Rice Cooking Method: ಆಯುರ್ವೇದದ ಪ್ರಕಾರ ಅನ್ನ ಮಾಡುವ ಸರಿಯಾದ ವಿಧಾನಗಳು ಯಾವವು ಗೊತ್ತಾ?

ಅಕ್ಕಿಯನ್ನು ಎಲ್ಲರ ಮನೆಗಳಲ್ಲಿ ಮಾಡುತ್ತಾರೆ. ಅಕ್ಕಿಯಿಂದ ಅನ್ನ ಮಾಡುವ ವಿಧಾನದ ಬಗ್ಗೆ ಮಾತನಾಡಿದರೆ, ಇದು ಎಲ್ಲರಿಗೂ ಗೊತ್ತಿದೆ. ಹೆಚ್ಚಿನ ಜನರು ಎರಡು ರೀತಿಯಲ್ಲಿ ಅನ್ನ ಮಾಡಲು ಇಷ್ಟ ಪಡುತ್ತಾರೆ. ಅಕ್ಕಿಯನ್ನು ಚೆನ್ನಾಗಿ ತೊಳೆದು, ಒಲೆಯ ಮೇಲೆ ನೀರಿನೊಂದಿಗೆ ಬೇಯಿಸಿ, ತಿನ್ನುವುದು ಮೊದಲ ಅನ್ನ ಮಾಡುವ ವಿಧಾನ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅನ್ನವನ್ನು (Rice) ಭಾರತೀಯ (India) ಮನೆ ಮನೆಗಳಲ್ಲಿ (Homes) ನಿತ್ಯ ತಯಾರಿಸಿ ಊಟ (Dinner) ಮಾಡುವ ಮುಖ್ಯ ಆಹಾರ (Food) ಪದಾರ್ಥವಾಗಿದೆ. ಅಕ್ಕಿಯಿಂದ ಅನ್ನ ಮಾಡಲಾಗುತ್ತದೆ. ಅಕ್ಕಿ ಆಹಾರ ಪದಾರ್ಥದಲ್ಲಿ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧ ಆಹಾರ ಪದಾರ್ಥವಾಗಿದೆ. ಇದನ್ನು ಪ್ರಪಂಚದಾದ್ಯಂತ ಸೇವನೆ ಮಾಡಲಾಗುತ್ತದೆ. ಭಾರತ, ಚೀನಾ ಮತ್ತು ಆಗ್ನೇಯ ಏಷ್ಯಾ ಸೇರಿದಂತೆ ಕೆಲವು ದೇಶಗಳಲ್ಲಿ ಇದನ್ನು ಸಾಮಾನ್ಯವಾಗಿ ಸೇವನೆ ಮಾಡಲಾಗುತ್ತದೆ. ಅಕ್ಕಿ ಅನೇಕ ವಿಧಗಳು ಮತ್ತು ಬಣ್ಣಗಳಲ್ಲಿ ದೊರೆಯುತ್ತದೆ. ಪ್ರತಿಯೊಂದು ವಿಧದ ಅಕ್ಕಿ ತನ್ನದೇ ಆದ ಅನುಕೂಲತೆ ಮತ್ತು ಅನಾನುಕೂಲತೆ ಹೊಂದಿರುತ್ತದೆ. ಕಾರ್ಬೋಹೈಡ್ರೇಟ್‌ಗಳ ಜೊತೆಗೆ, ಫೈಬರ್ ಮತ್ತು ಪ್ರೋಟೀನ್ ಅಂಶವೂ ಅಕ್ಕಿ ಆಹಾರ ಪದಾರ್ಥಗಳಲ್ಲಿ ಕಂಡು ಬರುತ್ತದೆ.

    ಅಕ್ಕಿಯಿಂದ ಅನ್ನ ಮಾಡುವ ವಿಧಾನ

    ಅಂದ ಹಾಗೇ ಅಕ್ಕಿಯನ್ನು ಎಲ್ಲರ ಮನೆಗಳಲ್ಲಿ ಮಾಡುತ್ತಾರೆ. ಅಕ್ಕಿಯಿಂದ ಅನ್ನ ಮಾಡುವ ವಿಧಾನದ ಬಗ್ಗೆ ಮಾತನಾಡಿದರೆ, ಇದು ಎಲ್ಲರಿಗೂ ಗೊತ್ತಿದೆ. ಹೆಚ್ಚಿನ ಜನರು ಎರಡು ರೀತಿಯಲ್ಲಿ ಅನ್ನ ಮಾಡಲು ಇಷ್ಟ ಪಡುತ್ತಾರೆ. ಅಕ್ಕಿಯನ್ನು ಚೆನ್ನಾಗಿ ತೊಳೆದು, ಒಲೆಯ ಮೇಲೆ ನೀರಿನೊಂದಿಗೆ ಬೇಯಿಸಿ, ತಿನ್ನುವುದು ಮೊದಲ ಅನ್ನ ಮಾಡುವ ವಿಧಾನ ಆಗಿದೆ.

    ಆಯುರ್ವೇದದ ಪ್ರಕಾರ ಅನ್ನ ಮಾಡುವ ವಿಧಾನ

    ಮತ್ತು ಎರಡನೆಯದು ಅಕ್ಕಿಗೆ  ನೀರು ಹಾಕಿ ಬೇಯಿಸಿ ಸೇವನೆ ಮಾಡುವುದು. ಇದನ್ಯಾಕೆ ನಾವು ಹೇಳ್ತಿದ್ದೀವಿ ಅಂದುಕೊಂಡ್ರಾ? ಯಾಕಂದ್ರೆ ಇಂದು ನಾವು ಆಯುರ್ವೇದದ ಪ್ರಕಾರ, ಯಾವ ರೀತಿ ಅಕ್ಕಿಯಿಂದ ಅನ್ನ ಮಾಡಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂಬುದನ್ನು ಇಲ್ಲಿ ತಿಳಿಯೋಣ, ಜೊತೆಗೆ ಅದರ ಪ್ರಯೋಜನಗಳನ್ನು ತಿಳಿಯೋಣ.

    ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

    ಆಯುರ್ವೇದ ವೈದ್ಯೆ ರೇಖಾ ರಾಧಾಮಣಿ ಅವರು ಹೇಳುವ ಪ್ರಕಾರ, ಆಯುರ್ವೇದದಲ್ಲಿ ಅಕ್ಕಿಯನ್ನು ಔಷಧವೆಂದು ಪರಿಗಣಿಸುತ್ತಾರೆ. ಆಯುರ್ವೇದದಲ್ಲಿ ಸೇರಿಸಲಾದ ಮೊದಲ ಆಹಾರ ಪದಾರ್ಥ ಅಂದ್ರೆ ಅದು ಅಕ್ಕಿ. ಅಕ್ಕಿಯು ಹಗುರ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರ ಪದಾರ್ಥವಾಗಿದೆ.

    ಹಾಗಾದರೆ ಅನ್ನದಿಂದ ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆಯಲು ಅದನ್ನು ಹೇಗೆ ತಯಾರಿಸಿ, ಸೇವನೆ ಮಾಡುವುದು ತುಂಬಾ ಉತ್ತಮ ಎಂದು ಇಲ್ಲಿ ನಾವು ತಿಳಿಯೋಣ.

    ಆಯುರ್ವೇದದ ಪ್ರಕಾರ ಅಕ್ಕಿ ಮಾಡುವ ಮೊದಲ ವಿಧಾನ

    ಮೊದಲನೆಯದಾಗಿ ಅಕ್ಕಿಯಲ್ಲಿನ ಕೊಳಕು ಹೋಗುವವರೆಗೆ ಅಕ್ಕಿಯನ್ನು ಹರಿಯುವ ನೀರಿನಲ್ಲಿ ತೊಳೆಯಬೇಕು. ಪ್ರತಿನಿತ್ಯ ಅನ್ನ ಸೇವನೆ ಮಾಡುವವರು ಸೋನಾ ಮಸೂರಿ ಅಥವಾ ಅಂಬರ್ ಮೊಹರ್ ವಿಧದ ಅಕ್ಕಿಯಿಂದ ಅನ್ನ ತಯಾರಿಸಿ ಸೇವನೆ ಮಾಡಬೇಕು ಎನ್ನುತ್ತಾರೆ ರಾದಾಮಣಿ. ಅದಾಗ್ಯೂ ಬಾಸ್ಮತಿ ಅಕ್ಕಿ ಭಾರವಾಗಿರುತ್ತದೆ. ಹಾಗಾಗಿ ಇದನ್ನು ತಿಂಗಳಿಗೆ ಒಂದು ಅಥವಾ ಎರಡು ಬಾರಿ ತಿನ್ನುವುದು ಉತ್ತಮ.

    ಆಯುರ್ವೇದದ ಪ್ರಕಾರ ಅನ್ನ ಮಾಡುವ ಎರಡನೇ ವಿಧಾನ

    ಕೆಲವರು ಅನ್ನ ಮಾಡುವಾಗ ತಪ್ಪು ವಿಧಾನ ಫಾಲೋ ಮಾಡುತ್ತಾರೆ. ಅವರು ಒಂದು ಪಾತ್ರೆಯಲ್ಲಿ ನೀರು ಮತ್ತು ಅಕ್ಕಿಯನ್ನು ಸೇರಿಸಿ, ಎರಡು ಬಾರಿ ತೊಳೆದು ನಂತರ ನೀರು ಮತ್ತು ಅಕ್ಕಿಯನ್ನು ಒಟ್ಟಿಗೆ ಸೇರಿಸಿ ಅನ್ನ ಕುದಿಸಿ ತಿನ್ನುತ್ತಾರೆ. ಈ ವಿಧಾನ ತಪ್ಪು ಎಂದು ಆಯುರ್ವೇದ ಹೇಳುತ್ತದೆ. ಬದಲಿಗೆ ನೀವು ಮೊದಲು ಪಾತ್ರೆಯಲ್ಲಿ ನೀರನ್ನು ಕುದಿಸಬೇಕು. ನಂತರ ಅದಕ್ಕೆ ಅಕ್ಕಿ ಸೇರಿಸಿ, ಅನ್ನ ಮಾಡಬೇಕು.

    ಆಯುರ್ವೇದದ ಪ್ರಕಾರ ಅನ್ನ ಮಾಡಲು ಇನ್ನೊಂದು ವಿಧಾನ

    ಅಕ್ಕಿ ತೊಳೆದ ನಂತರ, ನೀವು ಅವುಗಳನ್ನು ಒಂದು ಗಂಟೆಯವರೆಗೆ ನೀರಿನಿಂದ ತುಂಬಿದ ದೊಡ್ಡ ಪಾತ್ರೆಯಲ್ಲಿ ನೆನೆಸಿಡಬೇಕು. ನೀರಿನಲ್ಲಿ ಅಕ್ಕಿ ಅಥವಾ ಉದ್ದಿನಬೇಳೆಯನ್ನು ನೆನೆಸಿದರೆ ಅದರ ಪೌಷ್ಟಿಕಾಂಶದ ಮೌಲ್ಯ ಹೆಚ್ಚುತ್ತದೆ ಎಂದು ಆಯುರ್ವೇದ ಹೇಳುತ್ತದೆ.

    ಆಯುರ್ವೇದದ ಪ್ರಕಾರ ಅನ್ನ ಮಾಡುವ ನಾಲ್ಕನೇ ವಿಧಾನ

    ಅನ್ನ ಮಾಡುವಾಗ, ಪಾತ್ರೆಯನ್ನು ಸರಿಯಾಗಿ ಮುಚ್ಚಿ ಮತ್ತು ಅದು ಕುದಿಯುತ್ತಿರುವಾಗ, ಮುಚ್ಚಳವನ್ನು ತೆಗೆದುಹಾಕಿ ಮತ್ತು ಅಕ್ಕಿ ಕರಗುವ ತನಕ ಬೇಯಿಸಿ. ಮಧ್ಯೆ ತಪಾಸಣೆ ಮಾಡುತ್ತಿರುವುದು.

    ಇದನ್ನೂ ಓದಿ: ಸಿಗರೇಟ್ ಸೇದುವುದರಿಂದ ಕೂದಲು ಉದುರುತ್ತವೆಯೇ? ಪೌಷ್ಟಿಕ ತಜ್ಞರು ಹೇಳಿದ್ದೇನು?

    ಆಯುರ್ವೇದದ ಪ್ರಕಾರ ಅನ್ನ ಮಾಡಲು ಐದನೇ ಮಾರ್ಗ

    ಅಕ್ಕಿಯನ್ನು ತೊಳೆದು, ಅದನ್ನು ಹೆಚ್ಚಿನ ನೀರಿನಲ್ಲಿ ಕುದಿಸಿ, ಗಂಜಿ ಬಸಿದು ಅನ್ನ ಸೇವನೆ ಮಾಡುವುದು. ಬಸಿದ ಗಂಜಿಯನ್ನು ಬಿಸಾಡದೇ, ಅದನ್ನು ಹಾಗೇ ಸೇವಿಸುವುದು ಅಥವಾ, ದಾಲ್, ತರಕಾರಿ ಜೊತೆಗೆ ತಿನ್ನುವುದು ಉತ್ತಮ.
    Published by:renukadariyannavar
    First published: