• Home
  • »
  • News
  • »
  • lifestyle
  • »
  • Mental Health: ನಿಮಗೆ ಕೊರೋನಾ ಬಂದಿತ್ತಾ? ಹಾಗಾದರೆ ಈಗ ನಿಮ್ಮ ಮೆದುಳಿನ ಆರೋಗ್ಯ ಕೆಡಬಹುದು ಜಾಗ್ರತೆ

Mental Health: ನಿಮಗೆ ಕೊರೋನಾ ಬಂದಿತ್ತಾ? ಹಾಗಾದರೆ ಈಗ ನಿಮ್ಮ ಮೆದುಳಿನ ಆರೋಗ್ಯ ಕೆಡಬಹುದು ಜಾಗ್ರತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹದಿಹರೆಯದವರಲ್ಲಿ ಮೆದುಳಿನ ವಯಸ್ಸಾಗುವಿಕೆಯು ಅರಿವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅಧ್ಯಯನಕಾರರ ಹೇಳಿಕೆಯಾಗಿದೆ. ಮೆದುಳಿನ ರಚನೆಯಲ್ಲಿ ಕೆಲವೊಂದು ಒತ್ತಡಗಳಿಗೆ ಈ ಲಕ್ಷಣಗಳು ಕಾರಣವಾಗಿದೆ ಎಂಬುದನ್ನು ಸಂಶೋಧನಾಕಾರರು ಕಂಡುಹಿಡಿದಿದ್ದಾರೆ.

  • Trending Desk
  • 2-MIN READ
  • Last Updated :
  • Karnataka, India
  • Share this:

ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಹದಿಹರೆಯದವರ ಮೆದುಳುಗಳು ವೇಗವಾಗಿ ವಯಸ್ಸಾಗುವ (Age) ಪ್ರಕ್ರಿಯೆಗೆ ಒಳಗಾಗುತ್ತವೆ, ಇದರಿಂದ ಮಾನಸಿಕ (Mind) ಆರೋಗ್ಯದ ಪರಿಣಾಮಗಳು ಕೆಟ್ಟದಾಗಿರಬಹುದು ಎಂದು ಹೊಸ ಅಧ್ಯಯನವೊಂದು (Study) ತಿಳಿಸಿದೆ. ಈ ಪರಿಣಾಮವಾಗಿ ಕಾರ್ಟೆಕ್ಸ್ ತೆಳುವಾಗುವುದು, ನರಮಂಡಲ ಕೇಂದ್ರವಾದ ಹಿಪೊಕ್ಯಾಂಪಸ್ ಮತ್ತು ಅಮಿಗ್ಡಾಲಾ ಬೆಳವಣಿಗೆ ವಯಸ್ಸಾಗುವಿಕೆಯ ಸೂಚನೆಯಾಗಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ. ಪೂರ್ವ ಸಾಂಕ್ರಾಮಿಕ ಸಮಯಕ್ಕೆ (Time) ಹೋಲಿಸಿದರೆ ಸಾಂಕ್ರಾಮಿಕದ ನಂತರ ಕಂಡುಬಂದ ಈ ಲಕ್ಷಣಗಳು ಹದಿಹರೆಯದವರ ಮೆದುಳಿಗೆ ವೇಗವಾಗಿ ವಯಸ್ಸಾಗಿದೆ ಎಂಬುದನ್ನು ಸೂಚಿಸುತ್ತದೆ.


ಮೆದುಳಿನ ವೇಗವಾದ ವಯಸ್ಸಾಗುವಿಕೆ
ಈ ಅಧ್ಯಯನಕ್ಕಾಗಿ ಸಂಶೋಧಕರು ಅಮೆರಿಕಾದಲ್ಲಿರುವ ಸಾಂಕ್ರಾಮಿಕಕ್ಕೂ ಮುನ್ನ ತೆಗೆದ 81 ಹದಿಹರೆಯದವರ ಮೆದುಳಿನ ಎಮ್‌ಆರ್‌ಐ ಸ್ಕ್ಯಾನ್‌ಗಳನ್ನು ಹಾಗೂ ಸಾಂಕ್ರಾಮಿಕ ಸಮಯದಲ್ಲಿ ಲಾಕ್‌ಡೌನ್ ತೆರವುಗೊಳಿಸಿದ ಮೇಲೆ ತೆಗೆದ 82 ಹದಿಹರೆಯದವರ ಮೆದುಳಿನ ಎಮ್‌ಆರ್‌ಐ ಸ್ಕ್ಯಾನ್‌ಗಳನ್ನು ಹೋಲಿಸಿದ್ದಾರೆ. ಸಾಂಕ್ರಾಮಿಕದ ನಂತರ ಯುವಜನರಲ್ಲಿ ತೀವ್ರವಾದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅಧ್ಯಯನವು ಕಂಡುಹಿಡಿದಿದೆ. ಮೆದುಳಿನ ವೇಗವಾದ ವಯಸ್ಸಾಗುವಿಕೆಯಿಂದ ಮಾನಸಿಕ ಆರೋಗ್ಯದ ಮೇಲೆ ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧ್ಯಯನ ತಿಳಿಸಿದೆ.


ಅಧ್ಯಯನದಲ್ಲಿ ಭಾಗವಹಿಸಿದ 20 ಹರೆಯದ ಎಮ್‌ಆರ್‌ಐ ಸ್ಯಾನಿಂಗ್‌ಗಳನ್ನು ಮರುಪರಿಶೀಲನೆ ನಡೆಸುವುದಾಗಿ ಅಧ್ಯಯನಕಾರರು ತಿಳಿಸಿದ್ದಾರೆ. ಮೆದುಳಿನ ಈ ಬದಲಾವಣೆಗಳು ಹೀಗೆಯೇ ಇರಲಿದೆಯೇ ಇಲ್ಲವೇ ನಿಧಾನಕ್ಕೆ ಕಡಿಮೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.


ವಯಸ್ಸಾದಂತೆ ಮೆದುಳಿನ ರಚನೆಗಳಲ್ಲಿ ಬದಲಾವಣೆ
ಹದಿಹರೆಯದವರಲ್ಲಿ ಮೆದುಳಿನ ವಯಸ್ಸಾಗುವಿಕೆಯು ಅರಿವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅಧ್ಯಯನಕಾರರ ಹೇಳಿಕೆಯಾಗಿದೆ. ಮೆದುಳಿನ ರಚನೆಯಲ್ಲಿ ಕೆಲವೊಂದು ಒತ್ತಡಗಳಿಗೆ ಈ ಲಕ್ಷಣಗಳು ಕಾರಣವಾಗಿದೆ ಎಂಬುದನ್ನು ಸಂಶೋಧನಾಕಾರರು ಕಂಡುಹಿಡಿದಿದ್ದಾರೆ.


ಸಾಂಕ್ರಾಮಿಕವು ಯುವಕರಲ್ಲಿ ಮಾನಸಿಕ ಆರೋಗ್ಯದ ಮೇಲೆ  ಪರಿಣಾಮ ಬೀರಿದೆ ಎಂದು ಜಾಗತಿಕ ಸಂಶೋಧನೆಯಿಂದ ನಮಗೆ ಈಗಾಗಲೇ ತಿಳಿದಿದೆ, ಆದರೆ ಅದು ಅವರ ಮಿದುಳಿಗೆ ದೈಹಿಕವಾಗಿ ಏನು ಮಾಡುತ್ತಿದೆ ಎಂದು ನಮಗೆ ತಿಳಿದಿರಲಿಲ್ಲ ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಲೇಖಕ ಇಯಾನ್ ಗಾಟ್ಲಿಬ್ ತಿಳಿಸಿದ್ದಾರೆ. ನಮಗೆ ವಯಸ್ಸಾದಂತೆ ಮೆದುಳಿನ ರಚನೆಗಳಲ್ಲಿ ಬದಲಾವಣೆಗಳುಂಟಾಗುತ್ತದೆ ಎಂಬುದು ಗಾಟ್ಲಿಬ್ ಹೇಳಿಕೆಯಾಗಿದೆ.


ಮೆದುಳಿನ ವ್ಯವಸ್ಥೆಗಳ ಮೇಲೆ ಕೋವಿಡ್ ಪರಿಣಾಮ


ಮೆದುಳಿನ ರಚನೆಯಲ್ಲಿ ಉಂಟಾಗುತ್ತಿರುವ ಈ ಬದಲಾವಣೆಗಳು ಮಾನಸಿಕ ಆರೋಗ್ಯದಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದೆಯೇ ಎಂಬುದು ಅಸ್ಪಷ್ಟವಾಗಿದೆ ಎಂದು ಗಾಟ್ಲಿಬ್ ತಿಳಿಸಿದ್ದಾರೆ. ಪ್ರೌಢಾವಸ್ಥೆಯಲ್ಲಿ ಮತ್ತು ಹದಿಹರೆಯದ ವರ್ಷಗಳಲ್ಲಿ, ಮಕ್ಕಳ ದೇಹವು ಹಿಪೊಕ್ಯಾಂಪಸ್ ಮತ್ತು ಅಮಿಗ್ಡಾಲಾ ಎರಡರ ಬೆಳವಣಿಗೆಗೆ ಕಾರಣವಾಗುತ್ತದೆ. ಇವುಗಳು ಕೆಲವು ನೆನಪುಗಳನ್ನು ನಿಯಂತ್ರಿಸುತ್ತವೆ ಹಾಗೂ ಭಾವನೆಗಳನ್ನು ಮಾರ್ಪಡಿಸುತ್ತವೆ.


ಇದನ್ನೂ ಓದಿ: Health Care: ಇಷ್ಟ ಬಂದಾಗ ಮೊಸರು ತಿನ್ಬೇಡಿ, ಅದಕ್ಕೂ ಒಂದು ಸಮಯವಿದೆ


ಅದೇ ಸಮಯದಲ್ಲಿ ಕಾರ್ಟೆಕ್ಸ್‌ನಲ್ಲಿನ ಅಂಗಾಂಶಗಳು ತೆಳುವಾಗುತ್ತದೆ. ಆದರೆ ಕೋವಿಡ್ 19 ಲಾಕ್‌ಡೌನ್‌ಗಳು ಹಾಗೂ ಲಾಕ್‌ಡೌನ್ ತೆರವುಗೊಳಿಸಿದ ನಂತರ ಹದಿಹರೆಯದವರಲ್ಲಿ ಈ ಬೆಳವಣಿಗೆ ವೇಗವಾಗಿ ನಡೆಯುತ್ತಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.


ಮೆದುಳಿನ ವಯಸ್ಸಾಗುವಿಕೆ ಪ್ರಕ್ರಿಯೆ ಚುರುಕಾಗಿದೆ


ಇಲ್ಲಿಯವರೆಗಿನ ಸಂಶೋಧನೆಗಳಲ್ಲಿ ಮೆದುಳಿಗೆ ವಯಸ್ಸಾಗುವುದು ದೀರ್ಘಕಾಲದ ತೊಂದರೆಗಳಿಂದ ಬಳಲುತ್ತಿರುವ ಮಕ್ಕಳಲ್ಲಿ ಹಿಂಸೆ, ನಿರ್ಲಕ್ಷ್ಯ, ಕೌಟುಂಬಿಕ ಕಲಹಗಳಿಂದ ಬಳಲುತ್ತಿರುವ ಮಕ್ಕಳಲ್ಲಿ ಮಾತ್ರವೇ ಕಂಡುಬಂದಿತ್ತು ಆದರೆ ಕೋವಿಡ್ ನಂತರ ಹದಿಹರೆಯದವರಲ್ಲಿ ಕೂಡ ಮೆದುಳಿನ ವಯಸ್ಸಾಗುವಿಕೆ ಪ್ರಕ್ರಿಯೆ ಚುರುಕಾಗಿ ನಡೆಯುತ್ತಿರುವುದು ಆಘಾತಕಾರಿಯಾಗಿದೆ ಎಂದು ಗಾಟ್ಲಿಬ್ ಅಭಿಪ್ರಾಯಪಟ್ಟಿದ್ದಾರೆ.


ಇನ್ನಷ್ಟು ಸಂಶೋಧನೆ


ಕೋವಿಡ್ ಸಾಂಕ್ರಾಮಿಕವು ಹದಿಹರೆಯದವರ ಮೆದುಳಿನ ಬೆಳವಣಿಗೆಯ ಮೇಲೆ ಎಷ್ಟು ಸಮಯದವರೆಗೆ ಪರಿಣಾಮ ಬೀರಲಿದೆ ಎಂಬುದನ್ನು ಟ್ರ್ಯಾಕ್ ಮಾಡುವ ನಿಟ್ಟಿನಲ್ಲಿ ಗಾಟ್ಲಿಬ್ ತಂಡ ಸನ್ನದ್ಧವಾಗಿದೆ.



ಹದಿಹರೆಯದವರಲ್ಲಿ ಮೆದುಳಿನ ವೇಗವಾದ ವಯಸ್ಸಾಗುವಿಕೆಗೆ ಕಾರಣಗಳೇನು ಎಂಬುದನ್ನು ಅರಿತುಕೊಳ್ಳಲು ಈ ಟ್ರ್ಯಾಕಿಂಗ್ ನೆರವಾಗಲಿದೆ ಎಂಬುದು ಗಾಟ್ಲಿಬ್ ಹೇಳಿಕೆಯಾಗಿದೆ. ಮಾನಸಿಕ ಆರೋಗ್ಯವನ್ನು ಪತ್ತೆಹಚ್ಚುವ ಗುರಿಯನ್ನು ತಂಡವು ಹೊಂದಿದ್ದು ಸೋಂಕಿಗೆ ಒಳಗಾದವರ ಮೆದುಳಿನ ರಚನೆ ಹಾಗೂ ಒಳಗಾಗದವರ ಮೆದುಳಿನ ರಚನೆಯೊಂದಿಗೆ ಹೋಲಿಸಿ ನೋಡಲಾಗುತ್ತದೆ ಎಂದು ಗಾಟ್ಲಿಬ್ ತಿಳಿಸಿದ್ದಾರೆ.

First published: