Age is just a number ಅಂತಾರೆ ಇವರು, 60ರಲ್ಲೂ ಬೈಕ್‌ನಲ್ಲಿ World Tour ಹೋಗ್ತಿದ್ದಾರೆ!

'60ಕ್ಕೆ ಅರಳು ಮರಳು' ಅಂತಾರೆ. ಆದ್ರೆ ಇವರು 60ರ ವಯಸ್ಸಿನಲ್ಲೇ 16ರ ಹುಮ್ಮಸ್ಸಿಗೆ ಮರಳಿದ್ದಾರೆ. ಬೈಕ್‌ ಬಗ್ಗೆ ಕ್ರೇಜ್ ಹೊಂದಿರುವ ಈ ಜೋಸ್, ಇಡೀ ಜಗತ್ತನ್ನೇ ಬೈಕ್‌ನಲ್ಲಿ ಸುತ್ತುವ 'ಜೋಶ್'ನಲ್ಲಿದ್ದಾರೆ.

ಬೈಕ್‌ನಲ್ಲಿ ವಿಶ್ವ ಪರ್ಯಟನೆಗೆ ಹೊರಟ ಜೋಸ್

ಬೈಕ್‌ನಲ್ಲಿ ವಿಶ್ವ ಪರ್ಯಟನೆಗೆ ಹೊರಟ ಜೋಸ್

 • Share this:
  ವಯಸ್ಸು (Age) ದೇಹಕ್ಕೆ (Body) ಆಗುವುದೇ ಹೊರತು, ಮನಸ್ಸಿಗಲ್ಲ ಎಂಬ ಮಾತು ಅಕ್ಷರಶಃ ಸತ್ಯ. ಇದಕ್ಕೆ ನಿದರ್ಶನವಾಗಿ 60 ವರ್ಷ ಪ್ರಾಯದ (60 Years Old) ವ್ಯಕ್ತಿಯೊಬ್ಬರು ಬೈಕಿನಲ್ಲಿ (Bike) ವಿಶ್ವ ಸುತ್ತುವ ಯೋಜನೆ (World Tour Plan) ಹಾಕಿಕೊಂಡಿದ್ದಾರೆ. ಬೇರೆ ಸ್ಥಳ, ಊರು, ದೇಶ ಹೀಗೆ ಹೊಸ ಜಾಗಗಳಿಗೆ ಹೋಗಲು ಯಾರಿಗೆ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ವಯಸ್ಸಾದವರು ಸಹ ಪ್ರವಾಸವನ್ನು ಇಷ್ಟ ಪಡುತ್ತಾರೆ. ಅದರಲ್ಲೂ ವಿದೇಶಗಳನ್ನು ನೋಡುವ ಬಯಕೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಈಗೆಲ್ಲಾ ಪ್ರವಾಸ ಮಾಡಲು, ಅಡ್ವೆಂಚರ್ಸ್ ಮಾಡಲು ಜನ ಉತ್ಸುಕುರಾಗಿರುತ್ತಾರೆ. ಬೈಕಿನಲ್ಲಿ ಊರು, ದೇಶ ಸುತ್ತೋದು ಮತ್ತೊಂದು ಗೀಳಾಗಿದೆ. ಹೀಗೆ ಬೈಕ್ ರೈಡ್ ಪ್ರವಾಸದ ಗೀಳು ಹೊಂದಿರುವ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಈಗ ಬೈಕಿನಲ್ಲಿ 192 ದೇಶಗಳನ್ನು ನೋಡುವ ಪ್ಲ್ಯಾನ್ ಮಾಡಿದ್ದಾರೆ.

  ವಯಸ್ಸು 60 ಆದರೂ ಈ ಜೋಸ್‌ಗೆ ಜಗತ್ತು ಸುತ್ತುವ ‘ಜೋಶ್’!

  ಅರವತ್ತು ವರ್ಷದ ಇ.ಪಿ. ಜೋಸ್‌ ಎಂಬುವರು ತಮ್ಮ ಬೈಕ್‌ನಲ್ಲಿ ವಿಶ್ವ ಸುತ್ತಲು ಸಜ್ಜಾಗುತ್ತಿದ್ದಾರೆ. 192 ದೇಶಗಳನ್ನು ನೋಡಲು ಬಯಸಿರುವ ಜೋಸ್ 6 - 7 ವರ್ಷಗಳ ಕಾಲ ಪ್ರವಾಸದ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

  ಅಲ್ಲದೆ ಪ್ರವಾಸಕ್ಕೆಂದೇ ಜೋಸ್ KTM 390 ಬೈಕ್ ಒಂದನ್ನು ಇತ್ತೀಚಿಗೆ ಖರೀದಿಸಿದ್ದು, ವಿಶ್ವ ಸುತ್ತಲು ತಮ್ಮ ಕೆಟಿಎಂ ಬೈಕ್‌ನಲ್ಲೇ ಹೋಗಲಿದ್ದಾರೆ. ಈ ಬೈಕ್‌ನಲ್ಲಿ ಸುಮಾರು ಮೂರು ಲಕ್ಷ ಕಿಲೋಮೀಟರ್‌ ಪ್ರವಾಸ ಮಾಡುವ ಬಗ್ಗೆ ಯೋಜಿಸುತ್ತಿದ್ದಾರೆ. ಈ ಮೊದಲು ಕೂಡ ಭಾರತದಲ್ಲಿ ಹಲವು ದೀರ್ಘ ಪ್ರವಾಸಗಳನ್ನು ಜೋಸ್ ಹಮ್ಮಿಕೊಂಡಿದ್ದರು.

  ಬೈಕ್‌ನಲ್ಲೇ ಭಾರತ ಸುತ್ತಿರುವ ಸಾಹಸಿ

  ಜೋಸ್ ತ್ರಿಶೂರ್‌ನಲ್ಲಿ ಇಂಜಿನಿಯರಿಂಗ್ ಕೋರ್ಸ್ ಮುಗಿದ ನಂತರ ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಜೋಸ್ ಈಗಾಗ್ಲೆ ಇಂತಹ ಹಲವು ಬೈಕ್ ಪ್ರವಾಸವನ್ನು ಕೈಗೊಂಡಿದ್ದು, 2017ರಲ್ಲಿ ಹ್ಯಾರ್ಲಿ ಡೇವಿಡ್‌ಸನ್ ಬೈಕಿನಲ್ಲಿ ಅಖಿಲ ಭಾರತ ಪ್ರವಾಸ ಹೋಗಿದ್ದು, 43 ದಿನಗಳಲ್ಲಿ 16,500 ಕಿ.ಮೀ ಸವಾರಿ ಮಾಡಿ ಭಾರತದ ಹಲವು ರಾಜ್ಯಗಳಿಗೆ ಪ್ರವಾಸ ಹೋಗಿ ಬಂದಿದ್ದಾರೆ.

  ಇದನ್ನೂ ಓದಿ: Tripಗೆ ನಾಯಿ ಜೊತೆ 'ಮನೆ'ಯನ್ನೇ ಹೊತ್ತುಕೊಂಡು ಹೋದ ದಂಪತಿ! ಅಚ್ಚರಿಯಾದರೂ ಇದು ನಿಜ

  10 ಸಾವಿರ ಕಿಲೋ ಮೀಟರ್ ಬೈಕ್ ಪ್ರಯಾಣ

  ಜೋಸ್ ಅವರು ಇತ್ತೀಚೆಗೆ ಲಡಾಖ್, ಜೈಸಲ್ಮೇರ್‌, ಪೋರಬಂದರ್ ಸೇರಿ ಹಲವು ಕಡೆ ಸುಮಾರು 10,000 ಕಿಮೀ ದೂರದ ಬೈಕ್ ಪ್ರಯಾಣವನ್ನು 30 ದಿನಗಳವರೆಗೆ ಹಮ್ಮಿಕೊಂಡಿದ್ದರು. ಹೀಗಾಗಿ ಬೈಕ್ ಮೇಲೆ ಪ್ರವಾಸ ಹೋಗುವುದು ಜೋಸ್‌ಗೆ ಹೊಸತೇನಲ್ಲ. ಇವುಗಳ ಪಟ್ಟಿಗೆ ಈಗ ವಿಶ್ವ ನೋಡುವ ಮನದಾಸೆ ಸೇರಿಕೊಳ್ಳುತ್ತಿದೆ.

  ‘10 ವರ್ಷ ನನಗಾಗೇ ನಾನು ಬದುಕುತ್ತೇನೆ’

  ಜೋಸ್ 20 ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದು, ಅವರ ಕುಟುಂಬ ಮಾತ್ರ ಇನ್ನೂ USನಲ್ಲಿ ನೆಲೆಸಿದೆ. ಕುಟುಂಬದ ಜೊತೆ ನಾನು ಎಲ್ಲಾ ಸಮಯದಲ್ಲೂ ಇದ್ದೆ. ಆದರೆ ಅವರಿಗೆ ಮೊದಲೇ ಹೇಳಿದ್ದೆ. ಮುಂದಿನ 10 ವರ್ಷ ನನಗಾಗಿ ನಾನು ಕಳೆಯುತ್ತೇನೆ ಎಂದು ಮತ್ತು ತನ್ನ ಕುಟುಂಬ ನನಗೆ ಪ್ರೋತ್ಸಾಹ ನೀಡಿದೆ ಎನ್ನುತ್ತಾರೆ ಜೋಸ್.

  2019ರಲ್ಲಿ ನಾನು ಈ ವಿಶ್ವ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಆ ಸಂದರ್ಭದಲ್ಲಿ ನನಗೆ ಸರ್ವಿಕಲ್ ಸ್ಪಾಂಡಿಲೋಸಿಸ್‌ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಪ್ರವಾಸವನ್ನು ಮುಂದೂಡಬೇಕಾಯಿತು ಎಂದರು. ಜೋಸ್ ಅವರು 2016ರಲ್ಲಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಸಹ ಒಳಗಾಗಿದ್ದರು.

  ಇದನ್ನೂ ಓದಿ: Mobileನಲ್ಲಿ ಮಾತಾಡ್ರೋ ಮಾತಾಡ್ರಿ! ಇನ್ನು ಡ್ರೈವಿಂಗ್ ಮಾಡುವಾಗಲೂ ಮಾತಾಡಿ, ಯಾಕೆ ಗೊತ್ತಾ?

  ಶೀಘ್ರವೇ ವಿಶ್ವ ಸುತ್ತಲು ಸಜ್ಜು

  ಜೋಸ್ ಫೆಬ್ರವರಿ ಅಥವಾ ಮಾರ್ಚ್ ಮೊದಲ ವಾರ ತಮ್ಮ ಪ್ರವಾಸವನ್ನು ಹೊರಡಲು ಯೋಜಿಸುತ್ತಿದ್ದಾರೆ. ಬೈಕ್ ಮೂಲಕ ನೇಪಾಳ, ಭೂತಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಚೀನಾ, ರಷ್ಯಾ ಮತ್ತು ಯುರೋಪ್‌ಗೆ ಹೋಗಲಿದ್ದಾರೆ.

  ಮೊದಲ 9 ತಿಂಗಳು, ನಾನು ಯುರೋಪಿನಲ್ಲಿ ಇರುತ್ತೇನೆ. ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ನಾನು ದಕ್ಷಿಣ ಅಮೆರಿಕಕ್ಕೆ ಪ್ರವಾಸ ಮಾಡುತ್ತೇನೆ. ಅಲ್ಲಿ ಸುಮಾರು 6 ತಿಂಗಳು ಕಳೆಯುತ್ತೇನೆ ಎಂದು ಜೋಸ್ ಹೇಳಿದರು.
  Published by:Annappa Achari
  First published: