Alcohol: ಒಂದು ಹನಿ ಮದ್ಯವೂ ಎಷ್ಟು ಅಪಾಯಕಾರಿ ಗೊತ್ತಾ? ಹೊಸ ಅಧ್ಯಯನದಿಂದ ಬೆಚ್ಚಿ ಬೀಳಿಸೋ ಅಂಶ ಬಯಲು!

Alcohol: ಬಹುತೇಕರಿಗೆ ಮದ್ಯಪಾನದಿಂದ ಲಿವರ್‌ ವ್ಯವಸ್ಥೆ ಕೆಡುತ್ತೆ ಅನ್ನೋದು ಗೊತ್ತು. ಆದರೆ ಇದರಿಂದ ನಿಮ್ಮ ಮೆಮೊರಿ ವ್ಯವಸ್ಥೆ ಕೂಡ ಹಾಳಾಗಬಹುದು ಅನ್ನೋದು ಅಧ್ಯಯನದ ಮೂಲಕ ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಲ್ಕೋಹಾಲ್ (‌Alcohol) ಆರೋಗ್ಯಕ್ಕೆ ಹಾನಿಕರ. ಹೀಗಂತ ಅದೆಷ್ಟೇ ಹೇಳಿದರೂ ಆಲ್ಕೋಹಾಲ್‌ ಸೇವನೆ ಮಾಡೋದನ್ನು ಜನರು ಬಿಡೋದಿಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಈ ಬಗ್ಗೆ ಎಚ್ಚರಿಕೆ ನೀಡುವ ಜಾಹೀರಾತು (Advertisement) ಇರುತ್ತೆ. ಪ್ರತಿ ಚಲನಚಿತ್ರ (Film) ಆರಂಭವಾಗೋವಾಗ ಮಧ್ಯಪಾನ ಎಷ್ಟು ಹಾಳು ಅನ್ನೋದ್ರ ಜಾಹೀರಾತು ಇರುತ್ತೆ.ಜನರಿಗೆ (People) ಇದು ಆರೋಗ್ಯಕ್ಕೆ ಕೆಟ್ಟದ್ದು ಅಂತ ಗೊತ್ತಿದೆ. ಆದರೂ ಈ ಚಟವನ್ನು ಬಿಡೋದಿಲ್ಲ. ಸಾಮಾನ್ಯ ಜನರಿಗೆ ಕುಡಿತದ ಚಟದಿಂದ ಆಗುವ ದುಷ್ಪರಿಣಾಮದ (Side Effect) ಬಗ್ಗೆ ಅರಿವಿಲ್ಲ ಅನ್ನೋದೂ ಅಷ್ಟೇ ಸತ್ಯ.

ಇನ್ನು ಕುಡಿತದ ಮೇಲೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು ಅದು ಆರೋಗ್ಯದ ಮೇಲೆ ಎಷ್ಟು ದುಷ್ಪರಿಣಾಮ ಬೀರುತ್ತೆ ಅನ್ನೋದ್ರ ಮೇಲೆ ಅಧ್ಯಯನ ನಡೆಯುತ್ತಲೇ ಇದೆ. ಇನ್ನು ಈ ಬಗ್ಗೆ ಹೊಸ ಅಧ್ಯಯವೊಂದು ನಡೆದಿದ್ದು ಇದರಲ್ಲಿ ಒಂದು ಹನಿ ಆಲ್ಕೋಹಾಲ್‌ ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ ಅನ್ನೋದನ್ನು ಕಂಡುಹಿಡಿಯಲಾಗಿದೆ.

ಚಟಕ್ಕೆ ಅಡಿಪಾಯವಾಗುತ್ತೆ ಒಂದು ಹನಿ ಮದ್ಯ!

ಬಹುತೇಕರಿಗೆ ಮದ್ಯಪಾನದಿಂದ ಲಿವರ್‌ ವ್ಯವಸ್ಥೆ ಕೆಡುತ್ತೆ ಅನ್ನೋದು ಗೊತ್ತು. ಆದರೆ ಇದರಿಂದ ನಿಮ್ಮ ಮೆಮೊರಿ ವ್ಯವಸ್ಥೆ ಕೂಡ ಹಾಳಾಗಬಹುದು ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಒಂದು ಹನಿ ಆಲ್ಕೋಹಾಲ್‌ ಕೂಡ ಆಲ್ಕೋಹಾಲ್‌ ಚಟಕ್ಕೆ ಅಡಿಪಾಯ ಹಾಕಬಹುದು. ಅಲ್ಲದೇ ನರಕೋಶಗಳ ಆಕಾರ ಬದಲಾಯಿಸುವ ಮೂಲಕ ಶಾಶ್ವತವಾಗಿ ಮೆದುಳನ್ನೇ ಹಾಳುಮಾಡಬಹುದು ಎಂಬುದನ್ನು ಕಂಡುಹಿಡಿಯಲಾಗಿದೆ. ಪ್ರಾಣಿಗಳ ಮೇಲೆ ನಡೆಸಲಾಗಿರುವ ಈ ಅಧ್ಯಯನದ ಪ್ರಕಾರ ಆಲ್ಕೋಹಾಲ್‌ ಗೆ ಒಗ್ಗಿಕೊಳ್ಳುವುದರಿಂದ ನರಕೋಶಗಳ ಆಕಾರವೇ ಬದಲಾಗಬಹುದು ಎನ್ನಲಾಗಿದೆ.

ನರಮಂಡಲದ ಮೇಲೆ ದುಷ್ಪರಿಣಾಮ

ನರಕೋಶಗಳು ಶರೀರದ ಸುಸ್ಥಿತಿಗೆ ತುಂಬ ಮುಖ್ಯ. ಇವು ಮೆದುಳು ಮತ್ತು ನರಮಂಡಲದ ಮೂಲಭೂತ ಘಟಕಗಳಾಗಿವೆ. ಇವುಗಳ ಮುಖಾಂತರವೇ ನಾವು ಹೊರಗಿನಿಂದ ಸಂವೇದನೆಯನ್ನು ಮೆದುಳು ಸ್ವೀಕರಿಸುತ್ತದೆ. ಆದರೆ ಆಲ್ಕೋಹಾಲ್‌ ನರಕೋಶದ ರಚನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸಿನಾಪ್ಸಸ್ ನರಗಳ ನಡುವಿನ ಸಂಪರ್ಕದ ಕೊಂಡಿಯಾಗಿದೆ. ಹೊರಗಿನಿಂದ ಸಿಕ್ಕಂತಹ ಮಾಹಿತಿಯನ್ನು ಒಂದು ನರಕೋಶದಿಂದ ಇನ್ನೊದು ನರಕೋಶಕ್ಕೆ ರವಾನಿಸುತ್ತೆ.

ಇದನ್ನು ಓದಿ: ಮದ್ಯಪಾನ ತೊರೆಯಲು ಇಲ್ಲಿದೆ ಸುಲಭ ಉಪಾಯ

ಜರ್ನಲ್ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಫ್ರುಟ್ ಫ್ಲೈ (ಒಂದು ವಿಧದ ನೋಣ)ದ ಆನುವಂಶಿಕ ಮಾದರಿ ವ್ಯವಸ್ಥೆಯನ್ನು ಬಳಸಲಾಗಿದೆ. ಕುಡಿತದ ಒಂದು ಘಟನೆಯು ಸಹ ಮದ್ಯದ ಚಟಕ್ಕೆ ಅಡಿಪಾಯ ಹಾಕಬಹುದು ಎಂದು ಈ ಸಂಶೋಧನೆಯಲ್ಲಿ ಹೇಳಲಾಗಿದೆ. ಈವರೆಗೂ ನಡೆದ ಅಧ್ಯಯನಗಳಲ್ಲಿ ಹೆಚ್ಚಿನವು ಮದ್ಯಪಾನದಿಂದ ನಮ್ಮ ಮೆದುಳಿನ ನಿಯಂತ್ರಣ ಕೇಂದ್ರವಾದ ಹಿಪೊಕ್ಯಾಂಪಸ್‌ನಲ್ಲಿ ಆಗಬಹುದಾದ ಪರಿಣಾಮಗಳ ಬಗ್ಗೆ ನಡೆದಿತ್ತು.

ಜರ್ಮನಿಯ ಕಲೋನ್ ವಿಶ್ವವಿದ್ಯಾಲಯ ಹೇಳಿದ್ದೇನು? 

ಇನ್ನು ಜರ್ಮನಿಯ ಕಲೋನ್ ವಿಶ್ವವಿದ್ಯಾಲಯದ ಹೆನ್ರಿಕ್ ಸ್ಕೋಲ್ಜ್ ಹೇಳೋದೇನೆಂದರೆ "ನಾವು ಆಲ್ಕೋಹಾಲ್‌ ನಿಂದಾಗುವ  ಬದಲಾವಣೆಗಳನ್ನು ಕಂಡುಹಿಡಿಯಲು ಹೊರಟಿದ್ದೇವೆ. ಇವುಗಳು ಒಂದೇ ತೀವ್ರವಾದ ಆಲ್ಕೋಹಾಲ್‌ ಮಾದಕತೆಯ ನಂತರ ಶಾಶ್ವತ ನರಕೋಶದ ಬದಲಾವಣೆಗೆ ಕಾರಣವಾಗುತ್ತದೆ” ಎಂದು ಹೇಳಿದರು. ಆದ್ದರಿಂದ ಗಮನಿಸಿದ ಕೆಲವು ಬದಲಾವಣೆಗಳು ಮದ್ಯಪಾನದಿಂದ ಮೆಮೊರಿ ರಚನೆಯ ಮೇಲೆ ಪ್ರಭಾವ ಬೀರಬಹುದು ಎಂದು ಅವರು ಹೇಳಿದರು. ಫ್ರುಟ್ ಫ್ಲೈ ಹಾಗೂ ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ಮದ್ಯಪಾನದಂತ ಚಟದಿಂದ ನರಮಂಡಲದ ಜೊತೆಗೆ ಮೆಮೊರಿ ರಚನೆಯ ಮೇಲೂ ಪ್ರಭಾವ ಬೀರುತ್ತದೆ ಅಂತ ಅವರು ಹೇಳಿದ್ದಾರೆ.

ಇದನ್ನೂ ಓದಿ: ಮದ್ಯಪಾನ ನಿಯಂತ್ರಿಸಿದ್ರೆ ನಿಮ್ಮ ಈ ದುರಭ್ಯಾಸ ದೂರವಾಗುತ್ತಂತೆ..!

ಆರೋಗ್ಯದ  ಮೇಲೆ ಪರಿಣಾಮ

ಹೀಗೆ ಮದ್ಯಪಾನದಿಂದ ಆರೋಗ್ಯದ ಕೆಡುತ್ತೆ. ಇಡೀ ಶರೀರದ ವ್ಯವಸ್ಥೆಯನ್ನೇ ಅದು ಹಾಳುಗೆಡುವುತ್ತೆ. ಕಲಿಯುವ ಮತ್ತು ನೆನಪಿನ ಶಕ್ತಿಯನ್ನೇ ಕಡಿಮೆ ಮಾಡುತ್ತೆ. ಹಾಗಾಗಿ ಒಂದು ಹನಿ ಮದ್ಯ ಸೇವಿಸುವ ಮೊದಲು ಈ ವಿಷಯವನ್ನು ನೆನಪಿಡಿ. ಆರೋಗ್ಯವಂತರಾಗಿ ಜೀವನ ನಡೆಸುವುದನ್ನು ಕಲಿಯಿರಿ.
First published: