Cancer: ಮಾಂಸ ತಿನ್ನೋದು ಕಡಿಮೆ ಮಾಡಿದ್ರೆ ಕ್ಯಾನ್ಸರ್ ರೋಗ ಬರಲ್ಲ ಅಂತೆ! ಈ ಬಗ್ಗೆ ಅಧ್ಯಯನ ಏನು ಹೇಳಿದೆ ನೋಡಿ

ಈಗ ಹೊಸ ಅಧ್ಯಯನವೊಂದು ಏನು ಹೇಳುತ್ತಿದೆ ಅಂತ ನೀವು ತಿಳಿದುಕೊಂಡರೆ ನಿಮಗೆ ಈ ಕ್ಯಾನ್ಸರ್ ರೋಗ ಯಾವುದರಿಂದ ಜಾಸ್ತಿ ಬರುತ್ತದೆ ಎನ್ನುವುದರ ಬಗ್ಗೆ ನಿಮಗೆ ಮಾಹಿತಿ ಸಿಕ್ಕಂತಾಗುತ್ತದೆ. ಹೌದು.. ಹೊಸ ಅಧ್ಯಯನವು ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಕಡಿಮೆ ಮಾಂಸವನ್ನು ಸೇವಿಸಿ ಅಂತ ಹೇಳುತ್ತಿದೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕ್ಯಾನ್ಸರ್ ರೋಗದ (Cancer) ಹೆಸರು ಕೇಳಿದರೆ ಬಹುತೇಕರಿಗೆ ಭಯವಾಗುತ್ತದೆ, ಏಕೆಂದರೆ ಕ್ಯಾನ್ಸರ್ ಒಂದು ಭಯಾನಕ ರೋಗವಾಗಿದ್ದು (disease), ನಿಧಾನವಾಗಿ ಮಾನವನ ದೇಹದಲ್ಲಿರುವಂತಹ ಬಲವನ್ನು ಕುಗ್ಗಿಸುತ್ತಾ ಬರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಈಗ ಹೊಸ ಅಧ್ಯಯನವೊಂದು (New study) ಏನು ಹೇಳುತ್ತಿದೆ ಅಂತ ನೀವು ತಿಳಿದುಕೊಂಡರೆ ನಿಮಗೆ ಈ ಕ್ಯಾನ್ಸರ್ ರೋಗ ಯಾವುದರಿಂದ ಜಾಸ್ತಿ ಬರುತ್ತದೆ ಎನ್ನುವುದರ ಬಗ್ಗೆ ನಿಮಗೆ ಮಾಹಿತಿ (Information) ಸಿಕ್ಕಂತಾಗುತ್ತದೆ. ಹೌದು.. ಹೊಸ ಅಧ್ಯಯನವು ಕ್ಯಾನ್ಸರ್ ರೋಗವನ್ನು ತಡೆಗಟ್ಟಲು (Prevent) ಕಡಿಮೆ ಮಾಂಸವನ್ನು (Meat) ಸೇವಿಸಿ ಅಂತ ಹೇಳುತ್ತಿದೆ ನೋಡಿ.

ಕ್ಯಾನ್ಸರ್ ರೋಗದ ಬಗ್ಗೆ ಅಧ್ಯಯನ ಏನು ಸಲಹೆ ನೀಡಿದೆ
ಬಿಎಂಸಿ ಮೆಡಿಸಿನ್ ಆನ್‌ಲೈನ್ ನಲ್ಲಿ ಬಿಡುಗಡೆ ಮಾಡಿದ ಅಧ್ಯಯನವೊಂದು ಏನು ಸಲಹೆ ನೀಡುತ್ತಿದೆ ನೋಡಿ. 40 ರಿಂದ 70 ವರ್ಷದೊಳಗಿನ ಸುಮಾರು 4,72,000 ವಯಸ್ಕರು ಸಂಶೋಧಕರಿಗೆ ಆರೋಗ್ಯ ಮಾಹಿತಿಯನ್ನು ಒದಗಿಸಿದರು. ಈ ವ್ಯಕ್ತಿಗಳು ವಾರಕ್ಕೆ ಎಷ್ಟು ಬಾರಿ ಮಾಂಸವನ್ನು (ಸಂಸ್ಕರಿಸಿದ ಮಾಂಸ, ದನಮಾಂಸ, ಕುರಿಮರಿ, ಹಂದಿ, ಕೋಳಿ ಮತ್ತು ಟರ್ಕಿ) ಸೇವಿಸುತ್ತಾರೆ ಅಥವಾ ಅವರು ಸಂಪೂರ್ಣವಾಗಿ ಮಾಂಸದಿಂದ ದೂರವಿರುವರೆ, ಅವರು ಕೇವಲ ಮೀನು ಮಾಂಸ ಅಷ್ಟೇ ಸೇವಿಸಿದರೆ, ಸಸ್ಯಾಹಾರಿಗಳಾಗಿದ್ದರೆ ಎನ್ನುವ ಎಲ್ಲಾ ಮಾಹಿತಿಯನ್ನು ಒದಗಿಸಿದ್ದಾರೆ.

ಅತಿಯಾದ ಮೀನು ಸೇವಿಸುವುದರಿಂದ ಕ್ಯಾನ್ಸರ್ ಬರುವುದೇ
ವೈಯಕ್ತಿಕ ಕ್ಯಾನ್ಸರ್ ಗಳನ್ನು ಪರಿಶೀಲಿಸಿದಾಗ, ಮಾಂಸವನ್ನು ಹೆಚ್ಚಾಗಿ ಸೇವಿಸುವವರಿಗೆ ಹೋಲಿಸಿದರೆ ವಾರಕ್ಕೆ ಐದು ಬಾರಿಗಿಂತ ಹೆಚ್ಚು ಮಾಂಸವನ್ನು ಸೇವಿಸುವ ವ್ಯಕ್ತಿಗಳಲ್ಲಿ ಕರುಳಿನ ಕ್ಯಾನ್ಸರ್ ನ ಅಪಾಯವು 9 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡು ಹಿಡಿದರು. ವಾರಕ್ಕೆ ಐದಕ್ಕಿಂತ ಹೆಚ್ಚು ಬಾರಿ ಮಾಂಸವನ್ನು ಸೇವಿಸುವ ಪುರುಷರಿಗಿಂತ ಕೇವಲ ಮೀನುಗಳನ್ನು ಮಾತ್ರ ತಿನ್ನುವ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ 20 ಪ್ರತಿಶತದಷ್ಟು ಕಡಿಮೆಯಿದ್ದರೆ, ಕೇವಲ ಸಸ್ಯಾಹಾರಿ ಆಹಾರವನ್ನು ಸೇವಿಸುವ ಪುರುಷರು 31 ಪ್ರತಿಶತದಷ್ಟು ಕಡಿಮೆ ಅಪಾಯವನ್ನು ಹೊಂದಿದ್ದರು.

ಈ ಅಧ್ಯಯನ ಹೇಗೆ ನಡೆಯಿತು
2 ಪ್ರತಿಶತದಷ್ಟು ಜನರು ಮೀನುಗಳನ್ನು ಸೇವಿಸುತ್ತಾರೆ ಆದರೆ ಬೇರೆ ಯಾವುದೇ ಮಾಂಸವನ್ನು ಸೇವಿಸುವುದಿಲ್ಲ ಮತ್ತು ಇನ್ನೂ 2 ಪ್ರತಿಶತದಷ್ಟು ಜನರು ಸಸ್ಯಾಹಾರಿಗಳು, 52 ಪ್ರತಿಶತದಷ್ಟು ಜನರು ವಾರಕ್ಕೆ ಐದು ಬಾರಿಗಿಂತ ಹೆಚ್ಚು ಸಲ ಮಾಂಸವನ್ನು ಸೇವಿಸುತ್ತಾರೆ ಮತ್ತು 44 ಪ್ರತಿಶತದಷ್ಟು ಜನರು ಐದು ಅಥವಾ ಅದಕ್ಕಿಂತ ಕಡಿಮೆ ಬಾರಿ ಮಾಂಸವನ್ನು ಸೇವಿಸುತ್ತಾರೆ ಎಂದು ಅವರು ಕಂಡು ಹಿಡಿದರು. ನಂತರ ಕ್ಯಾನ್ಸರ್ ರೋಗಕ್ಕೆ ಯಾರು ತುತ್ತಾದರು ಅಂತ ತಿಳಿದುಕೊಳ್ಳಲು ಅವರು ಆ ಎಲ್ಲಾ ಜನರನ್ನು 11 ವರ್ಷಗಳ ಕಾಲ ಸಂಶೋಧಕರು ಮೇಲ್ವಿಚಾರಣೆ ಮಾಡಿದರು.

ಇದನ್ನೂ ಓದಿ: Heart Attack Symptoms: 1 ವಾರಕ್ಕೂ ಮೊದಲೇ ದೇಹವು ಹೃದಯಾಘಾತದ ಲಕ್ಷಣವನ್ನು ತಿಳಿಸುತ್ತದೆ!

ವಾರಕ್ಕೆ ಐದು ಬಾರಿ ಅಥವಾ ಅದಕ್ಕಿಂತ ಕಡಿಮೆ ಬಾರಿ ಮಾಂಸವನ್ನು ಸೇವಿಸುವ ವ್ಯಕ್ತಿಗಳು ಹೆಚ್ಚು ಸೇವಿಸುವವರಿಗಿಂತ ಒಟ್ಟಾರೆಯಾಗಿ ಕ್ಯಾನ್ಸರ್ ಬರುವ ಸಾಧ್ಯತೆ 2 ಪ್ರತಿಶತದಷ್ಟು ಕಡಿಮೆ ಎಂದು ಅವರು ಕಂಡು ಕೊಂಡಿದ್ದಾರೆ. ಮೀನುಗಳನ್ನು ಮಾತ್ರ ತಿನ್ನುವ ಜನರಲ್ಲಿ ಈ ಅಪಾಯವನ್ನು 10 ಪ್ರತಿಶತದಷ್ಟು ಮತ್ತು ಸಸ್ಯಾಹಾರಿಗಳಲ್ಲಿ 14 ಪ್ರತಿಶತದಷ್ಟು ಕಡಿಮೆ ಇದೆ ಎಂದು ಕಂಡುಕೊಳ್ಳಲಾಗಿದೆ.

ಸಂಸ್ಕರಿಸಿದ ಗೋಮಾಂಸ  ತಿಂದರೆ ಬರುತ್ತದೆ ಈ ರೀತಿಯ ಕ್ಯಾನ್ಸರ್
ನೀವು ಸಂಸ್ಕರಿಸಿದ ಗೋಮಾಂಸವನ್ನು ಸೇವಿಸಿದರೆ ಕರುಳು ಮತ್ತು ಹೊಟ್ಟೆಯ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚು. ಗೋಮಾಂಸ, ಕುರಿಮರಿ ಮತ್ತು ಹಂದಿ ಸೇರಿದಂತೆ ಕೆಂಪು ಮಾಂಸವನ್ನು ಗುಂಪು 2ಎ ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿರುವುದು ಬಹುಶಃ ಇದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಸೂಚಿಸುತ್ತದೆ.

ಇದನ್ನೂ ಓದಿ: Weight Loss: ತೂಕ ಇಳಿಸುವವರಿಗೆ ಸುಲಭ ಮಾರ್ಗ; ಈ ತರಕಾರಿ ತಿನ್ನಿ ಬೊಜ್ಜು ಕರಗಿಸಿ

ಈ ರೀತಿಯ ಅವಲೋಕನಾತ್ಮಕ ಅಧ್ಯಯನವು ಒಂದು ಸಂಪರ್ಕವನ್ನು ಮಾತ್ರ ಪ್ರದರ್ಶಿಸಬಹುದೇ ಹೊರತು ನಿಖರವಾದ ಕಾರಣವನ್ನಲ್ಲ ಎಂದು ತಜ್ಞರು ಸಲಹೆ ನೀಡಿದರು. ಹೆಚ್ಚುವರಿಯಾಗಿ, ಅಧ್ಯಯನವು ನಿಖರವಾದ ಆಹಾರ ಪದ್ದತಿ ಮತ್ತು ಜೀವನಶೈಲಿ ಅಭ್ಯಾಸಗಳು ಅಥವಾ ಇತರ ಅಂಶಗಳನ್ನು ಪರಿಶೀಲಿಸಲಿಲ್ಲ. ಆದರೂ ಸಹ ಕಡಿಮೆ ಮಾಂಸ ಸೇವನೆಯು ಕಡಿಮೆ ಆರೋಗ್ಯ ಸಮಸ್ಯೆಗಳನ್ನು ತರಬಲ್ಲದು ಎಂದು ಹೇಳುತ್ತಾರೆ.
Published by:Ashwini Prabhu
First published: