ಒಣ ಮೀನಿನ (Dry Fish) ವಾಸನೆ ಕಂಡ್ರೆ ಮೂಗು ಮುಚ್ಚಿಕೊಳ್ಳುತ್ತೀರಾ? ನಿಮ್ಗೆ ಗೊತ್ತಾ ಇದರಲ್ಲಿದೆ ನಾನಾ ರೋಗ ಒಣ ಮೀನಿನ ಹೆಸರು ಕೇಳಿದರೆ ಸಾಕು ಅನೇಕ ಮಂದಿಯ ಬಾಯಲ್ಲಿ ನೀರೂರುತ್ತದೆ. ಅನೇಕ ಜನರು ಒಣಗಿದ ಮೀನುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಕೆಲವರಿಗೆ ಒಣಮೀನಿನ ಕರಿ (Dry Fish Curry) ಮತ್ತು ವಿವಿಧ ರೀತಿಯ ರೆಸಿಪಿ ತುಂಬಾ ಇಷ್ಟವಾಗುತ್ತದೆ. ಒಣಗಿದ ಮೀನು ವಿಶಿಷ್ಟವಾದ ವಾಸನೆ ಮತ್ತು ರುಚಿಯನ್ನು ಹೊಂದಿರುತ್ತದೆ. ಆದರೆ ಕೆಲ ಮಂದಿಗೆ ಒಣಗಿದ ಮೀನಿನ ವಾಸನೆ ಇಷ್ಟವಾಗುವುದಿಲ್ಲ. ಈ ಮೀನನ್ನು ಬಿಸಿಲಿನಲ್ಲಿ (Sunny) ಒಣಗಿಸಲಾಗುತ್ತದೆ. ನಂತರ ಮೀನು ಒಣಗಿದ ಮೇಲೆ ಸಂಗ್ರಹಿಸಡಲಾಗುತ್ತಿದೆ. ಈ ರೀತಿ ಮಾಡುವುದರಿಂದ ಮೀನು ಹಾಳಾಗುವುದಿಲ್ಲ. ಈ ಮೀನನ್ನು ಡ್ರೈ ಫಿಶ್ ಎಂದು ಕೂಡ ಕರೆಯಲಾಗುತ್ತದೆ.
ಮೀನನ್ನು ಒಣಗಿಸುವುದರಿಂದ ಸೂಕ್ಷ್ಮಜೀವಿಗಳು ಹತ್ತಿರವು ಸುಳಿವುದಿಲ್ಲ. ಅಲ್ಲದೇ ಈ ರೀತಿಯ ವಿಧಾನದಿಂದ ಮೀನನ್ನು ದೀರ್ಘಕಾಲ ಸಂರಕ್ಷಿಸಬಹುದು. ಜೊತೆಗೆ ಈ ಡ್ರೈ ಫಿಶ್ನಲ್ಲಿ ಸಾಕಷ್ಟು ಪೌಷ್ಟಿಕಾಂಶದ (Nutrition) ಮೌಲ್ಯವೂ ಇದೆ. ಆದರೆ ಒಣ ಮೀನನ್ನು ತಿನ್ನುವ ಅದೆಷ್ಟೂ ಮಂದಿಗೆ ಅದರಲ್ಲಿ ಅಡಗಿರುವ ಪೌಷ್ಟಿಕಾಂಶದ ಬಗ್ಗೆ ತಿಳಿದಿರುವುದಿಲ್ಲ. ಆದರೆ ಇಂದು ನಾವು ಈ ಬಗ್ಗೆ ಮಾಹಿತಿ ನೀಡುತ್ತೇವೆ.
ಇದನ್ನೂ ಓದಿ: Food Tips: ಈ ವಸ್ತುಗಳಿಂದ ಕೈಗಳನ್ನು ತೊಳೆದ್ರೆ ಮೀನಿನ ವಾಸನೆ ಮಾಯವಾಗುತ್ತೆ!
ಮೇಲಿನ ಎಲ್ಲಾ ಪದಾರ್ಥಗಳ ಹೊರತಾಗಿ, ಒಣಗಿದ ಮೀನಿನಲ್ಲಿ ಕೊಲೆಸ್ಟ್ರಾಲ್ ಮತ್ತು ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಕಡಿಮೆ. ಆದ್ದರಿಂದ ಇದು ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಲು ಹೆಚ್ಚು ಸಹಾಯ ಮಾಡುತ್ತದೆ. ತೂಕವನ್ನು ನಿಯಂತ್ರಿಸಲು ಡಯಟ್ ಮಾಡುವವರು, ಪ್ರೋಟೀನ್‌ನ ಉತ್ತಮ ಮೂಲವಾಗಿ ಅವರು ತಮ್ಮ ಆಹಾರದಲ್ಲಿ ಒಣಗಿದ ಮೀನುಗಳನ್ನು ಸೇವಿಸಬಹುದು. ಏಕೆಂದರೆ ಇದು ಕ್ಯಾಲೋರಿಗಳಲ್ಲಿ ತುಂಬಾ ಕಡಿಮೆಯಾಗಿದೆ. 100 ಗ್ರಾಂ ಒಣಗಿದ ಮೀನು ಸುಮಾರು 80 ಪ್ರತಿಶತ ಪ್ರೋಟೀನ್ ಮತ್ತು ಸುಮಾರು 300 ಕ್ಯಾಲೋರಿಗಳನ್ನು ಹೊಂದಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ