Viral Video: ಇನ್ಮುಂದೆ ದೋಸೆ ಮಾಡೋದು ಬಹಳ ಸುಲಭ..! ಹೇಗೆ ಅಂತೀರಾ..? ಈ ವಿಡಿಯೋ ನೋಡಿ..

A Tool To Get a Perfect Round Dosa: ಈ ವೈರಲ್‌ ವಿಡಿಯೋ ಸಾಧನದ ಡೆಮೋವನ್ನು ತೋರಿಸುತ್ತದೆ. ಅದು ಮೇಲ್ಭಾಗದಲ್ಲಿ ತಿರುಗುವ ಯಂತ್ರ ಅಥವಾ ರೊಟೇಟರ್‌ ಅನ್ನು ಹೊಂದಿರುವ ಮುಚ್ಚಳವನ್ನು ಒಳಗೊಂಡಿರುತ್ತದೆ.

ದೋಸೆ ಮೇಕರ್

ದೋಸೆ ಮೇಕರ್

  • Share this:
ನಮ್ಮಲ್ಲಿ ಹೆಚ್ಚಿನವರು ಮನೆಯಲ್ಲಿ ಆ ಪರಿಪೂರ್ಣವಾದ, ದುಂಡಗಿನ ದೋಸೆ(Dosa) ಪಡೆಯಲು ಹೆಣಗಾಡುವ ಸ್ನೇಹಿತರನ್ನು ಹೊಂದಿದ್ದಾರೆ. ಅಥವಾ ಬಹುಶಃ ಆ ಸ್ನೇಹಿತ ನಾವೇ ಆಗಿರಬಹುದು. ನಾವು ಮಾಡುವ ದೋಸೆ ಯಾವುದೋ ದೇಶದ ಮ್ಯಾಪ್‌ ರೀತಿ ಆಗಿರುತ್ತದೆ ಎಂದು ನಮಗೆ ನಾವೇ ಆಡಿಕೊಳ್ಳುತ್ತಿರುತ್ತೇವೆ ಅಥವಾ ಬೇರೆಯವರನ್ನು ಹೀಯಾಳಿಸುತ್ತಿರುತ್ತೇವೆ. ದೋಸೆ ಭಾರತೀಯರ, ಅದರಲ್ಲೂ ದಕ್ಷಿಣ ಭಾರತೀಯರ ನೆಚ್ಚಿನ ಉಪಾಹಾರಗಳಲ್ಲೊಂದಾಗಿದ್ದು(Breakfast), ಈ ಹಿನ್ನೆಲೆ ಪರಿಪೂರ್ಣವಾದ ದೋಸೆ ಪಡೆಯಲು ಹಲವರು ಹಾತೊರೆಯುತ್ತಿರುತ್ತಾರೆ. ಈ ಹಿನ್ನೆಲೆ ದೋಷರಹಿತ ವೃತ್ತಾಕಾರದ ರೀತಿಯಲ್ಲಿ ಪ್ಯಾನ್ ಮೇಲೆ ದೋಸೆ ಹಿಟ್ಟನ್ನು ಹರಡಲು ಸಾಧನ ಇದ್ದರೆ ಹೇಗೆ ಅಂತೀರಾ..? ಇನ್ಮುಂದೆ ಅದೂ ಸಾಧ್ಯವಿದೆ.

ಹೌದು, ಈಗ ಸುಲಭವಾಗಿ ದೋಸೆ ಮಾಡಲು ಸಹಾಯ ಮಾಡುವ ಸಾಧನವೊಂದು ಬಂದಿದೆ. ಜನಪ್ರಿಯ ಆಹಾರ ಉತ್ಪನ್ನಗಳ ಕಂಪನಿಯು ಇತ್ತೀಚೆಗೆ ತಾವು ‘’ದೋಸೆ ತಯಾರಕ’’ (“dosa maker”)ದೊಂದಿಗೆ ಹೊರಬರುತ್ತಿರುವುದಾಗಿ ಘೋಷಿಸಿತು.  ಇದು ದೋಸೆ ಪ್ರಿಯರಿಗೆ ಮನೆಯಲ್ಲಿ ಪರಿಪೂರ್ಣವಾದ, ದುಂಡಗಿನ ದೋಸೆಗಳನ್ನು ಮಾಡಲು ಸಹಾಯ ಮಾಡುವ ನಾವೀನ್ಯತೆಯಾಗಿದೆ.

ಈ ವೈರಲ್‌ ವಿಡಿಯೋ ಸಾಧನದ ಡೆಮೋವನ್ನು ತೋರಿಸುತ್ತದೆ. ಅದು ಮೇಲ್ಭಾಗದಲ್ಲಿ ತಿರುಗುವ ಯಂತ್ರ ಅಥವಾ ರೊಟೇಟರ್‌ ಅನ್ನು ಹೊಂದಿರುವ ಮುಚ್ಚಳವನ್ನು ಒಳಗೊಂಡಿರುತ್ತದೆ. ಒಂದು ಬಿಸಿಯಾದ ಬಾಣಲೆಯ ಮೇಲೆ ಸೌಟಿನ ಮೂಲಕ ದೋಸೆ ಹಿಟ್ಟನ್ನು ಸುರಿಯಿರಿ. ನಂತರ ಅದನ್ನು "ದೋಸಾ ತಯಾರಕ" ದಿಂದ ಮುಚ್ಚಿ ಮತ್ತು ಲೋಹದ ಹಿಡಿಕೆಯನ್ನು ಮೇಲಕ್ಕೆ ತಿರುಗಿಸಿದರೆ ಅದು ಕೆಳಗಿರುವ ದೋಸೆ ಹಿಟ್ಟನ್ನು ವೃತ್ತಾಕಾರವಾಗಿ ಹರಡುತ್ತದೆ.



ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಮಾಡ್ಬೋದು ಈ ಸಬ್ಬಕ್ಕಿ ಉಪ್ಪಿಟ್ಟು -ಇಲ್ಲಿದೆ ರೆಸಿಪಿ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಇದು ವಿಭಜಿಸುವಂತೆ ಮಾಡಿದೆ. ಅನೇಕ ಜನರು ಈ ಸಾಧನವನ್ನು ಟ್ರೈ ಮಾಡಲು ಉತ್ಸುಕರಾಗಿದ್ದರೆ, ಇನ್ನು ಅನೇಕ ದೋಸೆ ಪ್ರಿಯರು ಅದನ್ನು ಮತ್ತೊಂದು ಖಯಾಲು ಅಥವಾ ಗೀಳು ಎಂದು ತಳ್ಳಿಹಾಕಿದರು.

"ದೋಸಾ ತಯಾರಕ" ಅಮೆರಿಕನ್ ರಿಯಾಲಿಟಿ ಶೋ ಶಾರ್ಕ್ ಟ್ಯಾಂಕ್‌ (Shark Tank) ನಲ್ಲಿ ಇರಲು ಯೋಗ್ಯವಾಗಿದೆ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ.

ಇನ್ನೂ ಕೆಲವರು ಇದನ್ನು ಭಾರತದ ಹೊರಗೆ ಜನಪ್ರಿಯವಾಗಿರುವ ಕ್ರೀಪ್‌ ತಯಾರಕರಿಗೆ ಹೋಲಿಸಿದ್ದಾರೆ.

ಇನ್ನೊಂದೆಡೆ, ಟ್ವಿಟ್ಟರ್‌ ಬಳಕೆದಾರ ರಾಜೀವ್ ರಾವ್, "ದೋಸೆ ತಯಾರಿಕೆಯ ಸಂಪೂರ್ಣ ಮೋಜು ಅದನ್ನು 'ಯಾಂತ್ರೀಕರಣ'ದಿಂದ ಕಳೆದುಕೊಳ್ಳುತ್ತದೆ" ಎಂದು ಟ್ವೀಟ್‌ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ

ಕೆಲವು ಜನರು "ದೋಸಾ ತಯಾರಕ" ತೊಳೆಯಲು ಮತ್ತೊಂದು ಭಕ್ಷ್ಯವಾಗಿದೆ ಎಂದು ಮೂದಲಿಸಿದ್ದಾರೆ.

ಇದನ್ನೂ ಓದಿ: ಟೊಮ್ಯಾಟೋ ಇಲ್ಲದೆಯೂ ಮಾಡಬಹುದು ಸೂಪರ್ ರಸಂ, ಮಾಡುವ ವಿಧಾನ ಇಲ್ಲಿದೆ

iD ಕಂಪನಿಯ ಸಿಇಒ ಮುಸ್ತಫಾ ಪಿ. ಲಿಂಕ್ಟ್‌ಇನ್‌ನಲ್ಲಿ ಮೊದಲು ಇದನ್ನು ಶೇರ್‌ ಮಾಡಿಕೊಂಡಿದ್ದರು. ನಂತರ ಇತ್ತೀಚೆಗೆ ಕಾರ್ತಿಕ್‌ ಎನ್ನುವವರು ಇದನ್ನು ನವೆಂಬರ್ 19ರಂದು ಟ್ವಿಟ್ಟರ್‌ಗೆ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್‌ ಆಗಿದೆ. ಅಲ್ಲದೆ, ನೆಟ್ಟಿಗರು ಇದಕ್ಕೆ ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.  ಈ ವಿಡಿಯೋವನ್ನು ನೂರಾರು ಟ್ವೀಟಿಗರು ರೀಟ್ವೀಟ್‌ ಮಾಡಿಕೊಂಡಿದ್ದರೆ, ಇನ್ನು ನೂರಾರು ನೆಟ್ಟಿಗರು ಕ್ವೋಟ್‌ ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ಸುಮಾರು 800 ಮಂದಿ ಈ ದೋಸಾ ಮೇಕರ್ ವಿಡಿಯೋಗೆ ಲೈಕ್‌ ಒತ್ತಿದ್ದಾರೆ.
Published by:Sandhya M
First published: