿಳಿಯಲು ನಾನು ಬಹಳ ಉತ್ಸುಕಳಾಗಿದ್ದೇನೆ' ಎಂದು ಕರೀನಾ ಕಪೂರ್ ತಿಳಿಸಿದ್ದಾರೆ.ಈ ಹಿಂದೆಯೇ ನನ್ನದೇ ಆದ ಮೇಕಪ್ ಶ್ರೇಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕೆಂಬ ಕನಸಿತ್ತು. ಈ ಕನಸಿಗೆ ಲಾಕ್ಮೆ ಸಂಸ್ಥೆಯು ಸಹಕರಿಸಿ ಬಹುದಿನಗಳ ಕನಸನ್ನು ಈಡೇರಿಸಿದ್ದಾರೆ ಎಂದು ಕರೀನಾ ಕಪೂರ್ ತಿಳಿಸಿದರು. ಸದ್ಯ ಸನ್ನಿ ಲಿಯೋನ್ ಅವರ ಮೇಕಪ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದ್ದು, ಇದೀಗ ಕರೀನಾ ಕಪೂರ್ ಲಾಕ್ಮೆ ಜೊತೆಗೂಡಿ ಬಿಡುಗಡೆ ಮಾಡಿರುವ ಉತ್ಪನ್ನಗಳು 'ಸ್ಟಾರ್ ಸ್ಟ್ರಕ್ ಬೈ ಸನ್ನಿ ಲಿಯೋನ್' ಉತ್ಪನ್ನಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ