• Home
 • »
 • News
 • »
 • lifestyle
 • »
 • Drinking Milk: ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದೇಕೆ? ಆಯುರ್ವೇದ ಹೇಳುತ್ತಿದೆ ಇದರ ಮಹತ್ವ

Drinking Milk: ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದೇಕೆ? ಆಯುರ್ವೇದ ಹೇಳುತ್ತಿದೆ ಇದರ ಮಹತ್ವ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯುರ್ವೇದದ ಪ್ರಕಾರ ರಾತ್ರಿ ಹಾಲು ಕುಡಿಯುವುದು ಸೂಕ್ತ. ಹಾಲಿನಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್ ಇದೆ. ರಾತ್ರಿ ಹಾಲು ಕುಡಿಯುವುದು ಶುಕ್ರ ಧಾತುವನ್ನು ಬಲಪಡಿಸುತ್ತದೆಯಂತೆ!

 • Share this:

  ಹಗಲಿರುಳು ದುಡಿದು ಸುಸ್ತಾಗಿದ್ದರೂ ಸಹ ಕೆಲವೊಮ್ಮೆ ನಿದ್ದೆ ಬರಲ್ಲ. ರಾತ್ರಿಯಿಡೀ ಒಂದು ತೆರನಾದ ಚಟಪಡಿಕೆ ಇರುತ್ತದೆ. ನಿದ್ದೆ ಬರಲ್ಲ. ಇದಕ್ಕೆ ನಿಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿ ಕಾರಣ ಆಗಿರಬಹುದು. ನೀವು ಕೂಡ ನಿದ್ದೆ ಬಾರದೇ ಚಡಪಡಿಸುತ್ತೀರಾ? ಹೊರಗಿನ ಆಹಾರ ತಿಂದು ಜೀರ್ಣಾಂಗ ವ್ಯವಸ್ಥೆ ತೊಂದರೆಗೆ ಒಳಗಾಗಿದೆಯಾ? ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೊಟ್ಟೆಯ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಅವರ ಆಹಾರ ಮತ್ತು ಜೀವನಶೈಲಿ ಮುಖ್ಯ ಕಾರಣ. ಮನೆಯಲ್ಲಿ ಕೆಲಸ, ದಿನವಿಡೀ ಹೊರಗೆ ದುಡಿದ ಆಯಾಸ, ಒಂದೇ ಸ್ಥಳದಲ್ಲಿ ಕೆಲಸ ಮಾಡುವುದು.


  ರಾತ್ರಿ ನಿದ್ರೆಯ ತೊಂದರೆ ದೂರ ಮಾಡುವುದು ಹೇಗೆ?


  ಇದು ನಿಮ್ಮ ಆರೋಗ್ಯ ಮತ್ತು ನಿದ್ದೆಯ ದಿನಚರಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿರದೇ ಹೋದರೆ ರಾತ್ರಿ ನಿದ್ರೆಗೂ ತೊಂದರೆ ಉಂಟಾಗುತ್ತದೆ. ಹೀಗೆ ಅನುಭವಿಸುವ ತೊಂದರೆ ತೊಡೆದು ಹಾಕಲು ರಾತ್ರಿ ಮಲಗುವ ಮೊದಲು ಹಾಲು ಕುಡಿಯಲು ಸಲಹೆ ನೀಡಲಾಗುತ್ತದೆ.


  ರಾತ್ರಿ ಕೇವಲ ಒಂದು ಲೋಟ ಹಾಲು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಹೇಳಲಾಗಿದೆ. ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಹಾಲು ಕುಡಿಯುವುದು ನಿದ್ರೆಯ ಮಾದರಿ ಸುಧಾರಿಸಲು ಸಹಾಯ ಮಾಡುತ್ತದೆ.


  ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


  ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದರ ಪ್ರಯೋಜನಗಳು


  ರಾತ್ರಿ ಉತ್ತಮ ನಿದ್ರೆ ಪಡೆಯಲು ಸಹಕಾರಿ


  ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ 2018 ರಲ್ಲಿ ಪ್ರಕಟಿಸಿದ ಆನ್‌ಲೈನ್ ಜರ್ನಲ್ ಪ್ರಕಾರ, ರಾತ್ರಿ ಬೆಚ್ಚಗಿನ ಹಾಲು ಕುಡಿದ ನಂತರ ಮಲಗುವುದು ನಿದ್ರೆಯನ್ನು ಸುಧಾರಿಸುತ್ತದೆ. ಇದು ದೇಹದಲ್ಲಿ ಸಿರೊಟೋನಿನ್ ಪ್ರಮಾಣ ಹೆಚ್ಚಿಸಲು ಸಹಕಾರಿ ಆಗಿದೆ. ಇದು ನಿಮ್ಮ ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ.


  ಮಿಡ್ ನೈಟ್ ಕಡು ಬಯಕೆ ತಪ್ಪಿಸುತ್ತದೆ


  ರಾತ್ರಿ ಸರಿಯಾಗಿ ನಿದ್ದೆ ಬಾರದಿದ್ದರೆ ಧಾರಾವಾಹಿ ಅಥವಾ ರೀಲ್ ಗಳನ್ನು ನೋಡುವುದು ನಂತರ ಹಸಿವು ಉಂಟಾಗಲು ಕಾರಣವಾಗುತ್ತದೆ. ಇದು ರಾತ್ರಿ ಅನಾರೋಗ್ಯಕರ ತಿಂಡಿ ತಿನ್ನಲು ಪ್ರೇರೇಪಿಸುತ್ತದೆ. ಇದು ನಮ್ಮ ಆರೋಗ್ಯಕ್ಕೆ ಇನ್ನಷ್ಟು ಹಾನಿಕರ. ಹಾಗಾಗಿ ಆಯುರ್ವೇದದ ಪ್ರಕಾರ ರಾತ್ರಿ ಹಾಲು ಕುಡಿಯುವುದು ಸೂಕ್ತ. ಹಾಲಿನಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್ ಇದೆ. ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಡುತ್ತದೆ.


  ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿ


  ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಟಿಸಿದ ನ್ಯೂಟ್ರಿಷನ್ ಜರ್ನಲ್ ಪ್ರಕಾರ, ಹಾಲು ವಿರೇಚಕ ಗುಣ ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿಡಲು ಸಹಕಾರಿ ಆಗಿದೆ. ಜೊತೆಗೆ ಬೆಳಿಗ್ಗೆ ಕರುಳಿನ ಚಲನೆ ಪ್ರಕ್ರಿಯೆ ಸಹ ಸರಾಗವಾಗುತ್ತದೆ. ರಾತ್ರಿಯಲ್ಲಿ ಇದನ್ನು ಸೇವಿಸುವುದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನಿಭಾಯಿಸಲು ಸಹಾಯ ಮಾಡುತ್ತದೆ.


  ಸಂತಾನೋತ್ಪತ್ತಿ ಆರೋಗ್ಯಕ್ಕೂ ಪ್ರಯೋಜನಕಾರಿ


  ಆಯುರ್ವೇದದ ಪ್ರಕಾರ, ರಾತ್ರಿ ಹಾಲು ಕುಡಿಯುವುದು ಶುಕ್ರ ಧಾತುವನ್ನು ಬಲಪಡಿಸುತ್ತದೆ. ಇದು ನಿಮ್ಮ ಸಂತಾನೋತ್ಪತ್ತಿ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಗರ್ಭಾಶಯಕ್ಕೆ ಸರಿಯಾದ ಪೋಷಣೆ ನೀಡುತ್ತದೆ. ಫಲವತ್ತತೆ ಹೆಚ್ಚಿಸುತ್ತದೆ.


  ಹಾಲಿನ ರುಚಿ ಇಷ್ಟವಾಗದಿದ್ದರೆ ಏಲಕ್ಕಿ ಸೇರಿಸಿ ಸೇವಿಸಿ. ಹಾಲು ಕುದಿಯುತ್ತಿರುವಾಗ ಒಂದು ಏಲಕ್ಕಿಯನ್ನು ಹಾಕಿದರೆ ಅದರ ರುಚಿ ತುಂಬಾ ಹೆಚ್ಚಿಸುತ್ತದೆ. ನಿಮಗೆ ಸ್ವಲ್ಪ ಗಂಟಲು ನೋವು ಇದ್ದರೆ, ಅದಕ್ಕೆ ಅರ್ಧ ಇಂಚು ಶುಂಠಿ ಸೇರಿಸಿ ಮತ್ತು ಮಿಶ್ರಣ ಮಾಡಿ.


  ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


  ಚಳಿಗಾಲದಲ್ಲಿ ರಾತ್ರಿ ಈ ಹಾಲನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ ಆಗಿದೆ. ನೀವು ತಿಳಿ ಕೋಕೋ ಪೌಡರ್ ಬೆರೆಸಿದ ಬಿಸಿ ಹಾಲನ್ನು ಕುಡಿಯಬಹುದು. ಇದು ಆರೋಗ್ಯಕ್ಕೆ ಸಹ ಪ್ರಯೋಜನಕಾರಿ ಆಗಿದೆ.

  Published by:renukadariyannavar
  First published: