Shocking News: ನಿಮ್ಮ ಮನೆಯಲ್ಲಿ ಬೆಕ್ಕಿನ ಮರಿ ಇದ್ಯಾ? ಹಾಗಾದ್ರೆ ಹುಷಾರ್​, ಈ ಸ್ಟೋರಿ ಓದ್ಲೇ ಬೇಕು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಕ್ಕುಗಳನ್ನು ನಾವು ಮಡಿಲಲ್ಲಿ ಎತ್ತಿಕೊಂಡು ಕುಳಿತಾಗ ಅವುಗಳು ತಮ್ಮ ಚೂಪಾದ ಉಗುರುಗಳಿಂದ ನಮ್ಮ ಚರ್ಮದ ಮೇಲೆ ಗೀರಿದರೆ ಅಥವಾ ಸ್ಕ್ರ್ಯಾಚ್ ಮಾಡಿದರೆ ನಮಗೆ ಒಂದು ರೀತಿಯ ಕಚಗುಳಿ ಇಟ್ಟಂಗೆ ಆಗುತ್ತದೆ.

  • Share this:
  • published by :

ನಿಮ್ಮ ಮನೆಯಲ್ಲಿ ಬೆಕ್ಕು (Cat) ಅಥವಾ ಬೆಕ್ಕಿನ ಮರಿಗಳು ಇದ್ದರೆ, ನೀವು ಸ್ವಲ್ಪ ಹುಷಾರಾಗಿರುವುದು ಒಳ್ಳೆಯದು. ಏಕೆಂದರೆ ಇಲ್ಲೊಬ್ಬ ವ್ಯಕ್ತಿ ಬೆಕ್ಕಿನ ಮರಿಯಿಂದ ತನ್ನ ಕಣ್ಣನ್ನೇ ಕಳೆದು ಕೊಂಡಿದ್ದಾನಂತೆ ನೋಡಿ. ಈ ವಿಚಾರ ಕೇಳಿ ಎಂತವರಾದವರೂ ಸಹ ‘ಏನಪ್ಪಾ ಇದು ಬೆಕ್ಕಿನ ಮರಿಯಿಂದ ಹೇಗೆ ಕಣ್ಣು ಕಳೆದುಕೊಳ್ಳುತ್ತಾರೆ’ ಅಂತ ಸಂದೇಹ ಪಡದೇ ಇರಲಾರರು. ಮನೆಯಲ್ಲಿ ಸಾಕಿಕೊಂಡ ಬೆಕ್ಕು ಅಥವಾ ಬೆಕ್ಕಿನ ಮರಿಗಳ ಜೊತೆ ಆಟವಾಡುವುದು ಎಂದರೆ ಅದು ತುಂಬಾನೇ ಮಜಾ ನೀಡುತ್ತದೆ ಅಂತ ಹೇಳಬಹುದು. ಆದರೆ ಈ ಬೆಕ್ಕುಗಳನ್ನು ನಾವು ಮಡಿಲಲ್ಲಿ ಎತ್ತಿಕೊಂಡು ಕುಳಿತಾಗ ಅವುಗಳು ತಮ್ಮ ಚೂಪಾದ ಉಗುರುಗಳಿಂದ ನಮ್ಮ ಚರ್ಮದ (Skin) ಮೇಲೆ ಗೀರಿದರೆ ಅಥವಾ ಸ್ಕ್ರ್ಯಾಚ್ ಮಾಡಿದರೆ ನಮಗೆ ಒಂದು ರೀತಿಯ ಕಚಗುಳಿ ಇಟ್ಟಂಗೆ ಆಗುತ್ತದೆ. ಆದರೆ ಈ ಕಚಗುಳಿ ಇಡುವ ವಿಚಾರವನ್ನು ನೀವು ಇನ್ಮುಂದೆ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. 


ಮನೆಗೆ ತಂದ ಬೆಕ್ಕಿನಿಂದ ಕಣ್ಣು ಕಳೆದುಕೊಂಡ್ರಾ ಈ ವ್ಯಕ್ತಿ?


ಹೌದು.. ಈ ರೀತಿಯ ಬೆಕ್ಕಿನ ಮರಿ ಮಾಡಿದ ಸ್ಕ್ರ್ಯಾಚ್ ವ್ಯಕ್ತಿಯೊಬ್ಬರ ಜೀವನದಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದೆ. ಅಮೇರಿಕನ್ ಜರ್ನಲ್ ಆಫ್ ಕೇಸ್ ರಿಪೋರ್ಟ್ಸ್ ನಲ್ಲಿ ಇತ್ತೀಚೆಗೆ ಪ್ರಕಟವಾದ ಅವರ ಪ್ರಕರಣದ ವಿವರಣೆಯ ಪ್ರಕಾರ, ಹೊಸ ಬೆಕ್ಕನ್ನು ಮನೆಗೆ ತಂದಿರುವ ಒಬ್ಬ ವ್ಯಕ್ತಿ ತಾವು ಒಂದು ದಿನ ಕಾರು ಓಡಿಸುವಾಗ ಹಠಾತ್ತನೆ ಎಡಭಾಗದ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರಂತೆ.


ವರದಿಯಲ್ಲಿ ಹೆಸರಿಸದ 47 ವರ್ಷದ ವ್ಯಕ್ತಿ ತೀವ್ರ ಅನಾರೋಗ್ಯಕ್ಕೆ ಒಳಗಾಗುವ ಎರಡು ತಿಂಗಳ ಮೊದಲು ತನ್ನ ಬೆಕ್ಕನ್ನು ದತ್ತು ಪಡೆದಿದ್ದು ಮನೆಗೆ ತಂದಿದ್ದರಂತೆ. ಅವರಿಗೆ ಪದೇ ಪದೇ ಜ್ವರ ಮತ್ತು ಒಂದು ವಾರದಿಂದ ನಿರಂತರ ತಲೆನೋವು ಇದ್ದ ಕಾರಣ ಅವರು ವೈದ್ಯರ ಬಳಿ ಹೋಗಿದ್ದಾರೆ. ಅವರ ರೋಗಲಕ್ಷಣಗಳು ಕೋವಿಡ್ -19 ಸೋಂಕಿಗೆ ಸಂಬಂಧಿಸಿರಬಹುದು ಎಂದು ವೈದ್ಯರು ಹೇಳಿದ್ದಾರೆ.


ಇದನ್ನು‘ಕ್ಯಾಟ್ ಸ್ಕ್ರ್ಯಾಚ್’ ಕಾಯಿಲೆ ಅಂದ್ರಂತೆ ವೈದ್ಯರು


ಈ ವೈದ್ಯರ ನಂತರ ಈ ವ್ಯಕ್ತಿ ಮತ್ತೊರ್ವ ವೈದರ ಬಳಿ ಹೋಗಿ ತಪಾಸಣೆ ಮಾಡಿಸಿಕೊಂಡಿದ್ದಾರೆ, ಅಲ್ಲಿ ಅವರು ಇದು ‘ಕ್ಯಾಟ್ ಸ್ಕ್ರ್ಯಾಚ್’ ಕಾಯಿಲೆ ಅಂತ ಹೇಳಿದ್ದಾರೆ. ಆ ವ್ಯಕ್ತಿ ಭಾಗಶಃ ದೃಷ್ಟಿ ಕಳೆದುಕೊಂಡ ನಂತರ ಅವರ ಕಣ್ಣಿನ ನರದ ಸುತ್ತಲೂ ಊತ ಕಾಣಿಸಿಕೊಂಡಿದೆ.


ಕ್ಯಾಟ್ ಸ್ಕ್ರ್ಯಾಚ್ ರೋಗವು ವಾಸ್ತವವಾಗಿ ಚಿಗಟೆಗಳಿಂದ ಬರುತ್ತದೆ ಮತ್ತು ಅಪರೂಪವಾಗಿ ಇದು ಬೆಕ್ಕುಗಳನ್ನು ಅನಾರೋಗ್ಯಗೊಳಿಸುತ್ತದೆ. ಕ್ಯಾಟ್ ಸ್ಕ್ರ್ಯಾಚ್ ಕಾಯಿಲೆ ಬಾರ್ಟೊನೆಲ್ಲಾ ಹೆನ್ಸೆಲೆ ಎಂಬ ಒಂದು ರೀತಿಯ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ, ಇದು ಚಿಗಟೆ ಕಡಿತದ ಮೂಲಕ ಬೆಕ್ಕುಗಳಿಗೆ ಹರಡಬಹುದು ಎಂದು ವೈದ್ಯರು ಹೇಳುತ್ತಾರೆ.


ಇದನ್ನೂ ಓದಿ: IPLನಿಂದ ಬದಲಾಯಿತು ಅದೃಷ್ಟ, ₹ 2 ಕೋಟಿ ಗೆದ್ದು ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ವಾಚ್​ಮ್ಯಾನ್​ ಮಗ!

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, 40 ಪ್ರತಿಶತದಷ್ಟು ಬೆಕ್ಕುಗಳು ತಮ್ಮ ಜೀವನದ ಒಂದು ಹಂತದಲ್ಲಿ ಈ ಬ್ಯಾಕ್ಟೀರಿಯಾವನ್ನು ಹೊಂದುತ್ತವೆ, ಆದರೆ ಅವುಗಳಲ್ಲಿ ಹೆಚ್ಚಿನ ಬೆಕ್ಕುಗಳು ಯಾವುದೇ ರೀತಿಯ ರೋಗಲಕ್ಷಣಗಳನ್ನು ತೋರಿಸುವುದಿಲ್ಲ ಮತ್ತು ವಿರಳವಾಗಿ ಮಾನವರಿಗೆ ಆ ಸೋಂಕು ಹರಡುತ್ತದೆ.


ಈ ಅಪರೂಪದ ಕಾಯಿಲೆ ಬಗ್ಗೆ ಕ್ಲೀವ್ಲ್ಯಾಂಡ್ ಕ್ಲಿನಿಕ್ ಏನ್ ಹೇಳಿದೆ ನೋಡಿ


ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಇತ್ತೀಚೆಗೆ ದತ್ತು ಪಡೆದ ಬೆಕ್ಕುಗಳು ಚಿಗಟೆಗಳ ಸಂಪರ್ಕದಿಂದ ಬ್ಯಾಕ್ಟೀರಿಯಾವನ್ನು ಹೊಂದುವ ಸಾಧ್ಯತೆಯಿದೆ. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬೆಕ್ಕಿನ ಮರಿಗಳು ಜನರಿಗೆ ಒರಟಾದ ಉಗುರುಗಳಿಂದ ಗೀರಿದರೆ ಅಥವಾ ತೆರೆದ ಗಾಯವನ್ನು ನೆಕ್ಕಿದರೆ ಸೋಂಕು ಹರಡುವ ಸಾಧ್ಯತೆಯಿರುತ್ತದೆಯಂತೆ.


ಮನುಷ್ಯರಲ್ಲಿ ಈ ರೋಗವು ಜ್ವರ, ಬಳಲಿಕೆ ಮತ್ತು ಕಣ್ಣಿನ ನರಗಳ ಊತಕ್ಕೆ ಕಾರಣವಾಗಬಹುದು. ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಯುಎಸ್ ನಲ್ಲಿ ಪ್ರತಿವರ್ಷ ಸುಮಾರು 12,000 ಜನರು ಈ ಕ್ಯಾಟ್ ಸ್ಕ್ರ್ಯಾಚ್ ಕಾಯಿಲೆಯಿಂದ ಬಳಲುತ್ತಾರಂತೆ. ಈ ರೋಗವನ್ನು ಕ್ಯಾಟ್ ಸ್ಕ್ರ್ಯಾಚ್ ಜ್ವರ, ಲಿಂಫೋರೆಟಿಕುಲೋಸಿಸ್ ಮತ್ತು ಫೆಲಿನೋಸಿಸ್ ಎಂದೂ ಕರೆಯಲಾಗುತ್ತದೆಯಂತೆ.


ಇದನ್ನೂ ಓದಿ: Bengaluru Mysuru Expressway ಹೊಸ ಟೋಲ್ ದರ ಹೀಗಿದೆ

ತುಂಬಾನೇ ಅಪರೂಪವಾಗಿ, ಈ ಸೋಂಕು ಮೆದುಳು, ಕಣ್ಣುಗಳು ಅಥವಾ ಹೃದಯಕ್ಕೆ ಹರಡಬಹುದು. ಬೆಕ್ಕು ಸ್ಕ್ರಾಚ್ ಮಾಡಿದ 3 ರಿಂದ 14 ದಿನಗಳ ನಡುವೆ ಈ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ ಎಂದು ಸಿಡಿಸಿ ಹೇಳಿದೆ.


ಈ ವ್ಯಕ್ತಿಯ ಕೇಸ್ ರಿಪೋರ್ಟ್ ಏನ್ ಹೇಳುತ್ತೇ?


ಕೇಸ್ ರಿಪೋರ್ಟ್ ನಲ್ಲಿ ವಿವರಿಸಿದ ಪ್ರಕಾರ, ಈ ವ್ಯಕ್ತಿಯು ಊದಿಕೊಂಡ ದುಗ್ಧರಸ ಗ್ರಂಥಿಗಳನ್ನು ಹೊಂದಿಲ್ಲ ಮತ್ತು ಮುಖ್ಯವಾಗಿ ತಲೆನೋವು ಮತ್ತು ಬೆಳಕಿನ ಸೂಕ್ಷ್ಮತೆಯನ್ನು ವರದಿ ಮಾಡಿದ್ದರಿಂದ, ವೈದ್ಯರ ಮೊದಲ ಸಂದೇಹ ಮೆನಿಂಜೈಟಿಸ್ ಆಗಿತ್ತು. ಆದರೆ ಅವನು ಮೆದುಳಿನ ಸೋಂಕಿನ ಲಕ್ಷಣಗಳನ್ನು ತೋರಿಸಿದಾಗ ಮತ್ತು ಅವನ ಹೊಸ ಬೆಕ್ಕು ಆಗಾಗ್ಗೆ ಅವನನ್ನು ಉಜ್ಜುತ್ತಿತ್ತು ಅಂತ ಹೇಳಿದಾಗ, ವೈದ್ಯಕೀಯ ತಂಡವು ಈ ರೋಗವನ್ನು ಪತ್ತೆ ಮಾಡಿತು.


 


ನಂತರ ನ್ಯೂರೋರೆಟಿನಿಟಿಸ್ ಅಥವಾ ಕಣ್ಣನ್ನು ಮೆದುಳಿಗೆ ಸಂಪರ್ಕಿಸುವ ರೆಟಿನಾದಲ್ಲಿನ ನರದ ಊತವನ್ನು ಸಹ ವೈದ್ಯರು ಪತ್ತೆ ಮಾಡಿದರು. ಈ ಕಾಯಿಲೆಯನ್ನು ಪ್ರತಿಜೀವಕಗಳನ್ನು ನೀಡುವುದರ ಮೂಲಕ ಚಿಕಿತ್ಸೆ ನೀಡಬಹುದು, ಇದು ಮನುಷ್ಯನ ಜ್ವರ ಮತ್ತು ತಲೆನೋವನ್ನು ಗುಣಪಡಿಸುತ್ತದೆ. ಆದರೆ ಅವರ ದೃಷ್ಟಿ ನಷ್ಟವನ್ನು ಭಾಗಶಃ ಮಾತ್ರ ಪರಿಹರಿಸಲಾಯಿತು.


First published: