Dating Apps: ಡೇಟಿಂಗ್ ಆ್ಯಪ್ ಬಳಕೆ ಮಾಡುವಾಗ ಇವುಗಳನ್ನು ಗಮನದಲ್ಲಿಟ್ಟುಕೊಳ್ಳಿ

Dating Suggestions: ನಮ್ಮಲ್ಲಿ ಹೆಚ್ಚಿನವರು ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಸಂಗಾತಿಯನ್ನು ಹುಡುಕಿಕೊಳ್ಳಲು  ಸ್ವಲ್ಪ ಹೆಚ್ಚು ಪ್ರಯತ್ನ ಮಾಡುತ್ತಾರೆ. ಇನ್ನೊಬ್ಬ ವ್ಯಕ್ತಿಯನ್ನು ಮೆಚ್ಚಿಸಲು ತುಂಬಾ ಪ್ರಯತ್ನಿಸುವುದು ತಪ್ಪಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ ಬದುಕಿನಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. ಎಲ್ಲವೂ ಹೊಸ ಅನುಭವ ನೀಡುತ್ತಿದೆ. ಹೊಸತನವನ್ನು ಪ್ರಯತ್ನಿಸಲು ಅವಕಾಶ ನೀಡುತ್ತಿದೆ. ಕೊರೊನಾ ನಮ್ಮ ಜೀವನವನ್ನು ತಲೆಕೆಳಗಾಗಿ ಮಾಡಿದೆ.  ಜನರೊಂದಿಗೆ ಹೆಚ್ಚು ಬೆರೆಯಲು ಸಾಧ್ಯವಾಗುತ್ತಿಲ್ಲ. ಒಬ್ಬಂಟಿಯಾಗಿ ಇರುವ ಸಮಯ ಇದು. ನೀವು ಮೊದಲಿನ ಹಾಗೆ ಪದೇ ಪದೇ ಹೊರಹೋಗುವಂತಿಲ್ಲ, ಸ್ನೇಹಿತರನ್ನು ಭೇಟಿ ಮಾಡುವಂತಿಲ್ಲ. ಇಂಥಹ ಸಮಯದಲ್ಲಿ ನೀವು ಆನ್​ಲೈನ್ ಡೇಟಿಂಗ್ ಪ್ರಯತ್ನಿಸಬಹುದು.

ಆನ್‌ಲೈನ್‌ನಲ್ಲಿ ನಿಮ್ಮ ಸಂಗಾತಿಯನ್ನು  ಭೇಟಿ ಮಾಡಲು ನೀವು ಬಳಸಬಹುದಾದ ಹಲವು ವಿಭಿನ್ನ ಅಪ್ಲಿಕೇಶನ್‌ಗಳಿವೆ. ಈ ಹೆಚ್ಚಿನ ಆಪ್‌ಗಳನ್ನು ಬಳಕೆ ಮಾಡಿ, ವಿಭಿನ್ನವಾದ ಬಯೋ ಬರೆದು ಒಳ್ಳೆಯ ಸಂಗಾತಿಯನ್ನು  ಹುಡುಕಿಕೊಳ್ಳುವುದು ಸುಲಭ.  ಹಾಗಾದರೆ ಆ್ಯಪ್ ಬಳಕೆ ಮಾಡುವಾಗ ಯಾವ ಕ್ರಮಗಳನ್ನು ಬಳಕೆ ಮಾಡಬೇಕು ಎಂಬುದು ಇಲ್ಲಿದೆ.

ತುಂಬಾ ಕಷ್ಟಪಡಬೇಡಿ

ನಮ್ಮಲ್ಲಿ ಹೆಚ್ಚಿನವರು ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಸಂಗಾತಿಯನ್ನು ಹುಡುಕಿಕೊಳ್ಳಲು  ಸ್ವಲ್ಪ ಹೆಚ್ಚು ಪ್ರಯತ್ನ ಮಾಡುತ್ತಾರೆ. ಇನ್ನೊಬ್ಬ ವ್ಯಕ್ತಿಯನ್ನು ಮೆಚ್ಚಿಸಲು ತುಂಬಾ ಪ್ರಯತ್ನಿಸುವುದು ತಪ್ಪಾಗುತ್ತದೆ. ಯಾವತ್ತೂ ಯಾರನ್ನು ಮೆಚ್ಚಿಸಲು ಹೋಗದಿರಿ. ಆತ್ಮವಿಶ್ವಾಸದಿಂದಿರಿ, ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ನಿಮ್ಮ ಪ್ರಯತ್ನ ಫಲ ನೀಡದಿದ್ದಾಗ ನಿರಾಶರಾಗಬೇಡಿ.

ಸಭ್ಯರಾಗಿರಿ

ನೀವು ಯಾರೊಂದಿಗಾದರೂ ಸಂಭಾಷಣೆಯನ್ನು ಪ್ರಾರಂಭಿಸಿದಾಗ, ಮುಕ್ತ, ಸಭ್ಯ ಮತ್ತು ಸ್ನೇಹಪರರಾಗಿರಿ, ಆದರೆ ಅದು ಮೀತಿ ಮೀರಬಾರದು. ಇನ್ನೊಬ್ಬ ವ್ಯಕ್ತಿಗೆ ನಿಮ್ಮ ಬಗ್ಗೆ ತಿಳಿದಿಲ್ಲ, ಅವರ ಬಗ್ಗೆ  ನಿಮಗೆ ತಿಳಿದಿಲ್ಲ , ಈ ಕಾರಣದಿಂದ , ಅವರು  ತಪ್ಪಾಗಿ ಅರ್ಥ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಅತಿರೇಕಕ್ಕೆ ಹೋಗದೆ ನಿಮ್ಮ ಕೈನಲ್ಲಿ ಸಾಧ್ಯವಾದಷ್ಟು ಪ್ರಯತ್ನ ಮಾಡಿ.

ನಿಮ್ಮ ವ್ಯಕ್ತಿತ್ವವನ್ನು ತಿಳಿಸುವ ಬಯೋ ಬರೆಯಿರಿ

ಇದನ್ನೂ ಓದಿ: ಸ್ನೇಹಿತೆಯ ಮದುವೆಗೆ ತಯಾರಾಗಲು ಇಲ್ಲಿದೆ ಟಿಪ್ಸ್

ನಿಮ್ಮ ಡೇಟಿಂಗ್ ಪ್ರೊಫೈಲ್‌ಗಾಗಿ ಬಯೋ ಬರೆಯುವಾಗ ಎಚ್ಚರದಿಂದ ಬರೆಯಿರಿ. , ನಿಮ್ಮ ಬಗ್ಗೆ, ಇಷ್ಟಗಳು, ಇಷ್ಟಪಡದಿರುವುದು ಮತ್ತು ಆಸಕ್ತಿಗಳು. ನಿಮ್ಮ ಅಭಿಪ್ರಾಯ ಮತ್ತು ಅಭಿರುಚಿಯ ಬಗ್ಗೆ ಇತರರಿಗೆ ತಿಳಿಸಲು ಇದು ಉತ್ತಮ ಮಾರ್ಗವಾಗಿದೆ. ನೀವು ಬರೆಯುವ ಬಯೋ ಬೇರೆ ವ್ಯಕ್ತಿಗಳು ನಿಮ್ಮ ಬಗ್ಗೆ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ಅಲ್ಲದೇ ಬಯೋವನ್ನು ಉತ್ತಮವಾಗಿ ಬರೆಯುವುದರಿಂದ ನಿಮಗೆ ಹೊಂದಾಣಿಕೆ ಆಗುವ ವ್ಯಕ್ತಿಗಳ ಜೊತೆ ಸಂಪರ್ಕ ಮಾಡಬಹುದು, ಇಲ್ಲದಿದ್ದಲ್ಲಿ ಸುಮ್ಮನೆ ನಿಮ್ಮ ಸಮಯ ವ್ಯರ್ಥವಾಗುತ್ತದೆ.

ನೀವು ಹುಡುಕುತ್ತಿರುವುದರ ಬಗ್ಗೆ ಖಚಿತಪಡಿಸಿಕೊಳ್ಳಿ

ಡೇಟಿಂಗ್ ಆಪ್‌ಗಳಲ್ಲಿ ಎಲ್ಲಾ ರೀತಿಯ ಜನರಿದ್ದಾರೆ. ಅವರಲ್ಲಿ ಕೆಲವರು ನಿಜವಾದ ಪ್ರೀತಿಯನ್ನು ಹುಡುಕುತ್ತಿದ್ದಾರೆ, ಕೆಲವರು  ಸುಮ್ಮನೆ ರೋಮಾಂಚನಕ್ಕಾಗಿ  ಸಂಗಾತಿಯನ್ನು ಹುಡುಕುತ್ತಾರೆ, ಇನ್ನು ಕೆಲವರು ಸಮಯವನ್ನು ಹೇಗೆ ಕಳೆಯುವುದು ಎಂಬುದು ಅರ್ಥವಾಗದೆ ಆ್ಯಪ ಬಳಕೆ ಮಾಡುತ್ತಾರೆ. ಹಾಗಾಗಿ ನೀವು ಯಾವುದನ್ನ ಮತ್ತು ಯಾರನ್ನು ಹುಡುಕುತ್ತಿದ್ದೀರಾ ಎಂಬುದನ್ನ ಮರೆಯದಿರಿ. ಅಲ್ಲದೇ, ನೀವು ಹೊಸದಾಗಿ ಪರಿಚಯವಾದ ವ್ಯಕ್ತಿಗೆ ನಿಮ್ಮ ಬಗ್ಗೆ ಎಲ್ಲವನ್ನು ಹೇಳಬೇಡಿ. ನಿಮ್ಮ ಖಾಸಗಿ ವಿಚಾರಗಳನ್ನು ಹೇಳಿಕೊಳ್ಳುವಾಗ ಎಚ್ಚರದಿಂದಿರಿ. ಅದನ್ನು ಅವರು ದರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: