• Home
  • »
  • News
  • »
  • lifestyle
  • »
  • Sleep Deprivation: ನಿದ್ರಾಹೀನತೆಯಿಂದ ದೆವ್ವ, ಆತ್ಮಗಳ ಇರುವಿಕೆ ಗೊತ್ತಾಗುತ್ತದೆಯೇ? ಸಂಶೋಧನೆ ಹೇಳಿರುವುದೇನು?

Sleep Deprivation: ನಿದ್ರಾಹೀನತೆಯಿಂದ ದೆವ್ವ, ಆತ್ಮಗಳ ಇರುವಿಕೆ ಗೊತ್ತಾಗುತ್ತದೆಯೇ? ಸಂಶೋಧನೆ ಹೇಳಿರುವುದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿದ್ರಾಹೀನತೆಯಿಂದ ದೆವ್ವಗಳ, ಆತ್ಮಗಳ ಉಪಸ್ಥಿತಿ ಇರುವಂತೆ ಭಾಸವಾಗುವುದು, ಕೆಲವೊಂದು ಮೂಢನಂಬಿಕೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

  • Trending Desk
  • 5-MIN READ
  • Last Updated :
  • Share this:

ಸಮತೋಲನ ಆಹಾರ (Balanced Diet) ನಮ್ಮ ದೇಹಕ್ಕೆ ಎಷ್ಟು ಅವಶ್ಯಕವೋ ಅಂತೆಯೇ ನಾವು ಆರೋಗ್ಯವಾಗಿರಲು ಹಾಗೂ ಚಟುವಟಿಕೆಯಿಂದಿರಲು ಎಂಟು ಗಂಟೆಗಳ ಕಾಲ ನಿದ್ರೆ (Good Sleep) ಮಾಡಲೇಬೇಕು ಎಂಬುದು ತಜ್ಞರ ಸಲಹೆಯಾಗಿದೆ. ನಿದ್ರಾಹೀನತೆಯಿಂದ (Insomnia) ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ ಹಾಗೂ ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ. ಸರಿಯಾಗಿ ನಿದ್ದೆಯಾಗಿಲ್ಲ ಎಂದಾದರೆ ನಮ್ಮ ದೇಹ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕೂಡ ಬಳಲುತ್ತದೆ ಜೊತೆಗೆ ಸೋಮಾರಿತನ (Laziness) ನಮ್ಮನ್ನು ಕಾಡುತ್ತದೆ ಒಂದು ರೀತಿಯ ಜಡತ್ವಕ್ಕೆ ಕಾರಣವಾಗುತ್ತದೆ. ಹಾಗಾಗಿಯೇ ಉತ್ತಮ ನಿದ್ರೆ ಸಾಮಾನ್ಯವಾಗಿ ಎಲ್ಲಾ ಮಾನಸಿಕ ಒತ್ತಡಗಳನ್ನು, ಕಾಯಿಲೆಗಳನ್ನು ನಿವಾರಿಸುವ ಔಷಧವಾಗಿದೆ ಎಂದು ತಿಳಿಸಿದ್ದಾರೆ.


ದೆವ್ವಗಳ ಇರುವಿಕೆಯನ್ನು ಯೋಚಿಸುವಂತೆ ಮಾಡುತ್ತಂತೆ


ಇದೀಗ ಈ ಎಲ್ಲಾ ಅಂಶಗಳನ್ನು ಮೀರಿ ಇನ್ನಷ್ಟು ಸಂಶೋಧನೆಗಳನ್ನು ತಜ್ಞರು ನಡೆಸಿದ್ದು, ನಿದ್ರಾ ಹೀನತೆ ಅಥವಾ ಸರಿಯಾದ ಪ್ರಮಾಣದಲ್ಲಿ ನಿದ್ರಿಸದಿರುವುದು ಅತೀಂದ್ರಯ ಶಕ್ತಿಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ.


ಅಲ್ಲದೆ, ದೆವ್ವಗಳ, ಆತ್ಮಗಳ ಉಪಸ್ಥಿತಿ ಇರುವಂತೆ ಭಾಸ ಮಾಡುವುದು, ಕೆಲವೊಂದು ಮೂಢನಂಬಿಕೆಗಳಿಗೆ ಕಾರಣವಾಗುವುದು ಇತ್ಯಾದಿ ನಿದ್ರಾಹೀನತೆಯಿಂದ ಉಂಟಾಗುವ ಸಾಧ್ಯತೆ ಇರುವುದಾಗಿ ತಜ್ಞರು ತಿಳಿಸಿದ್ದಾರೆ.




ಪ್ರಯೋಗದಿಂದ ಸಾಬೀತುಪಡಿಸಿರುವ ಅಂಶಗಳೇನು?


ಈ ಸಂಶೋಧನೆಯನ್ನು ವೈಲಿ ಆನ್‌ಲೈನ್ ಲೈಬ್ರರಿಯಲ್ಲಿ ಪ್ರಕಟಿಸಲಾಗಿದ್ದು, ಅಲೌಕಿಕ ನಂಬಿಕೆಗಳು ಹಾಗೂ ನಿದ್ರೆಯಲ್ಲಿ ಬದಲಾವಣೆಗಳು ಎಂಬ ಶೀರ್ಷಿಕೆ ಅಡಿಯಲ್ಲಿ ಅಧ್ಯಯನದ ಅಂಶಗಳನ್ನು ಬಹಿರಂಗಗೊಳಿಸಲಾಗಿದೆ.


ಯಾವುದೇ ವಿಷಯವನ್ನು ದೃಢೀಕರಿಸಲು ಅದಕ್ಕೆ ಬೇಕಾದ ಸಾಕ್ಷ್ಯಗಳು ಹಾಗೂ ಆಧಾರಗಳು ಮತ್ತು ಪ್ರಯೋಗಗಳು ಅವಶ್ಯಕವಾಗಿರುತ್ತದೆ. ಹಾಗಾಗಿ ನಿದ್ರೆಯ ಕೊರತೆ ಇಲ್ಲವೇ ಬದಲಾವಣೆಗಳು ಅಲೌಕಿಕ ನಂಬಿಕೆಗಳನ್ನು ಹೇಗೆ ಹುಟ್ಟುಹಾಕುತ್ತದೆ, ದೆವ್ವದ ಕಲ್ಪನೆಯನ್ನು ಮನಸ್ಸಿನಲ್ಲಿ ಹೇಗೆ ಉಂಟುಮಾಡುತ್ತದೆ ಎಂಬುದನ್ನು ಸಂಶೋಧಿಸಲು ಸಂಶೋಧನೆಯನ್ನು ಕೈಗೊಂಡಿದ್ದರು.


ಇದನ್ನೂ ಓದಿ:  Health Care: ಮಧ್ಯಾಹ್ನ ಸಣ್ಣದಾಗಿ ಒಂದು ನಿದ್ದೆ ಮಾಡೋದು ಒಳ್ಳೆಯದೇ, ಆದರೆ ಜಾಸ್ತಿ ಹೊತ್ತು ಮಲಗಬೇಡಿ


ಅತೀಂದ್ರಿಯ ಶಕ್ತಿಗಳು ಇರುವುದು ಹೌದೇ?


ಸೈನ್ಸ್ ಅಲರ್ಟ್ ಪ್ರಕಾರ, ಸಂಶೋಧಕರು ಆನ್‌ಲೈನ್ ಸಮೀಕ್ಷೆಯನ್ನು ಬಳಸಿಕೊಂಡು ಅಧ್ಯಯನವನ್ನು ನಡೆಸಿದರು ಹಾಗೂ ಈ ಅಧ್ಯಯನದ ಅಂಶಗಳನ್ನು ಬಿಬಿಸಿ ಸೈನ್ಸ್ ಫೋಕಸ್ ನಿಯತಕಾಲಿಕದಲ್ಲಿ ಪ್ರಕಟ ಮಾಡಲಾಗಿದೆ.


ಈ ಸಂಶೋಧನಾ ಅಧ್ಯಯನದಲ್ಲಿ ಪಾಲ್ಗೊಂಡಿದ್ದ 18 ವರ್ಷ ವಯಸ್ಸಿನ ಸುಮಾರು 8,853 ಜನರು ತಮ್ಮಲ್ಲಾದ ನಿದ್ರೆಯ ಪ್ರಮಾಣದ ಬದಲಾವಣೆಗಳು ಹಾಗೂ ತದನಂತರ  ಅವರು ಅತಿಂದ್ರೀಯ ಶಕ್ತಿಗಳ ಉಪಸ್ಥಿತಿಯ ಬಗ್ಗೆ ಧನಾತ್ಮಕವಾಗಿರುವ ಯೋಚನೆಗಳನ್ನು ಬಹಿರಂಗಪಡಿಸಿದ್ದಾರೆ.


ಸಾಂದರ್ಭಿಕ ಚಿತ್ರ


ನಿದ್ರೆಯ ಬದಲಾವಣೆ ಹಾಗೂ ಅಲೌಕಿಕ ಆಲೋಚನೆಗಳ ಉಪಟಳ


ಸರಿಯಾಗಿ ನಿದ್ರೆ ಮಾಡದಿರುವುದು, ನಿದ್ರೆಯಲ್ಲಿ ಆಗಾಗ್ಗೆ ಎಚ್ಚರಗೊಳ್ಳುವುದು, ನಿದ್ರೆಯಲ್ಲಿನ ಬದಲಾವಣೆಗಳು ಅಲೌಕಿಕ ನಂಬಿಕೆಗಳನ್ನು ಹುಟ್ಟುಹಾಕುವಲ್ಲಿ ಪ್ರಧಾನವಾಗಿವೆ ಎಂಬುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.


ಸರಿಯಾಗಿ ನಿದ್ರೆ ಮಾಡದವರು ದೆವ್ವದ ಉಪಸ್ಥಿತಿಯನ್ನು ಭಾವಿಸಿರುವುದಾಗಿ ದಾಖಲಿಸಿದ್ದಾರೆ. ತಮ್ಮ ಪಕ್ಕ ಯಾರೋ ಇರುವಂತೆ ಹಾಗೂ ಯಾರೂ ತಮ್ಮನ್ನು ಎಚ್ಚರಿಸಿದಂತೆ ಭಾಸವಾಗಿದೆ ಎಂಬುದನ್ನು ತಜ್ಞರಲ್ಲಿ ಬಹಿರಂಗಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Weight Loss: ಗಢದ್ದಾಗಿ ನಿದ್ದೆ ಮಾಡಿದ್ರೆ ಬೊಜ್ಜು ಕರಗುತ್ತಾ? ತಜ್ಞರು ಹೇಳೋದೇನು?


ಆತ್ಮದ ಜೊತೆಗೆ ಸಂವಹನ ನಡೆಸುವವರಿಗೆ ಇರುವ ಶಕ್ತಿ


ಸಾವಿನ ನಂತರ ಕೂಡ ಜೀವನವಿದೆ ಮತ್ತು ಆತ್ಮದ ಕುರಿತು ಬಲವಾದ ನಂಬಿಕೆಗಳನ್ನು ಹೊಂದಿರುವವರು ಆತ್ಮದ ಜೊತೆಗೆ ಸಂವಹನ ನಡೆಸುವವರು ಕೂಡ ನಿದ್ರಾಹೀನತೆಗೆ ಒಳಗಾಗಿದ್ದಾರೆಯೇ ಎಂಬುದನ್ನು ತಜ್ಞರು ಅವಲೋಕಿಸಿದ್ದಾರೆ.


ಸಮೀಕ್ಷೆ ನಡೆಸಿದ ನಂತರ ಇಂತಹ ಶಕ್ತಿ ಹೊಂದಿರುವವರ ನಿದ್ರೆಯ ಮಟ್ಟದಲ್ಲಿ ಕೂಡ ವ್ಯತ್ಯಾಸಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.


ಸಾಂದರ್ಭಿಕ ಚಿತ್ರ


ಮಾನಸಿಕ ವೈದ್ಯರಿಗೆ ಹೇಗೆ ಸಹಕಾರಿ?


ನಿದ್ರೆಯ ಅಸಮತೋಲನದಿಂದಾಗಿ ಉಂಟಾಗುವ ಇತರ ಕಾಯಿಲೆಗಳೊಂದಿಗೆ ತಜ್ಞರು ಇಂತಹ ನಂಬಿಕೆಗಳನ್ನು ಉಲ್ಲೇಖಗೊಳಿಸಿದ್ದಾರೆ. ಕೆಲವೊಂದು ಮಾನಸಿಕ ತೊಂದರೆಗಳಿಗೆ ಗುಣಮಟ್ಟದ ನಿದ್ರೆ ಪರಿಣಾಮಕಾರಿಯಾಗಿರುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಸರಿಯಾಗಿ ನಿದ್ರೆ ಮಾಡುವುದು ಎಷ್ಟೋ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.


ನಿದ್ರೆಯ ಕೊರತೆಯು ಕೆಲವೊಂದು ಮಾನಸಿಕ ರೋಗದ ಇರುವಿಕೆಯನ್ನು ಪತ್ತೆಹಚ್ಚಲು ಮನೋವೈದ್ಯರಿಗೆ ಸಹಾಯ ಮಾಡಿದಂತೆ ನರಮಂಡಲದ ಅಸ್ವಸ್ಥತೆಗಳನ್ನು ನಿರ್ಣಯಿಸಲು ಸಹಾಯ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Published by:Sumanth SN
First published: