Tattoo ಪ್ರಿಯರೇ ಹುಷಾರ್! ಹಚ್ಚೆ ಹಾಕಲು ಬಳಸುವ ಇಂಕ್​ನಿಂದ ಕ್ಯಾನ್ಸರ್ ಅಪಾಯ!

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಟ್ಯಾಟೂ ಸಾಕಷ್ಟು ಪ್ರಸಿದ್ಧತೆಯನ್ನು ಪಡೆದಿದ್ದು ಅದರ ಪ್ರಭಾವ ಭಾರತದಲ್ಲೂ ಕಾಣಬಹುದು. ಹಾಗೆಂದ ಮಾತ್ರಕ್ಕೆ ಭಾರತದಲ್ಲಿ ಇದು ಇದ್ದಿದ್ದೇ ಇಲ್ಲ ಎನ್ನಲಾಗುವುದಿಲ್ಲ. ಏಕೆಂದರೆ ಭಾರತದಲ್ಲೂ ಬಲು ಹಿಂದಿನಿಂದ ಒಂದು ರೂಢಿ ಚಾಲ್ತಿಯಲ್ಲಿದೆ ಹಾಗೂ ಅದನ್ನು ಹಚ್ಚೆ ಹಾಕಿಸಿಕೊಳ್ಳುವುದೆನ್ನಲಾಗುತ್ತದೆ. ಈ ವಿಷಯ ಏನೇ ಇರಲಿ, ಈಗ ಸದ್ಯ ಬೆಳಕಿಗೆ ಬಂದಿರುವ ವರದಿಯಂತೆ ಟ್ಯಾಟೂಗೆ ಬಳಸಲಾಗುವ ಶಾಯಿಗಳಲ್ಲಿ ರಾಸಾಯನಿಕಗಳಿದ್ದು ಅವು ಕ್ಯಾನ್ಸರ್ ಕಾರಕ ಎಂಬ ಅಂಶ ಹೊರಬಿದ್ದಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ದಿನಮಾನಗಳಲ್ಲಿ ಟ್ಯಾಟೂ (Tattoo) ಎಂದರೆ ಯಾರಿಗೆ ತಾನೇ ಗೊತ್ತಿರುವುದಿಲ್ಲ. ಹದಿಹರೆಯದವರಿಂದ ಹಿಡಿದು ಮಧ್ಯ ವಯಸ್ಕರವರೆಗೂ ಟ್ಯಾಟೂ ಬಲು ಜನಪ್ರೀಯ. ಇದು ಇಂದಿನ ಯುಗದ ಆಕರ್ಷಕ ಅಲಂಕಾರ ಎಂದರೂ ತಪ್ಪಾಗದು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಟ್ಯಾಟೂ ಸಾಕಷ್ಟು ಪ್ರಸಿದ್ಧತೆಯನ್ನು ಪಡೆದಿದ್ದು ಅದರ ಪ್ರಭಾವ ಭಾರತದಲ್ಲೂ (India) ಕಾಣಬಹುದು. ಹಾಗೆಂದ ಮಾತ್ರಕ್ಕೆ ಭಾರತದಲ್ಲಿ ಇದು ಇದ್ದಿದ್ದೇ ಇಲ್ಲ ಎನ್ನಲಾಗುವುದಿಲ್ಲ. ಏಕೆಂದರೆ ಭಾರತದಲ್ಲೂ ಬಲು ಹಿಂದಿನಿಂದ ಒಂದು ರೂಢಿ ಚಾಲ್ತಿಯಲ್ಲಿದೆ ಹಾಗೂ ಅದನ್ನು ಹಚ್ಚೆ ಹಾಕಿಸಿಕೊಳ್ಳುವುದೆನ್ನಲಾಗುತ್ತದೆ. ಈ ವಿಷಯ ಏನೇ ಇರಲಿ, ಈಗ ಸದ್ಯ ಬೆಳಕಿಗೆ ಬಂದಿರುವ ವರದಿಯಂತೆ ಟ್ಯಾಟೂಗೆ ಬಳಸಲಾಗುವ ಶಾಯಿಗಳಲ್ಲಿ (Ink) ರಾಸಾಯನಿಕಗಳಿದ್ದು (Chemical) ಅವು ಕ್ಯಾನ್ಸರ್ (Cancer) ಕಾರಕ ಎಂಬ ಅಂಶ ಹೊರಬಿದ್ದಿದೆ.

ಟ್ಯಾಟೂಗೆ ಬಳಸಲಾಗುವ ಇಂಕ್ ಗಳು ಕ್ಯಾನ್ಸರ್ ಗೆ ಕಾರಣವಾಗುತ್ತದೆಯಂತೆ 
ಹೌದು, ಈ ಬಗ್ಗೆ ಸಂಶೋಧಕರು ಸಂಶೋಧನೆಯೊಂದನ್ನು ನಡೆಸಿದ್ದು ಆ ಮೂಲಕ ಈ ವಿಷಯವನ್ನು ಪ್ರಕಟಿಸಿದ್ದಾರೆ. ಸಂಶೋಧಕರು ತಮ್ಮ ಸಂಶೋಧನೆಯ ನಿಮಿತ್ತ ಹಲವು ಬಗೆಯ ಟ್ಯಾಟೂ ಮಾದರಿಗಳನ್ನು ಪರಿಶೀಲಿಸಿ ಪರೀಕ್ಷಿಸಿದ್ದಾರೆ. ಅದರಲ್ಲಿ ಅವರಿಗೆ ಕಂಡುಬಂದ ವಿಷಯವೆಂದರೆ, ಟ್ಯಾಟೂಗೆ ಬಳಸಲಾಗುವ ಇಂಕುಗಳ ಪೈಕಿ ಸುಮಾರು 50% ರಷ್ಟು ಇಂಕುಗಳು ಕ್ಯಾನ್ಸರ್ ಉಂಟು ಮಾಡಬಹುದಾದ ಘಾತಕ ರಾಸಾಯನಿಕಗಳನ್ನು ಒಳಗೊಂಡಿದ್ದವು.

ಇತ್ತೀಚೆಗೆ ಶಿಕಾಗೋದಲ್ಲಿ ನಡೆದ ಅಮೆರಿಕನ್ ಕೆಮಿಕಲ್ ಸೊಸೈಟಿ ಸಭೆಯಲ್ಲಿ ಬಿಂಘ್ಯಾಮ್ಟನ್ ವಿವಿಯ ಜಾನ್ ಸ್ವಿರ್ಕ್ ನೇತೃತ್ವದ ಸಂಶೋಧಕರ ತಂಡವು ಈ ಬಗ್ಗೆ ಬೆಳಕು ಚೆಲ್ಲಿತು. ಜಾನ್, ಸ್ವಿರ್ಕ್ ವಾರ್ಸಿಟಿಯ ಇನಾರ್ಗ್ಯಾನಿಕ್ ಕೆಮಿಸ್ಟ್ರಿ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

ಟ್ಯಾಟೂಗೆ ಬಳಸಲಾಗುವ ಶಾಯಿಗಳಲ್ಲಿ ಎರಡು ವಿಧ 
ಜಾನ್ ಅವರ ಪ್ರಕಾರ, ಟ್ಯಾಟೂಗೆ ಬಳಸಲಾಗುವ ಶಾಯಿಗಳಲ್ಲಿ ಎರಡು ಘಟಕಾಂಶಗಳಿವೆ, ಒಂದು ಪಿಗ್ಮೆಂಟ್ ಹಾಗೂ ಎರಡನೆಯದ್ದು ಕ್ಯಾರಿಯರ್ ದ್ರಾವಣ. ಪಿಗ್ಮೆಂಟ್ ಎಂಬುದು ಮಾಲೆಕ್ಯೂಲರ್ ಅಥವಾ ಘನ ಘಟಕವಾಗಿದ್ದಾರೆ ಕ್ಯಾರಿಯರ್ ದ್ರವ್ಯವಾಗಿದ್ದು ಇದು ಪಿಗ್ಮೆಂಟ್ ಗಳನ್ನು ಚರ್ಮದ ವಿವಿಧ ಪದರುಗಳಲ್ಲಿ ಸಾಗಿಸುತ್ತದೆ.

ಇದನ್ನೂ ಓದಿ: Plastic Skin: ಬರೀ ಅರ್ಧ ಗಂಟೆ ಬಿಸಿಲಿನಲ್ಲಿ ಮಲಗಿದ ಮಹಿಳೆ! ಈಕೆಯ ಮುಖ ಹೇಗಾಗಿದೆ ನೋಡಿ

ಈ ಸಂದರ್ಭದಲ್ಲಿ ಸಭೆಯಲ್ಲಿ ಜಾನ್ ಅವರು ತಮ್ಮ ತಂಡದೊಂದಿಗೆ ಹೇಗೆ 56 ಬಗೆಯ ಟ್ಯಾಟೂಗಳ ವಿವಿಧ ಶಾಯಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದರು ಎಂಬುದರ ಬಗ್ಗೆ ವಿವರಣೆ ನೀಡಿ ಆ ನಂತರ ಅವರ ತಂಡವು ಒಟ್ಟು ಅರ್ಧದಷ್ಟು ಪ್ರಮಾಣದ ವಿವಿಧ ಇಂಕುಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕಗಳಿರುವುದನ್ನು ಕಂಡುಕೊಂಡಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಅವರು ಹೇಳುವಂತೆ ಆ 50 ಪ್ರತಿಶತದಷ್ಟು ಇಂಕುಗಳುಳ್ಳ ಬಾಟಲ್ ಗಳ ಮೇಲೆ ಕ್ಯಾನ್ಸರ್ ಉಂಟು ಮಾಡಬಹುದಾದ ಆ ನಿರ್ದಿಷ್ಟ ರಾಸಾಯನಿಕದ ಹೆಸರು ಬರೆದೇ ಇರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಈ ಬಗ್ಗೆ ಜಾನ್ ಅವರು ಏನು ಹೇಳಿದ್ದಾರೆ
"ನಾವು ಪ್ರತಿ ಶಾಯಿಯನ್ನು ತೆಗೆದುಕೊಂಡು ಪರಿಶೀಲಿಸಿದಾಗ ನಮಗದು ಒಂದು ಕ್ಷಣ ಮೌನವಾಗುವಂತೆ ಮಾಡುತ್ತಿತ್ತು. ಇಲ್ಲಿಯವರೆಗೆ ನಾವು ಪರೀಕ್ಷಿಸಿದ್ದ 56 ಶಾಯಿಗಳ ಪೈಕಿ 23 ಶಾಯಿಗಳಲ್ಲಿ azo ಇರುವ ಡೈಗಳು ಇರುವುದು ಕಂಡುಬಂದವು". ಈ ಬಗ್ಗೆ ಡೈಲಿ ಮೇಲ್ ಮಾಧ್ಯಮಕ್ಕೆ ವಿವರಿಸಿರುವ ಜಾನ್ ಹೇಳುತ್ತಾರೆ, azo ಇರುವ ಡೈಗಳು ಯಾವುದಾದರೂ ಬ್ಯಾಕ್ಟಿರಿಯಾ ಅಥವಾ ಸೂರ್ಯನ ನೇರಳಾತೀತ ಕಿರಣಗಳ ಉಪಸ್ಥಿತಿಯಲ್ಲಿ ಡಿಜನರೇಟ್ ಆಗಿ ಕಾರ್ಸಿನೀಜೆನಿಕ್ ಕಂಪೌಂಡ್ ಗಳಾಗುತ್ತವೆ.ಜಾನ್ ವಿವರಿಸುವಂತೆ, ಟ್ಯಾಟೂ ಶಾಯಿಗಳಲ್ಲಿನ ಪಿಗ್ಮೆಂಟ್ ಗಳು ಕ್ರಮೇಣ ತುಣುಕುಗಳಾದಾಗ ಯಾವ ರೂಪ ಹೊಂದುತ್ತವೆ ಹಾಗೂ ಅದರಿಂದ ನಮಗೇನಾದರೂ ಅಪಾಯವಿದೆಯೇ ಎಂಬುದರ ಬಗ್ಗೆ ಸದ್ಯ ಯಾವ ಅಧ್ಯಯನವೂ ಇಲ್ಲ, ಹಾಗಾಗಿ ಆ ಬಗ್ಗೆ ಇನ್ನೂ ಸಂಶೋಧನೆ ನಡೆಯಬೇಕಾಗಿದೆ.

ಇದು ಕ್ಯಾನ್ಸರ್ ಗೆ ಹೇಗೆ ಕಾರಣವಾಗುತ್ತದೆ 
ಸಂಶೋಧಕರ ತಂಡವು ಇನ್ನೊಂದು ಮಾದರಿ ಶಾಯಿಯಲ್ಲಿ ಎಥನಾಲ್ ಉಪಸ್ಥಿತವಿರುವುದನ್ನು ಕಂಡುಕೊಂಡಿದ್ದಾರೆ. ಎಥನಾಲ್ ಬ್ಲಡ್ ಥಿನ್ನರ್ ಆಗಿಯೂ ಕೆಲಸ ಮಾಡುತ್ತದೆ. ಆದರೆ, ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಇನ್ನೂ ಪರಿಶೀಲಿಸಬೇಕಾಗಿದೆ. ಸಂಶೋಧನಾ ತಂಡವು ಇನ್ನೂ 16 ಮಾದರಿಗಳ ಶಾಯಿಯನ್ನು ಅವುಗಳಲ್ಲಿರುವ ಕಣಗಳ ಗಾತ್ರದ ಬಗ್ಗೆ ಪರಿಶೀಲಿಸಿದಾಗ 50% ಶಾಯಿಗಳಲ್ಲಿ ಕಣಗಳು 100 ನ್ಯಾನೋಮೀಟರ್ ಗಳಿಗಿಂತಲೂ ಚಿಕ್ಕವಾಗಿರುವುದು ಕಂಡುಬಂದಿದೆ. ಜಾನ್ ಪ್ರಕಾರ ಇದು ಚಿಂತನೀಯ ವಿಷಯವಾಗಿದೆ, ಏಕೆಂದರೆ ಅಷ್ಟು ಚಿಕ್ಕ ಗಾತ್ರದ ಕಣಗಳು ಚರ್ಮದ ಕೋಶಗಳ ಮೂಲಕ ಒಳಗೆ ಸುಲಭವಾಗಿ ಪ್ರವೇಶಿಸಬಹುದಾಗಿವೆ. ಇದು ನಿಜಕ್ಕೂ ಕ್ಯಾನ್ಸರ್ ರೀತಿಯ ಪ್ರಭಾವ ಬೀರಬಹುದು ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಜಾನ್.

ಇದನ್ನೂ ಓದಿ:  Stroke: ಹಾರ್ಟ್ ಸ್ಟ್ರೋಕ್ ಆಗಿರುವುದನ್ನು ಸೂಚಿಸುವ ಮೂರು ಲಕ್ಷಣಗಳಿವು! ನೆಗ್ಲೆಕ್ಟ್ ಮಾಡಬೇಡಿ

ಅಷ್ಟಕ್ಕೂ ಇಂದಿನ ಯುವಜನಾಂಗ ಈ ಬಗ್ಗೆ ತುಸು ಗಂಭೀರವಾಗಿ ಆಲೋಚಿಸಬೇಕಾದ ಅಗತ್ಯವಿದೆ. ಏಕೆಂದರೆ ಅಲಂಕಾರ, ಫ್ಯಾಷನ್ ಹೆಸರಿನಲ್ಲಿ ನಮ್ಮ ಆರೋಗ್ಯದೊಂದಿಗೆ ಆಟ ಆಡುವುದು ಯೋಗ್ಯವಲ್ಲ ಎಂಬುದು ನಮ್ಮ ಅಭಿಪ್ರ್ರಯವಾಗಿದೆ.
Published by:Ashwini Prabhu
First published: