• Home
  • »
  • News
  • »
  • lifestyle
  • »
  • Pattadakal History: ಪಟ್ಟದಕಲ್ಲಿನ ಕಲ್ಲು ಕಲ್ಲುಗಳಲ್ಲೂ ಇದೆ ಕರುನಾಡ ಇತಿಹಾಸ, ನೀವೂ ಒಮ್ಮೆ ನೋಡಿ ಬನ್ನಿ ಚಾಲುಕ್ಯರ ಸಾಹಸ

Pattadakal History: ಪಟ್ಟದಕಲ್ಲಿನ ಕಲ್ಲು ಕಲ್ಲುಗಳಲ್ಲೂ ಇದೆ ಕರುನಾಡ ಇತಿಹಾಸ, ನೀವೂ ಒಮ್ಮೆ ನೋಡಿ ಬನ್ನಿ ಚಾಲುಕ್ಯರ ಸಾಹಸ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Travel Guide: ಪಟ್ಟದಕಲ್ಲಿನ ಈ ಸ್ಥಳಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಈ ಪಟ್ಟದಕಲ್ಲಿನಲ್ಲಿ 10 ಪ್ರಮುಖ ದೇವಾಲಯಗಳಿರುವ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತಿದೆ. ಈ ಎಲ್ಲಾ ದೇವಾಲಯಗಳು  ಶಿವನಿಗೆ ಅರ್ಪಿತವಾಗಿದ್ದು, ಇದರ ವಾಸ್ತುಶಿಲ್ಪ ಸಹ ಬಹಳ ವಿಭಿನ್ನವಾಗಿದೆ.

ಮುಂದೆ ಓದಿ ...
  • Share this:

ಕರ್ನಾಟಕ (Karnataka) ಪ್ರವಾಸಿಗರ (Travelers) ನೆಚ್ಚಿನ ಸ್ಥಳ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಐತಿಹಾಸಿಕ ದೇವಾಲಯಗಳಿಂದ (Historical Temple) ಹಿಡಿದು ಸುಂದರ ಜಲಪಾತಗಳವರೆಗೆ (Falls) ಇಲ್ಲಿ ಕಣ್ಣು ತಂಪಾಗಿಸುವ ಹಲವಾರು ಸ್ಥಳಗಳಿವೆ. ಅದರಲ್ಲೂ ಉತ್ತರ ಕರ್ನಾಟದ ಕಡೆ ಹೋದರೆ ಇತಿಹಾಸದ ಕಥೆಗಳನ್ನು ಹೇಳುವ ಹಲವಾರು ಜಾಗಗಳಿವೆ. ಅದರಲ್ಲಿ ಪಟ್ಟದಕಲ್ಲು (Pattadakal) ಸಹ ಸ್ಥಳ ಒಂದು. ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ಜಾಗ ಹಲವಾರು ರಾಜರ ಆಡಳಿತಕ್ಕೆ ಸಾಕ್ಷಿಯಾಗಿದೆ. ಈ ಸ್ಥಳದ ಇತಿಹಾಸವೇನು, ಇದನ್ನು ನಿರ್ಮಿಸಿದ್ದು ಯಾರು ಎಂಬ ಮಾಹಿತಿ ಇಲ್ಲಿದೆ.  ಹಲವಾರು ಐತಿಹಾಸಿಕ ಸ್ಮಾರಕಗಳ ನೆಲೆ ಆಗಿರುವ ಈ ಪಟ್ಟದಕಲ್ಲಿನ ಪ್ರತಿ ಕಲ್ಲುಗಳಲ್ಲಿ ಕರ್ನಾಟಕದ ಇತಿಹಾಸ ಕೇಳುತ್ತದೆ. ಈ ನಗರವು ತನ್ನ ಪುರಾತತ್ತ್ವ ಶಾಸ್ತ್ರದ ಕಾರಣದಿಂದ ಬಹಳ ಪ್ರಸಿದ್ಧವಾಗಿದೆ. ಪಟ್ಟದಕಲ್ಲಿನ ಪುರಾತನ ದೇವಾಲಯಗಳಲ್ಲಿ, ಒಂಬತ್ತು ಪಟ್ಟದಕಲ್ಲು ಸ್ಮಾರಕಗಳ ಗುಂಪು ಹಿಂದೂ ಮತ್ತು ಒಂದು ಜೈನ ದೇವಾಲಯಗಳನ್ನು ಒಳಗೊಂಡಿದೆ.  


ಪಟ್ಟದಕಲ್ಲಿನ ಈ ಸ್ಥಳಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಈ ಪಟ್ಟದಕಲ್ಲಿನಲ್ಲಿ 10 ಪ್ರಮುಖ ದೇವಾಲಯಗಳಿರುವ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತಿದೆ. ಈ ಎಲ್ಲಾ ದೇವಾಲಯಗಳು  ಶಿವನಿಗೆ ಅರ್ಪಿತವಾಗಿದ್ದು, ಇದರ ವಾಸ್ತುಶಿಲ್ಪ ಸಹ ಬಹಳ ವಿಭಿನ್ನವಾಗಿದೆ. ಈ 10 ದೇವಾಲಯಗಳಲ್ಲಿ ದ್ರಾವಿಡ ಮತ್ತು ಅಂದರೆ ನಾಗರ ವಾಸ್ತುಶಿಲ್ಪದ ಅಂಶಗಳಿದ್ದು, ಇದು ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ವಾಸ್ತುಶಿಲ್ಪಗಳ ಸಮ್ಮಿಲನವಾಗಿದೆ.


ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ಪ್ರಕಾರ, ಪಟ್ಟದಕಲ್ಲು 7 ಮತ್ತು 8 ನೇ ಶತಮಾನಗಳಲ್ಲಿ ಚಾಲುಕ್ಯ ರಾಜವಂಶದ ಕಾಲದಲ್ಲಿ ಸ್ಥಾಪನೆ ಮಾಡಲಾಗಿದೆ. ಇನ್ನು ಈ ಪಟ್ಟದಕಲ್ಲು ಎಂದರೆ ಪಟ್ಟಾಭಿಷೇಕದ ಸ್ಥಳ ಎಂದು ಅರ್ಥ.


ಆ ಸಮಯದಲ್ಲಿ ಚಾಲುಕ್ಯ ವಂಶದ ರಾಜರ ಪಟ್ಟಾಭಿಷೇಕದ ಸಮಾರಂಭಗಳನ್ನು ಮಾಡಲು ಈ ಸ್ಥಳವನ್ನು ಬಳಸಲಾಗುತ್ತಿತ್ತು ಎನ್ನುವ ಮಾಹಿತಿ ಇದೆ. ಈ ಸ್ಥಳವನ್ನು ಬಹಳ ಪವಿತ್ರ ಎಂದು ಸಹ ಕರೆಯಲಾಗುತ್ತದೆ. ಹಾಗಾಗಿ ಈ ಸ್ಥಳದಲ್ಲಿ ಪಟ್ಟಾಭಿಷೇಕ ಮಾಡಲಾಗುತ್ತಿತ್ತು. ಮೊದಲೇ ಹೇಳಿದಂತೆ ಈ ಸ್ಥಳ ಹಲವಾರು ರಾಜರ ಆಡಳಿತಕ್ಕೆ ಸಾಕ್ಷಿಯಾಗಿದೆ. ಮುಖ್ಯವಾಗಿ ಚಾಲುಕ್ಯರು, ಸಂಗ್ಮಾ ರಾಜವಂಶ, ಮೊಘಲ್ ಸಾಮ್ರಾಜ್ಯದ ರಾಜರು ಈ ಸ್ಥಳದಲ್ಲಿ ಆಳಿದ್ದಾರೆ.




ಪಟ್ಟದಕಲ್ಲಿನಲ್ಲಿರುವ ಮುಖ್ಯ ದೇವಾಲಯಗಳ ಬಗ್ಗೆ ಮಾಹಿತಿ ಇಲ್ಲಿದೆ


ವಿರೂಪಾಕ್ಷ ದೇವಸ್ಥಾನ 


ಪಟ್ಟದಕಲ್ಲಿನ ಪ್ರಮುಖ ಮತ್ತು ಪ್ರಸಿದ್ಧ ದೇವಾಲಯ ಎಂದರೆ ಈ  ವಿರೂಪಾಕ್ಷ ದೇವಾಲಯ. ಇದನ್ನು 7 ನೇ ಶತಮಾನದಲ್ಲಿ ಕಂಚಿಯ ಪಲ್ಲವರ ವಿರುದ್ಧದ ಯುದ್ಧ ಗೆದ್ದ ನೆನಪಿಗಾಗಿ ರಾಜ ವಿಕ್ರಮಾದಿತ್ಯ II ನಿರ್ಮಿಸಿದ್ದು ಎನ್ನಲಾಗುತ್ತದೆ. ಆದರೆ, ಕೆಲವರ ಪ್ರಕಾರ, ಪತಿ ವಿಜಯ ಸಾಧಿಸಿದ ನೆನಪಿಗಾಗಿ ಇದನ್ನು ರಾಣಿ ಲೋಕಮಹಾದೇವಿ ಕಟ್ಟಿಸಿದ್ದು.  ಇನ್ನು ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಇದು ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡ ಅತಿದೊಡ್ಡ ಪ್ರಸಿದ್ಧ ದೇವಾಲಯವಾಗಿದೆ.


ವಿರೂಪಾಕ್ಷ ದೇವಾಲಯವನ್ನು ಈ ಮೊದಲು ಲೋಕೇಶ್ವರ ದೇವಸ್ಥಾನ ಎಂದು ಕರೆಯಲಾಗುತ್ತಿತ್ತು. ಈ ದೇವಾಲಯದಲ್ಲಿ ಹಲವಾರು ಹಿಂದೂ ದೇವರ ಶಿಲ್ಪಗಳಿದ್ದು, ಆ ಕಾಲದ ಅದ್ಭುತ ವಾಸ್ತುಶಿಲ್ಪಕ್ಕೆ ಒಂದು ಸಾಕ್ಷಿಯಾಗಿದೆ.  ಜೈನ ದೇವಾಲಯ


ಇದನ್ನೂ ಓದಿ: ಮೊಸರನ್ನು ಈ ರೀತಿ ತಿಂದ್ರೆ ಸಾಕು, ತೂಕ ಇಳಿಸೋಕೆ ಬೇರೆ ಏನೂ ಬೇಡ


ಪಟ್ಟದಕಲ್ಲಿನಲ್ಲಿರುವ ಏಕೈಕ ಜೈನ ದೇವಾಲಯ 9 ನೇ ಶತಮಾನಕ್ಕೂ ಹಿಂದಿನದಾಗಿದ್ದು, ಇದನ್ನು ಯಾರು ಕಟ್ಟಿಸಿದ್ದು ಹಾಗೂ ಯಾರದ್ದು ಎನ್ನುವ ಬಗ್ಗೆ ಯಾವುದೇ ರೀತಿಯಲ್ಲಿ ಸರಿಯಾದ ಮಾಹಿತಿ ಇಲ್ಲ. ಆದರೆ, ರಾಜ ಅಮೋಘವರ್ಷ ಮತ್ತು ಅವನ ಮಗ ಎರಡನೇ ಕೃಷ್ಣ ಇಬ್ಬರ ಹೆಸರನ್ನು ಇದಕ್ಕೆ ಇಡಲಾಗಿದೆ.




ಕಾಶಿ ವಿಶ್ವನಾಥ ದೇವಸ್ಥಾನ


ಪಟ್ಟದಕಲ್ಲಿನಲ್ಲಿರುವ ಈ ಕಾಶಿ ವಿಶ್ವನಾಥ ದೇವಾಲಯವನ್ನು 8 ನೇ ಶತಮಾನದಲ್ಲಿ ರಾಷ್ಟ್ರಕೂಟರು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ. ಈ ವಿಶ್ವನಾಥ ದೇವಾಲಯವು ಪಟ್ಟದಕಲ್ಲಿನ ಮಲ್ಲಿಕಾರ್ಜುನ ದೇವಾಲಯದ ಬಳಿ ಇರುವ ಕೊನೆಯ ಹಿಂದೂ ದೇವಾಲಯವಾಗಿದ್ದು, ಅದ್ಭುತವಾದ ವಾಸ್ತುಶಿಲ್ಪ ಎಲ್ಲರನ್ನು ಸೆಳೆಯುತ್ತದೆ.


ಇದಲ್ಲದೇ, ಈ ಪಟ್ಟದಕಲ್ಲಿನ ಆವರಣದಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಪಾಪನಾಥ ದೇವಾಲಯ , ಸಂಗಮೇಶ್ವರ ದೇವಾಲಯ ಹೀಗೆ ಅನೇಕ ದೇವಸ್ಥಾನಗಳಿದ್ದು, ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಈ ಸ್ಥಳಕ್ಕೆ ಭೇಟಿ ನೀಡಬಹುದು.


ಇದನ್ನೂ ಓದಿ: ಈ ಸಿಂಪಲ್ ಹ್ಯಾಕ್ಸ್ ಟ್ರೈ ಮಾಡಿದ್ರೆ ಸುಂದರವಾದ ರೆಡ್​ ಲಿಪ್ ನಿಮ್ಮದಾಗುತ್ತೆ


ತಲುಪುವುದು ಹೇಗೆ?


ಪಟ್ಟದಕಲ್ಲಿಗೆ ನೀವು. ಸರ್ಕಾರಿ ಮತ್ತು ಖಾಸಗಿ ಎರಡೂ ಬಸ್ಸುಗಳ ಮೂಈಲಕ ಹೋಗಬಹುದು.  ಬೆಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಿಂದ ನಿಮಗೆ ಬಸ್​ಗಳು ಸುಲಭವಾಗಿ ಲಭಿಸುತ್ತದೆ. ಇನ್ನು ಪಟ್ಟದಕಲ್ಲಿನಿಂದ 22 ಕಿ.ಮೀ. ದೂರದಲ್ಲಿರುವ ಬಾದಾಮಿ ಹತ್ತಿರದ ರೈಲು ನಿಲ್ದಾಣ ಹತ್ತಿರದಲ್ಲಿದೆ.

Published by:Sandhya M
First published: