• Home
  • »
  • News
  • »
  • lifestyle
  • »
  • Acidity Problem: ಆ್ಯಸಿಡಿಟಿ ಸಮಸ್ಯೆ ನಿವಾರಣೆಗೆ ಈ ನೈಸರ್ಗಿಕ ವಿಧಾನ ಫಾಲೋ ಮಾಡಿ!

Acidity Problem: ಆ್ಯಸಿಡಿಟಿ ಸಮಸ್ಯೆ ನಿವಾರಣೆಗೆ ಈ ನೈಸರ್ಗಿಕ ವಿಧಾನ ಫಾಲೋ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಸೇವನೆಯತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೇ ಹೋಟೆಲ್ ಗಳಲ್ಲಿನ ಊಟವು, ಹೆಚ್ಚು ಸೋಡಾ ಹಾಕಿದ ಆಹಾರ ಪದಾರ್ಥ ಸೇವನೆಯು ಹೊಟ್ಟೆ ಸಂಬಂಧಿ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ.

  • Share this:

    ಇತ್ತೀಚಿನ ದಿನಗಳಲ್ಲಿ ತುಂಬಾ ಜನರು (People) ಆ್ಯಸಿಡಿಟಿ ಮತ್ತು ಗ್ಯಾಸ್ಟ್ರಿಕ್ (Acidity And Gastric) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ (Food Plan). ಯಾವ ಆಹಾರ ತಿಂದರೆ ಆರೋಗ್ಯ ಸಮಸ್ಯೆಗಳು (Problems) ಹೆಚ್ಚು ಕಾಡುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಸೇವನೆಯತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೇ ಹೋಟೆಲ್ ಗಳಲ್ಲಿನ ಊಟವು, ಹೆಚ್ಚು ಸೋಡಾ ಹಾಕಿದ ಆಹಾರ ಪದಾರ್ಥ ಸೇವನೆಯು ಹೊಟ್ಟೆ ಸಂಬಂಧಿ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಅದರಲ್ಲೂ ಮಸಾಲೆಯುಕ್ತ ಆಹಾರ ಸೇವನೆ ಮಾಡಿದ್ರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.


    ಆ್ಯಸಿಡಿಟಿ ಆರೋಗ್ಯ ಸಮಸ್ಯೆ


    ಆಮ್ಲೀಯತೆಗೆ ಮುಖ್ಯ ಕಾರಣ ಆಹಾರ. ಅದರಲ್ಲೂ ನೀವು ಹೆಚ್ಚು ಎಣ್ಣೆ ಪದಾರ್ಥ ಸೇವನೆ ಮತ್ತು ಮಸಾಲೆಯುಕ್ತ ಆಹಾರ ಹಾಗೂ ಹೆಚ್ಚು ಹುಳಿ, ಖಾರ, ಉಪ್ಪಿನಿಂದ ಕೂಡಿದ ಪದಾರ್ಥ ಸೇವನೆ ಮಾಡುವುದು ಆರೋಗ್ಯವನ್ನು ಹೆಚ್ಚು ಕೆಡುವಂತೆ ಮಾಡುತ್ತದೆ.


    ಆ್ಯಸಿಡಿಟಿ ಸಮಸ್ಯೆಗೆ ಮುಖ್ಯ ಕಾರಣಗಳಲ್ಲಿ ಅತಿಯಾಗಿ ತಿನ್ನುವುದು, ಕಡಿಮೆ ಫೈಬರ್ ಆಹಾರ ಸೇವನೆ, ಜಂಕ್ ಫುಡ್, ಮಸಾಲೆ ಪದಾರ್ಥ, ಕರಿದ ಪದಾರ್ಥ, ಫಾಸ್ಟ್ ಫುಡ್ ಸೇವನೆ ಕಾರಣವಾಗಿದೆ. ಆ್ಯಸಿಡಿಟಿ ಸಮಸ್ಯೆ ಇದನ್ನು ವೈದ್ಯಕೀಯ ಭಾಷೆಯಲ್ಲಿ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಡಿಸೀಸ್ ಎಂದು ಕರೆಯುತ್ತಾರೆ.




    ಆಯುರ್ವೇದದಲ್ಲಿ ಆ್ಯಸಿಡಿಟಿ ಸಮಸ್ಯೆಯನ್ನು ಆಮ್ಲ ಪಿತ್ತ ಎಂದು ಕರೆಯುತ್ತಾರೆ. ಆ್ಯಸಿಡಿಟಿ ಸಮಸ್ಯೆ ಇರುವವರಲ್ಲಿ ಹೆಚ್ಚು ಹುಳಿ ಬೆಲ್ಚಿಂಗ್, ಗಂಟಲಲ್ಲಿ ಹುಳಿ ನೀರು ಬರುವುದು, ಎದೆ ಉರಿ ಉಂಟಾಗುವುದು, ಹೆದರಿಕೆ ಆಗುವುದು, ಬೆಲ್ಚಿಂಗ್ ಜೊತೆ ಗಂಟಲಲ್ಲಿ ಆಹಾರ ಬರುವುದು, ವಾಂತಿ, ವಾಕರಿಕೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸುತ್ತವೆ.


    ಇತ್ತೀಚಿನ ದಿನಗಳಲ್ಲಿ ಕೆಟ್ಟ ಆಹಾರ ಪದ್ಧತಿ, ಜಡ ಜೀವನಶೈಲಿಯಿಂದಾಗಿ ಆ್ಯಸಿಡಿಟಿ ಸಮಸ್ಯೆ ಸಾಮಾನ್ಯವಾಗಿದೆ ಮತ್ತು ಹೆಚ್ಚಿದೆ. ಅನೇಕರು ಆ್ಯಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೀವೂ ಕೂಡ ಆ್ಯಸಿಡಿಟಿ ಸಮಸ್ಯೆ ಎದುರಿಸಿರಬಹುದು.


    ಆ್ಯಸಿಡಿಟಿ ಸಮಸ್ಯೆ ಹೋಗಲಾಡಿಸಲು ನೈಸರ್ಗಿಕ ಪರಿಹಾರ ವಿಧಾನದ ಬಗ್ಗೆ ಆಹಾರ ತಜ್ಞ ಲವ್ನೀತ್ ಬಾತ್ರಾ ತಿಳಿಸಿದ್ದಾರೆ. ಕೆಲವೊಮ್ಮೆ ಆ್ಯಸಿಡಿಟಿ ಸಮಸ್ಯೆ ಉಂಟು ಮಾಡುವ ಆಹಾರ ಪದಾರ್ಥ ಸೇವನೆ ಮಾಡದೇ ಹೋದ್ರೂ ಸಹ ಆಮ್ಲೀಯತೆ ಉಂಟಾಗುತ್ತದೆ.


    ಹೊಟ್ಟೆಯ ಆಮ್ಲ ನಿಯಂತ್ರಿಸಲು ಮತ್ತು ಆಸಿಡ್ ರಿಫ್ಲಕ್ಸ್‌ ಪರಿಹಾರ ಪಡೆಯಲು ಕೆಲವು ಪ್ರಮುಖ ಸಲಹೆ ಪಾಲಿಸಿ. ಜೊತೆಗೆ ಕೆಲವು ಪದಾರ್ಥಗಳ ಸೇವನೆಯು ಆ್ಯಸಿಡಿಟಿ ಸಮಸ್ಯೆ ಕಡಿಮೆ ಮಾಡಲು ಸಹಕಾರಿ. ಅವುಗಳು ಈ ಕೆಳಗಿನಂತಿವೆ.


    ಅಕ್ಕಿ


    ಆಮ್ಲೀಯತೆ ಸಮಸ್ಯೆ ಹೋಗಲಾಡಿಸಲು ಅಕ್ಕಿ, ಪಾಸ್ತಾ ಸೇವನೆ ಹಾಗೂ ಪಿಷ್ಟ ಆಹಾರಗಳು ಉತ್ತಮ ಆಯ್ಕೆಯಾಗಿದೆ. ಈ ಆಹಾರಗಳು ಹೊಟ್ಟೆಯ ಒಳಪದರವನ್ನು ಮೃದುಗೊಳಿಸುತ್ತವೆ. ಪ್ರಿಬಯಾಟಿಕ್ ಫೈಬರ್‌ ಗಳ ಉಪಸ್ಥಿತಿಯಿಂದ ಉಂಟಾಗುವ ಎದೆಯುರಿ ಸೇರಿದಂತೆ ಹಲವು ರೋಗ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ ಅಂತಾರೆ ತಜ್ಞರು.


    ಸಾಂದರ್ಭಿಕ ಚಿತ್ರ


    ಬಾಳೆಹಣ್ಣು


    ಪೊಟ್ಯಾಸಿಯಂ ನಲ್ಲಿ ಸಮೃದ್ಧವಾಗಿರುವ ಬಾಳೆಹಣ್ಣು ಆ್ಯಸಿಡಿಟಿ ಸಮಸ್ಯೆ ನಿವಾರಿಸಲು ಅತ್ಯುತ್ತಮ ಆಯ್ಕೆ ಆಗಿದೆ. ಇದು ದೇಹದಲ್ಲಿ ಆಮ್ಲ ಸಮತೋಲನಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಬಾಳೆಹಣ್ಣು ಕ್ಷಾರೀಯ ಹಣ್ಣು ಆಗಿದೆ. ಇದು ಪೆಕ್ಟಿನ್ ಎಂಬ ಕರಗುವ ಫೈಬರ್‌ ಹೊಂದಿದೆ. ಇದು ಕರುಳಿನಲ್ಲಿ ಆಹಾರ ಚಲಿಸಲು ಸಹಕಾರಿ ಆಗಿದೆ. ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ.


    ಸೌತೆಕಾಯಿ


    ಸೌತೆಕಾಯಿ ಕ್ಷಾರೀಯ ತರಕಾರಿ. ದೇಹದಲ್ಲಿ ಪಿಹೆಚ್ ಮಟ್ಟ ಹೆಚ್ಚಿಸುವ ಮೂಲಕ ಆಮ್ಲೀಯತೆ ನಿವಾರಿಸುತ್ತದೆ. ಸೌತೆಕಾಯಿಯಲ್ಲಿ ಸುಮಾರು 95 ಪ್ರತಿಶತ ನೀರಿದೆ. ಇದರ ಸೇವನೆ ನಿರ್ಜಲೀಕರಣ ತಡೆಯುತ್ತದೆ.


    ಸಬ್ಜಾ ಬೀಜಗಳು


    ದೇಹವನ್ನು ನೈಸರ್ಗಿಕವಾಗಿ ತಂಪಾಗಿಡಲು ಸಬ್ಜಾ ಬೀಜಗಳು ಸಹಕಾರಿ. ಇದರ ಸೇವನೆ ಆಮ್ಲೀಯತೆ ಅಥವಾ ಎದೆಯುರಿ ತಡೆಯುತ್ತದೆ. ಸಬ್ಜಾ ಬೀಜಗಳನ್ನು ನೀರಿನಲ್ಲಿ ನೆನೆಸಿದಾಗ ಅವು ಲೋಳೆಯ ಪ್ರಮಾಣ ಹೆಚ್ಚಿಸುತ್ತವೆ. ಹೊಟ್ಟೆಯಲ್ಲಿ ಹೆಚ್ಚುವರಿ ಆಮ್ಲ ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ಯೋಗಾಭ್ಯಾಸಕ್ಕೆ ಹೊರಾಂಗಣ ಅಥವಾ ಒಳಾಂಗಣ ಯಾವ ವಿಧಾನ ಉತ್ತಮ?


    ಬೇರು ತರಕಾರಿಗಳು


    ಬೇರು ತರಕಾರಿಗಳಲ್ಲಿ ಪಿಷ್ಟವು ಹೇರಳವಾಗಿದೆ. ಇದು ಎದೆಯುರಿ ಕಡಿಮೆ ಮಾಡುತ್ತದೆ. ಎಣ್ಣೆ ಅಥವಾ ಮಸಾಲೆ ಅಧಿಕವಾಗಿ ಬಳಸಬೇಡಿ. ಆಲೂಗಡ್ಡೆ, ಕ್ಯಾರೆಟ್, ಬೀಟ್ರೂಟ್, ಸಿಹಿ ಗೆಣಸು ಸೇವನೆ ಮಾಡಿ.

    Published by:renukadariyannavar
    First published: