• Home
  • »
  • News
  • »
  • lifestyle
  • »
  • Paleo Diet: ನಟನ ಹೆಂಡತಿಯ ಪ್ರಾಣ ಕಸಿದ ಪ್ಯಾಲಿಯೋ ಡಯೆಟ್ ಎಷ್ಟು ಅಪಾಯಕಾರಿ?

Paleo Diet: ನಟನ ಹೆಂಡತಿಯ ಪ್ರಾಣ ಕಸಿದ ಪ್ಯಾಲಿಯೋ ಡಯೆಟ್ ಎಷ್ಟು ಅಪಾಯಕಾರಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Paleo Diet Side Effects: ಪ್ಯಾಲಿಯೋ ಡಯೆಟ್ ಅನ್ನು​ ಸಾಮಾನ್ಯವಾಗಿ ತೂಕ ಇಳಿಕೆಗೆ ಶಿಫಾರಸು ಮಾಡಲಾಗುತ್ತದೆ. ಈ ಆಹಾರ ಕ್ರಮದಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಇರುತ್ತದೆ.

  • Share this:

ಸೆಲೆಬ್ರಿಟಿಗಳ ಡಯೆಟ್ (Celebrities Diet) ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸುತ್ತಾರೆ. ಸೆಲೆಬ್ರಿಟಿ ನಟಿಯರು, ಮಾಡೆಲ್‌ಗಳ ಆಹಾರ ಪದ್ಧತಿ (Food) ವಿಶೇಷ, ಅವರ ದೇಹವೂ ಒಗ್ಗುತ್ತದೆ. ಅದನ್ನು ತಟ್ಟನೆ ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಈ ರೀತಿ ಮಾಡಲು ಹೋಗಿ ಜನಪ್ರಿಯ ನಟ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯದರ್ಶಿನಿ ಅವರು ಸಾವನ್ನಪ್ಪಿದ್ದು, ಅವರ ಸಾವಿಗೆ ಡಯೆಟ್​ (Diet) ಬದಲಾವಣೆ ಮಾಡಿರುವುದು ಕಾರಣ ಎನ್ನಲಾಗುತ್ತದೆ. ಮೂಲಗಳ ಪ್ರಕಾರ ಅವರು ಪ್ಯಾಲಿಯೋ ಡಯೆಟ್‌ ಫಾಲೋ (paleo diet ) ಮಾಡುತ್ತಿದ್ದರು, ಅದರ ಅಡ್ಡಪರಿಣಾಮಗಳ ಕಾರಣದಿಂದ ಸಾವನ್ನಪ್ಪಿದ್ದಾರೆ. 43 ವರ್ಷದ ಅವರು ಅವರು ಮಧುಮೇಹದಿಂದ ಬಳಲುತ್ತಿದ್ದಾರಂತೆ, ಇದನ್ನು ನಿಯಂತ್ರಿಸಲು ಅವರು ಪ್ಯಾಲಿಯೋ ಡಯೆಟ್ ಅನುಸರಿಸಿದ ಕಾರಣ, ಕೊನೆಗೆ ಡಯೆಟ್ ನಿಂದಾಗಿ ಮಧುಮೇಹ ಉಲ್ಬಣಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.


ಪ್ಯಾಲಿಯೋ ಡಯೆಟ್ ಅನ್ನು​ ಸಾಮಾನ್ಯವಾಗಿ ತೂಕ ಇಳಿಕೆಗೆ ಶಿಫಾರಸು ಮಾಡಲಾಗುತ್ತದೆ. ಈ ಆಹಾರ ಕ್ರಮದಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಇರುತ್ತದೆ. ಅಂದರೆ ಈ ಆಹಾರದಲ್ಲಿ ನೀವು ಮೀನು, ಮಾಂಸ, ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನಬಹುದು. ಆದರೆ ಧಾನ್ಯದ ಆಹಾರಗಳು, ಎಲ್ಲಾ ಡೈರಿ ಆಹಾರಗಳನ್ನು ತಪ್ಪಿಸಬೇಕು. ದೇಹದ ತೂಕವನ್ನು ಇಳಿಸಲು ಸಹಾಯ ಮಾಡುವ ಪ್ಯಾಲಿಯೋ ಡಯೆಟ್ ಜೀವ ತೆಗೆಯುವಷ್ಟು ಅಪಾಯಕಾರಿಯಾಗಿರುವುದು ನಿಜಕ್ಕೂ ಕಳವಳಕಾರಿ ಸಂಗತಿ.


ನಿಜಕ್ಕೂ ಈ ಡಯೆಟ್​ ಅಷ್ಟೆಲ್ಲಾ ಅಪಾಯಕಾರಿಯಾ? ಅದರಿಂದ ಏನೆಲ್ಲಾ ಪ್ರಯೋಜನವಿದೆ ಹಾಗೂ ಅಡ್ಡಪರಿಣಾಮಗಳೇನು ಎಂಬುದು ಇಲ್ಲಿದೆ.


ಪ್ಯಾಲಿಯೋ ಡಯೆಟ್ ಆರೋಗ್ಯಕರವೇ?


ಪ್ಯಾಲಿಯೋ ಆಹಾರದ ಬಗ್ಗೆ ಇನ್ನೂ ಸ್ಪಷ್ಟವಾದ ಸಂಶೋಧನೆಯ ಕೊರತೆಯಿದೆ ಮತ್ತು ಅದರ ಸಾಧಕ – ಬಾಧಕಗಳ ಬಗ್ಗೆ ಸೀಮಿತ ಮಾಹಿತಿ ಇದೆ. ಈ ಆಹಾರ ಕ್ರಮದಲ್ಲಿ ಹೆಚ್ಚಿನ ಕೊರತೆಯಿದೆ ಎನ್ನಬಹುದು. ನಿರ್ದಿಷ್ಟವಾಗಿ ಡೈರಿ ಆಹಾರಗಳನ್ನು ತಪ್ಪಿಸುವುದು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡರ ಕೊರತೆಗೆ ಕಾರಣವಾಗುತ್ತದೆ.


ಇವೆರಡೂ ಮೂಳೆಗಳನ್ನು ಬಲಗೊಳಿಸಲು ಬೇಕು  ಆದರೆ ಈ ಡಯೆಟ್​ ಫಾಲೋ ಮಾಡಿದರೆ ಮೂಳೆಗಳನ್ನು ದುರ್ಬಲಗೊಳಿಸಬಹುದು. ಹೆಚ್ಚುವರಿಯಾಗಿ, ಹೆಚ್ಚಿನ ಪ್ರೋಟೀನ್ ಸೇವನೆಯು ಬೊಜ್ಜು ಮತ್ತು ಹೃದಯ ಮತ್ತು ಮೂತ್ರಪಿಂಡದ ಹಾನಿಯ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ, ಕೆಲವು ರೀತಿಯ ಕ್ಯಾನ್ಸರ್ ಬರುವ ಅಪಾಯವೂ ಇದೆ ಎಂದು ಸಹ ಹೇಳಲಾಗುತ್ತದೆ.


ಕಾರ್ಬೋಹೈಡ್ರೇಟ್ ಮತ್ತು ಹಾಲು ಆಧಾರಿತ ಆಹಾರವನ್ನು ತ್ಯಜಿಸುವುದು ಒಳ್ಳೆಯದಾ?


ಇಂದಿನ ಫಿಟ್‌ನೆಸ್ ಜಗತ್ತು ಕಾರ್ಬೋಹೈಡ್ರೇಟ್ ಆಹಾರಗಳನ್ನು ವಿಲನ್‌ನಂತೆ ನೋಡುತ್ತಿದೆ. ಆದರೆ ದೇಹದ ಸುಗಮ ಚಲನೆಗೆ ಇದು ಅತ್ಯಗತ್ಯ. ಮಿದುಳಿನ ಆರೋಗ್ಯ ಮತ್ತು ಸ್ನಾಯುಗಳ ಕಾರ್ಯನಿರ್ವಹಣೆಗೆ ಧಾನ್ಯದ ಆಹಾರಗಳು, ಹಣ್ಣುಗಳು ಮತ್ತು ತರಕಾರಿಗಳು ಅತ್ಯಗತ್ಯವಾಗಿದೆ. ಹಾಗೆಯೇ ದೇಹದ ಶಕ್ತಿಗೆ ಕಾರ್ಬೋಹೈಡ್ರೇಟ್ಗಳು ಸಹ ಅಗತ್ಯ. ಡೈರಿ ಉತ್ಪನ್ನಗಳನ್ನು ತಪ್ಪಿಸುವುದರಿಂದ ಅವುಗಳಿಂದ ನೀವು ಸಾಕಷ್ಟು ಕ್ಯಾಲ್ಸಿಯಂ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ:ಫೇಶಿಯಲ್ ಆದ ಮೇಲೆ ಯಾವುದೇ ಕಾರಣಕ್ಕೂ ಈ ತಪ್ಪು ಮಾಡ್ಬೇಡಿ, ಚರ್ಮ ಹಾಳಾಗೋದ್ರಲ್ಲಿ ಡೌಟೇ ಇಲ್ಲ


ಹಾಲಿಗಿಂತ ಕ್ಯಾಲ್ಸಿಯಂಗೆ ಉತ್ತಮ ಪರ್ಯಾಯವಿಲ್ಲ. ಆದ್ದರಿಂದ, ಈ ಆಹಾರವನ್ನು ಅನುಸರಿಸುವವರಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪೂರೈಕೆಯು ಕಡ್ಡಾಯವಾಗಿದೆ. ಪ್ಯಾಲಿಯೋ ಡಯಟ್ ಡೈರಿ ಉತ್ಪನ್ನಗಳು ಉರಿಯೂತವನ್ನು ಉಂಟುಮಾಡುತ್ತದೆ ಎಂದು ಹೇಳುತ್ತದೆ. ಆದರೆ ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳ ಉರಿಯೂತವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಸಾಬೀತು ಮಾಡಿದೆ.


ಪ್ಯಾಲಿಯೋ ಡಯಟ್​ ಅಡ್ಡ ಪರಿಣಾಮಗಳೇನು?


ಸಾಮಾನ್ಯವಾಗಿ, ಯಾವುದೇ ಡಯೆಟ್​ ಅನ್ನು ಅನುಸರಿಸಲು ಪ್ರಾಯೋಗಿಕವಾಗಿ ಅಸಾಧ್ಯ. ಹಲವು ವರ್ಷಗಳಿಂದ ಪ್ಯಾಲಿಯೋ ಡಯಟ್ ಪಾಲಿಸಿದರೂ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ತೂಕ ಇಳಿಕೆಗೆ ಮಾತ್ರ ಇದನ್ನು ಅನುಸರಿಸಿದರೂ, ಒಟ್ಟಾರೆ ಆರೋಗ್ಯವನ್ನು ಪರಿಗಣಿಸಿ ಇದನ್ನು ಫಾಲೋ ಮಾಡುವುದು ಉತ್ತಮ. ಏಕೆಂದರೆ ಹೆಚ್ಚಿನ ಪ್ರೊಟೀನ್ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಶೇಖರಣೆಗೆ ಸಹ ಕಾರಣವಾಗಬಹುದು ಮತ್ತು ಹೃದಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.


ಅದೇ ರೀತಿ, ಡೈರಿ ಆಹಾರಗಳನ್ನು ತಪ್ಪಿಸುವುದರಿಂದ ಉಂಟಾಗುವ ಕ್ಯಾಲ್ಸಿಯಂ ಕೊರತೆಯು ಆಸ್ಟಿಯೊಪೊರೋಸಿಸ್, ಮುರಿತಗಳು ಮತ್ತು ಇತರ ಮೂಳೆ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುತ್ತದೆ. ದೇಹವು ಶಕ್ತಿಗಾಗಿ ಪ್ರೋಟೀನ್ ಮತ್ತು ಕೊಬ್ಬನ್ನು ಬಳಸುವುದರಿಂದ, ಸಮಸ್ಯೆ ಬರುವುದು ಗ್ಯಾರಂಟಿ.


ಇದನ್ನೂ ಓದಿ: ಪೇರಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಅಂತ ಜಾಸ್ತಿ ತಿಂದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ


ಇದು ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರಬಹುದು. ವಿಶೇಷವಾಗಿ ಹೃದಯ, ಮೂತ್ರಪಿಂಡ, ಯಕೃತ್ತು, ಮೇದೋಜೀರಕ ಗ್ರಂಥಿ ಇತ್ಯಾದಿಗಳ ಸಮಸ್ಯೆ ಬರಬಹುದು. ಆದ್ದರಿಂದ ಪೌಷ್ಟಿಕತಜ್ಞರ ಶಿಫಾರಸಿನ ಮೇರೆಗೆ ಈ ಪ್ಯಾಲಿಯೋ ಡಯಟ್ ಅನ್ನು ಅನುಸರಿಸುವುದು ಉತ್ತಮ.

Published by:Sandhya M
First published: