• Home
  • »
  • News
  • »
  • lifestyle
  • »
  • Plum Fruits: ಪ್ಲಮ್ ಹಣ್ಣು ಸೇವನೆಯಿಂದ ಲಾಭವೇನು ಗೊತ್ತಾ? ನಟಿ ಭಾಗ್ಯಶ್ರೀ ತಿಳಿಸಿಕೊಡುತ್ತಾರೆ ಓದಿ

Plum Fruits: ಪ್ಲಮ್ ಹಣ್ಣು ಸೇವನೆಯಿಂದ ಲಾಭವೇನು ಗೊತ್ತಾ? ನಟಿ ಭಾಗ್ಯಶ್ರೀ ತಿಳಿಸಿಕೊಡುತ್ತಾರೆ ಓದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಮೂಳೆಗಳ ಆರೋಗ್ಯ ಮತ್ತು ರಕ್ತಹೀನತೆ ನಿವಾರಣೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವ ಹಣ್ಣುಗಳಲ್ಲಿ ಪ್ಲಮ್ ಹಣ್ಣು ಮುಖ್ಯವಾಗಿದೆ. ಬಾಲಿವುಡ್ ನಟಿ ಭಾಗ್ಯಶ್ರೀ ಇನ್ಸ್ಟಾದಲ್ಲಿ ಪ್ಲಮ್ ಹಣ್ಣಿನ ಪ್ರಯೋಜನಗಳ ಬಗ್ಗೆ ಹೇಳಿದ್ದಾರೆ.

  • Share this:

    ಹಣ್ಣುಗಳು (Fruits) ಪ್ರತಿಯೊಬ್ಬರ ಆರೋಗ್ಯ (Health) ವೃದ್ಧಿಸುವಲ್ಲಿ ಸಾಕಷ್ಟು ಮುಖ್ಯ ಮತ್ತು ಪ್ರಯೋಜನಕಾರಿ (Benefits) ಪಾತ್ರ ವಹಿಸುತ್ತವೆ. ಇದು ನಿಮಗೆಲ್ಲರಿಗೂ ತಿಳಿದ ಸಂಗತಿ. ಯಾವುದೇ ಹಣ್ಣು ಆಗಿರಲಿ ಕೆಲವು ಲಾಭಕಾರಿ ಅಂಶಗಳು ಮತ್ತು ಕೆಲವು ಅನಾನೂಲತೆಗಳನ್ನು (Side Effects) ಹೊಂದಿರುತ್ತವೆ. ಹಾಗಾಗಿ ಹಣ್ಣುಗಳ ಬಗ್ಗೆ ತಿಳಿಯುವುದು ತುಂಬಾ ಮುಖ್ಯ. ಅದಾಗ್ಯೂ ಎಲ್ಲಾ ರೀತಿಯ ಹಣ್ಣುಗಳು ಆರೋಗ್ಯ ಪ್ರಯೋಜನ ನೀಡುತ್ತವೆ. ಯಾವ ರೋಗದಲ್ಲಿ ಯಾವ ಹಣ್ಣನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ನೀವು ತಜ್ಞರು ಮತ್ತು ವೈದ್ಯರಿಂದ ಕೇಳಿ ಸಲಹೆ ಪಡೆಯುವುದು ಮುಖ್ಯ. ಅಗತ್ಯಕ್ಕೆ ಅನುಗುಣವಾಗಿ ಸರಿಯಾದ ಹಣ್ಣನ್ನು ಆರಿಸುವುದರಿಂದ ಅನಾರೋಗ್ಯ ತಪ್ಪಿಸಬಹುದು.


    ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಣ್ಣುಗಳ ಸೇವನೆ ಮಾಡಿ


    ಹಾಗಾಗಿ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಜೊತೆಗೆ ಮೂಳೆಗಳ ಆರೋಗ್ಯ ಮತ್ತು ರಕ್ತಹೀನತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವ ಹಣ್ಣುಗಳ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯುವುದು ತುಂಬಾ ಮುಖ್ಯ. ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಮತ್ತು ಪೌಷ್ಟಿಕತಜ್ಞೆ ಭಾಗ್ಯಶ್ರೀ ಪಟವರ್ಧನ್ ಇತ್ತೀಚೆಗೆ ಇನ್ಸ್ಟಾದಲ್ಲಿ ವೀಡಿಯೊ ಒಂದನ್ನು ಶೇರ್ ಮಾಡಿದ್ದಾರೆ.


    ವಿಡಿಯೋದಲ್ಲಿ ಅವರು ಪ್ಲಮ್ ಹಣ್ಣು ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ಹೇಳಿದ್ದಾರೆ. ಈ ವೀಡಿಯೊದ ಶೀರ್ಷಿಕೆಯಲ್ಲಿ ಪ್ಲಮ್ ಅನ್ನು ಈಗ ಸೂಪರ್‌ಫುಡ್‌ ವರ್ಗದಲ್ಲಿ ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅನೇಕ ಅಧ್ಯಯನಗಳಲ್ಲಿ ಪ್ಲಮ್ ಅನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಹಣ್ಣು ಎಂದು ವಿವರಿಸಲಾಗಿದೆ.


    ಇದನ್ನೂ ಓದಿ: ತೂಕ ಇಳಿಕೆಯ ಜರ್ನಿಯಲ್ಲಿ ಈ ಪಾನೀಯ ಸೇರಿಸಿ ಹೊಟ್ಟೆ ಕೊಬ್ಬನ್ನು ವೇಗವಾಗಿ ಕರಗಿಸಿ!


    ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ


    ನಟಿ ಮತ್ತು ಪೌಷ್ಟಿಕತಜ್ಞೆ ಭಾಗ್ಯಶ್ರೀ ಅವರು ಪ್ಲಮ್ ತಿನ್ನಲು ಶಿಫಾರಸು ಮಾಡುತ್ತಾರೆ. ಇದರ ಸೇವನೆ ರೋಗಗಳ ವಿರುದ್ಧ ಹೋರಾಡುವ ನಿಮ್ಮ ದೇಹದ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಎನ್‌ಸಿಬಿಐನಲ್ಲಿ ಪ್ರಕಟವಾದ ವರದಿ ಸಹ ಈ ವಿಷಯವನ್ನು ದೃಢಪಡಿಸುತ್ತದೆ.


    ಎನ್‌ಸಿಬಿಐ ವರದಿ ಪ್ರಕಾರ, ಪ್ಲಮ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಅಂತಹ ವೇಳೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀವು ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿ.


    ಮೂಳೆಗಳನ್ನು ಬಲಪಡಿಸುತ್ತದೆ


    ಪ್ಲಮ್‌ ಹಣ್ಣು ಸೇವನೆಯು ಮೂಳೆ ಸಂಬಂಧಿತ ಕಾಯಿಲೆಗಳನ್ನು ತೊಡೆದು ಹಾಕಲು ಸಾಕಷ್ಟು ಪ್ರಯೋಜನ ನೀಡುತ್ತವೆ. ಒಣದ್ರಾಕ್ಷಿ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ನಿಮ್ಮ ಮೂಳೆಗಳನ್ನು ವಯಸ್ಸಾದಂತೆ ದುರ್ಬಲಗೊಳಿಸುವ ಅಂಶಗಳನ್ನು ನೀವು ತಪ್ಪಿಸಬಹುದು.


    ರಕ್ತದ ಸಕ್ಕರೆ ನಿಯಂತ್ರಿಸುತ್ತದೆ


    ಪಬ್‌ಮೆಡ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, ಪ್ಲಮ್‌ನಲ್ಲಿ ಮಧುಮೇಹ ವಿರೋಧಿ ಗುಣಲಕ್ಷಣಗಳು ಮತ್ತು ಫೈಬರ್, ಇದು ದೇಹದ ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ನೀವು ಒಣಗಿದ ಪ್ಲಮ್ ಅನ್ನು ಲಘುವಾಗಿ ಸೇವನೆ ಮಾಡಬಹುದು. ಇದು ರಕ್ತದ ಸಕ್ಕರೆ ನಿಯಂತ್ರಿಸಲು ಇದರ ಸೇವನೆ ಮಾಡಲು ಭಾಗ್ಯಶ್ರೀ ಸಲಹೆ ನೀಡುತ್ತಾರೆ.


    ಹಿಮೋಗ್ಲೋಬಿನ್ ಕೊರತೆ ಸರಿಪಡಿಸುತ್ತದೆ


    ಹಿಮೋಗ್ಲೋಬಿನ್ ನಿಮ್ಮ ರಕ್ತದಲ್ಲಿ ಕಂಡು ಬರುವ ಪ್ರೋಟೀನ್ ಆಗಿದೆ. ಇದರ ರಕ್ತದ ಕೊರತೆ ರಕ್ತಹೀನತೆ ಸೇರಿದಂತೆ ಕೆಲವು ಕಾಯಿಲೆಗಳಿಗೆ ಇದು ಕಾರಣ ಆಗುತ್ತದೆ. ಇದರ ಕೊರತೆ ನಿಮ್ಮನ್ನು ಆಯಾಸ ಮತ್ತು ದುರ್ಬಲಗೊಳಿಸುತ್ತದೆ. ಅಂತಹ ವೇಳೆ ನೀವು ರಕ್ತದಲ್ಲಿ ಸಾಕಷ್ಟು ಪ್ರಮಾಣದ ಹಿಮೋಗ್ಲೋಬಿನ್ ಅನ್ನು ಕಾಪಾಡಿಕೊಳ್ಳಲು ಪ್ಲಮ್ ಸೇವನೆ ಪ್ರಯೋಜನ ನೀಡುತ್ತದೆ.


    ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಇದ್ರೆ; ಈ ಪರಿಹಾರ ಬಳಸಿ


    ಚರ್ಮ ಸಮಸ್ಯೆ ತೊಡೆದು ಹಾಕಲು ಪ್ರಯೋಜನಕಾರಿ


    ಪ್ಲಮ್‌ ಹಣ್ಣು ವಿಟಮಿನ್‌, ಖನಿಜ, ಉತ್ಕರ್ಷಣ ನಿರೋಧಕ ಮತ್ತು ಕಾಲಜನ್‌ನಂತಹ ಅಂಶಗಳನ್ನು ಒಳಗೊಂಡಿದೆ. ಇದು ನಿಮ್ಮನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಈ ಪೋಷಕಾಂಶಗಳ ಕೊರತೆಯು ಚರ್ಮ ಮತ್ತು ಕಣ್ಣುಗಳಿಗೆ ಹಾನಿ ಉಂಟು ಮಾಡುತ್ತದೆ. ಹಾಗಾಗಿ ಪ್ಲಮ್ ಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ ಸಮಸ್ಯೆ ತಡೆಯಬಹುದು.

    Published by:renukadariyannavar
    First published: