Mental Health: ಕೈದೋಟದಲ್ಲಿ ಕಾಲಕಳೆಯುವುದರಿಂದ ನಿಮ್ಮಮಾನಸಿಕ ಆರೋಗ್ಯವನ್ನು ನಿವಾರಿಸಿಕೊಳ್ಳಬಹುದಂತೆ..!

ಕೈದೋಟದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಸೂರ್ಯನ ಕಿರಣಗಳ ಮೂಲಕ ಯಥೇಚ್ಚವಾಗಿ ವಿಟಮಿನ್ ಡಿ ಪಡೆಯುತ್ತಾರೆ. ಇದರಿಂದಾಗಿ ಅವರ ಮಾನಸಿಕ ಆರೋಗ್ಯವು ಉತ್ತಮವಾಗಿದ್ದಲ್ಲದೆ ರೋಗ ನಿರೋಧಕ ಶಕ್ತಿಯೂ ವೃದ್ಧಿಸಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾನು ಚಿಕ್ಕವಳಾಗಿದ್ದಾಗಿನಿಂದಲೂ ಆತಂಕಪಡುವಂತಹ (Anxiety) ಮನಸ್ಥಿತಿಯಿಂದ ಯಾವಾಗಲೂ ಬಳಲಿದ್ದೇನೆ. ಆದರೆ ನನಗೆ ಈ ರೀತಿಯ ಒಂದು ಮಾನಸಿಕ (Mental Condition) ಸ್ಥಿತಿಯಿದೆ ಎಂಬುದು ಅಧಿಕೃತವಾಗಿ ಪರೀಕ್ಷೆಯ ಮೂಲ ತಿಳಿದಿದ್ದು ಕೇವಲ ಏಳು ವರ್ಷಗಳ ಹಿಂದಷ್ಟೆ" ಹೀಗೆಂದು ನುಡಿಯುತ್ತಾರೆ ಕೆಲ್ಲಿ ಟೇಲರ್ (Kelly Taylor). ಮುಂದುವರೆಯುತ್ತ ಅವರು ತಮ್ಮ ಅನುಭವದ ಕುರಿತು ಹೀಗೆ ವಿವರಿಸುತ್ತಾರೆ, "ನಾನು ಬಹಳ ದೀರ್ಘ ಸಮಯದಿಂದ ಅನುಭವಿಸುತ್ತಿದ್ದ ಸಂಬಂಧ ಅಂತ್ಯಗೊಂಡಾಗ ನನ್ನ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ನನ್ನಲ್ಲಿದ್ದ ಆತಂಕ (ಎಂಕ್ಸೈಟಿ) ಮನೋಭಾವದ ಲಕ್ಷಣವು ಮತ್ತಷ್ಟು ಉಲ್ಬಣಿಸಿತು. ಏನು ಮಾಡಬೇಕೆಂದು ನನಗೆ ಕಿಂಚಿತ್ತೂ (Exhausted) ತೋಚದಾಯಿತು. ನಾನು ಅತಿಯಾದ ಬಳಲಿಕೆ ಪಡುತ್ತಿದ್ದೆ. ಯಾವುದರ ಮೇಲೂ ನನಗೆ ಗಮನ ಹರಿಸಲು ಆಗುತ್ತಲೇ ಇರಲಿಲ್ಲ. ಸದಾ ಚಿಂತೆ ಪಡುತ್ತಲೇ (Worried) ಇದ್ದೆ ಹಾಗೂ ನಿದ್ದೆ ಎಂಬುದು ನನ್ನಿಂದ ಹಾರೇ ಹೋಗಿತ್ತು, ಅತಿ ಅಲ್ಪಾವಧಿಯಷ್ಟೇ ನಿದ್ರಿಸಲು ಶಕ್ತಳಾಗುತ್ತಿದ್ದೆ.

ಅಕ್ಷರಶಃ ಚಿಂತಾಜನಕ
ಇದೇ ಪರಿಸ್ಥಿತಿಯಲ್ಲಿ ಕೆಲ್ಲಿ ಒಂದೆರಡು ವರ್ಷಗಳನ್ನು ತಳ್ಳಿದರು. ಅವರ ಸ್ಥಿತಿ ಅಕ್ಷರಶಃ ಚಿಂತಾಜನಕವಾಗಿತ್ತು. ದಿನವನ್ನು ಕಳೆಯುವುದೂ ಸಹ ಅವರಿಗೆ ಅಸಾಧ್ಯವಾದಂತಾಗಿತ್ತು. ಕೊನೆಗೆ ಈ ನರಕಯಾತನೆಯಿಂದ ಮುಕ್ತಿ ಪಡೆಯಲು ಮನಸ್ಸು ಮಾಡಿ ತಮ್ಮ ಸರ್ಕಾರಿ ಉದ್ಯೋಗ ತೊರೆದು ತಾಯಿಯ ಜೊತೆ ವಾಸಿಸಲೆಂದು ಊರಿಗೆ ತೆರಳಿದರು.

ಕೆಲ್ಲಿ ಈಗ ಜೀವನದಲ್ಲಿ ಪ್ರಥಮ ಬಾರಿ ನಿರುದ್ಯೋಗಿಯಾಗಿದ್ದರು ಹಾಗೂ ಸದಾ ಕಾಲ ಹಾಸಿಗೆಯ ಮೇಲೆ ಕಾಲ ಕಳೆಯತೊಡಗಿದ್ದರು. ವೈದ್ಯರು ಮೊದಲೇ ನೀಡಿದ್ದ ಔಷಧಿಗಳನ್ನು ಸೇವಿಸುತ್ತ ಯಾವುದೇ ಚಟುವಟಿಕೆ ಇರಲಾರದೆ ಅವರು ಹೆಚ್ಚು ತೂಕ ಬೆಳೆಸಿಕೊಂಡರು. ಈ ಬದಲಾವಣೆ ಅವರಿಗೆ ಮಾನಸಿಕವಾಗಿ ಮತ್ತಷ್ಟು ಕುಸಿಯುವಂತೆ ಮಾಡಿತು ಹಾಗೂ ಕೊನೆಗೆ ಅವರೇ ಸ್ವತಃ ಆ ಪರಿಸ್ಥಿತಿಯಿಂದ ಹೊರಬರಲು ನಿರ್ಧರಿಸಿದರು.

ಗಿಡಗಂಟಿ ಕಿತ್ತುಹಾಕಿ
ಅದಕ್ಕಾಗಿ ನ್ಯಾಚುರೋಪತಿ ಪರಿಣಿತರು, ಹರ್ಬಲಿಸ್ಟ್‌ ಮುಂತಾದವರ ಬಳಿ ಸಲಹೆ ಪಡೆದಾಗ ಅವರ ಸಲಹೆಗಳು ಸ್ವಲ್ಪ ಮಟ್ಟಿಗೆ ಸಮಾಧಾನಪಡಿಸಿದಂತೆ ಮಾಡಿದರೂ ಒಟ್ಟಾರೆಯಾಗಿ ಆತಂಕ ಪಡುವ ಮನಸ್ಥಿತಿಯಿಂದ ಹೊರಬರಲಾಗಲಿಲ್ಲ. ಆಗಾಗ ಪ್ಯಾನಿಕ್ ಆಘಾತಗಳು ಉಂಟಾಗುತ್ತಲೇ ಇದ್ದವು. ಈ ನಡುವೆ ಗಾರ್ಡನಿಂಗ್ ಮಾಡುವ ಮೂಲಕ ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದೆಂಬುದರ ಬಗ್ಗೆ ಓದಿದ್ದರು. ಹಾಗಾಗಿ ಅದನ್ನು ಒಮ್ಮೆ ಪ್ರಯತ್ನಿಸಲು ನಿರ್ಧರಿಸಿ ಅವರ ತಾಯಿಯ ಮನೆಯ ಹಿಂಭಾಗದಲ್ಲಿ ಅನವಶ್ಯಕವಾಗಿ ಬೆಳೆದಿದ್ದ ಗಿಡಗಂಟಿಗಳನ್ನು ಕಿತ್ತುಹಾಕಿ ಅಲ್ಲಿ ಕೈದೋಟ ನಿರ್ಮಿಸಲು ನಿರ್ಧರಿಸಿದರು.

ಇದನ್ನೂ ಓದಿ: Planting Hacks: ಟ್ರಿಪ್​ ಹೋಗುವಾಗ ಗಿಡಗಳು ಒಣಗಿ ಹೋಗುತ್ತದೆ ಅಂತ ಚಿಂತೆ ಬೇಡ- ಗಿಡಗಳು ಬಾಡದಿರಲು ಹೀಗೆ ಮಾಡಿ

ಅದಕ್ಕನುಸಾರವಾಗಿ ಅವರು ಮೊದಲಿಗೆ ಆ ಜಾಗದಲ್ಲಿ ಬೆಳೆದಿದ್ದ ಎಲ್ಲ ಮುಳ್ಳುಬಳ್ಳಿಗಳು ಹಾಗೂ ಗಿಡಗಂಟಿಗಳನ್ನು ತೆಗೆದು ಆ ಜಾಗ ಸ್ವಚ್ಛಗೊಳಿಸಿದರು. ಇದರಿಂದ ಅವರಿಗೆ ಮನದಲ್ಲಿ ಒಂದು ರೀತಿಯ ಸಂತಸ ಮೂಡಿತು. ಅವರಿಗೆ ಕರಾರುವಕ್ಕಾದ ಕೈದೋಟ ಹೇಗೆ ನಿರ್ಮಿಸಬೇಕೆಂದು ಮೊದಲಿಗೆ ಗೊತ್ತಿರಲಿಲ್ಲ. ಹಾಗಾಗಿ ತಮಗೆ ಯಾವುದು ಅನುಕೂಲವೆನಿಸುತ್ತದೆಯೋ ಅದನ್ನು ಬೆಳೆಯಬೇಕೆಂದು ನಿರ್ಧರಿಸಿದರು.

ದೈಹಿಕ ಲಾಭಗಳು
ಮನೆಯ ಹತ್ತಿರದಲ್ಲಿದ್ದ ನರ್ಸರಿಯಿಂದ ಟೊಮ್ಯಾಟೋ, ಸೌತೆಕಾಯಿ, ಲೆಟ್ಯೂಸ್‌ ಮುಂತಾದ ಬೆಳೆಗಳ ಬೀಜಗಳನ್ನು ತಂದು ಬಿತ್ತಿದರು. ಅಲ್ಲದೆ ಕೆಲ ಇತರೆ ಸಸ್ಯಗಳನ್ನೂ ನೆಟ್ಟರು. ಇವುಗಳ ಜೊತೆಗೆ ಪಕ್ಷಿಗಳಿಗೆ ನೀರಿನ ತೊಟ್ಟಿಯನ್ನು ಇರಿಸಿದರು. ಈಗ ಅವರು ಗಾರ್ಡನ್‌ನಲ್ಲಿ ಹೆಚ್ಚು ಸಮಯ ವ್ಯಯಿಸತೊಡಗಿದ್ದರು. ಪಕ್ಷಿಗಳು ತೊಟ್ಟಿಯ ಬಳಿ ಬಂದು ನೀರಲ್ಲಿ ಆಟವಾಡುತ್ತಿದ್ದವು. ಇದನ್ನು ಕಂಡು ಅವರು ಖುಷಿ ಪಡತೊಡಗಿದರು. ಹೀಗೆ ನಿಧಾನವಾಗಿ ಕೆಲ್ಲಿ ಮಾನಸಿಕವಾಗಿ ನೆಮ್ಮದಿ ಪಡೆಯತೊಡಗಿದರು. ಸದ್ಯ ಅವರಿಗೆ ಈಗ ಉದ್ಯಾನವೇ ಎಲ್ಲವೂ ಆಗಿದೆ. ಕೇವಲ ಮಾನಸಿಕವಾಗಿ ಅಲ್ಲದೆ ದೈಹಿಕ ಲಾಭಗಳು ಸಹ ಗಾರ್ಡನಿಂಗ್‌ನಿಂದ ದೊರೆಯುತ್ತದೆಂದು ಕೆಲ್ಲಿ ಹೇಳುವುದನ್ನು ಮರೆಯುವುದಿಲ್ಲ.

ಮಾನಸಿಕ ತೃಪ್ತಿ
ನಾನು ನನ್ನ ಗಾರ್ಡನ್ ನಲ್ಲಿದ್ದಾಗ ನನಗೆ ಮಾನಸಿಕವಾಗಿ ತೃಪ್ತಿ ಭಾವದ ಅನುಭೂತಿಯಾಗುತ್ತದೆ. ನನ್ನ ಹಿಂದಿನ ನೆನಪುಗಳು ನನ್ನ ಮೇಲೆ ಒತ್ತಡ ಉಂಟು ಮಾಡುತ್ತಿಲ್ಲ. ಇಲ್ಲಿರುವ ಸಸ್ಯಗಳ ಸೌಂದರ್ಯ ಹಾಗೂ ಪ್ರಕೃತಿಯ ಸೃಷ್ಟಿಯ ಸೊಬಗನ್ನು ಪ್ರಶಂಸಿಸಲು ಮನಸ್ಸು ತಡವರಿಸುತ್ತದೆ. ತರಕಾರಿಗಳ ಜೊತೆ ನಾನು ಈಗ ಹರ್ಬಲ್ ಹಾಗೂ ವಿವಿಧ ಹೂವಿನ ಸಸ್ಯಗಳನ್ನು ಬೆಳೆಸುತ್ತಿದ್ದೇನೆ. ಇವು ಬಣ್ಣಬಣ್ಣದ ಚಿಟ್ಟೆಗಳನ್ನು ಹಾಗೂ ದುಂಬಿಗಳನ್ನು ನನ್ನ ಉದ್ಯಾನಕ್ಕೆ ಆಕರ್ಷಿಸುವುದನ್ನು ಕಂಡಾಗ ನನಗೆ ಎಲ್ಲಿಲ್ಲದ ಸಂತಸ ಉಂಟಾಗುತ್ತದೆ ಎಂದು" ಕೆಲ್ಲಿ ನುಡಿಯುತ್ತಾರೆ.

ಶಕ್ತಿ
ಈ ಹಿಂದೆ ಕೆಲ್ಲಿ ಮಾನಸಿಕವಾಗಿ ಅತಿಯಾದ ಕುಗ್ಗಿದ ಸಮಯದಲ್ಲಿ ಅವರು ಶಕ್ತಿಹೀನರಾಗಿದ್ದರು. ದಿನದಲ್ಲಿ ಒಂದು ಅಡುಗೆ ಕೆಲಸ ಮಾಡಿದರೆ ಸಾಕು ಅವರಿಗೆ ಸುಸ್ತಾಗಿ ಹೋಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಾನಸಿಕವಾಗಿ ಕೆಲ್ಲಿ ಸುಧಾರಿಸಿಕೊಂಡಿದ್ದು ದೈಹಿಕವಾಗಿಯೂ ಶಕ್ತಿಯ ಅನುಭವ ಪಡೆಯತೊಡಗಿದ್ದಾರೆ. ಎಲ್ಲಿಲ್ಲದ ಹುಮ್ಮಸ್ಸು, ಉತ್ಸಾಹ ಈಗ ಅವರಲ್ಲಿ ಮನೆ ಮಾಡಿದೆ. "ಈಗ ನಾನು ಎಲ್ಲ ವ್ಯಾಯಾಮಗಳನ್ನು ನಿರಾಯಾಸವಾಗಿ ಮಾಡುತ್ತೇನೆ" ಎಂದು ಅವರೇ ಖುದ್ದು ಹೇಳುತ್ತಾರೆ.

ಸೂರ್ಯನ ಬೆಳಕು
ಕೆಲ್ಲಿ ತಮ್ಮ ಕೈದೋಟದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಸೂರ್ಯನ ಕಿರಣಗಳ ಮೂಲಕ ಯಥೇಚ್ಚವಾಗಿ ವಿಟಮಿನ್ ಡಿ ಪಡೆಯುತ್ತಾರೆ. ಇದರಿಂದಾಗಿ ಅವರ ಮಾನಸಿಕ ಆರೋಗ್ಯವು ಉತ್ತಮವಾಗಿದ್ದಲ್ಲದೆ ರೋಗ ನಿರೋಧಕ ಶಕ್ತಿಯೂ ವೃದ್ಧಿಸಿರುವುದಾಗಿ ಹೇಳುತ್ತಾರೆ ಕೆಲ್ಲಿ.

ಪೋಷಕಾಂಶಗಳು
ನಾನು ನನ್ನ ತೋಟದಲ್ಲೇ ಪೋಷಕಾಂಶಯುಕ್ತ ತರಕಾರಿ ಹಾಗೂ ಹರ್ಬ್‌ಗಳನ್ನು ಬೆಳೆಯುತ್ತಿರುವುದರಿಂದ ಹಲವು ಬಗೆಯ ಆರೋಗ್ಯಕಾರಿ ಆಹಾರಗಳನ್ನು ತಯಾರಿಸುತ್ತೇನೆ ಹಾಗೂ ಇದರಿಂದ ನನ್ನ ಆರೋಗ್ಯವೂ ಉತ್ತಮವಾಗುತ್ತಿದೆ. ನನ್ನ ಉದ್ಯಾನದ ಟೊಮ್ಯಾಟೋ ಹಾಗೂ ಲೆಟ್ಯೂಸ್‌ ಎಲೆಗಳು ಅದ್ಭುತವಾದ ಪರಿಮಳ ಹೊಂದಿವೆ. ಈ ರೀತಿಯ ಅರೋಮಾದ ತರಕಾರಿ ನಾನು ಈ ಹಿಂದೆ ಗ್ರಾಸರಿ ಅಂಗಡಿಗಳಲ್ಲಿ ಖರೀದಿಸಿದಾಗಲೂ ಸಿಗುತ್ತಿರಲಿಲ್ಲ" ಎಂದು ಹೇಳುವುದನ್ನು ಕೆಲ್ಲಿ ಮರೆಯುವುದಿಲ್ಲ.

ಕಂಟೈನರ್ ಗಾರ್ಡನಿಂಗ್
ಕೆಲ್ಲಿ ಪ್ರಕಾರ, ಈಗ ಕಂಟೈನರ್ ಗಾರ್ಡನಿಂಗ್ ಪ್ರಸಿದ್ಧಿ ಪಡೆಯುತ್ತಿದೆ. ಏಕೆಂದರೆ ಒಂದು ಕಂಟೈನರ್‌ನಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಚೆನ್ನಾಗಿ ಇದರಲ್ಲಿ ಬೆಳೆಸಬಹುದಾಗಿದೆ ಹಾಗೂ ಸ್ಥಳವೂ ಇದಕ್ಕೆ ಜಾಸ್ತಿ ಬೇಕಾಗುವುದಿಲ್ಲ ಎನ್ನುತ್ತಾರೆ.

ಒಳಾಂಗಣ ಸಸ್ಯಗಳು
ಮನೆಯ ಆವರಣ ಅಥವಾ ಒಳ ಅಂಗಳದಲ್ಲಿ ಕೆಲ ಸಸ್ಯಗಳು ನಿಜಕ್ಕೂ ಅದ್ಭುತವಾಗಿ ಕಾಣುತ್ತವೆ. ಹಾಗಾಗಿ ಯಾರ ಬಳಿಯಾದರೂ ಹೆಚ್ಚು ಸ್ಥಳಾವಕಾಶವಿಲ್ಲವೆಂದರೆ ಅಥವಾ ಅವರು ಅಪಾರ್ಟ್ಮೆಂಟ್‌ಗಳಲ್ಲಿ ವಾಸಿಸುತ್ತಿದ್ದರೆ ಈ ರೀತಿಯ ಸಸ್ಯಗಳನ್ನು ಬೆಳೆಸುವುದು ಆದರ್ಶಪ್ರಾಯವಾಗಿದೆ ಎಂದು ಸಲಹೆಯನ್ನು ಕೆಲ್ಲಿ ನೀಡುತ್ತಾರೆ. ಅವರು ಹೇಳುವಂತೆ ಆಫ್ರಿಕನ್ ವಾಯಲೆಟ್ಸ್, ಏರ್ ಪ್ಲ್ಯಾಂಟ್ಸ್, ಪೀಸ್ ಲಿಲಿ, ರಬ್ಬರ್ ಪ್ಲ್ಯಾಂಟ್ ಕೆಲವು ಅದ್ಭುತವಾದ ಒಳಾಂಗಣ ಸಸ್ಯಗಳಾಗಿದ್ದು ಅವುಗಳನ್ನು ಬೆಳೆಸಬಹುದಾಗಿದೆ.

ವಿಂಡೋವ್ಸಿಲ್ ಗಾರ್ಡನ್ ಸೃಷ್ಟಿಸಿ
ಕೈದೋಟ ಮಾಡಬಯಸುವವರಿಗೆ ಅದರ ಬಗ್ಗೆ ವಿಷಯಗಳನ್ನು ಕಲಿಸುವ 'ಅರ್ಬನ್ ಗಾರ್ಡನ್ ಗಲ್' ವೆಬ್‌ಸೈಟ್‌ ಸಂಸ್ಥಾಪಕಿಯಾಗಿರುವ ಕೆಲ್ಲಿ ಪ್ರಕಾರ, ಮನೆಯ ಕಿಟಕಿಯ ಮೇಲೆ ಹಲಗೆಯಾಕಾರದ ರಚನೆ ಏನಾದರೂ ಇದ್ದರೆ ಅದರ ಮೇಲೆ ಸಸ್ಯಗಳನ್ನು ಬೆಳೆಸುವುದು ಬಲು ಉತ್ತಮವಾಗಿರುತ್ತದೆ. ಇದು ಕಿಟಕಿಯ ಸೌಂದರ್ಯ ಹೆಚ್ಚಿಸುವುದಲ್ಲದೆ ತ್ವರಿತವಾಗಿ ನಮಗೆ ಏನಾದರೂ ಸೊಪ್ಪು/ತರಕಾರಿ ಬೇಕಿದ್ದಲ್ಲಿ ತಕ್ಷಣ ಅದನ್ನು ಪಡೆಯಬಹುದು ಎನ್ನುತ್ತಾರೆ.

ಇದನ್ನೂ ಓದಿ: Home Garden: ಕನಸಿನ ಮನೆಯಲ್ಲಿ ಹ್ಯಾಂಗಿಂಗ್ ಗಿಡ ಬೆಳೆಸಲು ಈ ಟ್ರಿಕ್ಸ್ ಫಾಲೋ ಮಾಡಿ

ಗಾರ್ಡನಿಂಗ್ ಇಷ್ಟವಿರುವವರಿಗೆ "ಸಾಧ್ಯವಾದಷ್ಟು ಸಮುದಾಯ ಗಾರ್ಡನಿಂಗ್‌ನಲ್ಲೇ ಸೇರಿಕೊಳ್ಳಿ. ಇಲ್ಲಿ ನಿಮ್ಮ ಮನಸ್ಥಿತಿಗನುಗುಣವಾದ ವ್ಯಕ್ತಿಗಳೊಂದಿಗೆ ಸೇರಬಹುದು ಹಾಗೂ ಅವರ ಗಾರ್ಡನಿಂಗ್ ಅನುಭವ ಪಡೆಯಬಹುದು" ಎಂದು ಕೆಲ್ಲಿ ಹೇಳುತ್ತಾರೆ,

ಪ್ರಕೃತಿಯೊಂದಿಗೆ ಸಮಯ ವ್ಯಯಿಸಿ
ಕೊನೆಯದಾಗಿ ಕೆಲ್ಲಿ ಟೇಲರ್ "ನೀವು ಹಸಿರು ಇಷ್ಟಪಡುವ ವ್ಯಕ್ತಿಯಾಗದೇ ಹೋಗಿದ್ದರೂ ಪರವಾಗಿಲ್ಲ. ಸಸ್ಯಗಳ ಮಧ್ಯೆ ಓಡಾಡಿ ಸಾಕು ಅದರ ಲಾಭಗಳು ನಿಮಗೂ ದೊರೆಯುತ್ತವೆ. ಸಾಧ್ಯವಾದಷ್ಟು ನಿಮ್ಮ ಮನೆಯ ಬಳಿ, ಉದ್ಯಾನಗಳಲ್ಲಿ ವಾಕ್ ಮಾಡಿ. ಓದುವ ಹವ್ಯಾಸವಿದ್ದರೆ ಗಿಡದ ನೆರಳಿನಲ್ಲಿ ಕುಳಿತು ಓದಲು ಪ್ರಯತ್ನಿಸಿ. ನಿಮ್ಮಲ್ಲಿರುವ ಎಲ್ಲ ಒತ್ತಡಗಳು ಮಾಯವಾಗುತ್ತವೆ. ಏಕೆಂದರೆ ಇದು ಪ್ರಕೃತಿ ಮನುಷ್ಯನಿಗೆ ಬೇಕಾದುದನ್ನೇ ನೀಡುತ್ತದೆ ಹೊರತು ಅವನಿಗೆ ಕಷ್ಟವಾಗುವುದನ್ನಲ್ಲ. ಅದಕ್ಕೆ ತಾನೇ ಪ್ರಕೃತಿಯನ್ನು ತಾಯಿ ಎಂದು ಕರೆಯುತ್ತಾರೆ" ಎಂದು ಹೇಳುತ್ತಾರೆ.
Published by:vanithasanjevani vanithasanjevani
First published: