Health Care: ಕಡಿಮೆ ಪ್ರೊಟೀನ್​ ಫುಡ್ ತಿಂದು, ಹೀಗೆ ಉಪವಾಸ ಮಾಡಿದ್ರೆ ದೀರ್ಘಾಯುಷಿಗಳಾಗಬಹುದು ಅಂತಾರೆ ತಜ್ಞರು

ನೀವು ದೀರ್ಘಾಯುಷ್ಯಿಗಳಾಗಿ ಬದುಕಲು ಬಯಸಿದರೆ, ನೀವು ಪ್ರೋಟೀನ್ ಅನ್ನು ಕಡಿಮೆ ಮಾಡಿ ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವ ಮೂಲಕ ನಿಯಮಿತವಾಗಿ ಉಪವಾಸ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾರ್ಬೋಹೈಡ್ರೇಟ್‌ ಮತ್ತು ಪ್ರೋಟೀನ್‍ಗಳು  (Protein ) ಪ್ರಸ್ತುತ ಹೆಚ್ಚು ಚರ್ಚೆಯಲ್ಲಿರುವ ಪೋಷಕಾಂಶಗಳು. ಹೈ ಪ್ರೋಟೀನ್ ಆಹಾರಗಳು ಫಿಟ್ (Fit) ಆಗಿರಲು, ತೂಕ ಇಳಿಕೆಗೆ (Weight Loss) ಸಹಕಾರಿ ಎನ್ನಲಾಗಿದೆ ಮತ್ತು ಕಾರ್ಬೋಹೈಡ್ರೇಟ್‌ ಕೂಡ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶವಾದರೂ ಕೆಲವು ಕೆಟ್ಟ ಕಾರ್ಬ್ಸ್ ಬೊಜ್ಜು, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಗೆ (Problem) ಕಾರಣವಾಗಿವೆ. ಆದಾಗ್ಯೂ ಹೊಸ ಅಧ್ಯಯನವೊಂದು ಹೆಚ್ಚು ಕಾರ್ಬೋಹೈಡ್ರೇಟ್‌ಗಳು ಮತ್ತು ಕಡಿಮೆ ಪ್ರೋಟೀನ್ ಮತ್ತು ಉಪವಾಸ ಒಬ್ಬರ ಜೀವಿತಾವಧಿಯನ್ನು ವಿಸ್ತರಿಸಬಹುದು (Long Live) ಎಂದು ಹೇಳಿದೆ.

ನಿಯಮಿತವಾಗಿ ಉಪವಾಸ ಮಾಡಿ

ಅಧ್ಯಯನದ ಸಹ ಲೇಖಕ, ವಾಲ್ಟರ್ ಲಾಂಗೊ, ಗ್ವಿನೆತ್ ಪಾಲ್ಟ್ರೋ ಅವರಂತಹ ಪ್ರಸಿದ್ಧ ವ್ಯಕ್ತಿಗಳಿಗೆ ಆಹಾರಕ್ರಮವನ್ನು ವಿನ್ಯಾಸಗೊಳಿಸುವ ದೀರ್ಘಾಯುಷ್ಯ ಪರಿಣಿತರಾಗಿದ್ದಾರೆ. ನೀವು ದೀರ್ಘಾಯುಷ್ಯಿಗಳಾಗಿ ಬದುಕಲು ಬಯಸಿದರೆ, ನೀವು ಪ್ರೋಟೀನ್ ಅನ್ನು ಕಡಿಮೆ ಮಾಡಿ ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವ ಮೂಲಕ ನಿಯಮಿತವಾಗಿ ಉಪವಾಸ ಮಾಡಿ ಎಂದು ಸೆಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಹೇಳಿದೆ.

ಹೆಚ್ಚು ಕಾರ್ಬೋಹೈಡ್ರೇಟ್‌, ಕಡಿಮೆ ಪ್ರೊಟೀನ್‌ , ಉಪವಾಸ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಸಸ್ಯಾಧಾರಿತ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬುಗಳು ಮತ್ತು ಕಡಿಮೆ ಮಾಂಸ ಮತ್ತು ಸಂಸ್ಕರಿಸದ ಆಹಾರವು ದೀರ್ಘಾಯುಷ್ಯಕ್ಕೆ ಉತ್ತಮವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಉಪವಾಸ ಮತ್ತು ಇತರ ಆಹಾರಕ್ರಮಗಳು ಸಾಮಾನ್ಯವಾಗಿ ತೂಕ ನಷ್ಟಕ್ಕೆ ಸಂಬಂಧಿಸಿವೆ ಜೊತೆಗೆ ದೀರ್ಘಾವಧಿಯ ಆರೋಗ್ಯಕ್ಕೆ ಅವು ಮುಖ್ಯವೆಂದು ಲಾಂಗೋ ಹೇಳಿದ್ದಾರೆ.

ತೂಕ ನಷ್ಟಕ್ಕೂ ಪರಿಣಾಮಕಾರಿ

"ದೀರ್ಘಾಯುಷ್ಯದ ಆಹಾರವು ತೂಕ ನಷ್ಟವನ್ನು ಉಂಟುಮಾಡುವ ಉದ್ದೇಶದ ಆಹಾರದ ನಿರ್ಬಂಧವಲ್ಲ ಆದರೆ ವಯಸ್ಸಾದ ನಿಧಾನಗತಿಯ ಮೇಲೆ ಕೇಂದ್ರೀಕರಿಸಿದ ಜೀವನಶೈಲಿಯಾಗಿದೆ" ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೀರ್ಘಾಯುಷ್ಯದ ಆಹಾರವು ಹೆಚ್ಚಿನ ಕಾರ್ಬ್, ಕಡಿಮೆ ಪ್ರೋಟೀನ್, ಬೀಜಗಳು, ಆಲಿವ್ ಎಣ್ಣೆ ಮತ್ತು ಕೆಲವು ಡಾರ್ಕ್ ಚಾಕೊಲೇಟ್ ಮತ್ತು ಮೀನುಗಳಂತಹ ಆರೋಗ್ಯಕರ ಕೊಬ್ಬಿನಿಂದ ಕೂಡಿರಬೇಕು. ಸುಮಾರು 30% ದೈನಂದಿನ ಕ್ಯಾಲೊರಿಗಳೊಂದಿಗೆ ದ್ವಿದಳ ಧಾನ್ಯಗಳು, ತರಕಾರಿಗಳಂತಹ ಪ್ರಾಥಮಿಕ ಸಸ್ಯ-ಆಧಾರಿತ ಕಾರ್ಬೋಹೈಡ್ರೇಟ್‌ಗಳನ್ನು ಅವಲಂಬಿಸಿ ದೀರ್ಘಾವಧಿ ಆಯಸ್ಸಿಗೆ ಸೂಕ್ತವಾದ ಆಹಾರಕ್ರಮವನ್ನು ಸಂಶೋಧಕರು ವಿವರಿಸಿದ್ದಾರೆ.

ಲಾಂಗೋ ಕೆಂಪು ಮಾಂಸ, ಸಂಸ್ಕರಿಸಿದ ಮಾಂಸ, ಹಾಗೆಯೇ ಸಂಸ್ಕರಿಸಿದ ಧಾನ್ಯಗಳು ಮತ್ತು ಸಕ್ಕರೆಗಳಿಂದ ದೂರವಿರುವಂತೆ ಹೇಳುತ್ತಾರೆ. ಸಂಸ್ಕರಿತ ಆಹಾರಗಳು ಮತ್ತು ಮಾಂಸವನ್ನು ಸಸ್ಯಧಾರಿತ ಆಹಾರಗಳಿಗೆ ವಿನಿಮಯ ಮಾಡಿಕೊಳ್ಳುವುದರಿಂದ ನಿಮ್ಮ ಜೀವಿತಾವಧಿಗೆ 10 ವರ್ಷಗಳನ್ನು ಸೇರಿಸಬಹುದು ಎಂದು ಇತ್ತೀಚಿನ ಸಂಶೋಧನೆಯು ಹೇಳಿದೆ.

ಇದನ್ನೂ ಓದಿ: ಹೆವಿ ಫುಡ್ ನಂತರ ಅಸ್ವಸ್ಥತೆಯಾ? ಈ ಕೆಲವು ಡಿಟಾಕ್ಸ್ ವಾಟರ್​ ಕುಡಿದು ಲೈಟ್ ಫೀಲ್ ಮಾಡಿ

ಪ್ರೋಟೀನ್ ಸೇವನೆಯನ್ನು ಸೀಮಿತಗೊಳಿಸುವುದು ಜೀವಿತಾವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಸೂಚಿಸುತ್ತಾರೆ. ಮಾನವರು ಮತ್ತು ಪ್ರಾಣಿಗಳ ಅಧ್ಯಯನಗಳ ಆಧಾರದ ಮೇಲೆ ಕೆಲವು ಪುರಾವೆಗಳ ಪ್ರಕಾರ, ಬಹಳಷ್ಟು ಪ್ರೋಟೀನ್ ಮತ್ತು ಅಮೈನೋ ಆಮ್ಲಗಳನ್ನು ಸೇವಿಸುವುದರಿಂದ ವಯಸ್ಸಾಗುವಿಕೆಯ ವೇಗವನ್ನು ಹೆಚ್ಚಿಸುವ ಕೆಲವು ಹಾರ್ಮೋನುಗಳ ಉತ್ಪಾದನೆಯಂತಹ ಜೈವಿಕ ಪ್ರಕ್ರಿಯೆಗಳನ್ನು ನಿಧಾನಗೊಳಿಬಹುದು ಎಂದು ಅವರು ಹೇಳಿದ್ದಾರೆ.

ಎರಡು ರೀತಿಯ ಉಪವಾಸಕ್ಕೆ ಶಿಫಾರಸ್ಸು

ಅಧ್ಯಯನದ ಸಂಶೋಧಕರು ಮಧ್ಯಂತರ ಮತ್ತು ಬಹುದಿನಗಳ ಉಪವಾಸ ಎರಡನ್ನೂ ಶಿಫಾರಸು ಮಾಡುತ್ತಾರೆ. ಆರೋಗ್ಯವನ್ನು ಉತ್ತಮಗೊಳಿಸಲು, ಸಂಶೋಧಕರು ಪ್ರತಿದಿನ 11 ರಿಂದ 12 ಗಂಟೆಗಳ ಅವಧಿಯಲ್ಲಿ ತಿನ್ನಲು ಮತ್ತು ಉಳಿದ ಗಂಟೆಗಳವರೆಗೆ ಉಪವಾಸವಿರಲು ಶಿಫಾರಸು ಮಾಡುತ್ತಾರೆ. ನಿಯತಕಾಲಿಕವಾಗಿ ದಿನಗಟ್ಟಲೆ ಉಪವಾಸ ಮಾಡುವುದು ಅಥವಾ ಉಪವಾಸ ಅನುಕರಿಸುವ ಆಹಾರವನ್ನು ಅನುಸರಿಸುವುದು ಸಹ ಪ್ರಯೋಜನಕಾರಿ ಎಂದು ಸಂಶೋಧಕರು ಹೇಳುತ್ತಾರೆ.

ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಐದು ದಿನಗಳ ಉಪವಾಸದ ಚಕ್ರವನ್ನು ಅವರು ಶಿಫಾರಸು ಮಾಡುತ್ತಾರೆ, ದೀರ್ಘಾವಧಿಯ ಉಪವಾಸವು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕರ ಜೀವನ ನಡೆಸಲು ರಕ್ತದೊತ್ತಡ-ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಸೂಚಿಸುವ ಮಾನವ ಮತ್ತು ಪ್ರಾಣಿಗಳ ಮಾದರಿಗಳ ಸಾಕ್ಷ್ಯವನ್ನು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Health Care: ಭಾರತೀಯ ಥಾಲಿಯನ್ನು ಹೇಗೆ? ಯಾವಾಗ ತಿನ್ಬೇಕು? ಆರೋಗ್ಯ ತಜ್ಞರ ಸಲಹೆ

ಕಡಿಮೆ ಪ್ರೋಟೀನ್ ಮತ್ತು ಉಪವಾಸದ ಅಡ್ಡಪರಿಣಾಮಗಳು

ಉಪವಾಸ ಮತ್ತು ಪ್ರೋಟೀನ್ ಅನ್ನು ಕಡಿಮೆ ಮಾಡುವುದು ಆರೋಗ್ಯಕರ ಜೀವನಕ್ಕೆ ಉತ್ತಮ ಅಲ್ಲ ಎಂದು ಹಲವರು ಅಭಿಪ್ರಾಯ ಪಡುತ್ತಾರೆ. ಪೌಷ್ಟಿಕತಜ್ಞ ರಾಬ್ ವುಲ್ಫ್ ಈ ಹಿಂದೆ ಉಪವಾಸ ಸ್ನಾಯುಗಳ ನಷ್ಟ, ಆಲಸ್ಯ ಮತ್ತು ಹಸಿವಿನಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಹೇಳಿದರು. ಸಕ್ರಿಯವಾಗಿರುವುದು ಮತ್ತು ಹೆಚ್ಚಾಗಿ ಸಂಪೂರ್ಣ ಆಹಾರವನ್ನು ಮಿತವಾಗಿ ತಿನ್ನುವುದು ನಿಮ್ಮ ಆರೋಗ್ಯ ಮತ್ತು ಜೀವನವನ್ನು ಸುಧಾರಿಸುವ ಸುರಕ್ಷಿತ ಮಾರ್ಗ ಎಂದು ಅವರು ಹೇಳಿದರು.
Published by:Pavana HS
First published: