• Home
  • »
  • News
  • »
  • lifestyle
  • »
  • Health: ತಂಪು ಪಾನೀಯಗಳ ಅತಿಯಾದ ಸೇವನೆ, ಹಲ್ಲುಗಳನ್ನೇ ಕಳೆದುಕೊಂಡ ಹರೆಯದ ಯುವತಿ!

Health: ತಂಪು ಪಾನೀಯಗಳ ಅತಿಯಾದ ಸೇವನೆ, ಹಲ್ಲುಗಳನ್ನೇ ಕಳೆದುಕೊಂಡ ಹರೆಯದ ಯುವತಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

18 ರ ಹರೆಯದಲ್ಲೇ ಮಾಲ್ಡೀವ್ಸ್ ನಿವಾಸಿಯಾಗಿರುವ ಫಾತಿಮಾ ರೂಹ ಅತಿಯಾದ ಕಾರ್ಬೋನೇಟ್‌ಯುಕ್ತ ಪಾನೀಯಗಳ ಸೇವನೆಯಿಂದ ಹಲ್ಲುಗಳಿಗೆ ಹಾನಿ ಮಾಡಿಕೊಂಡಿದ್ದರು. ಆಕೆಗೆ 15 ವರ್ಷವಿದ್ದಾಗಲೇ ಹಲ್ಲಿನ ಸಮಸ್ಯೆಯನ್ನು ಆಕೆ ಅನುಭವಿಸತೊಡಗಿದರು ಮತ್ತು ಹಲ್ಲುಗಳನ್ನು ಸರಿಪಡಿಸಲು ಆಕೆ ಸಂಪರ್ಕಿಸದ ವೈದ್ಯರುಗಳೇ ಇಲ್ಲ ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟುಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಅತಿಯಾದ ಕಾರ್ಬೋನೇಟೆಡ್‌ಯುಕ್ತ ಪಾನೀಯಗಳು (Carbonated Drink) ಹಲ್ಲುಗಳ ಹಾನಿಗೆ ಕಾರಣವಾಗುತ್ತದೆ ಎಂಬುದಕ್ಕೆ ದೃಷ್ಟಾಂತವಾಗಿ ಮಾಲ್ಡೀವ್ಸ್‌ನ ಫಾತಿಮಾ ಸಾಕ್ಷಿಯಾಗಿದ್ದಾರೆ. 18 ರ ಹರೆಯದಲ್ಲೇ ಮಾಲ್ಡೀವ್ಸ್ (Maldives) ನಿವಾಸಿಯಾಗಿರುವ ಫಾತಿಮಾ ರೂಹ ಅತಿಯಾದ ಕಾರ್ಬೋನೇಟ್‌ಯುಕ್ತ ಪಾನೀಯಗಳ ಸೇವನೆಯಿಂದ ಹಲ್ಲುಗಳಿಗೆ ಹಾನಿ ಮಾಡಿಕೊಂಡಿದ್ದರು. ಆಕೆಗೆ 15 ವರ್ಷವಿದ್ದಾಗಲೇ ಹಲ್ಲಿನ ಸಮಸ್ಯೆಯನ್ನು ಆಕೆ ಅನುಭವಿಸತೊಡಗಿದರು ಮತ್ತು ಹಲ್ಲುಗಳನ್ನು (Tooth) ಸರಿಪಡಿಸಲು ಆಕೆ ಸಂಪರ್ಕಿಸದ ವೈದ್ಯರುಗಳೇ ಇಲ್ಲ ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟುಕೊಂಡಿದ್ದಾರೆ.


ಹಲ್ಲುಗಳನ್ನು ಸಂಪೂರ್ಣವಾಗಿ ತೆಗೆಯಲು ವೈದ್ಯರ ಶಿಫಾರಸು
ವೈದ್ಯರುಗಳು ಫಾತಿಮಾರಿಗೆ ಹಲ್ಲುಗಳನ್ನು ಸಂಪೂರ್ಣವಾಗಿ ತೆಗೆಯಬೇಕು ಎಂದು ಸಲಹೆ ಇತ್ತಿದ್ದರು. ಹಲ್ಲುಗಳನ್ನು ತೆಗೆಯುವುದಲ್ಲದೆ ಬೇರಾವುದೇ ಚಿಕಿತ್ಸೆ ಇಲ್ಲ ಎಂದು ಹೇಳಿದ್ದರು. ಆದರೆ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಕೃತಕ ಹಲ್ಲುಗಳನ್ನು ಅಳವಡಿಸಿಕೊಳ್ಳಲು ಫಾತಿಮಾ ಹಾಗೂ ಆಕೆಯ ಮನೆಯವರು ಒಪ್ಪಲಿಲ್ಲ.


ಸುಮಾರು ಮೂರು ವರ್ಷಗಳಿಂದ ಫಾತಿಮಾ ಹಲ್ಲುಗಳನ್ನು ಪುನರ್ ಜೋಡಿಸುವ ಸಲುವಾಗಿ ಹಲವಾರು ವೈದ್ಯರುಗಳನ್ನು ಶೋಧಿಸತೊಡಗಿದರು. ಈ ಸಲುವಾಗಿ ಭಾರತಕ್ಕೆ ಕೂಡ ಭೇಟಿ ನೀಡಿದ ಫಾತಿಮಾ ವೈದ್ಯರುಗಳನ್ನು ನಿರಂತರವಾಗಿ ಹುಡುಕಾಡತೊಡಗಿದರು. ಆಕೆಯ ಹಲ್ಲುಗಳು ಹಾನಿಗೊಳಗಾಗಿದ್ದರಿಂದ ಆಕೆ ಕೃತಕ ಹಲ್ಲುಗಳನ್ನು ಧರಿಸುತ್ತಿದ್ದರು.


ಭಾರತದಲ್ಲಿ ದೊರೆತ ಹಲ್ಲಿನ ವೈದ್ಯರು
ಆದರೆ ಅದೃಷ್ಟವೆಂಬಂತೆ ಆಕೆಗೆ ಭಾರತದಲ್ಲಿಯೇ ಹಲ್ಲುಗಳನ್ನು ಸರಿಪಡಿಸುವ ವೈದ್ಯರ ನೆರವು ದೊರಕಿತು. ತಿರುವನಂತಪುರದಲ್ಲಿರುವ ಮಲ್ಟಿ-ಸ್ಪೆಶಾಲಿಟಿ ದಂತ ಕ್ಲಿನಿಕ್ ಹೊಂದಿರುವ ವಿಷ್ಣು ಅವರ ಕ್ಲಿನಿಕ್ ಫಾತಿಮ ಕಣ್ಣಿಗೆ ಬಿದ್ದಿತು. ವೈದ್ಯರು ಆಕೆಯ ಹಲ್ಲುಗಳನ್ನು ಪರಿಶೋಧಿಸಿ ಹಾನಿಗೊಳಗಾದ ಹಲ್ಲುಗಳನ್ನು ಸರಿಪಡಿಸಲು ಸಾಧ್ಯವೇ ಎಂಬುದಾಗಿ ಹಲವಾರು ರೀಸರ್ಚ್‌ಗಳನ್ನು ನಡೆಸಿದ್ದಾರೆ ಎಂದು ತಿಳಿಸಿದರು.


ಇದನ್ನೂ ಓದಿ: Photography: ಇರುವೆಯ ಮುಖದ ಫೋಟೋಗೆ ಸಿಕ್ತು ಮೊದಲ ಬಹುಮಾನ: ಇದು ಸಾಮಾನ್ಯ ಚಿತ್ರವಲ್ಲ!


ಹುಡುಗಿಯು ಸಣ್ಣ ಪ್ರಾಯದವರಾಗಿದ್ದರಿಂದ ಹಲ್ಲುಗಳ ದುರಸ್ತಿಯನ್ನು ಮುತುವರ್ಜಿಯಿಂದ ಮಾಡಬೇಕಿತ್ತು. ಇದೊಂದು ರೀತಿಯ ಸವಾಲಾಗಿತ್ತು ಎಂದು ವಿಷ್ಣು ಮನೋರಮಾ ಮೀಡಿಯಾಗೆ ತಿಳಿಸಿದ್ದಾರೆ. ಪರೀಕ್ಷೆಗಳನ್ನು ನಡೆಸಿದ ನಂತರ ಹಲ್ಲುಗಳ ಬುಡ ಉತ್ತಮ ಸಾಮರ್ಥ್ಯವನ್ನು ಪಡೆದುಕೊಂಡಿವೆ ಹಾಗೂ ದೀರ್ಘತೆಯನ್ನು ಹೊಂದಿದೆ, ಬರಿಯ ಆಹಾರ ಅಗಿಯುವ ಭಾಗ ಮಾತ್ರ ಕಾಣೆಯಾಗಿದೆ ಎಂಬುದಾಗಿ ವೈದ್ಯರು ಮನಗಂಡರು. ಫಾತಿಮಾರ ಹಲ್ಲುಗಳನ್ನು ಪುನಃ ಜೋಡಿಸಬಹುದು ಎಂದು ವೈದ್ಯರು ಆಕೆಗೆ ಭರವಸೆಯಿತ್ತರು.


ಫಾತಿಮಾರಿಗೆ ಚಿಕಿತ್ಸೆ ಆರಂಭಿಸಿದ ವೈದ್ಯರು
ಡಾ. ಜಿ ನೆಲ್ಸನ್ ಹಾಗೂ ಡಾ. ಸುಜೇಶ್ ಕುರುವಿಲ್ಲಾ ಡಾ. ವಿಷ್ಣು ನೇತೃತ್ವದಲ್ಲಿ ಫಾತಿಮಾರಿಗೆ ಚಿಕಿತ್ಸೆಯನ್ನು ಆರಂಭಿಸಿದರು. ಹಲ್ಲಿನ ಬಡುವನ್ನು ಗಟ್ಟಿಗೊಳಿಸಲಾಯಿತು ಹಾಗೂ ನಂತರ ಮೇಲಿನ ಹಾಗೂ ಕೆಳಗಿನ ಹಲ್ಲುಗಳನ್ನು ಕೂರಿಸುವ ಚಿಕಿತ್ಸೆಯನ್ನು ಮಾಡಲಾಯಿತು. ಒಂದು ತಿಂಗಳಲ್ಲಿ 5 ಬಾರಿ ಚಿಕಿತ್ಸೆಯನ್ನು ಪಡೆಯುವ ಮೂಲಕ ಫಾತಿಮಾ ಸಂತೋಷಭರಿತರಾಗಿ ಮಾಲ್ಡೀವ್ಸ್‌ಗೆ ಮರಳಿದ್ದಾರೆ ಎಂದು ವಿಷ್ಣು ತಿಳಿಸಿದ್ದಾರೆ. ಮಾಲ್ಡೀವ್ಸ್‌ನಲ್ಲಿಯೇ 6 ತಿಂಗಳ ಮುಂದಿನ ಪರಿಶೀಲನೆ ನಡೆಸಲು ವ್ಯವಸ್ಥೆಯನ್ನು ಡಾ. ವಿಷ್ಣು ಮಾಡಿದ್ದಾರೆ ಎಂದು ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ.


ಅತಿಯಾದ ತಂಪು ಪಾನೀಯಗಳ ಸೇವನೆ
ವಿಷ್ಣು ಹೇಳುವಂತೆ ತಂಪು ಪಾನೀಯಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತವೆ ಹಾಗೂ ಹೆಚ್ಚಾಗಿ ಹಲ್ಲುಗಳಿಗೇ ಇವುಗಳಿಂದ ಅಪಾಯ ಎಂದು ತಿಳಿಸಿದ್ದಾರೆ. ಪಾನೀಯಗಳಲ್ಲಿರುವ ಆಮ್ಲ, ಸಕ್ಕರೆ ಹಾಗೂ ಕ್ಯಾರಿಯೋಜೆನಿಕ್ ಎಂಬ ಅಂಶ ದಂತ ಕ್ಷಯ ಹಾಗೂ ಸವೆತಕ್ಕೆ ಪ್ರಮುಖ ಕಾರಣ ಎಂಬುದು ಡಾ. ವಿಷ್ಣು ಅವರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: Special House: ಮರವನ್ನು ಬಳಸದೇ ಇಲ್ಲೊಂದು ಮನೆ ನಿರ್ಮಾಣವಾಗಿದೆ! ನೀವೂ ಟ್ರೈ ಮಾಡಬಹುದು


ಹಲ್ಲಿನ ಸವೆತ (ಎರೋಸಿವ್ ಟೂತ್ ವೇರ್) ಎಂಬುದು ಹಲ್ಲಿನ ಗಟ್ಟಿಯಾದ ಅಂಗಾಂಶದ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ಹಾನಿಯನ್ನುಂಟು ಮಾಡುವ ಪರಿಸ್ಥಿತಿಯಾಗಿದೆ ಎಂದು ವೈದ್ಯ ವಿಷ್ಣು ಹೇಳಿದ್ದು, ತಂಪು ಪಾನೀಯಗಳಲ್ಲಿರುವ ರಾಸಾಯನಿಕಗಳು ಹಲ್ಲಿನ ಮೇಲ್ಮೈಗೆ ತೀವ್ರ ಹಾನಿಯನ್ನುಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ. ಫಾತಿಮಾ ವಿಷಯದಲ್ಲಿ ಕೂಡ ಇದೇ ಪರಿಸ್ಥಿತಿ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Published by:Ashwini Prabhu
First published: