Ghee Facts: ಆಯುರ್ವೇದದ ಪ್ರಕಾರ, ಯಾವ ಕಾಯಿಲೆಯಿದ್ದವರು ತುಪ್ಪ ಸೇವನೆ ಮಾಡಬಾರದು?

ಔಷಧೀಯ ಪ್ರಯೋಜನಗಳಿಂದ ತಜ್ಞರು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವನೆ ಮಾಡುವಂತೆ ಹೇಳುತ್ತಾರೆ. ನಿದ್ದೆ ಮಾಡುವಾಗ ಎರಡೂ ಮೂಗಿನ ಹೊಳ್ಳೆಗಳಲ್ಲಿ ಎರಡು ಹನಿ ತುಪ್ಪ ಹಾಕುವುದರಿಂದ ನಿದ್ರೆ ಚೆನ್ನಾಗಿ ಆಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತೀಯ (Indian) ಅಡುಗೆ ಮನೆಯಲ್ಲಿ (Kitchen Room) ತುಪ್ಪ (Ghee) ತುಂಬಾ ಮುಖ್ಯವಾದ ಪದಾರ್ಥವಾಗಿದೆ (Ingredient). ಮತ್ತು ಆಯುರ್ವೇದದಲ್ಲಿ (Ayurveda) ಸಾವಿರಾರು ವರ್ಷಗಳಿಂದ ತುಪ್ಪವನ್ನು ಬಳಕೆ ಮಾಡಲಾಗುತ್ತಿದೆ. ಅಡುಗೆಗೆ ರುಚಿ ಮತ್ತು ಆರೋಗ್ಯ ಸುಧಾರಣೆಯವರೆಗೆ, ತುಪ್ಪವನ್ನು ಸೂಪರ್ ಆರೋಗ್ಯಕರ ಎಂದು ಹೇಳಲಾಗಿದೆ. ತುಪ್ಪದಲ್ಲಿ ಯಾವ ಜೀವಸತ್ವಗಳು ಕಂಡು ಬರುತ್ತವೆ? ದೇಸಿ ತುಪ್ಪವು ಪ್ರೋಟೀನ್, ಆರೋಗ್ಯಕರ ಕೊಬ್ಬು, ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ಕೆ ಯ ಅತ್ಯುತ್ತಮ ಮೂಲ ಹೊಂದಿದೆ. ತುಪ್ಪ ಸೇವನೆಯಿಂದ ಹಿಡಿದು ಆಗುವ ಲಾಭಗಳೇನು? ದೇಸಿ ತುಪ್ಪವು ನಿಮ್ಮ ಚರ್ಮ, ಕೂದಲು, ಜೀರ್ಣಕ್ರಿಯೆ ಮತ್ತು ಹೃದಯದ ಆರೋಗ್ಯಕ್ಕೆ ಉತ್ತಮ ಆಗಿದೆ.

  ಔಷಧೀಯ ಪ್ರಯೋಜನಗಳಿಂದ ಕೂಡಿದೆ ತುಪ್ಪ

  ಔಷಧೀಯ ಪ್ರಯೋಜನಗಳಿಂದ ತಜ್ಞರು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವನೆ ಮಾಡುವಂತೆ ಹೇಳುತ್ತಾರೆ. ನಿದ್ದೆ ಮಾಡುವಾಗ ಎರಡೂ ಮೂಗಿನ ಹೊಳ್ಳೆಗಳಲ್ಲಿ ಎರಡು ಹನಿ ತುಪ್ಪ ಹಾಕುವುದರಿಂದ ನಿದ್ರೆ ಚೆನ್ನಾಗಿ ಆಗುತ್ತದೆ. ಮತ್ತು ಮಾನಸಿಕ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಸಾವಿರಾರು ಪ್ರಯೋಜನ ಹೊಂದಿರುವ ತುಪ್ಪವು ಕೆಲವು ಜನರಿಗೆ ಹಾನಿ ಉಂಟು ಮಾಡುತ್ತದೆ.

  ಆಯುರ್ವೇದ ವೈದ್ಯೆ ರೇಖಾ ರಾಧಾಮಣಿ ಅವರು, ತುಪ್ಪ ಎಲ್ಲರೂ ಸೇವಿಸಬೇಕು ಎಂದು ಹೇಳುತ್ತಾರೆ. ಇಂದಿನ ದಿನಗಳಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಜನರು ಹೆಚ್ಚು ಕಾಳಜಿ ವಹಿಸುತ್ತಾರೆ. ಜನರು ಅಂಗಡಿಗೆ ತೆರಳುತ್ತಾರೆ. ಪ್ರತಿಯೊಬ್ಬರೂ ತಮ್ಮ ದೇಹದ ಆರೋಗ್ಯಕ್ಕೆ ಮತ್ತು ಸಮತೋಲನಕ್ಕೆ ಸೂಕ್ತವಾದ ಪದಾರ್ಥಗಳನ್ನು ಸೇವನೆ ಮಾಡಲು ಆಯ್ಕೆ ಮಾಡಿಕೊಳ್ಳಲು ನೋಡುತ್ತಾರೆ.

  ಇದನ್ನೂ ಓದಿ: ಒಂಟಿ ಕಾಲಿನ ಮೇಲೆ ನಿಂತರೆ ಎಷ್ಟೊಂದು ಪ್ರಯೋಜನ! ಮಿಸ್ ಮಾಡಬೇಡಿ

  ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕೆ ತಕ್ಕಂತೆ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಒಬ್ಬ ಮನುಷ್ಯನಿಗೆ ಆರೋಗ್ಯಕಾರಿ ಮತ್ತು ಔಷಧೀಯ ಎಂದೆನಿಸುವ ಪದಾರ್ಥ, ಇನ್ನೊಬ್ಬ ಮನುಷ್ಯನಿಗೆ ವಿಷ ಆಗಬಹುದು. ತುಪ್ಪವೂ ಸಹ ಕೆಲವರ ಆರೋಗ್ಯಕ್ಕೆ ಉತ್ತಮ ಮತ್ತು ಕೆಲವರಿಗೆ ವಿಷಯವಾಗಬಹುದು.

  ತುಪ್ಪದ ರುಚಿ?

  ತುಪ್ಪ ದೇಹಕ್ಕೆ ಬಿಸಿ ಉಂಟು ಮಾಡುತ್ತದೆ. ಹಾಗಾಗಿ ಮನೆಯ ಹಿರಿಯರು ಚಳಿಯ ದಿನಗಳಲ್ಲಿ ತುಪ್ಪ ಸೇವನೆ ಮಾಡಲು ಸಲಹೆ ನೀಡುತ್ತಾರೆ. ಚಳಿಗಾಲದಲ್ಲಿ ತುಪ್ಪದ ಸೇವನೆಯು ದೇಹವು ಒಳಗಿನಿಂದ ಬೆಚ್ಚಗಿರುತ್ತದೆ. ಜೊತೆಗೆ ಋತುಮಾನದ ಕಾಯಿಲೆಗಳಿಂದ ರಕ್ಷಿಸುತ್ತದೆ.

  ತುಪ್ಪ ಎಲ್ಲರಿಗೂ ಆರೋಗ್ಯಕರವಲ್ಲ

  ತುಪ್ಪ ಎಲ್ಲರ ಆರೋಗ್ಯಕ್ಕೆ ಹೊಂದಾಣಿಕೆಯಾಗುವುದಿಲ್ಲ. ತುಪ್ಪವನ್ನು ಜೀರ್ಣಿಸಿಕೊಳ್ಳಲು ತುಪ್ಪ ಭಾರವಾಗಿರುತ್ತದೆ. ಪ್ರತಿಯೊಬ್ಬರ ಜೀರ್ಣ ಶಕ್ತಿ ವಿಭಿನ್ನ. ಹಾಗಾಗಿ ದೇಹದ ಜೀರ್ಣಕಾರಿ ಶಕ್ತಿಗೆ ಅನುಗುಣವಾಗಿ ಇದನ್ನು ಸೇವಿಸಬೇಕು.

  ಅಜೀರ್ಣದಲ್ಲಿ ತುಪ್ಪ ತಿನ್ನಬೇಡಿ

  ನಿಮಗೆ ದೀರ್ಘ ಕಾಲದ ಅಜೀರ್ಣ ಅಥವಾ ಹೊಟ್ಟೆಯ ಸಮಸ್ಯೆಗಳಿದ್ದರೆ, ತುಪ್ಪ ಸೇವಿಸಬೇಡಿ. ಅಜೀರ್ಣವು ಸಾಮಾನ್ಯವಾಗಿ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (GERD), ಹುಣ್ಣುಗಳು ಅಥವಾ ಪಿತ್ತಕೋಶದ ಕಾಯಿಲೆಯ ಸಂಕೇತವಾಗಿದೆ. ಹೊಟ್ಟೆಯ ಮೇಲ್ಭಾಗದಲ್ಲಿ ನಿರಂತರ ನೋವು, ಅಸ್ವಸ್ಥತೆಯ ರೂಪದಲ್ಲಿ ನೀವು ಅಜೀರ್ಣ ಹೊಂದಿರಬಹುದು.

  ಲಿವರ್ ಸಿರೋಸಿಸ್ ನಲ್ಲಿ ತುಪ್ಪ ವಿಷ

  ಲಿವರ್ ಸಿರೋಸಿಸ್ ನಿಧಾನವಾಗಿ ಪ್ರಗತಿಯಲ್ಲಿರುವ ಯಕೃತ್ತಿನ ಕಾಯಿಲೆ. ಆರೋಗ್ಯಕರ ಯಕೃತ್ತಿನ ಅಂಗಾಂಶವನ್ನು ಹಾನಿಗೊಳಗಾದ ಅಂಗಾಂಶದಿಂದ ಬದಲಾಯಿಸಲಾಗುತ್ತದೆ. ಯಕೃತ್ತು ಶಾಶ್ವತವಾಗಿ ಹಾನಿಗೊಳಗಾಗುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವವರು ತುಪ್ಪ ಸೇವಿಸಬಾರದು.

  ಋತುಮಾನದ ಜ್ವರದಲ್ಲಿ ತುಪ್ಪ ಸೇವಿಸಬೇಡಿ

  ತುಪ್ಪವು ಕಫ ಹೆಚ್ಚಿಸುತ್ತದೆ. ಹಾಗಾಗಿ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯು ಅದರ ಸೇವನೆಯಿಂದ ದೂರವಿರಬೇಕು. ನೀವು ಕಾಲೋಚಿತ ಜ್ವರದಿಂದ ಬಳಲುತ್ತಿದ್ದರೆ ತುಪ್ಪ ಸೇವಸುವಾಗ ಜಾಗ್ರತೆ ವಹಿಸಿ.

  ಹೆಪಟೈಟಿಸ್‌ನಲ್ಲಿನ ತುಪ್ಪ ಸಮಸ್ಯೆ ಹೆಚ್ಚಿಸುತ್ತದೆ

  ಹೆಪಟೈಟಿಸ್‌ನಿಂದ ಬಳಲುತ್ತಿರುವಾಗ ತುಪ್ಪ ಸೇವನೆ ನಿಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತತದೆ. ಯಕೃತ್ತಿನ ಉರಿಯೂತ, ನಿಮ್ಮ ಯಕೃತ್ತು ಹೆಚ್ಚು ಜೀರ್ಣಿಸಿಕೊಳ್ಳಲು ಸಾಧ್ಯವಾಗಲ್ಲ.

  ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಗೆ ನೈಸರ್ಗಿಕ ಪರಿಹಾರ, ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ

  ಗರ್ಭಾವಸ್ಥೆಯಲ್ಲಿ ಮತ್ತು ಕೊಲೆಸ್ಟ್ರಾಲ್ ತುಪ್ಪ ಸೇವನೆ ತಪ್ಪಿಸಿ

  ಗರ್ಭಿಣಿಯರು ಆರಂಭಿಕ ತಿಂಗಳಲ್ಲಿ ತುಪ್ಪ ತಿನ್ನಬಾರದು. ತುಪ್ಪದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಿದೆ. ತುಪ್ಪದ ಅತಿಯಾದ ಸೇವನೆ ದೇಹದಲ್ಲಿ ಸ್ಯಾಚುರೇಟೆಡ್ ಕೊಬ್ಬಿನಾಮ್ಲ ಮತ್ತು ಕೊಲೆಸ್ಟ್ರಾಲ್  ಪ್ರಮಾಣ ಹೆಚ್ಚಿಸುತ್ತದೆ.
  Published by:renukadariyannavar
  First published: