ಟ್ಯಾಟೂ ಮೂಲಕ ಚರ್ಮದ ಬಣ್ಣವನ್ನೇ ಬದಲಿಸಿಕೊಂಡ ಆ್ಯಡಮ್ !

news18
Updated:July 22, 2018, 8:49 PM IST
ಟ್ಯಾಟೂ ಮೂಲಕ ಚರ್ಮದ ಬಣ್ಣವನ್ನೇ ಬದಲಿಸಿಕೊಂಡ ಆ್ಯಡಮ್ !
adam.curlykale
news18
Updated: July 22, 2018, 8:49 PM IST
-ನ್ಯೂಸ್ 18 ಕನ್ನಡ

ಫ್ಯಾಷನ್ ಲೋಕದಲ್ಲಿ 'ಟ್ಯಾಟೂ' ಕ್ರೇಜ್ ಹುಟ್ಟಿಸಿ ದಶಕಗಳೇ ಕಳೆದಿವೆ. ದೇಹದ ಒಂದು ಭಾಗಕ್ಕೆ ಟ್ರೈಬಲ್, ರಿಯಲ್​ಸ್ಟಿಕ್​ ಅಥವಾ ಟ್ರಡೀಷನಲ್​ ಟ್ಯಾಟೂ ಹಾಕಿಸಿಕೊಳ್ಳುವುದು ಇಂದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ರಷ್ಯಾದ ಈ ವ್ಯಕ್ತಿ ಮಾತ್ರ ತಾನು ಎಲ್ಲರಿಗಿಂತ ಭಿನ್ನ ಎನಿಸಲು ದೇಹದ 90% ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಂದರೆ ತನ್ನ ಬಿಳಿ ವರ್ಣದ ಚರ್ಮವನ್ನು ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ಬದಲಾಯಿಸಿದ್ದಾರೆ. ರಷ್ಯಾದ ಕಲಿನಿನ್​ಗಾರ್ಡ್​ ನಿವಾಸಿಯಾಗಿರುವ ಆ್ಯಡಮ್ ಕರ್ಲಿಕೆಲ್​ ಈಗ ತಮ್ಮ ಟ್ಯಾಟೂ ಸ್ಟೈಲಿನಿಂದ ವಿಶ್ವದ ಗಮನ ಸೆಳೆದಿದ್ದಾರೆ.


Loading...


32 ವರ್ಷದ ಆ್ಯಡಮ್ ಕ್ಯಾನ್ಸರ್ ರೋಗದಿಂದ ಬಳಲುತಿದ್ದರು. ಈ ಮಾಹಾಮಾರಿಯಿಂದ ಚರ್ಮದ ಸೌಂದರ್ಯ ಹಾಳಾಗುತ್ತಿರುವುದನ್ನು ಗಮನಿಸಿದ್ದಾರೆ. ಹೀಗಾಗಿ ಚರ್ಮದ ಬಣ್ಣವನ್ನೇ ಬದಲಿಸಲು ನಿರ್ಧರಿಸಿದ ಆ್ಯಡಮ್ 'ಬ್ಲಾಕ್ ಟ್ಯಾಟೂ'ವಿನ ಮೊರೆ ಹೋಗಿದ್ದಾರೆ. ಈ ನಡುವೆ ಕಣ್ಣಿನ ಬಿಳಿ ಭಾಗಕ್ಕೂ ಹಚ್ಚೆ ಹಾಕಿಸಿ ಸಖತ್ ಡಿಫೆರೆಂಟ್ ಆಗಿ ಕಾಣಿಸುತ್ತಿದ್ದಾರೆ.ಇದೀಗ ಕ್ಯಾನ್ಸರ್​ ರೋಗದಿಂದ ಚೇತರಿಸಿಕೊಂಡಿರುವ ಆ್ಯಡಮ್​ಗೆ ಚರ್ಮ ಮಸುಕಾಗಿ ಕಾಣಿಸುತ್ತಿರುವುದು ಚಿಂತೆಗೀಡು ಮಾಡಿದೆ. ಈ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಟ್ಯಾಟೂ ಮೊರೆ ಹೋದ ಈ ರಷ್ಯನ್ ಸದ್ಯ ತಮ್ಮ ಜೀವನ ಉತ್ಸಾಹವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 2017ರಲ್ಲಿ ಪೊಲೆಂಡ್​ನ 'ಸೆಕೆಂಡ್​ ಫೇಸ್'​ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ದೇಹ ಪೂರ್ತಿ ಟ್ಯಾಟೂ ಹಾಕಿಸಿಕೊಳ್ಳಬೇಕೆಂಬ ಇಚ್ಛೆ ಹೊಂದಿರುವುದಾಗಿ ಆ್ಯಡಮ್​ ತಿಳಿಸಿದ್ದರು.ಚರ್ಮದ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದ ಆ್ಯಡಮ್ ಅಂತೂ ದೇಹವನ್ನು ಟ್ಯಾಟೂಮಯವಾಗಿಸಲು ಯಶಸ್ವಿಯಾಗಿದ್ದಾರೆ. ಆದರೆ ತನ್ನ ಶಿಶ್ನು ಮಾತ್ರ ಹಿಂದಿನ ಬಣ್ಣದಲ್ಲೇ ಇರುವುದು ಕೂಡ ಆ್ಯಡಮ್​ರಿಗೆ ಚಿಂತೆಯ ವಿಷಯವಾಗಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಯ ಮೊರೆ ಹೋಗಿರುವ ಅವರು ವೃಷಣ ಭಾಗವನ್ನು ಕೂಡ ಕಪ್ಪು ಬಣ್ಣಕ್ಕೆ ಮಾರ್ಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ತಿಳಿಸಿರುವ ಆ್ಯಡಮ್​ ಸರ್ಜರಿ ಸಮಯದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು.


'ನಾನು ಸಮಾಜದಲ್ಲಿ ಇತರಿಗಿಂತ ಭಿನ್ನವಾಗಿ ಕಾಣಿಸಲು ಬಯಸುತ್ತಿದ್ದೆ. ಆದರೆ ಚರ್ಮ ರೋಗಕ್ಕೀಡಾದ ನಾನು ಟ್ಯಾಟೂ ಹಾಕಿಸಿ ಕೊಳ್ಳುತ್ತಿದ್ದೆ. ಈಗ ನನ್ನ ಬಣ್ಣವು ಏಕರೂಪದಲ್ಲಿದೆ. ಯಾರು ಏನೇ ಹೇಳಿದರೂ ಇದು ನನ್ನ ದೇಹ. ಜೀವನ ಎಂಬುದು ತುಂಬಾ ಚಿಕ್ಕದಾಗಿದ್ದು, ನಾಳೆ ಏನಾಗುತ್ತದೆ ಎಂಬುದು ತಿಳಿದಿರುವುದಿಲ್ಲ. ಹೀಗಾಗಿ ನಾಳೆಯ ಚಿಂತೆ ಬಿಟ್ಟು ನನ್ನ ಇಷ್ಟದಂತೆ ಬದುಕಲು ಪ್ರಾರಂಭಿಸಿದ್ದೇನೆ' ಎಂದು ಆ್ಯಡಮ್ ಕರ್ಲಿಕೆಲ್ ತಿಳಿಸಿದ್ದಾರೆ. ಇದೀಗ ದೇಹದ 90% ಭಾಗಕ್ಕೂ ಟ್ಯಾಟೂ ಹಾಕಿಸಿಕೊಂಡಿರುವ ಆ್ಯಡಮ್ ಹೆಸರು ಗಿನ್ನೆಸ್ ದಾಖಲೆಗೆ ಸೇರುವ ದಿನಗಳು ದೂರವಿಲ್ಲ.
First published:July 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ