• Home
 • »
 • News
 • »
 • lifestyle
 • »
 • Meghalaya Caves: ಮೇಘಾಲಯದಲ್ಲಿರುವ ಗುಹೆಯು ನಮಗೆ ಮೇಘಾಲಯನ್ ಯುಗವನ್ನು ನೀಡಿದೆ!

Meghalaya Caves: ಮೇಘಾಲಯದಲ್ಲಿರುವ ಗುಹೆಯು ನಮಗೆ ಮೇಘಾಲಯನ್ ಯುಗವನ್ನು ನೀಡಿದೆ!

ಮೇಘಾಲಯದಲ್ಲಿರುವ ಗುಹೆ!

ಮೇಘಾಲಯದಲ್ಲಿರುವ ಗುಹೆ!

ಮೇಘಾಲಯದಲ್ಲಿರುವ ಉದ್ದನೆಯ ಇಪ್ಪತ್ತು ಗುಹೆಗಳಲ್ಲಿ ಮಾವ್‌ಶುನ್ ಗುಹೆಯು ಚಿಕ್ಕದಾಗಿದ್ದು, 3,339 ಮೀ. ಇದೆ ಹಾಗೂ ಲಿಯಾಟ್ ಪ್ರಾಹ್ ಗುಹೆಯು 30,957 ಮೀ. ಇದ್ದು, ಅತಿ ಉದ್ದನೆಯದು ಎನಿಸಿದೆ.

 • News18 Kannada
 • 2-MIN READ
 • Last Updated :
 • Meghalaya, India
 • Share this:

  90 ರ ದಶಕದಲ್ಲಿ (ಅಥವಾ ನಂತರದಲ್ಲಿ!) ಬಾಲ್ಯದಲ್ಲಿ ಇದ್ದವರೆಲ್ಲರೂ ಹೆಸರಿಸಬಹುದಾದ ಒಂದು ಭೌಗೋಳಿಕ ಯುಗವೆಂದರೆ ಅದು ಜುರಾಸಿಕ್ ಪಾರ್ಕ್!


  ಮೇಘಾಲಯದಲ್ಲಿರುವ ಉದ್ದನೆಯ ಇಪ್ಪತ್ತು ಗುಹೆಗಳಲ್ಲಿ ಮಾವ್‌ಶುನ್ ಗುಹೆಯು ಚಿಕ್ಕದಾಗಿದ್ದು, 3,339 ಮೀ. ಇದೆ ಹಾಗೂ ಲಿಯಾಟ್ ಪ್ರಾಹ್ ಗುಹೆಯು 30,957 ಮೀ. ಇದ್ದು, ಅತಿ ಉದ್ದನೆಯದು ಎನಿಸಿದೆ.


  90 ರ ದಶಕ (ಅಥವಾ ಅದರ ನಂತರದಲ್ಲಿ!) ಬಾಲ್ಯದಲ್ಲಿ ಇದ್ದವರೆಲ್ಲರೂ ಹೆಸರಿಸಬಹುದಾದ ಒಂದು ಭೌಗೋಳಿಕ ಯುಗವೆಂದರೆ ಅದು ಜುರಾಸಿಕ್ ಪಾರ್ಕ್! ಮತ್ತದು ನಿಜವೂ ಹೌದು! ಡೈನೋಸಾರ್‌ಗಳು ಬಹಳ ದೊಡ್ಡದಾಗಿದ್ದವು, ಭಯ ಹುಟ್ಟಿಸುತ್ತಿದ್ದವು, ಆಸಕ್ತಿದಾಯವಾಗಿದ್ದವು….ಮತ್ತು ಮೃತಪಟ್ಟವು. ವಾಸ್ತವವಾಗಿ, ಡೈನೋಸಾರ್‌ಗಳ ಸಾಮೂಹಿಕ ಅಂತ್ಯವು ಭೂಗೋಳಶಾಸ್ತ್ರಜ್ಞರಿಗೆ ಈ ಯುಗವನ್ನು ಹೆಚ್ಚು ಆಸಕ್ತಿದಾಯಕವಾಗಿಸಿತು – ಭೌಗೋಳಿಕ ಸಮಯದ ಮಾಪಕದಲ್ಲಿ ತಿಳಿಯದೇ ಇದ್ದ ಸಾಕಷ್ಟು ಮಾಹಿತಿಯನ್ನು ಈ ಘಟನೆಗಳು ಒದಗಿಸಿದವು ಹಾಗೂ ಇವುಗಳ ಕಾಲಮಾನದ ಅಧ್ಯಯನ ನಡೆಸಿದಾಗ, ಈ ಸುಂದರ ಗ್ರಹ ಮತ್ತು ಜೀವನದ ಬಗೆಗಿನ ನಮ್ಮ ತಿಳಿವಳಿಕೆಯನ್ನು ಭೂಗೋಳಶಾಸ್ತ್ರಜ್ಞರು ವಿಸ್ತರಿಸಿದರು. ಇದೆಲ್ಲಕ್ಕಿಂತ, ಭೂಗೋಳಶಾಸ್ತ್ರ ಎಂದರೆ ನಾವು ಲಕ್ಷಾಂತರ ವರ್ಷಗಳವರೆಗೆ ತಲೆಮಾರಿನಿಮದ ತಲೆಮಾರುಗಳವರೆಗೆ ಬಿಟ್ಟುಹೋಗುವ ಸಂಚಯವನ್ನು (sediment) ಅಧ್ಯಯನ ಮಾಡುವುದೇ ಆಗಿದೆ. ಹಾಗಾಗಿ, ಅಳಿಯುವಿಕೆಯಂತಹ ಬೃಹತ್ ಘಟನೆಗಳು ಸಂಭವಿಸಿದಾಗ ನೀವು ಅದನ್ನು ಬಂಡೆಗಳ ಸ್ತರದಲ್ಲಿ ನೋಡುತ್ತೀರಿ.


  ಮಾವ್ಮ್‌ಲುಹ್ ಗುಹೆಗಳು: ವಿಶ್ವದೊಳಗಿನ ವಿಶ್ವ


  ನಮ್ಮ ಪ್ರಸ್ತುತ ಯುಗ, ಹೊಲೋಸೀನ್ ಸಹ ಅಂತಹ ಘಟನೆಗಳನ್ನು ಎದುರಿಸಿದೆಯಾದರೂ ಡೈನೋಸಾರ್‌ಗಳ ಅಂತಿಮ ಘಟ್ಟದಂತೆ ನಾಟಕೀಯವಾಗಿ ಆಗಿರದೇ ಇರಬಹುದು. ಸುಮಾರು 11,700 ವರ್ಷಗಳ ಹಿಂದೆ, ಬೃಹತ್ ಹಿಮಶಿಲೆಯ ಮಂಜುಗಡ್ಡೆಯ ಪದರಗಳು ಉತ್ತರ ಅಮೆರಿಕ, ಉತ್ತರ ಯುರೋಪ್ ಮತ್ತು ಏಷ್ಯಾಗಳನ್ನು ಆವರಿಸಿದ್ದು, ಅಂತಿಮವಾಗಿ ಕರಗಲಾರಂಭಿಸಿತು. ಯುನೈಟೆಡ್ ಸ್ಟೇಟ್ಸ್ ಜಿಯಾಲಜಿಕಲ್ ಸರ್ವೆ ಪ್ರಕಾರ, ಕೊನೆಯ ಗರಿಷ್ಠ ಹಿಮಶಿಲೆಯ (glacial maximum) ಅವಧಿಯಲ್ಲಿ ಶಾಶ್ವತ ಬೇಸಿಗೆ ಮಂಜುಗಡ್ಡೆಯು ಭೂಮಿಯ ಮೇಲ್ಮೈನ ಸುಮಾರು 8% ರಷ್ಟು ಮತ್ತು ಬಯಲು ಪ್ರದೇಶದ 25% ರಷ್ಟನ್ನು ಆವರಿಸಿತ್ತು. ಹಾಗಾಗಿ, ಈ ಹಿಮಶಿಲೆಗಳು ಕರಗಲು ಆರಂಭಿಸಿದ್ದು ಒಂದು ಅತ್ಯಂತ ಪ್ರಮುಖ ಸಂಗತಿಯಾಗಿತ್ತು. ಆದರೆ ಹೊಲೋಸೀನ್ ಅನ್ನು ಮುಖ್ಯವಾಗಿಸಿದ್ದು ಇದಲ್ಲ.


  ಮಾನವ ಯುಗ


  ಹೊಲೋಸೀನ್ “ಮಾನವ ಯುಗ” ಎಂದೇ ಚಿರಪರಿಚಿತವಾಗಿದೆ ಮತ್ತು ಇದು ನೀವು ಹಾಗೂ ನೀವು ಹೆಸರಿಸಬಹುದಾದ ಪೂರ್ವಜರೆಲ್ಲರೂ ಜೀವಿಸಿದ್ದೇವೆ. ವಾಸ್ತವವಾಗಿ, ನೀವು ಜಗತ್ತಿನ ಯಾವುದೇ ಸ್ಥಳದಲ್ಲಿರುವ ಮ್ಯೂಸಿಯಂನಲ್ಲಿ ನೋಡಿರುವ ಕಲಾಕೃತಿಗಳು ಈ ಯುಗದಿಂದಲೇ ಬಂದಿರುವಂತವು. ಆ ಅವಧಿಯಲ್ಲಿಯೇ ಮಾನವ ಜೀವಿಗಳು ವಿಶ್ವದ ವಿವಿಧೆಡೆ ಚದುರಿದರು, ಆಹಾರ ಧಾನ್ಯಗಳನ್ನು ಬೆಳೆಯುವುದು ಹೇಗೆ ಎಂದು ಕಲಿತರು ಮತ್ತು ಸಮುದಾಯಗಳನ್ನು ರಚಿಸಿಕೊಂಡರು, ಮಡಿಕೆಯ ಪಾತ್ರೆಗಳು, ಆಭರಣಗಳು ಮತ್ತು ನಾಣ್ಯಗಳನ್ನು ಮಾಡುವುದು ಹೇಗೆ ಎಂದು ಕಲಿತುಕೊಂಡರು ಹಾಗೂ ವಾಣಿಜ್ಯಕ ವ್ಯವಹಾರವನ್ನು ಅರಿತುಕೊಂಡರು ಮತ್ತು ನಮ್ಮ ಕತೆಗಳನ್ನು ಮತ್ತು ಇತಿಹಾಸಗಳನ್ನು ಬರೆಯುವುದು ಮತ್ತು ಹೇಳುವುದು ಹೇಗೆ ಎಂದು ಕಲಿತರು.


  ನಿಸ್ಸಂಶಯವಾಗಿಯೂ ಅದು ಕಾಲದ ಬೃಹತ್ ಅವಧಿಯೇ ಆಗಿತ್ತು. ಅದರೆ ಮಾನವ ಜೀವಿಗಳು ಅವರ ಪರಿಸರವನ್ನು ತಮಗೆ ಹೊಂದುವಂತೆ ರೂಪಿಸಿಕೊಳ್ಳುವುದನ್ನು ಮುಂದುವರಿಸಿದಂತೆ, ಅವರು ತಮ್ಮ ಹಿಂದೆ ಬಿಟ್ಟುಹೋದ ಸಂಚಯವೂ ಸಹ ಬದಲಾಯಿತು ಹಾಗೂ ಇನ್ನಷ್ಟು ಗುರುತಿಸಬಹುದಾದಂತೆ ಆಯಿತು, ಆ ಮೂಲಕ ಪುರಾತತ್ವ ಶಾಸ್ತ್ರದಂತಹ ಕ್ಷೇತ್ರಗಳು ಹುಟ್ಟಲು ಕಾರಣವಾಯಿತು. ಹಾಗಿದ್ದರೂ, ಭೌಗೋಳಿಕವಾಗಿ ಹೇಳುವುದಾದರೆ, ಹೊಲೋಸೀನ್ ಎಂಬುದು ಮೂರು ಭಾಗಗಳಾಗಿ ವಿಭಜನೆಯಾಗಿದ್ದು, ಅದರಲ್ಲಿ ಇತ್ತೀಚಿನದ್ದು (ನಮ್ಮ ಪ್ರಸ್ತುತ ಯುಗ) ಮೇಘಾಲಯನ್ ಯುಗವಾಗಿದೆ! ಹೌದು, ನಮ್ಮ ರಾಜ್ಯಗಳಲ್ಲಿ ಒಂದರ ಹೆಸರನ್ನು ಆಧರಿಸಿ ನಾವು ಭಾರತೀಯರು ಭೌಗೋಳಿಕ ಯುಗವನ್ನು ಹೊಂದಿದ್ದೇವೆ!  


  ಮೇಘಾಲಯನ್ ಯುಗವು ಸುಮಾರು 4,200 ವರ್ಷಗಳ ಹಿಂದೆ ಆರಂಭವಾಗಿದ್ದು, ಅದರಲ್ಲಿ ಉಂಟಾದ ಹಠಾತ್ ತೀವ್ರ-ಬರಗಾಲವು ಈಜಿಪ್ಟ್, ಗ್ರೀಸ್, ಸಿರಿಯಾ, ಪ್ಯಾಲೆಸ್ತೀನ್, ಮೆಸೊಪೊಟೇಮಿಯ, ಸಿಂಧೂ ಕಣಿವೆ ಮತ್ತು ಯಾಂಗ್ಟ್ಜ್ ನದಿ ಕಣಿವೆಯಲ್ಲಿದ್ದ ಹಲವಾರು ನಾಗರೀಕತೆಗಳು ನಾಶವಾಗುವಂತೆ ಮಾಡಿತು. ಇದನೆಲ್ಲಾ ನಾವು ಹೇಗೆ ತಿಳಿದೆವು? ಇಂಟರ್‌ನ್ಯಾಶನಲ್ ಯೂನಿಯನ್ ಆಫ್ ಜಿಯಾಲಜಿಕಲ್ ಸೈನ್ಸಸ್‌ನ ಭೂಗೋಳಶಾಸ್ತ್ರಜ್ಞರು ಮೇಘಾಲಯದ ಮಾವ್ಮ್‌ಲುಹ್ ಗುಹೆ ವ್ಯವಸ್ಥೆಯಲ್ಲಿ ಈ ಘಟನೆಯ ಪುರಾವೆಯನ್ನು ಕಂಡುಹಿಡಿದಿದ್ದರಿಂದ ತಿಳಿದೆವು. ಖಂಡಿತವಾಗಿಯೂ, ಮೇಘಾಲಯನ್ ಯುಗವೇ!   


  ಮಾವ್ಮ್‌ಲುಹ್ ಗುಹೆಗಳು: ವಿಶ್ವದೊಳಗಿನ ವಿಶ್ವ


  ಮಾವ್ಮ್‌ಲುಹ್ ಗುಹೆಗಳ ಒಳಗೆ ಇದ್ದಾಗ ಕೆಲವೊಮ್ಮೆ ಬೃಹತ್ ಡೈನೋಸಾರ್‌ನ ಬಾಯೊಳಗೆ ನಡೆಯುತ್ತಿರುವಂತೆ ಭಾಸವಾಗುತ್ತದೆ! ಇದರಲ್ಲಿರುವ ಬಂಡೆ, ಕಲ್ಲುಗಳ ರಚನೆಗಳು ಚೂಪಾದ ಹಲ್ಲುಗಳನ್ನು ಹೋಲುತ್ತವೆ ಹಾಗೂ ನಿಷೇಧಿತ, ಕಗ್ಗತ್ತಲ ಸ್ಥಳಗಳಲ್ಲಿ ನಡೆಯುತ್ತಿರುವಂತೆ ಭಾವಿಸುವ ಹಾಗೆ ಈ ಗುಹೆಗಳು ಇವೆ ಹಾಗೂ ದಿಢೀರನೆ ಪ್ರಕೃತಿಯ ಅದ್ಭುತವಾದ ಪ್ರತಿಧ್ವನಿಯ ಬಂಡೆಯ ರಚನೆಗಳು ತೆರೆದುಕೊಳ್ಳುತ್ತವೆ. ಇದು ರೋಮಾಂಚಕಾರಿಯಾದದ್ದು ಹಾಗೂ ಕಲ್ಲುಬಂಡೆಗಳ ಗುಹೆಯೊಳಗೆ ಕಂಡುಬರುವ ಇತಿಹಾಸದ ಮೂಲಕ ನಡೆದುಕೊಂಡು ಹೋಗುವಾಗಿನ ಭಾವನೆಯನ್ನು ಬೇರೆ ಯಾವುದಕ್ಕೂ ಹೋಲಿಸಲಾಗದು. ಕಣ್ಣಿಗೆ ಕಾಣಿಸುವ, ಇಲ್ಲಿನ ಮುಂಭಾಗ ಹಾಗೂ ಮಧ್ಯದಲ್ಲಿರುವ ಗೆರೆಗಳಂತಹ ಪಟ್ಟಿಗಳನ್ನು ಭೂಗರ್ಭಶಾಸ್ತ್ರಜ್ಞರು ಅಧ್ಯಯನ ನಡೆಸುತ್ತಾರೆ!   


  ಈ ಗುಹೆಗಳು ತೇವವಾಗಿರುವ ಸೋಹ್ರದಲ್ಲಿ (ಚಿರಾಪುಂಜಿ) ಇರುವುದರಿಂದ, ಕೆಲವು ವಿಜ್ಞಾನಿಗಳು ಮುಂಗಾರು ಮಾರುತದ ವಿನ್ಯಾಸಗಳು ಮತ್ತು ಬರ ಪರಿಸ್ಥಿತಿಗಳ ಮುನ್ಸೂಚನೆ ನೀಡುವುದಕ್ಕೆ ಸಹಾಯವಾಗಲು ಇಲ್ಲಿನ ಬಂಡೆಯ ರಚನೆಗಳನ್ನು ಅಧ್ಯಯನ ಮಾಡುತ್ತಾರೆ. ವ್ಯಾಂಡರ್‌ಬಿಲ್ಟ್ ವಿಶ್ವವಿದ್ಯಾಲಯದ ಸಂಶೋಧಕರು ಇಲ್ಲಿನ ಬಂಡೆಯ ರಚನೆಗಳ ಮೇಲೆ ಕಳೆದ 50 ವರ್ಷಗಳಲ್ಲಿ ಆಗಿರುವ ಬೆಳವಣಿಗೆ ಕುರಿತು ಅಧ್ಯಯನ ನಡೆಸಿದ್ದು, ಇಲ್ಲಿನ ಚಳಿಗಾಲದ ಮಳೆ ಹಾಗೂ ಪೆಸಿಫಿಕ್ ಸಾಗರದ ವಾತಾವರಣಕ್ಕೂ ಇರುವ ಅನಿರೀಕ್ಷಿತ ಸಂಪರ್ಕವನ್ನು ಪತ್ತೆಹಚ್ಚಿದ್ದಾರೆ. ನೀವು ವಿಜ್ಞಾನಿಯಲ್ಲದಿದ್ದರೂ, ಮಾವ್ಮ್‌ಲುಹ್ ಗುಹೆಗಳನ್ನು ನೀವು ನೋಡಲೇಬೇಕು. 


  ಮಾವ್ಮ್‌ಲುಹ್‌ಗೆ ತಲುಪುವ ಅತ್ಯುತ್ತಮ ವಿಧಾನ ಎಂದರೆ ಅದು ಸೋಹ್ರಾದಿಂದ (ಚಿರಾಪುಂಜಿ) ಟ್ಯಾಕ್ಸಿ ಮೂಲಕ ಹೋಗುವುದಾಗಿದೆ. ನಿಮ್ಮ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ನಿಮಗೆ ಅತ್ಯುತ್ತಮ ಸ್ಥಳಗಳನ್ನು ತೋರಿಸಲು ಹಾಗೂ ಆ ಕುರಿತು ವಿವರಿಸಲು ಗೈಡ್ ಸಹಾಯ ಪಡೆದುಕೊಳ್ಳುವುದನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ನೀವು ನೀರು, ತೇವಾಂಶ ಇರುವೆಡೆ ಹೋಗುವುದರಿಂದ ರಬ್ಬರ್ ಬೂಟುಗಳನ್ನು ಸಹ ಶಿಫಾರಸು ಮಾಡಲಾಗಿದೆ. ಹಾಗೆಯೇ, ಇಲ್ಲೆಲ್ಲಾ ನೀರು ಸಂಗ್ರಹವಾಗಿರುವುದರಿಂದ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸವಾಲು ಆಗಿರುತ್ತದೆ. (ಅಲ್ಲದೆ, ಇಲ್ಲಿನದು ಅಂತಿಂಥ ಮಳೆಯಲ್ಲ. ಇದು ಸೋಹ್ರಾ (ಚಿರಾಪುಂಜಿ), ನೆನಪಿದೆಯಲ್ಲ? ಭೇಟಿ ನೀಡಲು ಅತ್ಯುತ್ತಮ ಸಮಯ ಎಂದರೆ ಅದು ನವೆಂಬರ್‌ನಿಂದ ಫೆಬ್ರುವರಿ.


  ಅದೇ ರೀತಿ, ಗುಹೆಗಳಿಗೆ ಭೇಟಿ ನೀಡುವುದು ನಿಮ್ಮ ಆದ್ಯತೆ ಆಗಿದ್ದರೆ, ಅದಕ್ಕಾಗಿ ಇರುವ ಸ್ಥಳವೆಂದರೆ ಮೇಘಾಲಯ. ಇಡೀ ರಾಜ್ಯವು ಗುಹೆ ವ್ಯವಸ್ಥೆಗಳೊಂದಿಗೆ ಉದ್ದ, ಅಡ್ಡಲಾಗಿ ಅಂಕುಡೊಂಕಾಗಿದೆ. ಮೇಘಾಲಯದಲ್ಲಿರುವ ಉದ್ದನೆಯ ಇಪ್ಪತ್ತು ಗುಹೆಗಳಲ್ಲಿ ಮಾವ್‌ಶುನ್ ಗುಹೆಯು ಚಿಕ್ಕದಾಗಿದ್ದು, 3,339 ಮೀ. ಇದೆ ಹಾಗೂ ಲಿಯಾಟ್ ಪ್ರಾಹ್ ಗುಹೆಯು 30,957 ಮೀ. ಇದ್ದು, ಅತಿ ಉದ್ದನೆಯದು ಎನಿಸಿದೆ. ನೀವು ಸಾಹಸ ಚಟುವಟಿಕೆಗಳನ್ನು ಮಾಡದೆ ಅಥವಾ ಹೊಸ ಸ್ಥಳಗಳನ್ನು ನೋಡದೆಯೇ ಇರಲು ಸಾಧ್ಯವಿಲ್ಲ. ಇವುಗಳಲ್ಲಿ ಕೆಲವು ಗುಹೆ ವ್ಯವಸ್ಥೆಗಳ ವಿವರಗಳನ್ನು ಇನ್ನೂ ಕಲೆಹಾಕಲಾಗುತ್ತಿದ್ದು, ಯಾರಿಗೆ ಗೊತ್ತು, ನೀವು ಏನಾದರೂ ಹೊಸದನ್ನು ಅನ್ವೇಷಿಸುವ ಸಾಧ್ಯತೆ ಇರಬಹುದು!


  ಈ ವರ್ಷವು ಮೇಘಾಲಯಕ್ಕೆ ರಾಜ್ಯ ಸ್ಥಾನಮಾನ ದೊರೆತ 50 ನೇ ವರ್ಷವಾಗಿದೆ ಮತ್ತು ಅದನ್ನು ಇಡೀ ರಾಜ್ಯ ಆಚರಿಸುತ್ತಿದೆ. ವಿಭಿನ್ನ, ವಿಶಿಷ್ಟವಾದ ಹಲವಾರು ಅನುಭವಗಳನ್ನು ಒಳಗೊಂಡಿರುವ, ವರ್ಷಪೂರ್ತಿ ನಡೆಯುವ ಹುಟ್ಟುಹಬ್ಬದ ಸಂಭ್ರಮಾಚರಣೆ ಎಂದು ಇದನ್ನು ಭಾವಿಸಿ. ನೀವು ಇದುವರೆಗೂ ಮೇಘಾಲಯಕ್ಕೆ ಭೇಟಿ ನೀಡಿಲ್ಲವಾದರೆ, ಭೇಟಿ ನೀಡಲು ಇದಕ್ಕಿಂತ ಅತ್ಯುತ್ತಮ ಸಮಯ ಬೇರೆ ಇರಲಾರದು. ಯೋಜನೆಯೊಂದನ್ನು ರೂಪಿಸಿ. ಮೇಘಾಲಯನ್ ಏಜ್ ಫೆಸ್ಟಿವಲ್‌ನಲ್ಲಿ ಮೇಘಾಲಯನ್ ಯುಗವನ್ನು ಭಿನ್ನ ದೃಷ್ಟಿಕೋನದಿಂದ ನೋಡಿ ಮತ್ತು ಸಂಭ್ರಮಾಚರಣೆಯ ಭಾಗವಾಗಿ. ಆಹಾರಸಂಸ್ಕೃತಿ, ಸಾಹಸ ಕ್ರೀಡೆಗಳು, ಇಕೊಟೂರಿಸಂ ಅಥವಾ ಆರಾಮದಾಯಕ ರಜೆದಿನಗಳು, ಇರಬಹುದು, ಪ್ರತಿಯೊಂದು ವಿಧದ ಪ್ರವಾಸಿಗರಿಗೂ ಆನಂದಿಸಲು ಇಲ್ಲಿ ಏನಾದರೂ ಇದ್ದೇ ಇದೆ.      

  Published by:Bhavana Kumari
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು