Aishwarya Rai Bachchan ಸೌಂದರ್ಯದ ಹಾಗೂ ಹೊಳಪಾದ ಕೂದಲ ರಹಸ್ಯ ಏನ್ ಗೊತ್ತಾ?

ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ವಿಶ್ವದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ಹಾಗಾದರೆ ಅವರ ಸೌಂದರ್ಯದ ರಹಸ್ಯ ಏನು ಎಂಬುದನ್ನು ಹಾಗೂ ಅವರು ಯಾವ ಮನೆಮದ್ದು ಬಳಸುತ್ತಾರೆ ಎಂಬುದನ್ನು ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಟಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಸೌಂದರ್ಯ (Beauty) ಯಾರನ್ನು ಆಕರ್ಷಿಸಿಲ್ಲ ಹೇಳಿ? ಐಶ್ವರ್ಯಾ ರೈ ಬಚ್ಚನ್ ಸೌಂದರ್ಯ ಹಾಗೂ ನಟನೆಯಿಂದ (Acting) ಸಾಕಷ್ಟು ಜನಮನ ಗೆದ್ದಿದ್ದಾರೆ. ಅವರ ಅಂದವನ್ನು ಇಷ್ಟ ಪಡದವರೇ ಇಲ್ಲ. ಅವರ ಕುಡಿ ನೋಟ, ಮುಖದ ಹಾವಭಾವ, ನಗು ಹೀಗೆ ಎಲ್ಲವೂ ಮನಮೋಹಕ. ಐಶ್ವರ್ಯಾ ರೈ ಬಚ್ಚನ್ ವಯಸ್ಸು ಕೂಡ ಅವರ ಸೌಂದರ್ಯದ ಮುಂದೆ ತಟಸ್ಥವಾಗಿ ಹೋಗಿದೆ. ಸೌಂದರ್ಯದ ಹೋಲಿಕೆಯ ವಿಷಯ ಎತ್ತಿದ್ರೆ, ನೀನೇನ್ ಐಶ್ವರ್ಯಾ ರೈ ಬಚ್ಚನ್ ಅಂತಾ ಕೀಟಲೇ ಮಾಡುವ ಹಲವು ಸಂಗತಿಗಳನ್ನು ನೀವು ಕೇಳಿರಬಹುದು.

    ಐಶ್ವರ್ಯಾ ರೈ ಬಚ್ಚನ್ ಸೌಂದರ್ಯದ ರಹಸ್ಯ

    ಅವರ ಸೌಂದರ್ಯದ ವಿಷಯಕ್ಕೆ ಬಂದ್ರೆ ಪ್ರತಿ ಹುಡುಗಿಯೂ ಅವರನ್ನು ಫಾಲೋ ಮಾಡಲು ಬಯಸುತ್ತಾರೆ. ಹಾಗಾದರೆ ಅವರ ಸೌಂದರ್ಯದ ರಹಸ್ಯ ಏನು ಎಂಬುದನ್ನು ಹಾಗೂ ಅವರು ಯಾವ ಮನೆಮದ್ದು ಬಳಸುತ್ತಾರೆ ಎಂಬುದನ್ನು ನೋಡೋಣ.

    ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಐಶ್ವರ್ಯಾಳನ್ನು ಕಂಡರೆ ಅವಳ ಸೌಂದರ್ಯದ ಗುಟ್ಟೇನು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಉದ್ಭವಿಸುತ್ತದೆ. ಅವರ ಸೌಂದರ್ಯದ ಗುಟ್ಟು ಏನು ಮತ್ತು ಅವರ ಸಾರ್ವಕಾಲಿಕ ಮುಖದ ಹೊಳಪಿನ ರಹಸ್ಯ ನೋಡೋಣ.

    ಇದನ್ನೂ ಓದಿ: ಥೈರಾಯ್ಡ್ ರೋಗಿಗಳಿಗೆ ಈ ರೀತಿಯ ಆಹಾರ ಸೇವನೆ ಸೂಕ್ತ! ಮಿಸ್ ಮಾಡಬೇಡಿ

    ಐಶ್ವರ್ಯಾ ತ್ವಚೆಯನ್ನು ಹೈಡ್ರೇಟ್ ಆಗಿ ಇರಿಸುತ್ತಾರೆ

    ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ.. ಐಶ್ವರ್ಯಾ ತನ್ನ ಯೌವನದ, ಹೊಳೆಯುವ ಹಾಗೂ ಕಾಂತಿಯುತ ಚರ್ಮದ ರಹಸ್ಯವೆಂದರೆ ಚರ್ಮವನ್ನು ಹೈಡ್ರೇಟ್ ಆಗಿ ಇಡುವುದು ಎಂದು ಹೇಳಿದ್ದಾರೆ. ಮತ್ತು ಇದಕ್ಕಾಗಿ ಅವರು ದಿನವಿಡೀ ಸಾಕಷ್ಟು ನೀರು ಕುಡಿಯುತ್ತಾರೆ.

    ಸೌಂದರ್ಯ ತಜ್ಞರು ಸಹ ಹೊಳೆಯುವ ಚರ್ಮಕ್ಕಾಗಿ ನೀರಿನ ಚಿಕಿತ್ಸೆ ಹೆಚ್ಚು ಉತ್ತಮ ಎಂದು ಪರಿಗಣಿಸುತ್ತಾರೆ. ಇದರರ್ಥ ನೀವು ಹೆಚ್ಚು ನೀರು ಕುಡಿದರೆ, ನಿಮ್ಮ ದೇಹವು ತೇವಾಂಶದಿಂದ ಕೂಡಿರುತ್ತದೆ. ಮತ್ತು ದೇಹದಿಂದ ವಿಷ ಹೊರಹಾಕಲು ಇದು ಸಹಾಯ ಮಾಡುತ್ತದೆ.

    ಐಶ್ವರ್ಯಾ ಅವರ ತ್ವಚೆಯ ಆರೈಕೆಯ ರಹಸ್ಯಗಳು

    ಐಶ್ವರ್ಯಾ ಅವರು ತ್ವಚೆಯ ಆರೈಕೆಗಾಗಿ ಕೆಲವು ಗೃಹೋಪಯೋಗಿ ವಸ್ತುಗಳಿಗೆ ಆದ್ಯತೆ ನೀಡುತ್ತಾರೆ. ಮತ್ತು ಕಾಲಕಾಲಕ್ಕೆ ತಮ್ಮ ಚರ್ಮದ ಹೊಳಪಿಗೆ ಮತ್ತು ಮುಖದ ಅಂದಕ್ಕಾಗಿ ಕೆಲವು ನೈಸರ್ಗಿಕ ವಸ್ತುಗಳ ಫೇಸ್ ಪ್ಯಾಕ್ ಮಾಡುತ್ತಾರೆ. ಅವು ಯಾವವು ಅಂದ್ರೆ..

    ಮೊಸರು

    ಬಾಳೆಹಣ್ಣು

    ಹನಿ

    ಲೋಳೆಸರ

    ಕಡಲೆ ಹಿಟ್ಟು

    ಹಾಲು

    ಅರಿಶಿನ

    ಐಶ್ವರ್ಯಾ ಅವರ ನೆಚ್ಚಿನ ಫೇಸ್ ಪ್ಯಾಕ್ ಯಾವುದು?

    ಚಲನಚಿತ್ರ ಮತ್ತು ಜಾಹೀರಾತು ಚಿತ್ರೀಕರಣದ ಸಮಯದಲ್ಲಿ ಐಶ್ವರ್ಯಾ ಮೇಕಪ್‌ ಮಾಡಿಕೊಳ್ತಾರೆ. ಆದರೆ ಅವರು ನಿಜ ಜೀವನದಲ್ಲಿ ತಮ್ಮ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡಲು ಬಯಸುತ್ತಾರೆ. ಇದಕ್ಕೆ ಐಶ್ವರ್ಯಾ ಅವರ ನೆಚ್ಚಿನ ಫೇಸ್ ಪ್ಯಾಕ್ ಒಂದು ಇದೆ. ಐಶ್ವರ್ಯಾ ಈ ಮೂರು ವಸ್ತುಗಳನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸುತ್ತಾರೆ

    ಅರಿಶಿನ

    ಹಾಲು

    ಕಡಲೆ ಹಿಟ್ಟು

    ನಿಮ್ಮ ಚರ್ಮವು ತುಂಬಾ ಎಣ್ಣೆಯುಕ್ತವಾಗಿದ್ದರೆ ಮತ್ತು ಟ್ಯಾನಿಂಗ್ ಆಗಿದ್ದರೆ, ಈ ಫೇಸ್ ಪ್ಯಾಕ್ ಮಾಡುವಾಗ ನೀವು ಹಾಲು ಮತ್ತು ರೋಸ್ ವಾಟರ್ ಎರಡನ್ನೂ ಅರ್ಧ ಪ್ರಮಾಣದಲ್ಲಿ ಮಿಶ್ರಣ ಮಾಡಿ ಅನ್ವಯಿಸಬಹುದು.

    ಐಶ್ವರ್ಯಾ ಅವರ ಕೂದಲಿನ ಆರೈಕೆಯ ರಹಸ್ಯ

    ಕೆಂದು ರೇಷ್ಮೆಯಂತಹ ಮೃದುವಾದ ಮತ್ತು ದಪ್ಪ ಕೂದಲಿನ ರಹಸ್ಯಕ್ಕಾಗಿ ಅವರು ಮನೆಯಲ್ಲಿ ತಯಾರಿಸಿದ ಹೇರ್ ಮಾಸ್ಕ್ ಬಳಸುತ್ತಾರೆ. ಅವುಗಳನ್ನು ತಯಾರಿಸಲು ಐಶ್ವರ್ಯಾ ವಿಭಿನ್ನ ಸಂಯೋಜನೆ ಬಳಸುತ್ತಾರೆ. ಉದಾಹರಣೆಗೆ, ಕಂಡೀಷನಿಂಗ್‌ಗಾಗಿ ಮೊಸರು ಮತ್ತು ಬಾಳೆಹಣ್ಣನ್ನು ಬೆರೆಸಿ ತಯಾರಿಸಿದ ಹೇರ್ ಮಾಸ್ಕ್ ಹಾಕುತ್ತಾರೆ.

    ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿದೆ ಗ್ರೀನ್ ಡೇಟಿಂಗ್ ಟ್ರೆಂಡ್, ಏನಿದು ಹೊಸದು?

    ಆದರೆ ಐಶ್ವರ್ಯಾ ಕೂದಲಿಗೆ ಹೊಳಪು ಮತ್ತು ಮೃದುತ್ವ ತರಲು ಪ್ರೋಟೀನ್ ಹೇರ್ ಮಾಸ್ಕ್ ಅನ್ನು ಅನ್ವಯಿಸಲು ಇಷ್ಟ ಪಡುತ್ತಾರೆ. ಇದಕ್ಕಾಗಿ ಮೊಟ್ಟೆ ಮತ್ತು ಆಲಿವ್ ಎಣ್ಣೆ ಬೆರೆಸಿ ಹೇರ್ ಪ್ಯಾಕ್ ತಯಾರಿಸುತ್ತಾರೆ.
    Published by:renukadariyannavar
    First published: