Health Tips: ಯೋಗ, ಧ್ಯಾನ ಮಾಡೋಕೆ ಟೈಮ್​ ಇಲ್ಲ ಅನ್ನೋ ನೆಪ ಬಿಡಿ, ಉತ್ತಮ ಆರೋಗ್ಯಕ್ಕೆ ಶಿಸ್ತಿನ ಜೀವನ ಶೈಲಿ

ಶಿಸ್ತಿನ ಜೀವನ ಕ್ರಮ ರೂಢಿಸಿಕೊಳ್ಳೋದು ಕಷ್ಟವಾದ್ರೂ ಒಮ್ಮೆ ಜೀವನದಲ್ಲಿಅಳವಡಿಸಿಕೊಂಡ್ರೆ ಸಾಕು, ಅದೇ ಅಭ್ಯಾಸವಾಗಿ ಹೋಗುತ್ತೆ.  ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಶಿಸ್ತು ಅತಿ ಮುಖ್ಯವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾಯಿಲೆ (Disease) ಬಾರದಂತೆ ಎಚ್ಚರಿಕೆ ತೆಗೆದುಕೊಳ್ಳುವುದು ಮಾತ್ರ ಆರೋಗ್ಯವನ್ನು (Health Tips) ಕಾಪಾಡಿಕೊಳ್ಳುವ ವಿಧಾನವಲ್ಲ, ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿಯಾಗಿದೆ. ಎಲ್ಲರಿಗೂ ದಿನದಲ್ಲಿ 24 ಗಂಟೆ ಕಾಲಾವಧಿಯೇ ಇರುತ್ತದೆ. ಶಿಸ್ತಿನ ಪಾಲನೆ (Disciplinary Custody) ಮಾಡುವವರು ಈ ಅವಧಿಯಲ್ಲಿ ಹೆಚ್ಚು ಸಾಧಿಸಬಲ್ಲರು. ಇತರರಿಗೆ ಸಮಯವಿಲ್ಲ ಎನ್ನುವ ನೆಪ ಮಾತ್ರ ಉಳಿಯುತ್ತದೆ. ಶಿಸ್ತಿನ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆಗಳಿವೆ. ಶಿಸ್ತು ಎಂದರೆ ತಾನು ಮಾಡಬೇಕಾದ ಕೆಲಸವನ್ನು (Work) ಶ್ರದ್ಧೆಯಿಂದ ನಿರ್ವಹಿಸುವುದು, ಕೆಲಸದ ಅವಶ್ಯಕತೆಗಳು, ಜವಾಬ್ದಾರಿಗಳನ್ನು(Responsibility)  ಅರಿತುಕೊಳ್ಳುವುದು, ಆ ಕೆಲಸದಲ್ಲಿ ಒತ್ತಡವನ್ನು (Stress) ನಿರ್ವಹಿಸುವುದು, ಕೋಪ ಆವೇಶದ ಮೇಲೆ ಹಿಡಿತ ಸಾಧಿಸುವುದು, ಸೋಲುಗಳನ್ನು ಒಪ್ಪಿ ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಸೇರಿದಂತೆ ಎಲ್ಲ ಅಂಶಗಳೂ ಸೇರಿವೆ.

ಉತ್ತಮ ಜೀವನ ಶೈಲಿಗೆ ಶಿಸ್ತು

ವಿದ್ಯೆಗೂ ಶಿಸ್ತಿಗೂ ನೇರ ಸಂಬಂಧವಿಲ್ಲ. ಆದ್ರೆ ಶಿಸ್ತನ್ನು ಮೈಗೂಡಿಸುವಲ್ಲಿ ಶಿಕ್ಷಣ ನೆರವಾಗುತ್ತದೆ. ಗಮ್ಯವನ್ನು ಅರುತವರ ಹೆಜ್ಜೆಗಳು ದೃಢವಾಗಿರುತ್ತವೆ. ಸಫಲತೆ ಹೆಚ್ಚಾಗಿರುತ್ತದೆ. ಇತರ ದೈನಂದಿನ ಜವಾಬ್ದಾರಿಗಳನ್ನು ನಿರ್ಲಕ್ಷಿಸದೆ, ಆರೋಗ್ಯದ ವಿಷಯಗಳಲ್ಲಿ ನೆಪಗಳನ್ನು ಹುಡುಕಬಾರದು, ಎಲ್ಲದಕ್ಕೂ ಶಿಸ್ತು ಮುಖ್ಯ. ಇದರ ಅಗತ್ಯವನ್ನು ಎಲ್ಲರೂ ಮನಗಾಣಬೇಕು. ಆರಂಭದಲ್ಲಿ ಕಷ್ಟವೆನಿಸಿದ್ರೂ, ಶಿಸ್ತಿನ ಪ್ರತ್ಯಕ್ಷ ಮತ್ತು ಪರೋಕ್ಷ ಲಾಭಗಳು ಕಾಲಕ್ರಮೇಣ ಅನುಭವಕ್ಕೆ ಬರುತ್ತವೆ.

ನಿಯಮಿತ ಆರೋಗ್ಯ ತಪಾಸಣೆ

ವ್ಯಾಯಾಮ, ಊಟ, ನಿದ್ರೆ, ವಿಶ್ರಾಂತಿ, ಧ್ಯಾನ, ಧನಾತ್ಮಕ ಚಿಂತನೆ, ಒಳ್ಳೆಯ ಅಲೋಚನೆಗಳು ವಯಸ್ಸಿಗೆ ಅನುಗುಣವಾದ ನಿಯಮಿತ ಆರೋಗ್ಯ ತಪಾಸಣೆಗಳು, ಮನೆಯಲ್ಲಿ ಮತ್ತು ವೃತ್ತಿಕ್ಷೇತ್ರದಲ್ಲಿ ಮಧುರ ಬಾಂಧವ್ಯಗಳು, ಸ್ವಚ್ಛತೆ ಮುಂತಾದವು ಆರೋಗ್ಯ ರಕ್ಷಣೆಗೆ ಪೂರಕ. ನಿಯಮಿತ ಆಚರಣೆಗಳನ್ನು ಸಾಧಿಸಲು ಶಿಸ್ತಿನ ಪದ್ಧತಿ ಮುಖ್ಯ, ಇವುಗಳನ್ನು ಪ್ರಾಯೋಗಿಕವಾಗಿ ಆಚರಿಸಲು ಕೆಲವು ದಾರಿಗಳಿವೆ.

ಇದನ್ನೂ ಓದಿ:  Health Tips: ದೀರ್ಘಾಯುಷ್ಯಕ್ಕಾಗಿ ಈ ಡಯೆಟ್ ಫಾಲೋ ಮಾಡಿ, ಇಲ್ಲಿದೆ ಆಯಸ್ಸು ಹೆಚ್ಚಿಸುವ ಆರೋಗ್ಯ ಕ್ರಮ

ನಿಯಮಿತ ದೈನಂದಿನ ಆಚರಣೆ:

ಪ್ರತಿಯೊಬ್ಬರಿಗೂ ದಿನದಲ್ಲಿ 24 ಗಂಟೆಗಳ ಕಾಲವಾಧಿಯೇ ಇರುತ್ತದೆ. ಶಿಸ್ತಿನ ಪಾಲನೆ ಮಾಡುವವರು ಈ ಅವಧಿಯಲ್ಲಿ ಹೆಚ್ಚು ಸಾಧಿಸಬಲ್ಲರು, ಉಳಿದವರಿಗಾಗಿ ಸಮಯವಿಲ್ಲ ಎಂಬ ನೆಪ ಮಾತ್ರ ದೊರೆಯುತ್ತದೆ. ಕಾಲಕ್ರಮೇಣ ಅದೊಂದು ಪರಿಪಾಠವಾಗುತ್ತದೆ.

ಆರೋಗ್ಯ ರಕ್ಷಣೆಯ ಮಹತ್ವ:

ನಮ್ಮಅಧೀನದಲ್ಲಿರುವ ವಸ್ತುವಿನ ಮಹತ್ವ ನಮಗೆ ತಿಳಿದಿರಿವುದಿಲ್ಲ. ಬಹಳ ವೇಳೆ ಅದನ್ನು ಕಳೆದುಕೊಂಡಾಗಲೇ ಅದರ ಮೌಲ್ಯ ತಿಳಿಯುತ್ತದೆ. ಆರೋಗ್ಯದ ವಿಷಯದಲ್ಲಿ ಈ ಮಾತು ಜಾಗತಿಕ ಸತ್ಯ ನಮ್ಮ ಆರೋಗ್ಯ ಅಮ್ಯೂಲವೆಂದೂ, ಅದನ್ನೂ ಒಳ್ಳೆಯ ರೀತಿಯಲ್ಲಿ ಕಾಪಾಡಿಕೊಳ್ಳುವುದು  ಅತ್ಯಂತ ಮಹತ್ವಪೂರ್ಣ ಸಂಗತಿಯೆಂದೂ ನಮಗೆ ತಿಳಿದಿಬೇಕು. ಶಿಸ್ತಿನ ಆಚರಣೆ ಈ ಸಂಗತಿಯನ್ನು ಬೇರೂರಿಸುತ್ತದೆ.

ನಿಯಮಿತ ಆಚರಣೆ ಲಾಭಗಳು:

ಆರೋಗ್ಯದಲ್ಲಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಂಗಗಳಿವ. ಸಾಂಕ್ರಾಮಿಕ ರೋಗಗಳು ಇಡೀ ಸಮಾಜಕ್ಕೆ ಯಾವ ರೀತಿ ಅಪಾಯ ಉಂಟು ಮಾಡಬಲ್ಲರೆಂಬುದನ್ನು ಈಚಿನ ನಮ್ಮ ಕಾಲದ ಜಾಗತಿಕ ಪಿಡುಗೊಂದು ನಮಗೆ ಮನಗಾಣಿಸಿದೆ. ಹೀಗಾಗಿ, ಇಡೀ ಸಮಾಜದ ಆರೋಗ್ಯವೂ ಶಿಸ್ತು, ಸಂಯಮಗಳ ನಿಯಮಿತ ಆಚರಣೆಯಿಂದ ಮಾತ್ರವೇ ಲಭಿಸುತ್ತದೆ.

ಇದನ್ನೂ ಓದಿ:  Beetroot Juice: ಬೇಸಿಗೆಯಲ್ಲಿ 13 ವಿಧದ ಬೀಟ್ರೂಟ್ ಜ್ಯೂಸ್! ಆರೋಗ್ಯಕ್ಕೆ ಬೆಸ್ಟ್ ಇದು

ಯುಕ್ತಾಯುಕ್ತ ವಿವೇಚನೆ:

ಶಿಸ್ತುಬದ್ಧ ಜೀವನದ ಒಂದು ದೊಡ್ಡ ಲಾಭವೆಂದರೆ ಸರಿ-ತಪ್ಪುಗಳ ಬಗ್ಗೆ ಸರಿಯಾದ ಅರಿವು. ಅಧುನಿಕ ಕಾಲದಲ್ಲಿ ಹಲವಾರು ಪ್ರಲೋಭನೆಗಳು ನಮ್ಮ ಬದುಕಿನೊಡನೆ ಹಾಸುಹೊಕ್ಕಾಗಿವೆ. ಇವುಗಳನ್ನು ಹತ್ತಿಕ್ಕುವುದು ಸುಲಭವಲ್ಲ. ಆರೋಗ್ಯ ರಕ್ಷಣೆಯಲ್ಲಿ ಶಿಸ್ತಿನ ಲಾಭಗಳು ಹಲವಾರು.

ಶಿಸ್ತಿನ ಜೀವನ ಕ್ರಮ ರೂಢಿಸಿಕೊಳ್ಳೋದು ಕಷ್ಟವಾದ್ರೂ ಒಮ್ಮೆ ಜೀವನದಲ್ಲಿಅಳವಡಿಸಿಕೊಂಡ್ರೆ ಸಾಕು, ಅದೇ ಅಭ್ಯಾಸವಾಗಿ ಹೋಗುತ್ತೆ.  ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಶಿಸ್ತು ಅತಿ ಮುಖ್ಯವಾಗಿದೆ. ಬೆಳಗ್ಗೆ ಎದ್ದು ವ್ಯಾಯಾಮ ಮಾಡುವುದರಿಂದ ರಾತ್ರಿ ಊಟ ಮಾಡಿ ಮಲಗುವವರೆಗೂ ಶಿಸ್ತಿನ ಕ್ರಮಗಳನ್ನು ಅನುಸರಿಸಿ.
Published by:Pavana HS
First published: