Single Parenting Tips: ಸಿಂಗಲ್ ಪೇರೆಂಟ್​ ಆಗಿದ್ರೆ ಮಕ್ಕಳ ಕೆಲ ಪ್ರಶ್ನೆಗೆ ಉತ್ತರಿಸೋದು ಬಹಳ ಮುಖ್ಯವಂತೆ

ರೀಮಾ ಮತ್ತು ಅವರ ಮಗ

ರೀಮಾ ಮತ್ತು ಅವರ ಮಗ

How to Have Awkward Conversations With a Child: ಸಮಾಜದಲ್ಲಿ ಅನೇಕರು ಸಿಂಗಲ್ ಪೇರೆಂಟ್ ಆಗಿ ತಮ್ಮ ಮಕ್ಕಳೊಂದಿಗೆ ಜೀವನವನ್ನು ಸಾಗಿಸುತ್ತಿರುತ್ತಾರೆ. ಸಣ್ಣ ಮಕ್ಕಳಿಗೆ ಆ ವಯಸ್ಸಿನಲ್ಲಿ ನೂರಾರು ಪ್ರಶ್ನೆಗಳು ಮೂಡುವುದು ಸಹಜ. ಅಂತಹ ಸಮಯದಲ್ಲಿ ಪೋಷಕರು ತಬ್ಬಿಬ್ಬಾಗದೇ ಮಕ್ಕಳೊಂದಿಗೆ ಹೇಗೆ ಸ್ಪಂದಿಸಬೇಕು ಎಂಬುದು ಪ್ರಮುಖವಾದ ಘಟ್ಟವಾಗಿದೆ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • Share this:
  • published by :
top videos

    ರಿಲೇಶನ್‌ಶಿಪ್ (Relationship)  ಹಾಗೂ ಲೈಫ್ ಕೋಚ್  ( Life coach ) ಲೈಂಗಿಕ ಸ್ವಾಸ್ಥ್ಯ ಸಲಹೆಗಾರ್ತಿಯಾಗಿರುವ ರೀಮಾ ಅಹಮದ್  ( Reema Ahmad) ಅವರು  ಲೇಖಕಿ ಕೂಡ ಹೌದು. ಒಬ್ಬಂಟಿ ತಾಯಿಯಾಗಿ ಮಕ್ಕಳು ಕೇಳುವ ಕೆಲವೊಂದು ವಿಚಿತ್ರ ಪ್ರಶ್ನೆಗಳನ್ನು ಹೇಗೆ ನಿಭಾಯಿಸಬೇಕು? ತಂದೆ ತಾಯಿ ಇಬ್ಬರೂ ಆಗಿ ಒಬ್ಬ ತಾಯಿ ಮಕ್ಕಳನ್ನು ಹೇಗೆ ಪೋಷಿಸಬಹುದು (Parent)  ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದಾರೆ. ಯಾವುದೇ ಸಮಯಕ್ಕೂ ಪೋಷಕರು ತಬ್ಬಿಬ್ಬಾಗದೇ ಮಕ್ಕಳನ್ನು ಯಾವ ರೀತಿಯಾಗಿ ನಿಭಾಯಿಸಬೇಕು ಎಂಬುದರ ಬಗೆಗೆ ಇವರು ವಿವಿರಿಸಿದ್ದಾರೆ. ಈ ರೀತಿಯಾಗಿ ಸಾಕಷ್ಟು ಜನರು ಸಮಾಜದಲ್ಲಿ ನೋವುಗಳನ್ನು ಎದುರಿಸುತ್ತಿರಬಹುದು. ಅವರಿಗಾಗಿ ಇದೊಂದು ಸಲಹೆ ಎಂದು ತಿಳಿಸಿದ್ದಾರೆ.


    ಮಕ್ಕಳ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿ


    ಈ ಲೇಖನದಲ್ಲಿ ಲೇಖಕಿಯು ಸ್ವತಃ ತಮ್ಮ ಮಗ ಅನುಭವಿಸುತ್ತಿದ್ದ ಒಂಟಿತನವನ್ನು ವಿವರಿಸಿದ್ದಾರೆ. ಅಪ್ಪನ ಕೊರತೆ ಆತನನ್ನು ತೀವ್ರವಾಗಿ ಕಾಡುತ್ತಿತ್ತು. ಆತ ತನ್ನ ತಾಯಿಗೆ ಮರುಮದುವೆಯಾಗುವಂತೆ ಪೀಡಿಸುತ್ತಿದ್ದ. ಇಂತಹ ಪ್ರಶ್ನೆ ಆತನಲ್ಲಿ ಮೂಡಿದ್ದಾದರೂ ಹೇಗೆ ಎಂದು ಕೇಳಿದಾಗ ನಿಮ್ಮ ಆಪ್ತ ಸ್ನೇಹಿತ ನನಗೂ ಕೂಡ ತುಂಬಾ ಇಷ್ಟ. ನೀವು ಅವರನ್ನು ಮದುವೆ ಆದರೆ ನಾವು ಮೂವರೂ ಜೊತೆಯಾಗಿ ಸಂತೋಷದಿಂದ ಇರಬಹುದು ಎಂಬುದು ಮಗನು ಆಗಾಗ ಹೇಳುತ್ತಿದ್ದ. ಮಕ್ಕಳ ಮನಸ್ಸು ಹಸಿ ಗೋಡೆಯಂತಿರುತ್ತದೆ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ವಿಶ್ಲೇಷಿಸುವ ಪಕ್ವತೆ ಅವರಲ್ಲಿರುವುದಿಲ್ಲ ಎಂಬುದು ಇಲ್ಲಿ ರೀಮಾ ಅವರ ಅಭಿಪ್ರಾಯವಾಗಿದೆ. ಮಗುವಿನ ಪ್ರಶ್ನೆಯು ಆತನ ಮುಗ್ಧತನದ ನಂಬಿಕಯಾಗಿತ್ತು.


    ಇದನ್ನೂ ಓದಿ: ಮೆಡಿಸಿನ್ ತೆಗೆದುಕೊಳ್ಳುವಾಗ ನಿಮಗೆ ನೆನಪಿರಲಿ, ಇನ್ನು ಮುಂದೆ ಈ 26 ಔಷಧಿಗಳು ನಿಷೇಧ!

    ಮೂತ್ತೈದರ ಹರೆಯದಲ್ಲಿ ಒಬ್ಬ ಒಂಟಿ ತಾಯಿಯಾಗಿ ಮತ್ತೆ ಪ್ರೀತಿಯನ್ನು ಹುಡುಕುವ ಸಮಯದಲ್ಲಿ ನನಗಾದ ಅನುಭವದಿಂದ ನಾನು ಬಹಳಷ್ಟು ಕಲಿತಿರುವೆ. ನನ್ನ ಜೀವನದಲ್ಲಿ ಪ್ರೀತಿ ಮರಳಿ ಬಂದಿರಬಹುದು ಇಲ್ಲವೇ ನಷ್ಟಗೊಂಡಿರಬಹುದು ಆದರೆ ನನ್ನಂತೆಯೇ ನನ್ನ ಮಗನೂ ಆಶಾಕಿರಣವನ್ನು ಹೊಂದುತ್ತಾನೆ ನಂತರ ನಿರಾಶನಾಗುತ್ತಾನೆ. ತನಗೂ ಒಬ್ಬ ತಂದೆ ಬೇಕೆಂಬ ಆತನ ಬಯಕೆ ಹೊಸದಾದ ಉತ್ಸಾಹವನ್ನು ಅವನಲ್ಲಿ ತರುತ್ತದೆ ಆದರೆ ಆ ಬಯಕೆ ಕಮರಿ ಹೋದಾಗ ಅವನೂ ದುಃಖತಪ್ತನಾಗುತ್ತಾನೆ ಮತ್ತು ಆ ನೋವನ್ನೂ ನಾನು ಅನುಭವಿಸಿರುವೆ ಎಂಬುದು ರೀಮಾ ಅವರ ಮಾತಾಗಿದೆ.


    ರೀಮಾ ತಮ್ಮ ವೈವಾಹಿಕ ಜೀವನವನ್ನು ಕೊನೆಗೊಳಿಸಿದಾಗ ಆಕೆ ಕೂಡ ಹಲವಾರು ಸವಾಲುಗಳನ್ನು ಅಡ್ಡಿ ಆತಂಕಗಳನ್ನು ಎದುರಿಸುತ್ತಾರೆ. ಸಮಾಜ ಹೇಗೆ ಅವರನ್ನು ಸ್ವೀಕರಿಸುತ್ತದೆ ಎಂಬ ಚಿಂತೆ ಕೂಡ ಅವರನ್ನು ಕಾಡಿದೆ ಅಂತೆಯೇ ಮಗನನ್ನು ಬೆಳೆಸುವ ದೊಡ್ಡ ಜವಬ್ದಾರಿ ಕೂಡ ಅವರ ಮೇಲಿರುವುದರಿಂದ ಈ ಹೊಣೆಗಾರಿಕೆಯನ್ನು ನಾನು ಸಮರ್ಥವಾಗಿ ನಿಭಾಯಿಸಬಲ್ಲಯೇ ಎಂಬ ಸಂದೇಹ ಅವರನ್ನು ಕಾಡಿತ್ತು.


    ಮಕ್ಕಳೊಂದಿಗೆ ಸ್ನೇಹಮಯ ಬಾಂಧವ್ಯ ಏಕೆ ಅಗತ್ಯ?


    ಅದೆಷ್ಟೋ ಕುಟುಂಬಗಳು ಇಂದು ಬೇರೆ ಬೇರೆ ಕಾರಣಗಳಿಂದ ಪ್ರತ್ಯೇಕಗೊಂಡಿವೆ ಹಾಗೂ ಮಕ್ಕಳಿರುವ ಪೋಷಕರು ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮರುಮದುವೆಯಾಗುವ ನಿರ್ಧಾರಕ್ಕೆ ಸಿದ್ಧರಾಗಿರುವುದಿಲ್ಲ ಎಂಬುದು ರೀಮಾ ಅವರ ಮಾತಾಗಿದೆ. ಮಕ್ಕಳು ಇಂತಹ ವಿಷಯಗಳನ್ನು ನಿಮ್ಮ ಬಳಿ ಚರ್ಚಿಸಿದಾಗ ಅವರೊಂದಿಗೆ ಸರಳವಾಗಿ ಮಾತನಾಡಿ ಎಂದೇ ರೀಮಾ ನೀಡುವ ಸಲಹೆಯಾಗಿದೆ. ನಮ್ಮ ಮಕ್ಕಳು ನಿರ್ದಿಷ್ಟ ವಯಸ್ಸಿನವರೆಗೆ ನಮ್ಮ  ಸ್ನೇಹಿತರಾಗಿರದೇ ಇದ್ದರೂ ಆದಷ್ಟು ಸತ್ಯವನ್ನೇ ಅವರೊಂದಿಗೆ ಹಂಚಿಕೊಳ್ಳಿ ಎಂದು ರೀಮಾ ಹೇಳುತ್ತಾರೆ. ಜೀವನದಲ್ಲಿ ಪ್ರೀತಿಯಲ್ಲಿದ್ದಾಗ ಹಾಗೂ ಅದೇ ಪ್ರೀತಿ ನಷ್ಟಗೊಂಡಾಗ ಯಾವ ರೀತಿ ನಮ್ಮ ಜೀವನವನ್ನು ಸುಂದರಗೊಳಿಸಬಹುದು ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಿ ಎಂದು ರೀಮಾ ಸಲಹೆ ನೀಡುತ್ತಾರೆ. ಈ ಎಲ್ಲಾ ವಿಷಯಗಳನ್ನು ಮಾಡುವುದು ಅಷ್ಟು ಸುಲಭದ ಮಾತಲ್ಲವಾದರೂ ಸಂಬಂಧಗಳ ಕುರಿತು ಅನಿಸಿಕೆಗಳನ್ನು ಹಂಚಿಕೊಳ್ಳುವಾಗ ನಿಮ್ಮ ಮೇಲೆಯೇ  ಅವಲಂಬಿಸಿರುತ್ತದೆ.


    ಒಬ್ಬಂಟಿಯಾಗಿರುವ ಪೋಷಕರು ತಮ್ಮ ಸಂಬಂಧಗಳನ್ನು ಮುಂದಕ್ಕೆ ಕೊಂಡೊಯ್ಯುವಾಗ ಹಾಗೂ ಸವಾಲುಗಳನ್ನು ಪರಿಹರಿಸಿಕೊಳ್ಳುವ ವಿಧಾನವು ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ನಾವು ಮಾಡುವ ಪ್ರತಿಯೊಂದು ಕೆಲಸಗಳನ್ನು ಮಕ್ಕಳು ಗಮನಿಸುತ್ತಿರುವಾಗ ಸಮಸ್ಯೆಗಳನ್ನು ಪರಿಹರಿಸುವ ವಿಧಾನವನ್ನು ಅವರು ಕಲಿಯುವುದೂ ಉತ್ತಮ ಎಂದು ರೀಮಾ ಹೇಳುತ್ತಾರೆ. ಮಗು ನಿಮ್ಮನ್ನು ಹೆಚ್ಚಾಗಿ ಅವಲಂಬಿಸಿರುವುದರಿಂದ ಅವರ ಜೀವನದ ಪ್ರಮುಖ ಅಂಶಗಳು ನೀವು ನೀಡುವ ಸಲಹೆ ಹಾಗೂ ನೀವು ಅನುಸರಿಸುವ ವಿಧಾನಗಳ ಮೇಲೆ ಅವಲಂಬಿತವಾಗಿರುತ್ತವೆ ಎಂದು ರೀಮಾ ಹೇಳುತ್ತಾರೆ.


    ಸವಾಲುಗಳನ್ನು ಸರಳವಾಗಿ ಪರಿಗಣಿಸುವುದು ಹೇಗೆ?


    ಪೋಷಕರು ಏನು ಮಾಡಿದರೂ ಅದು ಅವರ ಗಮನಕ್ಕೆ ಬರುತ್ತದೆ ಹಾಗೂ ಈ ಕುರಿತು ಅವರು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಯಾವುದೇ ಸಂಬಂಧ ಕೊನೆಯಾದೊಡನೆ ನಿಮ್ಮ ಬಗ್ಗೆ ಆತ್ಮಾವಲೋಕನ ಮಾಡುವುದು ಮುಖ್ಯವಾಗಿರುತ್ತದೆ. ನಿಮ್ಮ ಮನಸ್ಸಿಗಾದ ನೋವು ಮಾಗಲು ಸಮಯ ನೀಡಿ ಎಂದು ರೀಮಾ ಸಲಹೆ ನೀಡುತ್ತಾರೆ. ಸಂಬಂಧದಲ್ಲಿ ಪ್ರೀತಿ ಇದ್ದಾಗ ಸಂಗಾತಿಯ ನಡುವೆ ಕೂಡ ಆ ಪ್ರೀತಿ ಅನುಬಂಧ ಗಟ್ಟಿಯಾಗಿರುತ್ತದೆ ಆದರೆ ಇದೇ ಪ್ರೀತಿ ಒಮ್ಮೆ ನಷ್ಟಗೊಂಡಾಗ ದಿಕ್ಕೇ ತೋಚದಂತಾಗುತ್ತದೆ ಹಾಗಾಗಿಯೇ ಪ್ರತಿಯೊಬ್ಬ ಪೋಷಕರೂ ಈ ಸಮಯದಲ್ಲಿ ಮನಸ್ಸಿನ ಕಹಿ ಮರೆಯಲು ಸಮಯ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.


    ಇದನ್ನೂ ಓದಿ: ಬೆಳಗಿನ ತಿಂಡಿ, ತೂಕ ಇಳಿಕೆಗೆ ಮಶ್ರೂಮ್ ಸಲಾಡ್ ರೆಸಿಪಿ ಮಾಡಿ ಸವಿಯಿರಿ

    ವಿವಾಹ ವಿಚ್ಛೇದನಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಬರುವ ಸವಾಲುಗಳನ್ನು ಭಯದಿಂದ ಎದುರಿಸಬೇಡಿ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ ನಿಮಗೆ ನೀವು ಸಮಯ ನೀಡಿ ಎಂದು   ಹೇಳುತ್ತಾರೆ.


    ಇನ್ನು ಸಂಬಂಧಗಳನ್ನು ಗೌರವಿಸುವ ಹಾಗೂ ಅದಕ್ಕೆ ಪ್ರಾಮುಖ್ಯತೆಗಳನ್ನು ನೀಡುವ ವಿಷಯದಲ್ಲಿ ಹಿರಿಯರ ಪಾತ್ರ ಕೂಡ ಮಹತ್ವದ್ದು ಎಂಬುದು ರೀಮಾರವರ ಅಭಿಪ್ರಾಯವಾಗಿದೆ. ನಾವು ನಮ್ಮ ಬಾಲ್ಯವನ್ನು ಹೇಗೆ ಕಳೆಯುತ್ತೇವೆ ನಮ್ಮೊಳಗಿನ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತೇವೆ ಎಂಬುದನ್ನು ಆಧರಿಸಿಯೇ ಭವಿಷ್ಯದ ನಮ್ಮ ವೈವಾಹಿಕ ಜೀವನ ನೆಲೆನಿಲ್ಲುತ್ತದೆ. ನಾವು ಹೆಚ್ಚಾಗಿ ನಮ್ಮ ಪೋಷಕರನ್ನು ನೋಡಿ ಜೀವನದಲ್ಲಿ ಹೆಚ್ಚಿನ ಅಂಶಗಳನ್ನು ಕಲಿತುಕೊಳ್ಳುವುದರಿಂದ ನಮ್ಮ ಜೀವನದಲ್ಲಿ ಅವರುಗಳ ಪ್ರಭಾವ ತುಂಬಾ ಗಾಢವಾಗಿರುತ್ತದೆ ಎಂಬುದು ಲೇಖಕಿಯ ಅಭಿಮತವಾಗಿದೆ.


    First published: