• Home
  • »
  • News
  • »
  • lifestyle
  • »
  •  Health Care: ಮಧ್ಯಾಹ್ನ ಸಣ್ಣದಾಗಿ ಒಂದು ನಿದ್ದೆ ಮಾಡೋದು ಒಳ್ಳೆಯದೇ, ಆದರೆ ಜಾಸ್ತಿ ಹೊತ್ತು ಮಲಗಬೇಡಿ

 Health Care: ಮಧ್ಯಾಹ್ನ ಸಣ್ಣದಾಗಿ ಒಂದು ನಿದ್ದೆ ಮಾಡೋದು ಒಳ್ಳೆಯದೇ, ಆದರೆ ಜಾಸ್ತಿ ಹೊತ್ತು ಮಲಗಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾತ್ರಿ ಸಮಯದಲ್ಲಿ ನಿದ್ದೆ ಮಾಡದೇ ಇರುವವರು ಬಹಳ ಕಮ್ಮಿ ಆದರೂ ಕೆಲವೊಬ್ಬರು ಮಧ್ಯಾಹ್ನ ನದ್ದೆ ಮಾಡುವಂತಹ ಅಭ್ಯಾಸಗಳನ್ನು ಹೊಂದಿರುತ್ತಾರೆ. ಆದರೆ ಕೆಲವೊಂದು ಬಾರಿ ಇದು ದೇಹದ ಆರೋಗ್ಯದಲ್ಲಿ ಏರುಪೇರು ಮಾಡ್ಬಹುದು. ಹಾಗಿದ್ರೆ ಹಗಲಿನ ನಿದ್ದೆ ಒಳ್ಳೆಯದಾ? ಈ ಬಗ್ಗೆ ತಜ್ಞರು ಏನಂತಾರೆ ಅನ್ನೋದನ್ನು ನೋಡೋಣ.

ಮುಂದೆ ಓದಿ ...
  • Share this:

    ಕೆಲವರಿಗೆ ರಾತ್ರಿ (Night) ಸರಿಯಾಗಿ ನಿದ್ದೆ (Sleep) ಬರೋದಿಲ್ಲ. ಇನ್ನೂ ಕೆಲವರಿಗೆ ಪೂರ್ಣವಾಗಿ ನಿದ್ದೆ ಮಾಡೋದಕ್ಕೆ ಸಮಯ ಸಾಲೋದಿಲ್ಲ. ಅಂಥವರು ಮಧ್ಯಾಹ್ನ ಒಂದು ಚಿಕ್ಕ ನಿದ್ದೆ ಮಾಡಿ ಹಿಂದಿನ ದಿನದ ನಿದ್ದೆಯನ್ನ ಸರಿದೂಗಿಸಿಕೊಳ್ತಾರೆ. ರಾತ್ರಿಯ ಕಡಿಮೆ ನಿದ್ದೆಯಿಂದ ಉಂಟಾಗುವ ಜಡತ್ವ, ನಿರಾಸಕ್ತಿಗಳೆಲ್ಲ ಮಧ್ಯಾಹ್ನ ಒಂದು ಚಿಕ್ಕ ನಿದ್ದೆ ಮಾಡಿದ್ರೆ ಮಾಯವಾಗಿ ಬಿಡುತ್ತದೆ. ಹಲವಾರು ಅಧ್ಯಯನಗಳ ಪ್ರಕಾರ ಮಧ್ಯಾಹ್ನದ ಚಿಕ್ಕ ನಿದ್ದೆ ಒಳ್ಳೆಯದೇ. ಆದ್ರೆ ನೀವು ಎಷ್ಟು ಹೊತ್ತು ನಿದ್ದೆ ಮಾಡುತ್ತಾರೆ ಎಂಬುದು ಬಹಳ ಮುಖ್ಯವಾಗುತ್ತದೆ. ಜನರಲ್​ ಆಫ್ ದಿ ಅಮೇರಿಕನ್  ಜೆರಿಯಾಟ್ರಿಕ್ಸ್ ಸೊಸೈಟಿಯಲ್ಲಿ (General Of The American Jeriatricks Society) ಪ್ರಕಟವಾದ ಅಧ್ಯಯನವೊಂದರ ಪ್ರಕಾರ, ವಯಸ್ಕರು 30 ರಿಂದ 90 ನಿಮಿಷಗಳ ಕಾಲ ನಿದ್ದೆ ಮಾಡಿದರೆ ಮೆದುಳಿನ (Brain) ಪ್ರಯೋಜನಗಳನ್ನು ಪಡೆಯಬಹುದಾದರೂ ಒಂದು ಗಂಟೆಗಿಂತ ಹೆಚ್ಚು ನಿದ್ದೆ ಮಾಡಿದರೆ ಅವರು ನೆನಪಿನ ಸಮಸ್ಯೆಗಳನ್ನು ಹೊಂದಬಹುದು ಎಂದು ಹೇಳಿದೆ.


    ರಾತ್ರಿ ಸಮಯದಲ್ಲಿ ನಿದ್ದೆ ಮಾಡದೇ ಇರುವವರು ಬಹಳ ಕಮ್ಮಿ ಆದರೂ ಕೆಲವೊಬ್ಬರು ಮಧ್ಯಾಹ್ನ ನದ್ದೆ ಮಾಡುವಂತಹ ಅಭ್ಯಾಸಗಳನ್ನು ಹೊಂದಿರುತ್ತಾರೆ. ಆದರೆ ಕೆಲವೊಂದು ಬಾರಿ ಇದು ದೇಹದ ಆರೋಗ್ಯದಲ್ಲಿ ಏರುಪೇರು ಮಾಡ್ಬಹುದು. ಹಾಗಿದ್ರೆ ಹಗಲಿನ ನಿದ್ದೆ ಒಳ್ಳೆಯದಾ? ಈ ಬಗ್ಗೆ ತಜ್ಞರು ಏನಂತಾರೆ ಅನ್ನೋದನ್ನು ನೋಡೋಣ.


    ಮಧ್ಯಾಹ್ನದ ಚಿಕ್ಕ ನಿದ್ದೆಯ ಪ್ರಯೋಜನಗಳು


    ಮಧ್ಯಾಹ್ನದ ಸಮಯದಲ್ಲಿ ಚಿಕ್ಕ ಬೆಕ್ಕಿನ ನಿದ್ದೆ ಮಾಡುವುದರಿಂದ ಅವರು ರಿಫ್ರೆಶ್‌ ಆಗುತ್ತಾರೆ. ಇದರಿಂದಾಗಿ ಅವರು ಮತ್ತೆ ಉಲ್ಲಾಸಭರಿತರಾಗಿ ದಿನ ಕಳೆಯಲು ಸಿದ್ಧರಾಗ್ತಾರೆ ಎಂದು ಆರ್ಟೆಮಿಸ್ ಆಸ್ಪತ್ರೆಯ ಪಾರ್ಶ್ವವಾಯು ಘಟಕದ ಮುಖ್ಯಸ್ಥ ಡಾ.ವಿಪುಲ್ ಗುಪ್ತಾ ಹೇಳಿದ್ದಾರೆ.


    ಇದನ್ನೂ ಓದಿ: ಚಳಿಗಾಲದಲ್ಲಿ ಹೆಚ್ಚಾಗುವ ಶ್ವಾಸಕೋಶ ತೊಂದರೆಗೆ ಬೆಲ್ಲವೇ ಮನೆಮದ್ದು-ಹೀಗೆ ಸೇವಿಸಿ


    ವೈದ್ಯಕೀಯ ಕಾರ್ಯಾಚರಣೆಯ ಮುಖ್ಯಸ್ಥರಾದ ಡಾ.ಗೌರಿ ಕುಲಕರ್ಣಿ ಅವರು, ಸಣ್ಣ ನಿದ್ರೆಯನ್ನು ತೆಗೆದುಕೊಳ್ಳುವುದು ಖಂಡಿತವಾಗಿಯೂ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳುತ್ತಾರೆ. “ಹಗಲಿನ ಸಣ್ಣ ನಿದ್ರೆಯು ವಿಶ್ರಾಂತಿ, ಆಯಾಸ ಕಡಿಮೆ ಮಾಡುವುದು, ಜಾಗರೂಕತೆ ಮತ್ತು ಸುಧಾರಿತ ಮನಸ್ಥಿತಿ ಸೇರಿದಂತೆ ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೆ, ಇದು ಹೆಚ್ಚು ಆಕ್ಟಿವ್‌ ಆಗಿಡಲು ಸಹಾಯ ಮಾಡುತ್ತದೆ ಎಂದು ಡಾ.ಗೌರಿ ಹೇಳುತ್ತಾರೆ.


    ಡಾ ಗುಪ್ತಾ ಅವರ ಪ್ರಕಾರ, ಮಧ್ಯಾಹ್ನದ ನಿದ್ದೆ ತೆಗೆದುಕೊಳ್ಳುವ ಕೆಲವು ಪ್ರಯೋಜನಗಳು ಇಲ್ಲಿವೆ.


    * ವಿಶ್ರಾಂತಿ ಮತ್ತು ಮನಸ್ಥಿತಿಯಲ್ಲಿ ಚೇತರಿಕೆ


    * ಆಯಾಸ, ಆತಂಕ, ಒತ್ತಡ ಕಡಿಮೆಯಾಗುವುದು


    * ನಿದ್ರೆಯ ನಂತರ ಹೆಚ್ಚುವ ಜಾಗರೂಕತೆ


    * ನೆನಪಿನ ಶಕ್ತಿ ಹೆಚ್ಚಳ


    ದೀರ್ಘ ಅವಧಿಯ ಮಧ್ಯಾಹ್ನದ ನಿದ್ದೆ ಒಳ್ಳೆಯದಲ್ಲ!


    ಆದ್ರೆ ಹಗಲಿನಲ್ಲಿ ದೀರ್ಘಾವಧಿಯವರೆಗೆ ನಿದ್ದೆ ಮಾಡಿದಾಗ ಅದು ರಾತ್ರಿಯ ನಿದ್ರೆಗೆ ಅಡ್ಡಿಯಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಮಧ್ಯಾಹ್ನದ ನಿದ್ದೆ ಸುಮಾರು 20-30 ನಿಮಿಷಗಗಳದ್ದಾಗಿ ಚಿಕ್ಕ ನಿದ್ದೆಯಾಗಿರಬೇಕು ಎನ್ನುತ್ತಾರೆ ಡಾ.ಗುಪ್ತಾ.


    ಉತ್ತಮ ನಿದ್ರೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೂ ವಿಶ್ರಾಂತಿ ಪಡೆಯಲೇಬೇಕು ಎಂದಿದ್ದರೆ ಕಡಿಮೆ ನಿದ್ದೆ ಮಾಡುವುದು ಒಳ್ಳೆಯದು. ಅದರಲ್ಲೂ ಮಧ್ಯಾಹ್ನದ ಆರಂಭದಲ್ಲಿ ನಿದ್ದೆ ಮಾಡುವುದು ಒಳ್ಳೆಯದು. ಮಧ್ಯಾಹ್ನ 3 ಗಂಟೆಯ ನಂತರ ನಿದ್ದೆ ಮಾಡುವುದರಿಂದ ರಾತ್ರಿ ನಿದ್ದೆಗೆ ತೊಂದರೆಯಾಗಬಹುದು.


    ಈ ಮಧ್ಯೆ ಮಧ್ಯಾಹ್ನದ ಅವಧಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಿದ್ದೆ ಮಾಡುವುದು ಟೈಪ್ II ಮಧುಮೇಹ, ಹೃದಯರಕ್ತನಾಳದ ಕಾಯಿಲೆಗಳು, ಮೆಟಾಬಾಲಿಕ್ ಸಿಂಡ್ರೋಮ್ ಮುಂತಾದವುಗಳಿಗೆ ಸಂಬಂಧಿಸಿವೆ ಎಂಬುದಾಗಿ ಅನೇಕ ಅಧ್ಯಯನಗಳು ಮತ್ತು ಸಂಶೋಧನೆಗಳು ಹೇಳುತ್ತವೆ ಎಂಬುದನ್ನು ಡಾ. ಗುಪ್ತಾ ಹೈಲೈಟ್ ಮಾಡುತ್ತಾರೆ.


    ಇನ್ನು, Health.harvard.edu ಪ್ರಕಾರ, ಹಗಲಿನ ಅರೆನಿದ್ರಾವಸ್ಥೆಯು ನೀವು ಕಡಿಮೆ-ಗುಣಮಟ್ಟದ ನಿದ್ರೆಯನ್ನು ಪಡೆಯುತ್ತಿರುವಿರಿ ಎಂಬುದರ ಸಂಕೇತವಾಗಿರಬಹುದು. ಇದು ನಿದ್ರೆಯ ಅಸ್ವಸ್ಥತೆಯನ್ನು ಸೂಚಿಸುತ್ತದೆ. ರಾತ್ರಿಯಲ್ಲಿ ಕಳೆದುಹೋದ ನಿದ್ರೆಯನ್ನು ಸರಿದೂಗಿಸಲು ನೀವು ಹಗಲಿನಲ್ಲಿ ಮಲಗುತ್ತೀರಿ. ಆದರೆ ನೀವು ಹಗಲಿನಲ್ಲಿ ಮಲಗಿದ್ದರಿಂದ ರಾತ್ರಿಯಲ್ಲಿ ನಿದ್ರಿಸಲು ನಿಮಗೆ ಕಷ್ಟವಾಗುತ್ತದೆ ಎಂದು ವೆಬ್‌ಸೈಟ್ ಹೇಳಿದೆ.


    ಹಗಲಿನ ನಿದ್ರೆಯ ಈ ಪ್ರತಿಕೂಲ ಪರಿಣಾಮಗಳನ್ನು ತಪ್ಪಿಸಲು ನೀವು ಅನುಸರಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.


    • ಹಗಲಿನ ನಿದ್ದೆ ಮಾಡುವಾಗ ಆಲಾರಾಂ ಇಟ್ಟುಕೊಂಡು ಮಲಗಿ. ಸಮಯಕ್ಕೆ ಸರಿಯಾಗಿ ಎದ್ದುಬಿಡಿ.

    • ಮಧ್ಯಾಹ್ನ ನಿದ್ದೆ ಮಾಡಲು ಪ್ರಯತ್ನಿಸಿ. ಅದು ನಿಮ್ಮ ರಾತ್ರಿಯ ನಿದ್ದೆಯನ್ನು ಹಾಳು ಮಾಡುವುದಿಲ್ಲ.

    • ಮಧ್ಯಾಹ್ನದ ನಿದ್ದೆಯು ನಿಮ್ಮ ದೇಹ ಹಾಗೂ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಆದ್ದರಿಂದ ನೀವು ಎಲ್ಲಾ ಚಿಂತೆಗಳನ್ನು ಬದಿಗಿರಿಸಿ ವಿಶ್ರಾಂತಿ ಪಡೆಯಬಹುದು.

    • ನಿಮ್ಮ ರಾತ್ರಿ ನಿದ್ರೆಗೆ ಅಡ್ಡಿಯಾಗುವುದರಿಂದ ಆಲ್ಕೋಹಾಲ್ ಮತ್ತು ಕೆಫೀನ್ ಸೇವನೆಯನ್ನು ತಪ್ಪಿಸಿ.


    ಒಟ್ಟಾರೆ ಮಧ್ಯಾಹ್ನದ ಚಿಕ್ಕ ನಿದ್ದೆ ಒಳ್ಳೆಯದು. ಆದರೆ ಮಧ್ಯಾಹ್ನದ ದೀರ್ಘ ಅವಧಿಯ ನಿದ್ದೆ ಜಡತ್ವಕ್ಕೆ ಕಾರಣವಾಗಬಹುದು ಎನ್ನಲಾಗುತ್ತದೆ. ಆದ್ದರಿಂದ ಸಮಯ ಸಿಕ್ಕರೆ ಮಧ್ಯಾಹ್ನ ಒಂದು ಚಿಕ್ಕ ನಿದ್ದೆ ಮಾಡಿ ರಿಲ್ಯಾಕ್ಸ್‌ ಆಗಿ.


    Story Link : https://indianexpress.com/article/lifestyle/health/afternoon-naps-health-benefits-adverse-effects-right-duration-timing-sleep-101-8304060/

    Published by:Prajwal B
    First published: