Children Health: ಪೋಷಕರೇ ಎಚ್ಚರ! ನಿಮ್ಮ ಮಕ್ಕಳು ಹೊರಗೆ ಹೋಗಿ ಆಟವಾಡ್ತಿಲ್ಲ ಅಂದ್ರೆ ಈ ಎಲ್ಲಾ ಆರೋಗ್ಯ ಸಮಸ್ಯೆ ಕಾಡೋದು ಗ್ಯಾರಂಟಿ!

ಇಂದಿನ ಆಧುನಿಕ ಮಕ್ಕಳು ಪೋನ್‌, ಲ್ಯಾಪ್‌ಟಾಪ್‌ ಮುಂತಾದ ಗ್ಯಾಜೆಟ್‌ಗಳನ್ನು ಬಳಸುವುದರಲ್ಲಿ ತುಂಬಾ ಜಾಣರಿದ್ದಾರೆ. ಆದರೆ, ಮಕ್ಕಳು ಆಟ ಆಡಬೇಕಾದ ವಯಸ್ಸಿನಲ್ಲಿ ಈ ರೀತಿ ಗ್ಯಾಜೆಟ್‌ಗಳ ಮುಂದೆ ಕುಳಿತರೆ ಅವರು ಮುಂದೆ ಅನಾರೋಗ್ಯದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ಆಧುನಿಕ ಮಕ್ಕಳು (Children) ಪೋನ್‌, ಲ್ಯಾಪ್‌ಟಾಪ್‌ ಮುಂತಾದ ಗ್ಯಾಜೆಟ್‌ಗಳನ್ನು ಬಳಸುವುದರಲ್ಲಿ ತುಂಬಾ ಜಾಣರಿದ್ದಾರೆ. ಆದರೆ, ಮಕ್ಕಳು ಆಟ ಆಡಬೇಕಾದ ವಯಸ್ಸಿನಲ್ಲಿ ಈ ರೀತಿ ಗ್ಯಾಜೆಟ್‌ಗಳ (Gadget) ಮುಂದೆ ಕುಳಿತರೆ ಅವರು ಮುಂದೆ ಅನಾರೋಗ್ಯದ (Illness) ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹುಟ್ಟಿದ ಮಗುವಿಗೂ ಸಹ ಗ್ಯಾಜೆಟ್‌ ಬಗ್ಗೆ ತಿಳುವಳಿಕೆ ಇರುವಂತಹ ದಿನಗಳು ಬರಬಹುದೇನೋ! ಅಷ್ಟು ಮಕ್ಕಳ ಬುದ್ದಿಮತ್ತೆಯಲ್ಲಿ ಈ ಗ್ಯಾಜೆಟ್‌ಗಳು ತಮ್ಮ ಪ್ರಭಾವವನ್ನು ಬೀರಿವೆ. ಇನ್ನು ಈ ಕೊರೋನಾ ಬಂದ ಹೋದ ನಂತರ ಮಕ್ಕಳು ಇನ್ನು ಹೆಚ್ಚಾಗಿ ಈ ಗ್ಯಾಜೆಟ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಅತಿಯಾದ ಗ್ಯಾಜೆಟ್‌ ಬಳಕೆಯು ಮಕ್ಕಳ ಮಾನಸಿಕ (Mental) ಮತ್ತು ದೈಹಿಕ ಸಮಸ್ಯೆಗಳನ್ನು (Physical Problem) ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗುತ್ತಿರುವುದು ಏಕೆ?
ಈ ಸ್ಮಾರ್ಟ್‌ಫೋನ್‌ಗಳು, ಸಾಮಾಜಿಕ ಜಾಲತಾಣಗಳು ಮತ್ತು ಆನ್‌ಲೈನ್ ಗೇಮಿಂಗ್‌ನ ಬಂದ ನಂತರ ಮಕ್ಳಳು ಮುಂಚೆಗಿಂತಲೂ ಈ ಗ್ಯಾಜೆಟ್‌ಗಳಿಗೆ ಅಂಟಿಕೊಂಡಿದ್ದಾರೆ. ಕೊರೋನಾ, ಲಾಕ್‌ಡೌನ್‌ ಮುಂತಾದ ಕ್ರಮಗಳು ಮಕ್ಕಳನ್ನು ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಿವೆ. ಗ್ಯಾಜೆಟ್‌ಗಳ ಮುಂದೆ ತಮ್ಮ ಎಲ್ಲ ಸಮಯವನ್ನು ಕಳೆಯಲು ಅವಕಾಶ ಮಾಡಿಕೊಟ್ಟಿವೆ.

ಹಳೆ ಕಾಲದ ಮಕ್ಕಳು ಬೀದಿಗಳಲ್ಲಿ, ಶಾಲೆಯಲ್ಲಿ ಅಥವಾ ಉದ್ಯಾನವನಗಳಲ್ಲಿ ತಮ್ಮ ಸ್ನೇಹಿತರೊಂದಿಗೆ ಹಲವು ಗಂಟೆಗಳ ಕಾಲ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು. ಅವರು ಆಟವನ್ನು ಆಡಿ ಸಂತೋಷಗೊಳ್ಳುವುದು ಅಷ್ಟೆ ಅಲ್ಲದೇ, ಅವರಿಗೆ ಉತ್ತಮ ದೈಹಿಕ ವ್ಯಾಯಾಮವು ಆಗುತ್ತಿತ್ತೆನ್ನಬಹುದು. ಈ ದಿನಗಳಲ್ಲಿ ಮಕ್ಕಳು ಅಂತಹ ವ್ಯಾಯಾಮವನ್ನು ಮಾಡಬೇಕಾಗುತ್ತದೆ, ಇಲ್ಲವೆಂದರೆ ಚಿಕ್ಕ ವಯಸ್ಸಿನಲ್ಲಿಯೇ ಆರೋಗ್ಯ ಸಮಸ್ಯೆಗಳಿಗೆ ಅವರು ಸುಲಭವಾಗಿ ಬಲಿಯಾಗುತ್ತಾರೆ.

ಇದನ್ನೂ ಓದಿ: Night Itching: ರಾತ್ರಿ ವೇಳೆ ನಿಮ್ಮ ಕೈಕಾಲುಗಳಲ್ಲಿ ತೀವ್ರ ತುರಿಕೆ ಆಗ್ತಿದ್ಯಾ? ಹಾಗಿದ್ರೆ ಈ ಕಾಯಿಲೆ ಇರ್ಬಹುದು

ಮಕ್ಕಳಲ್ಲಿ ವ್ಯಾಯಾಮದ ಕೊರತೆ ಎದ್ದು ಕಾಣುತ್ತಿದೆ ಅಥವಾ ಹೆಚ್ಚು ಕೊಬ್ಬಿನ ಜಂಕ್ ಫುಡ್ ತಿನ್ನುವುದರಿಂದ ನಿಮ್ಮ ಮಗು ಅಧಿಕ ತೂಕ ಹೊಂದುವ ಸಾಧ್ಯತೆ ಇದೆ. ಅವರ ಬೊಜ್ಜು ಮುಂದೆ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿನ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರ ಮೂಲಕ ಅವರನ್ನು ಆರೋಗ್ಯವಂತ ಮಗು ಆಗಿ ಮಾಡಬಹುದು.

ಮಕ್ಕಳ ಅನಾರೋಗ್ಯಕ್ಕೆ ಪ್ರಮುಖ ಕಾರಣಗಳು:
ಜಡ ಜೀವನಶೈಲಿ
ಸಂಶೋಧನೆಯ ಪ್ರಕಾರ, ನಿಷ್ಕ್ರೀಯತೆ, ಹೆಚ್ಚಿನ ಸಕ್ಕರೆ ಮತ್ತು ಉಪ್ಪಿನ ಅಂಶವಿರುವ ಆಹಾರವನ್ನು ತಿನ್ನುವುದು ಮತ್ತು ಮಕ್ಕಳು ಮತ್ತು ಹದಿಹರೆಯದವರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ತರುತ್ತದೆ. ಅಂತಾರಾಷ್ಟ್ರೀಯ ಸಂಶೋಧನಾ ತಂಡಗಳು ಕೈಗೊಂಡಿರುವ ಸಂಶೋಧನೆ ಆಧಾರದ ಮೇಲೆ ಯುರೋಪಿನಾದ್ಯಂತ ಅಧಿಕ ರಕ್ತದೊತ್ತಡ ಹೊಂದಿರುವ 6 ರಿಂದ 16 ವರ್ಷ ವಯಸ್ಸಿನ ಮಕ್ಕಳ ಕುರಿತಾಗೇ ಇವೆ. ಇದಕ್ಕೆ ಪರಿಹಾರವಾಗಿ ಟಿವಿ ಮತ್ತು ಸಾಮಾಜಿಕ ಜಾಲತಾಣಗಳನ್ನು ಕಡಿಮೆ ಬಳಸಲು ಮಕ್ಕಳಿಗೆ ತಿಳಿಸಬೇಕು. ಆರೋಗ್ಯಕರ ಆಟಗಳನ್ನು ಆಡುವುದನ್ನು ಕಲಿಸಬೇಕು.

ಇದನ್ನೂ ಓದಿ:  Weight Loss Diet: ವ್ಯಾಯಾಮ ಮಾಡಿ ತೂಕ ಇಳಿಸೋದು ಕಷ್ಟನಾ? ಹಾಗಿದ್ರೆ ಈ ಡಯಟ್ ಫಾಲೋ ಮಾಡಿ!

ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯತೆಯಿಂದಾಗಿ ಬಾಲ್ಯದಲ್ಲಿ ಅಧಿಕ ರಕ್ತದೊತ್ತಡವು ಇಂದು ಹೆಚ್ಚು ಸಾಮಾನ್ಯವಾಗಿದೆ. ವಯಸ್ಕರಲ್ಲಿ ಸೊಂಟದ ಸುತ್ತಲೂ ಇರುವ ಬೊಜ್ಜು ಎಂದು ಕರೆಯಲಾಗುವ ಹೊಟ್ಟೆಯ ಸುತ್ತಲಿನ ಕೊಬ್ಬು ಆರೋಗ್ಯಕ್ಕೆ ಹೆಚ್ಚು ಹಾನಿಕಾರಕವಾಗಿದೆ. ನಿಮ್ಮ ಮಗು ಜಡ ಜೀವನಶೈಲಿಯನ್ನು ನಡೆಸುತ್ತಿದ್ದರೆ, ಅವರು ತಲೆನೋವು, ಮೂಗು ತೂರಿಕೆ, ದೃಷ್ಟಿಹೀನತೆ, ಉಸಿರಾಟದ ತೊಂದರೆ, ಎದೆ ನೋವು ಮುಂತಾದ ರೋಗ ಲಕ್ಷಣಗಳನ್ನು ಹೊಂದಿರುತ್ತಾರೆ. ಇವುಗಳಿಗೆ ಸೂಕ್ತ ಚಿಕಿತ್ಸೆ ನೀಡಿ.

ಈ ಸಮಸ್ಯೆಗಳಿಗೆ ಪರಿಹಾರವೇನು?
ಅವರ ಆಹಾರ ಪದ್ದತಿಯನ್ನು ಬದಲಿಸಿ: ಅವರು ಹೆಚ್ಚು ಜಂಕ್‌ ಪುಡ್‌ ತಿನ್ನುತ್ತಿದ್ದರೆ ಮೊದಲು ಆ ಅಭ್ಯಾಸ ಬಿಡಿಸಿ. ಉತ್ತಮವಾದ ತರಕಾರಿ ಮತ್ತು ಹಣ್ಣುಗಳ ಸೇವನೆ ಮಾಡುವಂತೆ ಪ್ರೇರೆಪಿಸಿ. ಅವರ ದೇಹಕ್ಕೆ ಉತ್ತಮ ವ್ಯಾಯಾಮ ದೊರಕುವ ಹಾಗೆ ದೈಹಿಕ ವ್ಯಾಯಾಮದ ಆಟಗಳನ್ನು ಆಡಿಸಿ. ಅನಾರೋಗ್ಯ ಸಮಸ್ಯೆಗಳಿಂದ ನಿಮ್ಮ ಮಕ್ಕಳು ಬಳಲುತ್ತಿದ್ದರೆ, ವೈದ್ಯರನ್ನು ಒಮ್ಮೆ ಸಂಪರ್ಕಿಸುವುದು ಉತ್ತಮ.
Published by:Ashwini Prabhu
First published: