• Home
  • »
  • News
  • »
  • lifestyle
  • »
  • SARS-CoV-2 virus: ಆರೋಗ್ಯದ ಮೇಲೆ ಆಗೋ ಅನಾಹುತಗಳ ಬಗ್ಗೆ ಹೊಸ ಪ್ರಯೋಗ ಏನು ಹೇಳಿದೆ?

SARS-CoV-2 virus: ಆರೋಗ್ಯದ ಮೇಲೆ ಆಗೋ ಅನಾಹುತಗಳ ಬಗ್ಗೆ ಹೊಸ ಪ್ರಯೋಗ ಏನು ಹೇಳಿದೆ?

SARS-CoV-2 ವೈರಸ್‌

SARS-CoV-2 ವೈರಸ್‌

ಕೊರೋನಾ ವೈರಸ್‌ ನ ಮೂಲವಾದ SARS-CoV-2 ವೈರಸ್‌ ಬಗ್ಗೆ ವಿಜ್ಞಾನಿಗಳು ಹೊಸ ಪ್ರಯೋಗ ನಡೆಸಿದ್ದಾರೆ. SARS-CoV-2, COVID-19 ವೈರಸ್, ಬಗೆಗಿನ ಹೊಸ ಅಧ್ಯಯನವನ್ನು ರೀಸಸ್‌ ಮಕಾಕ್‌ ಅನ್ನೋ ಜಾತಿಯ ಮಂಗಗಳ ಮೇಲೆ ನಡೆಸಲಾಗಿದ್ದು, ಇದರ ಪ್ರಕಾರ ಈ ಸೋಂಕು ಉಂಟಾದ ಒಂದು ವಾರದಲ್ಲಿ ಗಮನಾರ್ಹವಾದ ನರಗಳ ಹಾನಿ ಮತ್ತು ಉರಿಯೂತ ಕಂಡುಬಂದಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ವಿಜ್ಞಾನಿಗಳು (Scientists) ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಇನ್ನು ಜಗತ್ತಿಗೆ ಕೊರೋನಾ ಕಾಲಿಟ್ಟ ಮೇಲಂತೂ ವಿಜ್ಞಾನಿಗಳು ಅವರ ಪರಿಣಾಮಗಳನ್ನು ಅರಿಯಲು ನೂರಾರು ಪ್ರಯೋಗಗಳನ್ನು ನಡೆಸಿದ್ದಾರೆ. ಇನ್ನು ಕೊರೋನಾ ವೈರಸ್‌ ನ(Corona virus)  ಮೂಲವಾದ SARS-CoV-2 ವೈರಸ್‌ ಬಗ್ಗೆ ವಿಜ್ಞಾನಿಗಳು ಹೊಸ ಪ್ರಯೋಗ ನಡೆಸಿದ್ದಾರೆ. SARS-CoV-2, COVID-19 ವೈರಸ್, ಬಗೆಗಿನ ಹೊಸ ಅಧ್ಯಯನವನ್ನು ರೀಸಸ್‌ ಮಕಾಕ್‌ ಅನ್ನೋ ಜಾತಿಯ ಮಂಗಗಳ (Monkey) ಮೇಲೆ ನಡೆಸಲಾಗಿದ್ದು, ಇದರ ಪ್ರಕಾರ ಈ ಸೋಂಕು ಉಂಟಾದ ಒಂದು ವಾರದಲ್ಲಿ ಗಮನಾರ್ಹವಾದ ನರಗಳ ಹಾನಿ ಮತ್ತು ಉರಿಯೂತ ಕಂಡುಬಂದಿದೆ.


ಮಂಗಗಳ ಮೇಲೆ ನಡೆದ ಅಧ್ಯಯನ 
ಡೇವಿಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಕ್ಯಾಲಿಫೋರ್ನಿಯಾ ನ್ಯಾಷನಲ್ ಪ್ರೈಮೇಟ್ ರಿಸರ್ಚ್ ಸೆಂಟರ್‌ನ ಸಂಶೋಧಕರು, ಟೈಪ್ 2 ಡಯಾಬಿಟಿಸ್‌ನೊಂದಿಗೆ ವಯಸ್ಸಾದ ಕೋತಿಗಳು ವೈರಸ್-ಪ್ರೇರಿತ ನರವೈಜ್ಞಾನಿಕ ಹಾನಿಯನ್ನು ಅನುಭವಿಸುತ್ತವೆ ಎಂದು ಕಂಡುಹಿಡಿದಿದ್ದಾರೆ.


COVID-19 ತಗಲಿರುವ ಶೇ. 80 ರಷ್ಟು ಜನರು ನರವೈಜ್ಞಾನಿಕ ಲಕ್ಷಣಗಳನ್ನು ವರದಿ ಮಾಡಿದ್ದಾರೆ. ಆದರೆ ಈ ರೋಗಲಕ್ಷಣಗಳು ಮೆದುಳಿಗೆ ವೈರಸ್ ಸೋಂಕು ತಗುಲಿದ್ದರಿಂದ ಆಗಿದೆಯೋ ಅಥವಾ ದೇಹದಲ್ಲಿನ ಸಾಮಾನ್ಯ ಉರಿಯೂತದ ಪ್ರತಿಕ್ರಿಯೆಯೋ ಅನ್ನೋದನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಅಭಿವೃದ್ಧಿಪಡಿಸಿದ ಮಾನವರಲ್ಲದ ಪ್ರೈಮೇಟ್ ಮಾದರಿಯನ್ನು ಅಥವಾ ಮಂಗಗಳನ್ನು ಬಳಸಿಕೊಂಡು UC ಡೇವಿಸ್ ಸಂಶೋಧಕರು COVID ಘ್ರಾಣ ನರಗಳ ಮೂಲಕ ಸಾಗಿ ಮೂಲಕ ಮೆದುಳನ್ನು ತಲುಪುತ್ತದೆ ಎಂದು ಬಹಿರಂಗಪಡಿಸಿದ್ದಾರೆ. ಇದು ಮೆದುಳಿನಲ್ಲಿ ಪ್ರಾರಂಭವಾಗುತ್ತದೆ ಮತ್ತು ಮೂಗಿನ ಮೇಲ್ಭಾಗದಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: Weight Loss: ಡಯಟ್, ವ್ಯಾಯಾಮ ಇಲ್ಲದೇ ಏಕಾಏಕಿ ಇಳಿದ ತೂಕ: ಸಂಭ್ರಮಿಸಿದ 28ರ ಗೃಹಿಣಿಗೆ ಈಗ ಶಾಕ್​ ಕೊಟ್ಟ ಭಯಾನಕ ಕಾಯಿಲೆ!


ಪ್ರಯೋಗ ನಡೆಸುವಾಗ ಯಂಗ್‌ ಆಗಿ, ಆರೋಗ್ಯಯುತವಾಗಿರೋ ಮಂಗಗಳು ಹಾಗೂ ವಯಸ್ಸಾದ ಟೈಪ್ 2 ಡಯಾಬಿಟಿಸ್ ಹೊಂದಿರುವ ಮಂಗಗಳಿಗೆ SARS-Cov-2 ವೈರಸ್‌ ಚುಚ್ಚುಮದ್ದು ನೀಡಲಾಯ್ತು. ಆದರೆ ಈ ಪ್ರಾಣಿಗಳು ವೈರಸ್‌ಗೆ ಒಡ್ಡಿಕೊಂಡ 7 ದಿನಗಳ ನಂತರ, ಮೆದುಳಿನ ಅಂಗಾಂಶಗಳಲ್ಲಿ ಮತ್ತು ಹಲವಾರು ವಿಭಿನ್ನ ರೀತಿಯ ಮೆದುಳಿನ ಕೋಶಗಳಲ್ಲಿ ವೈರಸ್ ಕಂಡುಬಂದವು.


ವಯಸ್ಸಾದ ಪ್ರಾಣಿಗಳಲ್ಲಿ ತೀವ್ರವಾದ ವೈರಸ್ ಸೋಂಕು
ಈ ಸಂಶೋಧನೆಗಳ ಪ್ರಕಾರ ವೈರಸ್ ಮೆದುಳನ್ನು ಪ್ರವೇಶಿಸುತ್ತದೆ. ಮೆದುಳಿನ ಕೋಶಗಳನ್ನು ಹಾನಿಗೊಳಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಯುಸಿ ಡೇವಿಸ್‌ನ ಪೋಸ್ಟ್‌ಡಾಕ್ಟರಲ್ ಸಂಶೋಧಕರಾದ ಮೊದಲ ಲೇಖಕಿ ಡೇನಿಯಲ್ ಬೆಕ್‌ಮನ್ ಹೇಳಿದ್ದಾರೆ. ಅದರಲ್ಲೂ ಯುವ ಮತ್ತು ವಯಸ್ಸಾದ ಪ್ರಾಣಿಗಳನ್ನು ಹೋಲಿಸಿದಾಗ, ವಯಸ್ಸಾದ ಪ್ರಾಣಿಗಳಲ್ಲಿ ವೈರಲ್ ಸೋಂಕು ಉಲ್ಬಣಗೊಂಡಿದೆ. ಸೋಂಕಿತ ವಯಸ್ಸಾದ ಕೋತಿಗಳ ಮೆದುಳಿನ ಕೋಶಗಳು ಕುಗ್ಗಿದವು ಎಂದು ಅವರು ತಿಳಿಸಿದ್ದಾರೆ.


ಯುವ, ಆರೋಗ್ಯಕರ ಪ್ರಾಣಿಗಳಿಗೆ ಹೋಲಿಸಿದರೆ ವಯಸ್ಸಾದ ಪ್ರಾಣಿಗಳಲ್ಲಿ ವೈರಸ್ ಪ್ರಯಾಣಿಸುವ ದೂರವು ಬಹುಶಃ ಅತ್ಯಂತ ಗಮನಾರ್ಹವಾಗಿದೆ. SARS-CoV-2 ನ ಸೆಲ್ಯುಲಾರ್ ಮಾರ್ಕರ್‌ಗಳು ಮೆದುಳಿನ ಪ್ರದೇಶಗಳಲ್ಲಿ ತಕ್ಷಣದ ಸಂವೇದನೆ ಮತ್ತು ವಾಸನೆಯ ಗ್ರಹಿಕೆಯನ್ನು ಮೀರಿ ವಿಸ್ತರಿಸುತ್ತವೆ. ವಯಸ್ಸಾದ ಪ್ರಾಣಿಗಳಲ್ಲಿ ಭಾವನೆ, ಸ್ಮರಣೆ ಮತ್ತು ಅರಿವಿನ ಪ್ರದೇಶಗಳಲ್ಲಿ ಹೆಚ್ಚು ತೊಡಗಿಸಿಕೊಂಡಿವೆ.


SARS-CoV-2 ನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು 
ಈ ಸಂಶೋಧನೆಗಳು ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳಲ್ಲಿನ ಸಂಭಾವ್ಯ ಸ್ಪೈಕ್‌ಗಳು ಮತ್ತು ಸೋಂಕಿತ ವಯಸ್ಕರ ಅಲ್ಜೈಮರ್‌ನಂತಹ ಬುದ್ಧಿಮಾಂದ್ಯತೆ-ಸಂಬಂಧಿತ ಕಾಯಿಲೆಗಳು ಉಂಟಾಗಬಹುದು. ವೈರಸ್ ಜೀವಕೋಶದ ಹಾನಿ ಮತ್ತು ಮೆದುಳಿನ ಮೇಲೆ ಶಾಶ್ವತವಾದ ಪರಿಣಾಮಗಳನ್ನು ಹೇಗೆ ಉಂಟುಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ಸಂಶೋಧಕರು ಹೊಂದಿದ್ದಾರೆ. SARS-CoV-2 ಮೆದುಳಿನಲ್ಲಿ ಉರಿಯೂತ ಉಂಟುಮಾಡುತ್ತದೆ ಎಂದು ಪುರಾವೆಗಳು ಸೂಚಿಸುತ್ತವೆ. ಕೇಂದ್ರ ನರಮಂಡಲದ ಜೀವಕೋಶಗಳು ಉರಿಯೂತದ ಕೋಶಗಳನ್ನು ಒಡೆಯುವ ಮತ್ತು ತೆಗೆದುಹಾಕುವ ಮೂಲಕ ಪ್ರತಿಕ್ರಿಯಿಸುತ್ತವೆ.


ಇದನ್ನೂ ಓದಿ:  Anemia Symptoms: ರಕ್ತಹೀನತೆ ಬಗ್ಗೆ ನಿಮಗೆಷ್ಟು ಗೊತ್ತು? ಅನಿಮಿಯದ ಲಕ್ಷಣಗಳಿವು


COVID-19 ನ ದೀರ್ಘಕಾಲೀನ ನರವೈಜ್ಞಾನಿಕ ತೊಡಕುಗಳಿಗೆ ಆಧಾರವಾಗಿರುವ ಮಿದುಳಿನ ಹಾನಿಯ ಪ್ರಮಾಣ ಮತ್ತು ಸ್ವರೂಪವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸೋಂಕಿನ ಹಲವಾರು ತಿಂಗಳ ನಂತರ ಸಂಶೋಧಕರು ಈಗ ಕೋತಿಗಳ ಮೆದುಳನ್ನು ಅಧ್ಯಯನ ಮಾಡುತ್ತಿದ್ದಾರೆ.

Published by:Ashwini Prabhu
First published: