Health Tips: ಹೃದಯಾಘಾತಕ್ಕೂ, ಹೃದಯ ಸ್ತಂಭನಕ್ಕೂ ವ್ಯತ್ಯಾಸವೇನು? ಇದು ಯಾವಾಗ ಸಂಭವಿಸುತ್ತೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೃದಯಾಘಾತಕ್ಕೂ ಮತ್ತು ಹಠಾತ್ ಹೃದಯ ಸ್ತಂಭನಕ್ಕೂ ಪರಸ್ಪರ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಈ ಪದಗಳು ಒಂದೇ ಆಗಿಲ್ಲದಿದ್ದರೂ ಕೂಡ ಸಾಮಾನ್ಯವಾಗಿ ಪರಸ್ಪರ ಬದಲಿಯಾಗಿ ಬಳಸಲಾಗುತ್ತದೆ. ಹೃದಯಾಘಾತ ಮತ್ತು ಹೃದಯ ಸ್ತಂಭನದ ಸಮಯದಲ್ಲಿ ನಿಜವಾಗಿ ಏನಾಗುತ್ತದೆ? ಈ ಬಗ್ಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಾವೇರಿ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಸಲಹೆಗಾರರು ಮತ್ತು ಹೃದಯನಾಳ ಶಸ್ತ್ರಚಿಕಿತ್ಸಕ ಡಾ. ರಾಜೇಶ್ ಟಿ.ಆರ್ ಒಂದಷ್ಟು ಮಾಹಿತಿ ನೀಡಿದ್ದಾರೆ.

ಮುಂದೆ ಓದಿ ...
  • Share this:

ಹಠಾತ್ ಹೃದಯಘಾತದಿಂದ (Heart Attack) ಸಂಭವಿಸುವ ಸಾವನ್ನು ಹೃದಯ ಸ್ತಂಭನ (Heart Cardiac) ಎಂದೂ ಕರೆಯುತ್ತಾರೆ. ಇದು ಹೃದಯ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ ಸಂಭವಿಸುವ ಅನಿರೀಕ್ಷಿತ ಸಾವು. ಇದು ಈಗ ಜಗತ್ತಿನಲ್ಲಿ ಸಂಭವಿಸುವ ಅತಿ ದೊಡ್ಡ ಸಾವುಗಳಲ್ಲಿ ಒಂದಾಗಿದೆ. ಹೃದ್ರೋಗಕ್ಕೆ ಸಂಬಂಧಿಸಿದ ಅರ್ಧದಷ್ಟು ಸಾವುಗಳು ಹೃದಯ ಸ್ತಂಭನದಿಂದ ಸಂಭವಿಸುತ್ತವೆ. ಹೃದಯ ಸ್ತಂಭನದ ನಂತರ, ರಕ್ತ ಪರಿಚಲನೆ ನಿಲ್ಲುತ್ತದೆ ಮತ್ತು ಸಾವು ಸಂಭವಿಸುವ ಮೊದಲು ನಾಲ್ಕರಿಂದ ಆರು ನಿಮಿಷಗಳ ಮೊದಲು ಮೆದುಳು (Brain) ಸಾಯುತ್ತದೆ. ಪ್ರತಿ ನಿಮಿಷ ಕಳೆದಂತೆ ಬದುಕುಳಿಯುವ ಸಾಧ್ಯತೆಗಳು 7-10 ಪ್ರತಿಶತದಷ್ಟು ಕಡಿಮೆಯಾಗುತ್ತವೆ.


ಆದರೆ, ಹೃದಯಾಘಾತಕ್ಕೂ ಮತ್ತು ಹಠಾತ್ ಹೃದಯ ಸ್ತಂಭನಕ್ಕೂ ಪರಸ್ಪರ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಈ ಪದಗಳು ಒಂದೇ ಆಗಿಲ್ಲದಿದ್ದರೂ ಕೂಡ ಸಾಮಾನ್ಯವಾಗಿ ಪರಸ್ಪರ ಬದಲಿಯಾಗಿ ಬಳಸಲಾಗುತ್ತದೆ. ಹೃದಯಾಘಾತ ಮತ್ತು ಹೃದಯ ಸ್ತಂಭನದ ಸಮಯದಲ್ಲಿ ನಿಜವಾಗಿ ಏನಾಗುತ್ತದೆ? ಈ ಬಗ್ಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಾವೇರಿ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಸಲಹೆಗಾರರು ಮತ್ತು ಹೃದಯನಾಳ ಶಸ್ತ್ರಚಿಕಿತ್ಸಕ ಡಾ. ರಾಜೇಶ್ ಟಿ.ಆರ್ ಒಂದಷ್ಟು ಮಾಹಿತಿ ನೀಡಿದ್ದಾರೆ.


ಡಾ. ರಾಜೇಶ್ ಟಿ ಆರ್, ಕಾರ್ಡಿಯೋಥೊರಾಸಿಕ್ ಸಲಹೆಗಾರರು ಮತ್ತು ಹೃದಯನಾಳ ಶಸ್ತ್ರಚಿಕಿತ್ಸಕ,
ಕಾವೇರಿ ಆಸ್ಪತ್ರೆ, ಎಲೆಕ್ಟ್ರಾನಿಕ್ ಸಿಟಿ (ಬೆಂಗಳೂರು)


ಹೃದಯಾಘಾತ ಮತ್ತು ಹಠಾತ್ ಹೃದಯ ಸ್ತಂಭನ-ಭಿನ್ನತೆಗಳು


ಹೃದಯಾಘಾತ ಎಂದರೇನು?: ನಮ್ಮ ಹೃದಯ ಕಾರ್ಯನಿರ್ವಹಿಸಲು ಪರಿಧಮನಿಯ ಅಪಧಮನಿಗಳ ಮೂಲಕ ಹೃದಯಕ್ಕೆ ಒದಗಿಸುವ ಆಮ್ಲಜನಕಯುಕ್ತ ರಕ್ತ ಅಗತ್ಯವಾಗಿರುತ್ತದೆ. ಈ ಅಪಧಮನಿಗಳು ಕಟ್ಟಿಕೊಂಡಾಗ(ಬ್ಲಾಕ್‌ಆದಾಗ) ಹೃದಯಕ್ಕೆ ರಕ್ತವನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಆಗ ಹೃದಯಾಘಾತ ಸಂಭವಿಸುತ್ತದೆ. ಇದರಿಂದ ಹೃದಯ ಸ್ನಾಯುಗಳು ಶಾಶ್ವತವಾಗಿ ಹಾನಿಗೊಳ್ಳುವ ಅಪಾಯವಿದ್ದು, ಈ ಬ್ಲಾಕ್‌ಗಳನ್ನು ತಕ್ಷಣವೇ ಪರಿಹರಿಸಬೇಕು.


ಹಠಾತ್‌ಹೃದಯ ಸ್ತಂಭನ ಎಂದರೇನು?: ಹೃದಯ ಸ್ತಂಭನದಲ್ಲಿ, ಹೃದಯವು ಬಡಿಯುವುದನ್ನು ನಿಲ್ಲಿಸುತ್ತದೆ. ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ಮೆದುಳು ಸೇರಿದಂತೆ ಎಲ್ಲಾ ಅಂಗಗಳಿಗೆ ರಕ್ತ ಪೂರೈಕೆಯು ಪರಿಣಾಮ ಬೀರುತ್ತದೆ. ಮೆದುಳಿಗೆ ರಕ್ತದ ಹರಿವು ಇಲ್ಲದೆ, ಒಬ್ಬ ವ್ಯಕ್ತಿಯು ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾನೆ. ತುರ್ತು ಚಿಕಿತ್ಸೆ ಲಭಿಸದಿದ್ದರೆ ತಕ್ಷಣವೇ ಸಾವು ಸಂಭವಿಸಬಹುದು. ಹಠಾತ್ ಹೃದಯ ಸ್ತಂಭನದ ಕಾರಣವು ಹೃದಯಕ್ಕೆ ಸಂಬಂಧಿಸಿರಬಹುದು ಅಥವಾ ಸಂಬಂಧಿಸಿಲ್ಲದೆಯೂ ಇರಬಹುದು.


for heart health and avoid heart attack first dont do bad habits
ಸಾಂದರ್ಭಿಕ ಚಿತ್ರ


ಹಠಾತ್ ಹೃದಯ ಸ್ತಂಭನಕ್ಕೆ ಕಾರಣಗಳೇನು?: ಸಾಮಾನ್ಯ ಕಾರಣವೆಂದರೆ ಅಸಹಜ ಹೃದಯದ ಬಡಿತ. ಸಾಮಾನ್ಯವಾಗಿದ್ದನ್ನು ವೆಂಟ್ರಿಕ್ಯುಲರ್ ಫೈಬ್ರಿಲೇಷನ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ವಿದ್ಯುತ್ ಪ್ರಚೋದನೆಗಳನ್ನು ವ್ಯವಸ್ಥಿತವಾಗಿ ಹೃದಯದ ಮೂಲಕ ಹಾಯಿಸಿದಾಗ ಹೃದಯದ ಕೋಣೆಗಳು ಅನುಕ್ರಮವಾಗಿ ಸಂಕೋಚನ ಪ್ರಾರಂಭಿಸುತ್ತವೆ. ಆಗ ರಕ್ತವು ದೇಹದ ಎಲ್ಲಾ ಅಂಗಗಳಿಗೆ ಪರಿಣಾಮಕಾರಿಯಾಗಿ ಪಂಪ್ ಮಾಡಲು ಕಾರಣವಾಗುತ್ತದೆ. ವೈದ್ಯರು ವಿಎಫ್ ಎಂದು ಕರೆಯುವ ವೆಂಟ್ರಿಕ್ಯುಲರ್ ಫೈಬ್ರಿಲೇಶನ್‌ನಲ್ಲಿ ಬಹು ಪ್ರಚೋದನೆಗಳು ಹೃದಯದ ಮೂಲಕ ತ್ವರಿತ, ಯಾದೃಚ್ಛಿಕ ಮತ್ತು ಅನಿಯಂತ್ರಿತ ರೀತಿಯಲ್ಲಿ ಉತ್ಪತ್ತಿಯಾಗುತ್ತವೆ ಮತ್ತು ಹಾದುಹೋಗುತ್ತವೆ. ಇದು ಹೃದಯದ ನಿಷ್ಪರಿಣಾಮಕಾರಿ ಸಂಕೋಚನಕ್ಕೆ ಕಾರಣವಾಗುತ್ತದೆ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ.


ಪರಿಧಮನಿಯ ಅಪಧಮನಿ ಸಮಸ್ಯೆಯು ಹಠಾತ್ ಹೃದಯ ಸ್ತಂಭನವನ್ನು ಉಂಟುಮಾಡಬಹುದು. ವಿಶೇಷವಾಗಿ ಮುಖ್ಯ ಪರಿಧಮನಿಯ ಅಪಧಮನಿಗಳ ಪ್ರಾಕ್ಸಿಮಲ್ ವಿಭಾಗಗಳಲ್ಲಿ ಬ್ಲಾಕ್ ಉಂಟಾದರೆ ಹಠಾತ್ ಹೃದಯ ಸ್ತಂಭನದ ಅಪಾಯ ಹೆಚ್ಚು. ಹೃದಯಾಘಾತವು ಪರಿಧಮನಿಯ ಕಾಯಿಲೆಯಿಂದ ಉಂಟಾಗುತ್ತದೆ. ಇವೆರಡೂ ಭಿನ್ನವಾಗಿದ್ದರೂ ಅವುಗಳ ನಡುವೆ ಕೊಂಡಿ ಇದೆ. ಹೃದಯಾಘಾತದಿಂದ ಬಳಲುತ್ತಿರುವ ರೋಗಿಯು ದುರದೃಷ್ಟವಶಾತ್ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಹೃದಯ ಸ್ತಂಭನಕ್ಕೆ ಒಳಗಾಗಬಹುದು. ಮಹಾಪಧಮನಿಯ ಸ್ಟೆನೋಸಿಸ್‌ನಂತಹ ಕವಾಟದ ಹೃದಯ ಕಾಯಿಲೆಗಳು ಹಠಾತ್ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.


Fourth class student dies due to heart attack dharwad saklb mrq
ಸಾಂದರ್ಭಿಕ ಚಿತ್ರ


ಹಠಾತ್ ಹೃದಯಾಘಾತ ಮತ್ತು ಭಾರತೀಯರು!


ದುರದೃಷ್ಟವಶಾತ್, ಭಾರತೀಯರು ಹೃದ್ರೋಗಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಮತ್ತು ಈ ಸಂಖ್ಯೆಯು ಪ್ರತಿ ವರ್ಷ ಗಣನೀಯವಾಗಿ ಹೆಚ್ಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಜನಗಣತಿಯ ಪ್ರಕಾರ, ಪ್ರತಿ ಲಕ್ಷ ಭಾರತೀಯರಲ್ಲಿ ಸುಮಾರು 4,280 ಮಂದಿ ಹೃದಯ ಸ್ತಂಭನದಿಂದ ಸಾಯುತ್ತಿದ್ದಾರೆ.


ಹಠಾತ್ ಹೃದಯ ಸ್ತಂಭನದ ನಿರ್ವಹಣೆ – ಬೇಸಿಕ್‌ಲೈಫ್‌ಸಪೋರ್ಟ್‌


ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಹಠಾತ್ ಹೃದಯ ಸ್ತಂಭನದ ತುರ್ತು ನಿರ್ವಹಣೆಯನ್ನು ಸರಳಗೊಳಿಸಿದೆ. ಈ ತರಬೇತಿಯನ್ನು ಈಗ ವೈದ್ಯಕೀಯ ಹಿನ್ನೆಲೆ ಇಲ್ಲದವರು ಕೂಡ ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಕಲಿಯಬಹುದು. ಈ ತರಬೇತಿಯನ್ನು ಬೇಸಿಕ್ ಲೈಫ್ ಸಪೋರ್ಟ್(ತುರ್ತು ಜೀವ ಉಳಿಸುವಿಕೆ) ಅಥವಾ ಸಂಕ್ಷಿಪ್ತವಾಗಿ BLS ಎಂದು ಕರೆಯಲಾಗುತ್ತದೆ. BLS ನ ತಂತ್ರವನ್ನು ಬಳಸಿಕೊಂಡು, ತರಬೇತಿ ಪಡೆದ ವ್ಯಕ್ತಿಯು ಹಠಾತ್ ಹೃದಯ ಸ್ತಂಭನದಿಂದ ಬಳಲುತ್ತಿರುವ ರೋಗಿಯನ್ನು ವೈದ್ಯಕೀಯ ಸಹಾಯ ಸಿಗುವವರೆಗೂ ಜೀವಂತವಾಗಿರಿಸಬಹುದು.


Heart Attack Chances are high for this blood people
ಸಾಂದರ್ಭಿಕ ಚಿತ್ರ


BLS ನ ಸಂಕ್ಷಿಪ್ತ ಹಂತಗಳು: ಒಬ್ಬ ವ್ಯಕ್ತಿಯು ಕುಸಿದು ಬಿದ್ದಾಗ ಸಾಮಾನ್ಯ ಕಾರಣವೆಂದರೆ ಹಠಾತ್ ಹೃದಯ ಸ್ತಂಭನ. ಕುಸಿದ ಬಿದ್ದ ಸ್ಥಳ ವ್ಯಕ್ತಿಗೆ ಮತ್ತು BLS ಪೂರೈಕೆದಾರರಿಗೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮೊದಲ ಹಂತವಾಗಿದೆ. ಇಲ್ಲದಿದ್ದರೆ, ರೋಗಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ.


ಇದನ್ನೂ ಓದಿ: Heart Attack ಹೇಗೆ ಸಂಭವಿಸುತ್ತೆ? ಹೃದಯಾಘಾತದಿಂದ ಪಾರು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್‌


ವೈದ್ಯಕೀಯ ಸಹಾಯಕ್ಕೆ ಕರೆ ಮಾಡಿ: ಉಸಿರಾಟ ಮತ್ತು ಹೃದಯ ಬಡಿತವನ್ನು ಪರಿಶೀಲಿಸಿ. ಹೃದಯ ಚಲನೆಗಾಗಿ ಎದೆಯನ್ನು, ಕುತ್ತಿಗೆಯಲ್ಲಿ ಬಡಿತಗಳನ್ನು ಪರಿಶೀಲಿಸಿ. 10 ಸೆಕೆಂಡುಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು. ಯಾವ ಬಡಿತವೂ ಇಲ್ಲದಿದ್ದರೆ, ಎದೆಯ ಸಂಕೋಚನವನ್ನು ಪ್ರಾರಂಭಿಸಿ. ಎದೆಯ ಸಂಕೋಚನ ಮತ್ತು ಉಸಿರಾಟದ ಅನುಪಾತವು 30: 2 ಆಗಿರಬೇಕು, ಅಂದರೆ ಪ್ರತಿ 30 ಎದೆಯ ಸಂಕೋಚನಗಳಿಗೆ ಎರಡು ಉಸಿರುಗಳು. "ಹ್ಯಾಂಡ್ಸ್-ಓನ್ಲಿ ಸಿಪಿಆರ್" ಪ್ರೋಟೋಕಾಲ್ ಅನ್ನು ಸಹ ಶಿಫಾರಸು ಮಾಡಲಾಗಿದೆ, ವಿಶೇಷವಾಗಿ ಪ್ರಸ್ತುತ COVID ಸಮಯದಲ್ಲಿ, ಬಾಯಿಯ ಮೂಲಕ ಉಸಿರು ನೀಡಬಾರದು, ಎದೆಯ ಸಂಕೋಚನವನ್ನು ಮಾತ್ರ ಶಿಫಾರಸು ಮಾಡಲಾಗುತ್ತದೆ. ಇದು ತುಂಬಾ ಪರಿಣಾಮಕಾರಿ ಕೂಡ. BLS , ರೋಗಿಯನ್ನು ವೈದ್ಯಕೀಯ ನೆರವು ಸಿಗುವವರೆಗೆ ಜೀವಂತವಾಗಿರಿಸುತ್ತದೆ.




ತೀರ್ಮಾನ: ಹಠಾತ್ ಹೃದಯ ಸ್ತಂಭನವು ವೈದ್ಯಕೀಯ ತುರ್ತುಸ್ಥಿತಿಯಾಗಿದೆ ಮತ್ತು ಸಮಯೋಚಿತ ನೆರವು ದೊರೆಯದಿದ್ದರೆ ಪರಿಸ್ಥಿತಿಯು ತುಂಬಾ ಮಾರಕವಾಗಿರುತ್ತದೆ. ಸಾಮಾನ್ಯ ವ್ಯಕ್ತಿಗಳು ಸಹ ಬಳಸಬಹುದಾದ ಸರಳ ಆದರೆ ಪರಿಣಾಮಕಾರಿ ವಿಧಾನ BLS ಆಗಿದೆ. ಪ್ರತಿಯೊಬ್ಬರೂ BLS ನಲ್ಲಿ ತರಬೇತಿ ಪಡೆದಿರಬೇಕು ಮತ್ತು ಕಲಿಯಲು ಸುಲಭವಾಗಿದೆ.

Published by:Monika N
First published: