ಇತ್ತೀಚೆಗೆ ತಾನು ಸ್ತನ ಕ್ಯಾನ್ಸರ್ (Breast Cancer) ವಿರುದ್ಧ ಹೋರಾಟ ಮಾಡುತ್ತಿದ್ದೇನೆ ಎಂದು ಟಿವಿ ನಟಿ (Actress) ಛವಿ ಮಿತ್ತಲ್ (Chhavi Mittal) ಬಹಿರಂಗಪಡಿಸಿದ್ದಾರೆ. ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ (Women) ಕಂಡು ಬರುವ ಮತ್ತು ಮಾರಣಾಂತಿಕ (Deadly) ಹಾಗೂ ಸಹಜವಾಗಿ ಉಂಟಾಗುವ ಕ್ಯಾನ್ಸರ್ ಆಗಿದೆ. ಆದರೆ ಕಿರುತೆರೆಯ ನಟಿ ಛವಿ ಮಿತ್ತಲ್ ಸಾಕಷ್ಟು ಸಕಾರಾತ್ಮಕ ಮನೋಭಾವ ಹೊಂದಿದ್ದು, ರೋಗದ ವಿರುದ್ಧ ಹೋರಾಟ ಮಾಡುತ್ತಿರುವುದಾಗಿ ಹೇಳಿದ್ದಾರೆ. ರೋಗವನ್ನು ಎದುರಿಸುವ ತಾಕತ್ತು ಮತ್ತು ಧೈರ್ಯ, ಆತ್ಮವಿಶ್ವಾಸ ಇದ್ದರೆ ಕಾಯಿಲೆಯನ್ನು ಹೊಡೆದೋಡಿಸಬಹುದು ಎಂದು ಹೇಳಿದ್ದಾರೆ. ಇದಕ್ಕೆ ಇತ್ತೀಚೆಗೆ ಅವರು ತಾವು ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಶೀಘ್ರದಲ್ಲೇ ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ನಟಿ ಛಾವಿ ಮಿತ್ತಲ್
ನಟಿ ಛವಿ ಮಿತ್ತಲ್ ಶೀಘ್ರದಲ್ಲೇ ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ನಟಿ ಆಸ್ಪತ್ರೆಯ ಕೋಣೆಯಲ್ಲಿ ಡ್ಯಾನ್ಸ್ ಮಾಡಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿರುವ ಛಾವಿ ಮಿತ್ತಲ್ ಅಭಿಮಾನಿಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
#preppingforsurgery ನೀಡುತ್ತಾ, ಛವಿ ಮಿತ್ತಲ್, ವೀಡಿಯೊದ ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ. ‘ವೈದ್ಯರು ನೀವು ಶಾಂತವಾಗಿರಬೇಕು. ಎಂದು ಹೇಳಿದರು. ಹೀಗಾಗಿ ನಾನು ಶಾಂತವಾಗುತ್ತಿದ್ದೇನೆ’. ಅಷ್ಟೇ ಅಲ್ಲದೇ ನಟಿ ಛಾವಿ ಮಿತ್ತಲ್, ಧನಾತ್ಮಕ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಹಲವಾರು ಹ್ಯಾಶ್ಟ್ಯಾಗ್ ಸೇರಿಸಿದ್ದಾರೆ. ಛಾವಿಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
ಇದನ್ನೂ ಓದಿ: ನೀವು ಮಾಡುವ ಈ ತಪ್ಪುಗಳು ಜೀರ್ಣಕ್ರಿಯೆಗೆ ಅಪಾಯವಂತೆ
ಈ ತಿಂಗಳ ಆರಂಭದಲ್ಲಿ Instagram ನಲ್ಲಿ ಛಾವಿ ತನ್ನ ಸ್ತನ ಕ್ಯಾನ್ಸರ್ ಬಗ್ಗೆ ತೆರೆದುಕೊಂಡಿದ್ದಳು. ಸ್ತನ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ ಎಂದು ಹೇಳಿದರು. ಮಹಿಳೆಯರು ಗಂಭೀರ ಕಾಯಿಲೆಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿರುವ ಸಂಖ್ಯೆ ಕಂಡು ನಾನು ಗಾಬರಿಗೊಂಡಿದ್ದೇನೆ ಎಂದು ಬರೆದಿದ್ದಾರೆ.
ಸ್ತನ ಕ್ಯಾನ್ಸರ್ ನ್ನು ಮಹಿಳೆಯರು ಮೊದಲ ಹಂತದಲ್ಲೇ ಪತ್ತೆ ಮಾಡುವುದು ಅವಶ್ಯಕವಾಗಿದೆ. ಮಹಿಳೆಯರಿಗೆ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುವುದೇ ದೊಡ್ಡ ಸವಾಲಾಗಿದೆ. ಹಾಗಾಗಿ ನಾನು ಮಹಿಳೆಯರು ಸ್ತನ ಕ್ಯಾನ್ಸರ್ ನ್ನು ಭಾವನಾತ್ಮಕವಾಗಿರದೆ ಅದನ್ನು ಸಕಾರಾತ್ಮಕ ಮನೋಭಾವದಿಂದ ಎದುರಿಸಬೇಕು ಎಂಬುದನ್ನು ಈ ಮೂಲಕ ತಿಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಸ್ತನ ಕ್ಯಾನ್ಸರ್ ನ ಆರಂಭಿಕ ರೋಗ ಲಕ್ಷಣಗಳನ್ನು ಗುರುತಿಸಿದರೆ ಸರಿಯಾದ ಚಿಕಿತ್ಸೆ ಪಡೆಯಬಹುದು
ಆರಂಭಿಕ ಹಂತಗಳಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ರೋಗದ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇದು ಸರಿಯಾದ ಚಿಕಿತ್ಸೆಗೆ ಸಹಾಯ ಮಾಡುತ್ತದೆ.
ಮೊದಲ ಮತ್ತು ಅತ್ಯಂತ ಸ್ಪಷ್ಟ ಲಕ್ಷಣವೆಂದರೆ ಸ್ತನದ ಗಡ್ಡೆ. ಆದರೆ ಆತಂಕಕಾರಿ ಸಂಗತಿಯೆಂದರೆ ಸ್ತನ ಕ್ಯಾನ್ಸರ್ ಇರುವ 6 ಮಹಿಳೆಯರಲ್ಲಿ ಒಬ್ಬರಲ್ಲಿ ಈ ಲಕ್ಷಣ ಕಾಣಿಸುವುದಿಲ್ಲ.
ಸ್ತನ ಕ್ಯಾನ್ಸರ್ ನ ಆರಂಭಿಕ ರೋಗ ಲಕ್ಷಣಗಳು
- ಮೊಲೆ ತೊಟ್ಟುಗಳ ಗಾತ್ರದಲ್ಲಿ ಬದಲಾವಣೆ ಆಗುವುದು
- ಅವಧಿಯವರೆಗೆ ಸ್ತನ ನೋವು ಇರುವುದು
- ಕೆಂಪು, ಕಂದು ಅಥವಾ ಹಳದಿ ದ್ರವ ಒಂದು ಸ್ತನ ಮೊಲೆತೊಟ್ಟುಗಳಿಂದ ವಿಸರ್ಜನೆ ಆಗುವುದು
- ಎದೆಯ ಮೇಲೆ ದದ್ದು, ಕೆಂಪು, ಊತ, ಚರ್ಮದ ಕಿರಿಕಿರಿ, ತುರಿಕೆ
- ತೋಳಿನ ಕೆಳಗೆ ಊತ ಅಥವಾ ಉಂಡೆ ಅಥವಾ ಕಾಲರ್ಬೋನ್ ಸುತ್ತಲೂ
ಇದನ್ನೂ ಓದಿ: ಕತ್ತಿನ ಭಾಗದಲ್ಲಿ ಉಂಟಾದ ಕಪ್ಪು ಮತ್ತು ಕೊಳೆ ತೆಗೆಯಲು ಸಿಂಪಲ್ ಮನೆಮದ್ದು ಬಳಸಿ
ಸ್ತನ ಕ್ಯಾನ್ಸರ್ ಪೂರ್ವ ನಂತರದ ಲಕ್ಷಣಗಳು
- ಮೊಲೆತೊಟ್ಟುಗಳ ಒಳಮುಖವಾಗಿ ತಿರುಗುವುದು
- ಸ್ತನ ಹಿಗ್ಗುವಿಕೆ
- ಎದೆಯ ಮೇಲ್ಮೈಯಲ್ಲಿ ಡಿಂಪಲ್ಸ್ ಕಂಡು ಬರುವುದು
- ಇರುವ ಗಡ್ಡೆ ದೊಡ್ಡದಾಗುವುದು
- ಚರ್ಮದಲ್ಲಿನ ಬದಲಾವಣೆಗಳು
- ಹಸಿವು ಆಗದೇ ಇರುವುದು
- ಉದ್ದೇಶಪೂರ್ವಕವಾಗಿ ಮಾಡದ ತೂಕ ನಷ್ಟ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ