Pregnancy Story: ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ಮಹಿಳೆ, ಹೆಣ್ಣು ಮಗುವಿಗೆ ಜನ್ಮ ನೀಡಿದಳು

ಬ್ರಿಟಿಷ್ ಮಹಿಳೆಯೊಬ್ಬರು, ತನ್ನ ಎರಡನೇ ಮಗುವಿನ ಜನನವಾಗುವವರೆಗೆ ತನ್ನ ಗರ್ಭಾವಸ್ಥೆಯ ಬಗ್ಗೆ ಸಂಪೂರ್ಣವಾಗಿ ತಿಳಿದೇ ಇರಲಿಲ್ಲ ಎಂದು ಹೇಳಿದ್ದಾರೆ. ಎಮ್ಮಾ ಫಿಟ್ಜ್‌ಸಿಮನ್ಸ್ ಎಂಬ ಮಹಿಳೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಗರ್ಭಾವಸ್ಥೆಯಲ್ಲಿ (Pregnancy) ಮಹಿಳೆಯರು (Women) ತಮ್ಮ ಮತ್ತು ಹುಟ್ಟಲಿರುವ ಮಗುವಿನ (Baby) ಆರೋಗ್ಯ (Health) ಕಾಪಾಡಲು ಸಾಕಷ್ಟು ಜಾಗ್ರತೆ (Care) ಹಾಗೂ ಕ್ರಮ ವಹಿಸಬೇಕಾಗುತ್ತದೆ. ವಿವಿಧ ಪೋಷಕಾಂಶಗಳ ಸೇವನೆ ಸರಿಯಾದ ಆರೋಗ್ಯಕರ ಪದಾರ್ಥಗಳ ಸೇವನೆ ಅಗತ್ಯವಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಗರ್ಭಾವಸ್ಥೆಯಲ್ಲಿ ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ಏಕೆಂದರೆ ಇದು ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೆ ತುಂಬಾ ಅವಶ್ಯಕವಾಗಿದೆ. ಮಹಿಳೆಯರು ಗರ್ಭ ಧರಿಸುವುದು ಸಂಪೂರ್ಣವಾಗಿ ಗೋಚರವಾಗುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಏಕಾಏಕಿ ಮಗುವಿಗೆ ಜನ್ಮ ನೀಡಿದ್ದಾರೆ.

  ಎಮ್ಮಾ ಫಿಟ್ಜ್‌ಸಿಮನ್ಸ್ ಎಂಬ ಮಹಿಳೆಗೆ ಗರ್ಭಿಣಿಯಾಗಿದ್ದೇ ಗೊತ್ತಾಗಿರಲಿಲ್ಲ

  ಬ್ರಿಟಿಷ್ ಮಹಿಳೆಯೊಬ್ಬರು, ತನ್ನ ಎರಡನೇ ಮಗುವಿನ ಜನನವಾಗುವವರೆಗೆ ತನ್ನ ಗರ್ಭಾವಸ್ಥೆಯ ಬಗ್ಗೆ ಸಂಪೂರ್ಣವಾಗಿ ತಿಳಿದೇ ಇರಲಿಲ್ಲ ಎಂದು ಹೇಳಿದ್ದಾರೆ. ಎಮ್ಮಾ ಫಿಟ್ಜ್‌ ಸಿಮನ್ಸ್ ಎಂಬ ಮಹಿಳೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ನಂತರ ಮಂಗಳವಾರ ಪೋರ್ಟ್ ಮ್ಯಾಕ್ವಾರಿ ಆಸ್ಪತ್ರೆಗೆ ಹೋಗಿದ್ದಾರೆ.

  ಆಗ ಆಸ್ಪತ್ರೆಯ ವೈದ್ಯರು ಆಕೆ ಸಣ್ಣ ಹೊಟ್ಟೆ ನೋವಿನಿಂದ ಬಳಲುತ್ತಿಲ್ಲ. ಆಕೆ ಹೆರಿಗೆ ನೋವಿನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಮಹಿಳೆ ದಿಗ್ಭ್ರಮೆಗೊಂಡಿದ್ದರು. ಮತ್ತೊಮ್ಮೆ ಸ್ಕ್ಯಾನಿಂಗ್ ಮಾಡಲು ವೈದ್ಯರಿಗೆ ಕೇಳಿಕೊಂಡಿದ್ದರು.

  ಇದನ್ನೂ ಓದಿ: ವಿವಿಧ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ತ್ರಿಫಲ ಚೂರ್ಣ, ಇದರ ಬಳಕೆ ಹೇಗೆ ಗೊತ್ತಾ?

  ಎಮ್ಮಾ ಎರಡು ವರ್ಷಗಳ ಹಿಂದೆ ಮಗ ವಿಲಿಯಂಗೆ ಜನ್ಮ ನೀಡಿದ್ದಳು

  ಎಮ್ಮಾಳ ಈ ವಿಚಿತ್ರ ಗರ್ಭಧಾರಣೆಗೆ ಆಕೆಯ ಜೀವನಸಂಗಾತಿ ಆರನ್ ಬೆಂಬಲಿಸಿದ್ದಾನೆ. ಮತ್ತು ಒಟ್ಟಿಗೆ ಅವರು ತಮ್ಮ ಮಗಳು ವಿಲಿಯಂ ರೋಸ್ ಅನ್ನು ಸ್ವಾಗತಿಸಿದ್ದಾರೆ. ಎಮ್ಮಾ ತಮ್ಮ ಎರಡೂ ಗರ್ಭಧಾರಣೆಯ ಬಗ್ಗೆ ಹೇಳಿದ್ದಾರೆ. "ಗರ್ಭಧಾರಣೆಯ 11 ನೇ ವಾರದಲ್ಲಿ ನಾನು ವಿಲಿಯಂ (ಮಗ) ಬಗ್ಗೆ ತಿಳಿದುಕೊಂಡೆ.

  ಮತ್ತು 22 ನೇ ವಾರದವರೆಗೆ ನಾನು ಪ್ರತಿದಿನ ಅನಾರೋಗ್ಯದಿಂದ ಬಳಲುತ್ತಿದ್ದೆ. ಅದು ವಿಭಿನ್ನ ರೀತಿಯ ಭಾವನೆಯಾಗಿತ್ತು. ವೈದ್ಯರು ಹೇಳುವ ಪ್ರಕಾರ, ನಾನು ಎರಡನೇ ಗರ್ಭಧಾರಣೆ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಮಗು ಯಾವಾಗಲೂ ಗರ್ಭದ ಹಿಂಭಾಗದಲ್ಲಿ ಇದ್ದು, ಜರಾಯು ಅವನ ಮುಂದೆ ಇತ್ತು. ಇದರಿಂದಾಗಿ ನನಗೆ ಅವನ ಯಾವುದೇ ಚಲನವಲನದ ಅನುಭವ ಆಗಿರಲಿಲ್ಲ.

  ಗರ್ಭಾವಸ್ಥೆಯಲ್ಲಿಯೂ ತನ್ನ ಹಳೆಯ ಬಟ್ಟೆಗಳನ್ನು ಧರಿಸುತ್ತಿದ್ದೆ ಎಂದು ಎಮ್ಮಾ ಹೇಳಿದ್ದಾರೆ. ವಿಲಿಯಂ ತೂಕ ಹೆಚ್ಚಿರಲಿಲ್ಲ ಅಥವಾ ಆಕೃತಿಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕೆಲವು ಅಧ್ಯಯನದ ಪ್ರಕಾರ, 400 ಅಥವಾ 500 ಮಹಿಳೆಯರಲ್ಲಿ ಒಬ್ಬರು ತಮ್ಮ ಗರ್ಭಧಾರಣೆಯ 20 ನೇ ವಾರದಲ್ಲಿ ತಮ್ಮ ಗರ್ಭಧಾರಣೆ ಬಗ್ಗೆ ತಿಳಿದುಕೊಳ್ಳುತ್ತಾರೆ.

  ಸಮಯಕ್ಕೆ ಸರಿಯಾಗಿ ಮುಟ್ಟಾಗದ ಮಹಿಳೆಯರಿಗೆ, ಸ್ಥೂಲಕಾಯದಿಂದ ಬಳಲುತ್ತಿರುವ ಮಹಿಳೆಯರಿಗೆ ಅಥವಾ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೂ ಗರ್ಭಧಾರಣೆಯ ಬಗ್ಗೆ ಅರಿವಾಗುವುದಿಲ್ಲ ಎಂಬುದು ವೈದ್ಯರ ಮಾತು.

  ಇನ್ನು ಗರ್ಭಾವಸ್ಥೆಯಲ್ಲಿ ಎಳನೀರಿನ ಪ್ರಯೋಜನಗಳು

  ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ಸಾಕಷ್ಟು ಉಪಯುಕ್ತವಾಗಿದೆ. ಕ್ಲೋರೈಡ್, ಎಲೆಕ್ಟ್ರೋಲೈಟ್, ರೈಬೋಫ್ಲಾವಿನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ ಇದರಲ್ಲಿ ಹೇರಳವಾಗಿದೆ.

  ಗರ್ಭಾವಸ್ಥೆಯಲ್ಲಿ ತೆಂಗಿನ ನೀರನ್ನು ಸೇವಿಸುವುದರಿಂದ ದೇಹದ ಎಲೆಕ್ಟ್ರೋಲೈಟ್‌ಗಳು ಮತ್ತು ದ್ರವಗಳ ದೈನಂದಿನ ಅಗತ್ಯ ಪೂರೈಕೆ ಆಗುತ್ತದೆ. ತೆಂಗಿನ ನೀರು ದೇಹದಲ್ಲಿ ರಕ್ತದ ಮಟ್ಟ ಹೆಚ್ಚಿಸಲು, ಮೂತ್ರದ ಸೋಂಕು ಕಡಿಮೆ ಮಾಡಲು ಮತ್ತು ರಕ್ತದೊತ್ತಡ ನಿವಾರಣೆಗೆ ಸಹಕಾರಿ.

  ಇದನ್ನೂ ಓದಿ: ಬೊಜ್ಜಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ನಿಮ್ಮ ದಿನಚರಿಯಲ್ಲಿ ಮೊದಲು ಇದನ್ನು ಸೇರಿಸಿ

  ತೆಂಗಿನ ನೀರು ಗರ್ಭಾವಸ್ಥೆಯಲ್ಲಿ ಎದೆಯುರಿ ಸಮಸ್ಯೆಗೆ ಪರಿಹಾರ ನೀಡುತ್ತದೆ. ಗರ್ಭಾವಸ್ಥೆಯಲ್ಲಿ ಬೆಳಗಿನ ಬೇನೆ ಮತ್ತು ಆಯಾಸ ನಿವಾರಿಸಲು ತೆಂಗಿನ ನೀರನ್ನು ಕುಡಿಯಬಹುದು.
  Published by:renukadariyannavar
  First published: