• Home
 • »
 • News
 • »
 • lifestyle
 • »
 • Birthday Gift: ಹೆಂಡತಿ ಹುಟ್ಟುಹಬ್ಬಕ್ಕೆ ಪತಿರಾಯ ಗಿಫ್ಟ್ ನೀಡಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತೇ?

Birthday Gift: ಹೆಂಡತಿ ಹುಟ್ಟುಹಬ್ಬಕ್ಕೆ ಪತಿರಾಯ ಗಿಫ್ಟ್ ನೀಡಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತೇ?

ಹೆಂಡತಿಗೆ ಗಂಡ ಗಿಫ್ಟ್ ನೀಡಿದ ರೋಲ್ಸ್ ರಾಯ್ ಕಾರು.

ಹೆಂಡತಿಗೆ ಗಂಡ ಗಿಫ್ಟ್ ನೀಡಿದ ರೋಲ್ಸ್ ರಾಯ್ ಕಾರು.

ಸಿತಾರ ತನ್ನ ಹೆಂಡತಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅವಳಿಗೆ ಮರ್ಸಿಡಿಸ್ ಇ-ಕ್ಲಾಸ್ ಅನ್ನು ಉಡುಗೊರೆಯಾಗಿ ನೀಡಿದ್ದರು.

 • Trending Desk
 • 3-MIN READ
 • Last Updated :
 • Share this:

  ಬಹುತೇಕರು ತಮ್ಮ ಹೆಂಡತಿಯ ಹುಟ್ಟುಹಬ್ಬಕ್ಕೆ ವಿಶೇಷವಾದ ಉಡುಗೊರೆ (Birthday Special Gift) ನೀಡಿ ಅವರಿಗೆ ಖುಷಿ ಪಡಿಸುವುದು ನಾವೆಲ್ಲಾ ನೋಡಿರುವಂತಹ ಸಂಗತಿಯಾಗಿದೆ. ಅದರಲ್ಲೂ ಈ ಸ್ಟಾರ್ ನಟರ ಮತ್ತು ಕ್ರಿಕೆಟ್ ಆಟಗಾರರು ತಮ್ಮ ಪ್ರೀತಿಯ ಮಡದಿಗೆ ದುಬಾರಿ ಬೆಲೆಯ ಗಿಫ್ಟ್ (Coastly Gift) ನೀಡುವುದನ್ನು ನಾವೆಲ್ಲಾ ನೋಡುತ್ತಲೇ ಇರುತ್ತೇವೆ.ಇತ್ತೀಚೆಗೆ ಕೂಲ್ ಕ್ಯಾಪ್ಟನ್  ಎಂ.ಎಸ್.ಧೋನಿ ತಮ್ಮ ಹೆಂಡತಿಗಾಗಿ ಆಕೆಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕಾರೊಂದನ್ನು ನೀಡಿದ್ದು ನಮಗೆಲ್ಲಾ ತಿಳಿದ ವಿಷಯವೇ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಹೆಂಡತಿಯ ಹುಟ್ಟುಹಬ್ಬಕ್ಕೆ ಎಷ್ಟು ದುಬಾರಿಯ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ನೀವು ನೋಡಿದರೆ ಬೆಚ್ಚಿ ಬೀಳುವುದಂತೂ ಗ್ಯಾರಂಟಿ.


  ಹೌದು.. ಈ ದುಬಾರಿ ಉಡುಗೊರೆ ನೀಡಿದ ಪತಿರಾಯ ದುಬೈ ಮೂಲದ ಭಾರತೀಯ ಉದ್ಯಮಿ ತಮ್ಮ ಹೆಂಡತಿಯ ಜನ್ಮದಿನದಂದು 3 ಕೋಟಿ ರೂಪಾಯಿ ಬೆಲೆಯುಳ್ಳ ರೋಲ್ಸ್ ರಾಯ್ಸ್ (A Husband Gifted Rolls Roy Car To Wife For Her Birthday) ಉಡುಗೊರೆಯಾಗಿ ನೀಡಿದ್ದಾರೆ. ಬಿಸಿಸಿ ಗ್ರೂಪ್ ಎಂಬ ಸಂಸ್ಥೆ ಹೊಂದಿರುವ ಅಮ್ಜದ್ ಸಿತಾರ ಎಂಬ ಭಾರತೀಯ ಉದ್ಯಮಿ, ತನ್ನ ಹೆಂಡತಿಯಾದ ಮಾರ್ಜಾನಾರಿಗೆ 22ನೇ ಜನ್ಮದಿನದಂದು ರೋಲ್ಸ್ ರಾಯ್ಸ್ ಬ್ಲ್ಯಾಕ್ ಬ್ಯಾಡ್ಜ್ ಕಾರನ್ನು ಉಡುಗೊರೆಯಾಗಿ ನೀಡಿದ ಆಗರ್ಭ ಶ್ರೀಮಂತ ಎಂದು ಹೇಳಬಹುದಾಗಿದೆ.


  ದುಬೈ ಮೂಲದ ಜನಪ್ರಿಯ ದಿನಪತ್ರಿಕೆಯಲ್ಲಿ ವರದಿಯಾಗಿರುವ ಸುದ್ದಿಯ ಪ್ರಕಾರ ಮರ್ಜಾನಾ ಅಮ್ಜದ್ ತಮ್ಮ ಗಂಡನಾದ ಅಮ್ಜದ್ ಸಿತಾರ ಸಂಸ್ಥೆಯಲ್ಲಿಯೇ ಸಿಒಒ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಂಪತಿ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯವರಾಗಿದ್ದು, ಕಳೆದ ವರ್ಷ ಜೂನ್ 4ರಂದು ಸಾಂಕ್ರಾಮಿಕ ರೋಗ ಕೋವಿಡ್-19 ಹಾವಳಿಯ ನಡುವೆ ಮದುವೆಯಾದರು ಮತ್ತು ತಮ್ಮ ವಿವಾಹ ವಾರ್ಷಿಕೋತ್ಸವದ ದಿನವನ್ನು ತಮ್ಮ ಮೊದಲ ಮಗಳ ಜನನದೊಂದಿಗೆ ಆಚರಿಸಿದರು. ಅವರು ತಮ್ಮ ಗ್ಯಾರೇಜ್‌ನಲ್ಲಿ ರೇಂಜ್ ರೋವರ್, ಬೆಂಟ್ಲಿ, ಟೊಯೋಟಾ ಲ್ಯಾಂಡ್ ಕ್ರೂಸರ್ ಮತ್ತು ಜೀಪ್‌ನಂತಹ ಇತರ ಐಷಾರಾಮಿ ಕಾರುಗಳು ಮತ್ತು ಎಸ್‌ಯುವಿಗಳನ್ನೂ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.


  ಈ ದುಬಾರಿ ಕಾರನ್ನು ಉಡುಗೊರೆಯಾಗಿ ಪಡೆದ ಮರ್ಜಾನಾ "ನನ್ನ ಗಂಡ ನನಗೆ ಈ ಕಾರನ್ನು ಉಡುಗೊರೆಯಾಗಿ ನೀಡಲು ಯೋಜಿಸುತ್ತಿದ್ದಾರೆ ಎಂದು ನನಗೆ ತಿಳಿದಿರಲಿಲ್ಲ. ಇದು ಒಂದು ದೊಡ್ಡ ಉಡುಗೊರೆಯಾಗಿದೆ. ಅವರು ನನ್ನ ಮಗಳು ಮತ್ತು ನನ್ನನ್ನು ಶೋ ರೂಮ್‌ಗೆ ಕರೆದೊಯ್ದರು ಮತ್ತು ಆ ಸ್ಥಳವನ್ನು ಬಲೂನ್‌ಗಳು ಮತ್ತು ಇತರ ಪಾರ್ಟಿ ಫೆಸ್ಟೋನ್‌ಗಳಿಂದ ಅಲಂಕರಿಸಲಾಗಿತ್ತು" ಎಂದು ತಮ್ಮ ಖುಷಿ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. "ನಾನು ತುಂಬಾ ಉತ್ಸುಕಳಾಗಿದ್ದೆ, ಏಕೆಂದರೆ ಇದು ನನ್ನ ಕನಸಿನ ಕಾರು ಮತ್ತು ಇದನ್ನು ಉಡುಗೊರೆಯಾಗಿ ನಾನು ನನ್ನ ಗಂಡನಿಂದ ಪಡೆಯುವ ನಿರೀಕ್ಷೆ ಇರಲಿಲ್ಲ," ಎಂದು ಹೇಳಿದರು.


  ಸಿತಾರ ತನ್ನ ಹೆಂಡತಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅವಳಿಗೆ ಮರ್ಸಿಡಿಸ್ ಇ-ಕ್ಲಾಸ್ ಅನ್ನು ಉಡುಗೊರೆಯಾಗಿ ನೀಡಿದ್ದರು.


  ಇದನ್ನು ಓದಿ: Made in India Vodka: ಗುಣಮಟ್ಟದ ದೇಶೀಯ ವೋಡ್ಕಾ ಕಡಿಮೆ ಬೆಲೆಯಲ್ಲಿ ನೀಡುತ್ತಿವೆ ಸ್ವದೇಶಿ ಬ್ರ್ಯಾಂಡ್‌ಗಳು..!


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.

  Published by:HR Ramesh
  First published: