• Home
  • »
  • News
  • »
  • lifestyle
  • »
  • Acidity Problem: ಸಾಯಂಕಾಲ ಅಸಿಡಿಟಿ ಸಮಸ್ಯೆ ಹೆಚ್ಚಾಗಲು ಇದೇ ಕಾರಣವಂತೆ, ಇಲ್ಲಿದೆ ಮನೆಮದ್ದುಗಳು

Acidity Problem: ಸಾಯಂಕಾಲ ಅಸಿಡಿಟಿ ಸಮಸ್ಯೆ ಹೆಚ್ಚಾಗಲು ಇದೇ ಕಾರಣವಂತೆ, ಇಲ್ಲಿದೆ ಮನೆಮದ್ದುಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಮ್ಲೀಯತೆಯನ್ನು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ ಎಂದು ಕರೆಯುತ್ತಾರೆ. ಗಂಟಲು ಮತ್ತು ಹೊಟ್ಟೆ ಸಂಪರ್ಕಿಸುವ ಟ್ಯೂಬ್ ದುರ್ಬಲವಾದಾಗ ಈ ಆಮ್ಲೀಯತೆ ಸಮಸ್ಯೆ ಉಂಟಾಗುತ್ತದೆ. ಮತ್ತು ಇದು ಹೊಟ್ಟೆಯಲ್ಲಿ ಇರುವ ಆಮ್ಲವು ಮೇಲಕ್ಕೆ ಹರಿಯುವಂತೆ ಮಾಡುತ್ತದೆ. ಇದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ.

ಮುಂದೆ ಓದಿ ...
  • Share this:

    ಹೆಚ್ಚು ಸಿಹಿ, ಕರಿದ ಮತ್ತು ಮಸಾಲೆಯುಕ್ತ ಆಹಾರ (Masala Food) ಸೇವನೆ ಮಾಡುವುದು ಜನರಲ್ಲಿ (People) ಸಾಮಾನ್ಯವಾಗಿ ಹೊಟ್ಟೆ ಮತ್ತು ಗಂಟಲಿನ (Stomach And Throat) ಕಿರಿಕಿರಿ ಸಮಸ್ಯೆ (Problem) ಉಂಟು ಮಾಡುತ್ತದೆ. ಹೊಟ್ಟೆ ಮತ್ತು ಗಂಟಲಿನ ಕಿರಿಕಿರಿ ಉಂಟಾಗುವ ಸಮಸ್ಯೆಯನ್ನು ಆಮ್ಲೀಯತೆ ಎಂದು ಕರೆಯುತ್ತಾರೆ. ಇದರಲ್ಲಿ ಗಂಟಲು ಮತ್ತು ಹೊಟ್ಟೆಯಲ್ಲಿ ಉರಿ ಹಾಗೂ ನೋವಿನ ಸಮಸ್ಯೆ ಇರುತ್ತದೆ. ಹೊಟ್ಟೆಯ ಗ್ಯಾಸ್ಟ್ರಿಕ್ ಗ್ರಂಥಿಗಳು ಆಹಾರ ಜೀರ್ಣಿಸಿಕೊಳ್ಳಲು ಆಮ್ಲ ಸ್ರವಿಸುತ್ತದೆ. ಆದರೆ ಈ ಸ್ರವಿಸುವಿಕೆ ಅಧಿಕ ಕಾಲ ಇದ್ದಾಗ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಇದೊಂದು ಸಾಮಾನ್ಯ ಸಮಸ್ಯೆ ಆಗಿದೆ. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೇ ಹೋದರೆ ಸಮಸ್ಯೆ ಮತ್ತಷ್ಟು ಹೆಚ್ಚುವ ಅಪಾಯ ಇದೆ.


    ಅಸಿಡಿಟಿ ಏಕೆ ಉಂಟಾಗುತ್ತದೆ?


    ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ಆಮ್ಲೀಯತೆಯನ್ನು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ ಎಂದು ಕರೆಯುತ್ತಾರೆ. ಗಂಟಲು ಮತ್ತು ಹೊಟ್ಟೆ ಸಂಪರ್ಕಿಸುವ ಟ್ಯೂಬ್ ದುರ್ಬಲವಾದಾಗ ಈ ಆಮ್ಲೀಯತೆ ಸಮಸ್ಯೆ ಉಂಟಾಗುತ್ತದೆ. ಮತ್ತು ಇದು ಹೊಟ್ಟೆಯಲ್ಲಿ ಇರುವ ಆಮ್ಲವು ಮೇಲಕ್ಕೆ ಹರಿಯುವಂತೆ ಮಾಡುತ್ತದೆ. ಇದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ.


    ಅಸಿಡಿಟಿಯಿಂದ ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ


    ಸೂರ್ಯಾಸ್ತದ ನಂತರ ವಿಟಮಿನ್ ಡಿ ಪ್ರಮಾಣ ಕಡಿಮೆಯಾಗುತ್ತದೆ. ಅದು ನಿಮ್ಮ ಜೀರ್ಣಕ್ರಿಯೆ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಕೆಲವರು ಸಂಜೆ ವೇಳೆ ಅಸಿಡಿಟಿ ಮತ್ತು ವಾಯು ಸಮಸ್ಯೆ ಎದುರಿಸುತ್ತಾರೆ. ನೀವೂ ಸಹ ಗ್ಯಾಸ್, ಅಸಿಡಿಟಿ ಮತ್ತು ವಾಯು ಸಮಸ್ಯೆ ಎದುರಿಸುತ್ತಿದ್ದರೆ ಇಲ್ಲಿದೆ ಪರಿಹಾರೋಪಾಯ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


    ಅನಗತ್ಯ ಅಸಿಡಿಟಿ ಸಮಸ್ಯೆಯಿಂದ ಪರಿಹಾರ ನೀಡುತ್ತವೆ ಈ ಮನೆಮದ್ದುಗಳು


    ಲೈಕೋರೈಸ್ ರೂಟ್


    ಅಸಿಡಿಟಿ ಸಮಸ್ಯೆ ಕಡಿಮೆ ಮಾಡಲು ಮೂಲೇತಿಯನ್ನು ಆಯುರ್ವೇದ ಔಷಧವಾಗಿ ಬಳಸಲಾಗುತ್ತದೆ. ಏಕೆಂದರೆ ಇದು ಅನೇಕ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಅಸಿಡಿಟಿ ಸಮಸ್ಯೆ ಇರುತ್ತದೆ. ಗ್ಯಾಸ್ಟ್ರಿಕ್ ಉರಿಯೂತಕ್ಕೆ ಲೈಕೋರೈಸ್ ರೂಟ್  ಬಳಕೆ ಪ್ರಯೋಜನಕಾರಿಯಾಗಿದೆ.


    ಒಂದು ಕಪ್ ನೀರಿಗೆ 2 ರಿಂದ 3 ಚಿಕ್ಕ ಜೇಡರಸ ಹಾಕಿ ಅರ್ಧ ಆಗುವವರೆಗೆ ಕುದಿಸಿ ಮತ್ತು ಉಗುರುಬೆಚ್ಚನೆಯ ಕಷಾಯ ಸೇವಿಸಿ. ಗ್ಯಾಸ್ ಸಮಸ್ಯೆ ಇರುವವರು ಇದನ್ನು ಪ್ರತಿದಿನ ಸೇವಿಸಬಹುದು.


    ಲೋಳೆಸರ


    ಅಲೋವೆರಾವನ್ನು ಹಲವು ವರ್ಷಗಳಿಂದ ಔಷಧಿಯಾಗಿ ಬಳಸಲಾಗುತ್ತಿದೆ. ಇದು ಗ್ಯಾಸ್ಟ್ರೋಪ್ರೊಟೆಕ್ಟಿವ್ ಗುಣಲಕ್ಷಣ ಹೊಂದಿದೆ. ಹೀಗಾಗಿ ಅಲೋವೆರಾ ಜೆಲ್ನ ಗುಣವು ಅಸಿಟಿಕ್ ಆಮ್ಲ ಮತ್ತು ಗ್ಯಾಸ್ಟ್ರಿಕ್ ಅಲ್ಸರ್ನ ಅಸ್ವಸ್ಥತೆ ಕಡಿಮೆ ಮಾಡುತ್ತದೆ.


    ಅಲೋವೆರಾ ತುಂಡನ್ನು ತೆಗೆದುಕೊಂಡು ಅದರ ತಿರುಳನ್ನು ಹೊರ ತೆಗೆಯಿರಿ. ಈಗ ಅದಕ್ಕೆ 1 ಲೋಟ ನೀರು ಬೆರೆಸಿ ಜ್ಯೂಸ್ ಮಾಡಿ ಸೇವಿಸಿ. ಪ್ರತಿದಿನ 1 ಕಪ್ ಅಲೋವೆರಾ ರಸ ಸೇವಿಸಿ.


    ಶುಂಠಿ


    ಆಮ್ಲೀಯತೆ ಶುಂಠಿ ಬಳಕೆ ತುಂಬಾ ಪ್ರಯೋಜನಕಾರಿ. ಶುಂಠಿಯು ಆಂಟಿಆಕ್ಸಿಡೆಂಟ್ ಮತ್ತು ಗ್ಯಾಸ್ಟ್ರೋಪ್ರೊಟೆಕ್ಟಿವ್‌ನಂತಹ ಔಷಧೀಯ ಗುಣ ಹೊಂದಿದೆ. ವಾಯು, ಗ್ಯಾಸ್ಟ್ರಿಕ್ ಅಲ್ಸರ್, ಮಲಬದ್ಧತೆ, ಅಜೀರ್ಣ, ವಾಕರಿಕೆ ಮತ್ತು ವಾಂತಿಯಂತಹ ಸಮಸ್ಯೆ ನಿವಾರಿಸುತ್ತದೆ.


    ಒಂದು ಇಂಚಿನ ಶುಂಠಿ ಎರಡು ಕಪ್ ನೀರಿನಲ್ಲಿ ಮಧ್ಯಮ ಉರಿಯಲ್ಲಿ 5 ರಿಂದ 10 ನಿಮಿಷಗಳ ಕಾಲ ಕುದಿಸಿ. ತದನಂತರ ಅದನ್ನು ಚಹಾದಂತೆ ಕುಡಿಯಿರಿ. ಸಾಮಾನ್ಯವಾಗಿ ಗ್ಯಾಸ್ ಸಮಸ್ಯೆ ಇರುವವರು ಇದನ್ನು ಪ್ರತಿದಿನ ಸೇವಿಸಿ.


    ಕ್ಯಾರ್ ಬೀಜಗಳು


    ಕ್ಯಾರ ಬೀಜಗಳನ್ನು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆ ಗುಣಪಡಿಸಲು ಬಳಸುತ್ತಾರೆ. ಕ್ಯಾರೆವೇ ಬೀಜಗಳನ್ನು ಅಜೀರ್ಣಕ್ಕೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಈ ಬೀಜಗಳು ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣ ಹೊಂದಿವೆ. ಗ್ಯಾಸ್ಟ್ರಿಕ್ ಆಮ್ಲ ತಡೆಯುತ್ತದೆ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


    ಒಂದು ಚಮಚ ಕ್ಯಾರ ಬೀಜಗಳನ್ನು ಒಂದು ಕಪ್ ನೀರಿನಲ್ಲಿ ಸುಮಾರು 5 ನಿಮಿಷ ಕುದಿಸಿ. ಈ ಕಷಾಯ ಸೇವಿಸಿ. ನೀವು ವಾರಕ್ಕೆ ಎರಡು ಬಾರಿ ಈ ಪರಿಹಾರ ಪ್ರಯತ್ನಿಸಿ.

    Published by:renukadariyannavar
    First published: