• Home
  • »
  • News
  • »
  • lifestyle
  • »
  • Gut Health: ಕರುಳಿನ ಆರೋಗ್ಯವನ್ನು ಹಾನಿ ಮಾಡುವ ಅಭ್ಯಾಸಗಳಿವು

Gut Health: ಕರುಳಿನ ಆರೋಗ್ಯವನ್ನು ಹಾನಿ ಮಾಡುವ ಅಭ್ಯಾಸಗಳಿವು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕರುಳು ದೇಹದ ಒಟ್ಟಾರೆ ಆರೋಗ್ಯಕ್ಕೆ ಅತಿ ಅವಶ್ಯಕವಾದ ಭಾಗವಾಗಿದೆ. ಶಕ್ತಿಯ ಉತ್ಪಾದನೆ, ಮಾನಸಿಕ ಸ್ವಾಸ್ಥ್ಯ ಮತ್ತು ಹಾರ್ಮೋನ್ ಸಮತೋಲನ ಸೇರಿದಂತೆ ವಿವಿಧ ಜೈವಿಕ ಚಟುವಟಿಕೆಗಳಿಗೆ ಕಾರಣವಾಗಿರುವ ಪೋಷಕಾಂಶಗಳನ್ನು ಕರುಳು ಹೀರಿಕೊಳ್ಳುತ್ತದೆ. ಆರೋಗ್ಯಕ್ಕೆ ಅದರ ಪ್ರಾಮುಖ್ಯತೆಯ ಹೊರತಾಗಿಯೂ, ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಕರುಳು ಸಂಬಂಧಿತ ಆರೋಗ್ಯ ಸಮಸ್ಯೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ.

ಮುಂದೆ ಓದಿ ...
  • Share this:

ನಮ್ಮ ಇಂದಿನ ಆಹಾರ ಪದ್ಧತಿ (Food Culture) ಎಷ್ಟೊಂದು ಮಾರ್ಪಾಡುಗಳನ್ನು ಪಡೆದುಕೊಂಡಿದೆ ಎಂದರೆ ಹೆಚ್ಚಿನ ಸಮಯಗಳಲ್ಲಿ ನಾವು ವಿಷವನ್ನೇ ತಿಂದು ಬದುಕುತ್ತಿದ್ದೇವೆ ಎಂಬಂತಹ ಆಘಾತಕಾರಿ ವಿಷಯವನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ನಾವು ತಿನ್ನುವ ಜಂಕ್ ಆಹಾರ (Junk Food) ಪದ್ಧತಿಗಳು ನಮ್ಮ ನಾಲಗೆಗೆ ರುಚಿಯನ್ನು ನೀಡಿದರೂ ಸಹ ದೇಹಕ್ಕೆ ವಿಷವನ್ನೇ ಉಣಿಸುತ್ತಿದೆ. ಪಾಶ್ಚಿಮಾತ್ಯ ಆಹಾರ ಪದ್ಧತಿಯಿಂದ ಆಹಾರ ತಯಾರಕರಿಗೆ ಲಾಭವಿದ್ದರೂ ನಮಗೆ ವಿನಾಶ ಕಟ್ಟಿಟ್ಟ ಬುತ್ತಿಯಾಗಿದೆ. ಮಾನವ ದೇಹದ ಪ್ರಮುಖ ಭಾಗವೆಂದರೆ ಕರುಳು (Gut) ಎನ್ನಬಹುದು. ನಿಮ್ಮ ಆರೋಗ್ಯವು (Health) ವಿವಿಧ ಪೋಷಕಾಂಶಗಳನ್ನು ದೇಹದಿಂದ ಹೀರಿಕೊಳ್ಳುತ್ತದೆ. ಆ ಮುಖ್ಯ ಕಾರ್ಯವನ್ನು ಕರುಳು ನಿರ್ವಹಿಸುತ್ತದೆ.


ಕರುಳು ದೇಹದ ಒಟ್ಟಾರೆ ಆರೋಗ್ಯಕ್ಕೆ ಅತಿ ಅವಶ್ಯಕವಾದ ಭಾಗವಾಗಿದೆ. ಶಕ್ತಿಯ ಉತ್ಪಾದನೆ, ಮಾನಸಿಕ ಸ್ವಾಸ್ಥ್ಯ ಮತ್ತು ಹಾರ್ಮೋನ್ ಸಮತೋಲನ ಸೇರಿದಂತೆ ವಿವಿಧ ಜೈವಿಕ ಚಟುವಟಿಕೆಗಳಿಗೆ ಕಾರಣವಾಗಿರುವ ಪೋಷಕಾಂಶಗಳನ್ನು ಕರುಳು ಹೀರಿಕೊಳ್ಳುತ್ತದೆ. ಕರುಳಿನಲ್ಲಿ ಸಾಕಷ್ಟು ಬ್ಯಾಕ್ಟೀರಿಯಾಗಳು ವಾಸಿಸುತ್ತವೆ. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ ಮತ್ತು ಪ್ರಬಲವಾದ ರೋಗನಿರೋಧಕ ಶಕ್ತಿಯನ್ನು ದೇಹಕ್ಕೆ ಒದಗಿಸುತ್ತದೆ.


ಒಟ್ಟಾರೆ ಆರೋಗ್ಯಕ್ಕೆ ಅದರ ಪ್ರಾಮುಖ್ಯತೆಯ ಹೊರತಾಗಿಯೂ, ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಕರುಳು ಸಂಬಂಧಿತ ಆರೋಗ್ಯ ಸಮಸ್ಯೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ. ಅನೇಕ ಬಾರಿ ಅನಾರೋಗ್ಯಕರ ಆಹಾರ, ಮಧ್ಯಪಾನ ಸೇವನೆ ಅಭ್ಯಾಸದಿಂದ ಸೃಷ್ಟಿಯಾಗಿ ನಿದ್ರೆಯ ಕೊರತೆಯಿಂದಲೂ ಕರುಳು ಸಮಸ್ಯೆ ಬರಬಹುದಾಗಿದೆ


ನಿಮ್ಮ ಕರುಳಿನ ಆರೋಗ್ಯವನ್ನು ದುರ್ಬಲಗೊಳಿಸುವ ಅಭ್ಯಾಸಗಳು ಇಲ್ಲಿವೆ ನೋಡಿ
ಆಹಾರದಲ್ಲಿ ಫೈಬರ್‌ ಕೊರತೆ
ನಿಮ್ಮ ಆಹಾರದಲ್ಲಿ ಸಾಕಷ್ಟು ಹಸಿರು ತರಕಾರಿಗಳು, ಹಣ್ಣು ಹಂಪಲುಗಳ ಕೊರತೆಯುಂಟಾದರೆ ಕರುಳಿನ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಸರಿಯಲ್ಲ. ಅದಕ್ಕೆ ಹೆಚ್ಚು ಹಸಿರು ತರಕಾರಿ-ಹಣ್ಣುಗಳ ಸೇವನೆ ಮಾಡಿ. ಕರುಳಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.


ಸಾಕಷ್ಟು ನೀರಿನ ಕೊರತೆ
ಸಾಮಾನ್ಯ ಸ್ವಾಸ್ಥ್ಯಕ್ಕೆ ನೀರು ಅತ್ಯಗತ್ಯ. ನಿಯಮಿತವಾಗಿ ಸಾಕಷ್ಟು ನೀರು ಕುಡಿಯುವುದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ತ್ವಚೆಯನ್ನು ಸುಧಾರಿಸುತ್ತದೆ ಮತ್ತು ಕರುಳಿನ ಚಲನೆ, ಸಮತೋಲನವನ್ನು ಕಾಪಾಡುತ್ತದೆ. ಆದ್ದರಿಂದ ದಿನಪೂರ್ತಿ ಸಾಕಷ್ಟು ನೀರು ಕುಡಿಯಿರಿ.


ಇದನ್ನೂ ಓದಿ: Weight Loss Tips: ತೂಕ ಇಳಿಸೋಕೆ ಈ ಪಾನೀಯವನ್ನು ಈ ರೀತಿ ಕುಡಿಯಬೇಕಂತೆ


ಆಹಾರದಲ್ಲಿರಲಿ ನವಧ್ಯಾನಗಳ ಸೇವನೆ
ಈ ಧಾನ್ಯಗಳಲ್ಲಿ ಹಲವಾರು ಪ್ರೋಟಿನ್‌ ಅಂಶಗಳು ಇರುತ್ತವೆ. ಅವುಗಳ ನಿಯಮಿತ ಸೇವನೆಯು ದೇಹದ ಆರೋಗ್ಯಕ್ಕೆ ಬಹಳ ಉತ್ತಮ. ಅದರಲ್ಲೂ ಕರುಳಿನ ಆರೋಗ್ಯಕ್ಕೆ ಮತ್ತಷ್ಟು ಪ್ರಯೋಜನಕಾರಿಯಾಗಿದೆ.


ಅತಿಯಾದ ಸಕ್ಕರೆ ಸೇವನೆ
ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸಿದರೆ ಕರುಳಿನ ಆರೋಗ್ಯಕ್ಕೆ ಅಪಾಯವಾಗಬಹುದು. ಹೆಚ್ಚಿನ ಸಕ್ಕರೆಯುಕ್ತ ಆಹಾರವನ್ನು ಸೇವಿಸುವುದರಿಂದ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ನಾಶವಾಗಬಹುದು.


ಅತಿಯಾದ ಸಕ್ಕರೆ ಸೇವನೆ ಬಯಕೆಗಳು ಅಸಮತೋಲನದಿಂದ ಉಂಟಾಗಬಹುದು. ಇದು ದೇಹದಲ್ಲಿ ಉರಿಯೂತವನ್ನು ಉತ್ತೇಜಿಸುತ್ತದೆ.


ಹೆಚ್ಚು ಕೊಬ್ಬಿನಾಂಶವಿರುವ ಆಹಾರದ ಸೇವನೆ
ಹೌದು ಅಧ್ಯಯನಗಳು ಹೇಳುವ ಪ್ರಕಾರ ಹೆಚ್ಚು ಕೊಬ್ಬಿನಾಂಶ ಇರುವ ಆಹಾರ ಸೇವನೆಯಿಂದ ದೇಹಕ್ಕೆ ಬೊಜ್ಜು, ಮಧುಮೇಹ ಮುಂತಾದ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಇದರ ಜೊತೆಗೆ ಕರುಳು ಕ್ಯಾನ್ಸರ್‌ ಬರುವ ಅಪಾಯ ಹೆಚ್ಚು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.


ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೇ ಇರುವುದು
ಸರಿಯಾದ ಸಮಯಕ್ಕೆ ಆಹಾರ ಸೇವನೆ ಉತ್ತಮ ಅಭ್ಯಾಸವಾಗಿದೆ. ಸಮಯ ತಪ್ಪಿಸಿ ಆಹಾರ ಸೇವನೆ ಮಾಡುವುದು ಆಹಾರದ ಜೀರ್ಣಕ್ರಿಯೆಗೆ ತೊಂದರೆ ಆಗುತ್ತದೆ. ಇದರಿಂದ ಅರ್ಜೀರ್ಣ, ವಾಂತಿ ಈ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.


ಆಹಾರದಲ್ಲಿ ನಾರಿನಂಶದ ಕೊರತೆ
ಆಹಾರದಲ್ಲಿ ನಾರಿನಂಶ ಇಲ್ಲವಾದರೇ ಒಂದು ಅತಿಸಾರ ಶುರುವಾಗುತ್ತದೆ ಇಲ್ಲವೇ ಮಲಬದ್ಧತೆ ಆರಂಭವಾಗುತ್ತದೆ. ಇದು ಕರುಳಿನ ಆರೋಗ್ಯಕ್ಕೆ ಅಪಾಯಕಾರಿ.


ಸರಿಯಾದ ಜೀರ್ಣಕ್ರಿಯೆ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ನಾರಿನಂಶ ಅವಶ್ಯಕ. ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳಲ್ಲಿ ನಾರಿನಂಶ ಹೇರಳವಾಗಿದೆ. ಆದ್ದರಿಂದ ನಿಮ್ಮ ಊಟದ ತಟ್ಟೆಯಲ್ಲಿ ಈ ಎಲ್ಲಾ ಆಹಾರಗಳು ಇರಲಿ.


ಹೆಚ್ಚು ಮದ್ಯಪಾನ ಮಾಡುವುದು
ಕರುಳಿನ ಆರೋಗ್ಯಕ್ಕೆ ಮದ್ಯಪಾನದಷ್ಟು ಅಪಾಯಕಾರಿ ಅಭ್ಯಾಸ ಮತ್ತೊಂದಿಲ್ಲ. ಇದರಿಂದ ಕರುಳಿನ ಅಸಮತೋಲನ ಉಂಟಾಗುತ್ತದೆ. ಅಲ್ಲದೇ ಡಿಸ್ಬಯೋಸಿಸ್ ಎನ್ನುವ ಸ್ಥಿತಿ ಉದ್ಬವಿಸುತ್ತದೆ.


ಇದನ್ನೂ ಓದಿ:  Piles Symptoms: ಈ ಸಮಸ್ಯೆಗಳು ನಿಮಗೆ ಪೈಲ್ಸ್ ಬರುವುದರ ಸೂಚನೆಯಂತೆ


ಆದ್ದರಿಂದ ಮದ್ಯಪಾನ ಸೇವನೆ ಬಗ್ಗೆ ಎಚ್ಚರಿಕೆಯಿರಲಿ. ಕರುಳಿನ ಉತ್ತಮ ಆರೋಗ್ಯ ಮತ್ತು ಉತ್ತಮ ಬ್ಯಾಕ್ಟೀರಿಯಾಗೆ ತೊಂದರೆಯಾಗದಂತೆ ಜಾಗ್ರತೆವಹಿಸಬೇಕು.


ಆಹಾರದಲ್ಲಿ ಪ್ರೋಬಯಾಟಿಕ್‌ಗಳ ಕೊರತೆ
ಬಾಳೆಹಣ್ಣು, ಸೇಬು, ಬೆಳ್ಳುಳ್ಳಿ ಮತ್ತು ಈರುಳ್ಳಿ ಎಲ್ಲವೂ ನಿಮ್ಮ ಕರುಳಿಗೆ ಪ್ರಯೋಜನಕಾರಿಯಾದ ನೈಸರ್ಗಿಕ ಪ್ರೋಬಯಾಟಿಕ್ ಆಹಾರಗಳಾಗಿವೆ. ಕರುಳಿನ ಆರೋಗ್ಯಕ್ಕೆ ಪ್ರೋಬಯಾಟಿಕ್‌ಗಳ ಮಹತ್ವದ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಪ್ರೋಬಯಾಟಿಕ್‌ಗಳು ಕರುಳಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಪೋಷಿಸುತ್ತವೆ.


ನಿದ್ರೆಯ ಕೊರತೆ
ನಿದ್ರೆಯ ದಿನಚರಿಯೂ ಸರಿಯಾಗಿಲ್ಲವೆಂದರೆ ನಿರಂತರ ಬಳಲಿಕೆ, ಮಾನಸಿಕ ಕಿರಿಕಿರಿ ಮತ್ತು ಅಸಿಡಿಟಿಯಂತಹ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರ ಜೊತೆಗೆ ಸಾಕಷ್ಟು ನಿದ್ದೆ ಮಾಡದಿದ್ದಾಗ ಅದು ನಿಮ್ಮ ಕರುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

Published by:Ashwini Prabhu
First published: