ಬೇಸಿಗೆಯಲ್ಲಿ (Summer) ಬಿಸಿಲು, ತಾಪಮಾನ, ಬೆವರು ಕಿರಿಕಿರಿಯಿಂದ ರಕ್ಷಿಸಿಕೊಳ್ಳಲು ನಾವು ತಿನ್ನುವ ಆಹಾರದಿಂದ ಹಿಡಿದು ತೊಡುವ ಬಟ್ಟೆಗಳವರೆಗೆ (Clothes) ಎಲ್ಲವೂ ಪಾತ್ರವಹಿಸುತ್ತವೆ. ಬೇಸಿಗೆಯಲ್ಲಿ ಸೂರ್ಯನ (Sun) ವಿಪರೀತ ಬಿಸಿಲಿನಿಂದ ರಕ್ಷಣೆ ಮಾಡಿಕೊಳ್ಳಲು ಉತ್ತಮ ಬಟ್ಟೆ ಹಾಕಿಕೊಳ್ಳಬೇಕು. ಮತ್ತು ಆ ಬಟ್ಟೆಗಳು ಬೇಸಿಗೆಯಲ್ಲಿ ಆರಾಮದಾಯಕದ ಜೊತೆಗೆ ಟ್ರೆಂಡಿಯಾಗೂ ಕಾಣಬೇಕು ಎಂದು ಬಯಸುತ್ತಾರೆ ಫ್ಯಾಶನ್ (Fashion) ಪ್ರಿಯರು. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಟನ್ ಬಟ್ಟೆಗಳನ್ನು ತೊಡುವುದು ಸಾಮಾನ್ಯ. ಮತ್ತು ಆದಷ್ಟು ಕಪ್ಪು ಬಣ್ಣದ ಬಟ್ಟೆಗಳಿಂದ ದೂರವಿರುತ್ತಾರೆ. ಹಾಗಾದರೆ ಬೇಸಿಗೆಯಲ್ಲಿ ಯಾವ ಬಣ್ಣದ ಬಟ್ಟೆ ಹಾಯಾಗಿರುತ್ತದೆ ಮತ್ತು ಸುಂದರವಾಗಿರುತ್ತದೆ ತಿಳಿಯೋಣ.
ಬೇಸಿಗೆಯಲ್ಲಿ ನಿಮ್ಮ ವಾರ್ಡ್ರೋಬ್ ಅಲ್ಲಿ ಪಾಸ್ಟೆಲ್ ಶೇಡ್ ಬಣ್ಣಗಳ ಬಟ್ಟೆ ಹೊಂದಿರುವುದು ಸೂಕ್ತ. ಈ ತಿಳಿ ಮತ್ತು ಹಗುರವಾದ ಬಣ್ಣಗಳು ನೋಡಲು ಲಕ್ಷುರಿಯಾಗಿ ಕಾಣುತ್ತವೆ ಮತ್ತು ನಿಮಗೆ ಆಹ್ಲಾದಕರ ಅನುಭವ ನೀಡುತ್ತವೆ. ಬಾಲಿವುಡ್ ಬೆಡಗಿಯರು ಸಹ ಈ ಬಣ್ಣದ ಬಟ್ಟೆಗಳಿಗೆ ಮಾರುಹೋಗಿದ್ದಾರೆ. ಪಾಸ್ಟೆಲ್ ಶೇಡ್ ಬಣ್ಣಗಳು ಮೃದುವಾದ, ಹಿತವಾದ ಅನುಭವ ನೀಡುವ ಜೊತೆಗೆ ಬೇಸಿಗೆಯ ಶಾಖವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ.
ಪಾಸ್ಟೆಲ್ ಛಾಯೆಗಳ ಬಟ್ಟೆಗಳ ಮತ್ತೊಂದು ವಿಶೇಷತೆಯೆಂದರೆ ಇದು ಒಬ್ಬರ ಸೃಜನಶೀಲತೆಯನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ. ಕಾಂಟ್ರಾಸ್ಟಿಂಗ್ ಪ್ರಿಂಟ್ಗಳಿಂದ ಹಿಡಿದು ಅತ್ಯುತ್ತಮ ಡಿಸೈನ್ಗಳವರೆಗೆ ನಿಮಗೆ ಹೊಂದುವಂತ ಬಣ್ಣದ ಬಟ್ಟೆಯಲ್ಲಿ ನೀವು ಸಖತ್ ಲುಕ್ ಪಡೆದುಕೊಳ್ಳಬಹುದು.
ಬಾಲಿವುಡ್ ನಟಿಯರು ಈ ಬೇಸಿಗೆಯಲ್ಲಿ ಯಾವೆಲ್ಲಾ ಪಾಸ್ಟೆಲ್ ಕಲರ್ನೊಂದಿಗೆ ಸ್ಟೈಲ್ ಮಾಡಿದ್ದಾರೆ, ಅವರ ಲುಕ್ ಹೇಗಿದೆ ಅನ್ನೋದರ ಒಂದು ಝಲಕ್ ಇಲ್ಲಿದೆ.
ಕಂಗನಾ ರಣಾವತ್
ಬಾಲಿವುಡ್ ಬೊಲ್ಡ್ ಬೆಡಗಿ ಕಂಗನಾ ರಣಾವತ್ ಹಿತವಾದ ಮತ್ತು ತಿಳಿಯಾದ ಮಂಜು-ನೀಲಿ ಪಾಸ್ಟೆಲ್ ಬಣ್ಣದ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಂಗನಾ ಲಾಕ್ ಅಪ್ ಶೋಗಾಗಿ ಈ ಪ್ರಕಾಶಮಾನವಾದ ಶ್ಯಾಮಲ್ ಮತ್ತು ಭೂಮಿಕಾ ಸ್ಯಾಟಿನ್ ಸೀರೆ ಜೊತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಣ್ಣ ಮತ್ತು ಬಟ್ಟೆ ಎರಡು ಕಂಗನಾಗೆ ಹೊಂದಿಕೆಯಾಗಿದ್ದು, ಸೀರೆಗೆ ಅವರು ಕಸೂತಿಯಿಂದ ಮಾಡಿದ ಬ್ಲೌಸ್ ಅನ್ನು ಮ್ಯಾಚ್ ಮಾಡಿದ್ದಾರೆ. ಮಂಜು-ನೀಲಿಯ ಪಾಸ್ಟೆಲ್ ಬಣ್ಣದ ಪ್ಲೇನ್ ಸ್ಯಾಟಿನ್ ಸೀರೆ ಕಂಗನಾಳ ಬೇಸಿಗೆಯ ಆಯ್ಕೆಯಾಗಿದೆ.
ಜಾನ್ವಿ ಕಪೂರ್
ತನ್ನ ಸ್ಟೈಲಿಶ್ ಮತ್ತು ಟ್ರೆಂಡಿ ಲುಕ್ನಿಂದ ಸುದ್ದಿ ಮಾಡುತ್ತಿರುವ ಜಾನ್ವಿ ಕಪೂರ್ ಬೇಸಿಗೆಯಲ್ಲಿ ಸ್ಪೋರ್ಟಿ/ಜಿಮ್ ಲುಕ್ಗೆ ಲ್ಯಾವೆಂಡರ್ ಪಾಸ್ಟೆಲ್ ಶೇಡ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಣ್ಣದ ಬಟ್ಟೆಯಲ್ಲಿ ಜಾನ್ವಿ ಮತ್ತಷ್ಟು ಚೆಂದವಾಗಿ ಕಾಣಿಸಿಕೊಂಡಿದ್ದಾರೆ. ಜಿಮ್ನಲ್ಲಿ ಲ್ಯಾವೆಂಡರ್ ಪಾಸ್ಟೆಲ್ ಉಡುಪಿನಲ್ಲಿರುವ ಜಾನ್ವಿ ಎಲ್ಲರ ಕಣ್ಣು ಕುಕ್ಕಿಸುವಂತೆ ಕಾಣಿಸಿಕೊಂಡಿದ್ದಾರೆ. ಪ್ಯಾಸ್ಟಲ್ಗಳನ್ನು ಸಾಮಾನ್ಯವಾಗಿ ಅದೇ ಬಣ್ಣದ ಜೊತೆ ಧರಿಸಲು ಆದ್ಯತೆ ನೀಡಲಾಗಿದ್ದರೂ, ನಿಮ್ಮ ನೋಟವನ್ನು ಹೆಚ್ಚಿಸಲು ನೀವು ವ್ಯತಿರಿಕ್ತ ಬಣ್ಣಗಳನ್ನು ಸಹ ಸೇರಿಸಬಹುದು.
ಇದನ್ನೂ ಓದಿ: ಚರ್ಮದ ಆರೈಕೆಗೆ ಹೇಗೆ ಮಾಡಬೇಕು? ನಿರ್ದೇಶಕಿ ದಿವ್ಯಾ ಖೋಸ್ಲಾ ಬ್ಯೂಟಿ ಟಿಪ್ಸ್ ಹೀಗಿದೆ
ನೋರಾ ಫತೇಹಿ
ಆರ್ಗನ್ಜಾ ಫ್ರಿಲ್ ಜೊತೆ ಈ ಪೀಚ್ ಒನ್ ಶೋಲ್ಡರ್ ಮಿಡಿ ನಟಿ ನೋರಾ ಫತೇಹಿ ಅವರಿಗೆ ರೆಟ್ರೋ ಟಚ್ ಕೊಟ್ಟಿದೆ. ಪಾಸ್ಟೆಲ್ ಪೀಚ್ ಬೇಸಿಗೆಯ ಅತ್ಯದ್ಭುತ ಬಣ್ಣವಾಗಿದ್ದು, ಇದರ ಜೊತೆ ನೀವು ಹಸಿರು ಬಣ್ಣವನ್ನು ಸೇರಿಸಿ ಸ್ಟೈಲ್ ಮಾಡಬಹುದು.
ಇಲಿಯಾನಾ ಡಿಕ್ರೂಜ್
ಇಲಿಯಾನಾ ಡಿಕ್ರೂಜ್ ಧರಿಸಿದ ನಿರ್ಮೂಹ ಎಂಬ ಡಿಸೈನರ್ ವಿನ್ಯಾಸಗೊಳಿಸಿದ ನೀಲಕ ಮುದ್ರಿತ ಕೇಪ್ ಶೈಲಿಯ ಮ್ಯಾಕ್ಸಿ ಡ್ರೆಸ್ ಸಖತ್ ಕ್ಯಾಶುಯಲ್ ಆಗಿದೆ. ನೀಲಿ, ಹಸಿರು ಬಣ್ಣದ ಮ್ಯಾಕ್ಸಿ ಡ್ರೆಸ್ ಕೈ ಕಸೂತಿ ಬೆಲ್ಟ್ ಅನ್ನು ಸಹ ಒಳಗೊಂಡಿದೆ. ಬೇಸಿಗೆಯಲ್ಲಿ ಹಗುರವಾದ ಮ್ಯಾಕ್ಸಿ ಡ್ರೆಸ್ಗಳು ಸಾಕಷ್ಟು ಉತ್ತಮ ಅನುಭವ ನೀಡುತ್ತದೆ.
ಇದನ್ನೂ ಓದಿ: ಈ ಅಕ್ಷಯ ತೃತೀಯಾಗೆ ಕಡಿಮೆ ಬೆಲೆಯಲ್ಲಿ ಬ್ಯೂಟಿಫುಲ್ ಚಿನ್ನಾಭರಣಗಳು
ಸೋನಾಕ್ಷಿ ಸಿನ್ಹಾ
ಸಿಟ್ರಸ್ ಹಣ್ಣನ್ನು ಹೋಲುವ ತಿಳಿಯಾದ ಹಳದಿ ಛಾಯೆಯು ಪಾಸ್ಟೆಲ್ ಛಾಯೆಗಳ ಮೆರಗನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹಾಟ್ ಬೆಡಗಿ ಸೋನಾಕ್ಷಿ ಸಿನ್ಹಾ ಮಾನೋಕ್ರೊಮ್ ಸಿಗ್ನೇಚರ್ ಮಾಕ್ಸಿ ಬ್ಲೇಜರ್ನಲ್ಲಿ ಅತ್ಯಾಕರ್ಷಕವಾಗಿ ಕಾಣುತ್ತಾರೆ ಮತ್ತು ಸೊಗಸಾದ ಕಾರ್ಸೆಟ್ನೊಂದಿಗೆ ಜೋಡಿಸಲಾದ ಪ್ಯಾಂಟ್ಗಳು ಮತ್ತಷ್ಟು ಹೊಂದಿಕೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ