ನೀವು ಮಲೆನಾಡು (Malenadu) ಭಾಗಗಳಿಗೆ ಹೋದರೆ ಫಾಲ್ಸ್ಗಳೇ (Falls) ಹೆಚ್ಚು, ವಿಶ್ವವಿಖ್ಯಾತ ಜೋಗ ಜಲಪಾತದಿಂದ ಹಿಡಿದು ಸಾತೊಡ್ಡಿ ಫಾಲ್ಸ್ವರೆಗೆ ಹೇಗೆ ನಿಮಗೆ ನೋಡಲು ಮೂಲೆ ಮೂಲೆಯಲ್ಲಿ ನೋಡಲು ಜಲಪಾತಗಳು ಸಿಗುತ್ತದೆ. ಒಂದೊಂದು ಜಲಪಾತಗಳು ಒಂದೊಂದು ವಿಶೇಷ ಕಥೆಯನ್ನು ಹೊಂದಿದ್ದು, ಶಿರಸಿಯ ಉಂಚಳ್ಳಿ ಜಲಪಾತ (Unchalli Falls) ಸಹ ಇದರಲ್ಲಿ ಒಂದು. ಈ ವಿಶಿಷ್ಟ- ವೈವಿಧ್ಯಮಯ ಜಲಪಾತಕ್ಕೆ ನೀವೂ ಸಹ ಹೋಗಿ ಎಂಜಾಯ ಮಾಡಬಹುದು. ಈ ಜಲಪಾತದ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.
ಭೋರ್ಗರೆವ ಸದ್ದಿಗೆ ಕೆಪ್ಪಾಗುವ ಕಿವಿ
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ಈ ಉಂಚಳ್ಳಿ ಜಲಪಾತಕ್ಕೆ ಅದರ ಭೋರ್ಗರೆವ ಶಬ್ಧದ ಕಾರಣದಿಂದ ಕೆಪ್ಪ ಜೋಗ ಎಂಬ ಹೆಸರು ಬಂದಿದೆ. ಗುಡ್ಡಗಾಡು ಪ್ರದೇಶದಲ್ಲಿ ಬರುವ ಜಲಪಾತಗಳ ಸದ್ದು ಮತ್ತು ಅದರ ಸೌಂದರ್ಯ, ನಿಮ್ಮನ್ನ ಕೆಲ ಕಾಲ ಮಂತ್ರಮುಗ್ಧಗೊಳಿಸುತ್ತದೆ. ಇದು ಅಘನಾಶಿನಿ ನದಿಗೆ ಸೇರುವ ಫಾಲ್ಸ್ ಆಗಿದ್ದು, ಒಟ್ಟು 380 ಅಡಿ ಎತ್ತರವಿದೆ. ಈ ಜಲಪಾತದ ವಿಶೇಷತೆಯೆಂದರೆ, ಇದು ಎಲ್ಲಾ ಕಾಲದಲ್ಲಿಯೂ ಭೋರ್ಗರೆಯುತ್ತಿರುತ್ತದೆ. ಇದರ ವಿಹಂಗಮ ನೋಟ, ಹಚ್ಚ – ಹಸಿರಿನ ಪ್ರಕೃತಿ ಪ್ರವಾಸಿಗರ ಮನಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಫಾಲ್ಸ್ ಒಂದು ಸುಂದರ ಅನುಭವ ನೀಡುತ್ತದೆ ಎನ್ನಬಹುದು.
ಶಿರಸಿ ಜಿಲ್ಲೆಯಲ್ಲಿ ಹೆಗ್ಗರಣೆ ಎಂಬ ಒಂದು ಊರಿದೆ. ಆ ಊರಿನ ದಟ್ಟವಾದ ಕಾಡಿನ ಮೂಲಕ 5 ಕಿ.ಮೀ ಟ್ರಕ್ಕಿಂಗ್ ಮಾಡಿಕೊಂಡು ಫಾಲ್ಸ್ ಹತ್ತಿರ ಹೋಗಬಹುದು. 1845 ರಲ್ಲಿ ಜೆಡಿ ಲುಸ್ಸಿಂಗ್ಟನ್ ಎಂಬ ಬ್ರಿಟಿಷ್ ಅಧಿಕಾರಿ ಮೊದಲು ಈ ಜಲಪಾತವನ್ನು ಕಂಡು ಹಿಡಿದ ಎನ್ನಲಾಗುತ್ತದೆ. ಹಾಗಾಗಿಯೇ ಲುಸ್ಸಿಂಗ್ಟನ್ ಫಾಲ್ಸ್ ಎಂದೂ ಕರೆಯುತ್ತಾರೆ. ಈ ಜಲಪಾತವು ಬೆಂಗಳೂರಿನಿಂದ ಸುಮಾರು 440 ಕಿಮೀ ದೂರದಲ್ಲಿದೆ.
ಇದನ್ನೂ ಓದಿ: ಆಗುಂಬೆಯ ಪ್ರೇಮ ಸಂಜೆಯ ಸೂರ್ಯಾಸ್ತ ನೋಡೋದೇ ಕಣ್ಣಿಗೆ ಹಬ್ಬ! ತಂಗಾಳಿಯಲ್ಲಿ ಬಿಸಿ ಟೀ ಕುಡಿತಾ ಇದ್ರೆ ಸ್ವರ್ಗ!
ರಾತ್ರಿ ಕಾಣಿಸುವ ಕಾಮನಬಿಲ್ಲು
ಈ ಜಲಪಾತದ ಮತ್ತೊಂದು ವಿಶೇಷತೆ ಇದೆ. ನೀವು ರಾತ್ರಿಯ ಸಮಯದಲ್ಲಿ ಇಲ್ಲಿ ಕಾಮನಬಿಲ್ಲು ನೋಡಬಹುದು. ಹೌದು, ಸಾಮಾನ್ಯವಾಗಿ ಕಾಮನಬಿಲ್ಲು ಬೆಳಗಿನ ಸಮಯದಲ್ಲಿ ಕಾಣಿಸುತ್ತದೆ. ಆದರೆ ಇಲ್ಲಿ ಮಾತ್ರ ಹುಣ್ಣಿಮೆಯ ರಾತ್ರಿಯ ಸಮಯದಲ್ಲಿ ಮಾತ್ರ ಕಾಮನಬಿಲ್ಲು ಮೂಡುತ್ತದೆ. ಈ ಸೊಗಸನ್ನ ನೋಡುವುದು ಒಂದು ಅದೃಷ್ಟ ಎನ್ನಬಹುದು. ಇನ್ನು ಈ ಫಾಲ್ಸ್ ನೋಡಲು ಸರಿಯಾದ ಸಮಯ ಎಂದರೆ ಮಳೆಗಾಲ ಮತ್ತು ಚಳಿಗಾಲ. ಆದರೆ ಮಳೆಗಾಲದಲ್ಲಿ ಇಲ್ಲಿಗೆ ಬಹಳ ಸುರಕ್ಷಿತವಾಗಿ ಹೋಗಬೇಕು. ಜಾರಿಕೆ ಮಾತ್ರವಲ್ಲದೇ ಮಣ್ಣುಗಳು ಕುಸಿಯುತ್ತಿರುತ್ತದೆ.
ಇನ್ನು ಸಾಮಾನ್ಯ ದಿನಗಳಲ್ಲಿ ಬಿಳಿ ಬಣ್ಣದಲ್ಲಿ ಧುಮ್ಮಿಕ್ಕುವ ಜಲಪಾತ, ಮಳೆಗಾಲದಲ್ಲಿ ಮಲೆನಾಡ ಅಬ್ಬರದ ಮಳೆಗೆ ಕೆಂಪು ಮಿಶ್ರಿತ ಬಣ್ಣದಲ್ಲಿ ಬೀಳುತ್ತದೆ. ಏಕೆಂದರೆ ಈ ಸಮಯದಲ್ಲಿ ಮಳೆಯ ಕಾರಣದಿಂದ ಅಘನಾಶಿನಿ ನದಿ ಕೆಂಪು ಬಣ್ಣಕ್ಕೆ ತಿರುಗಿರುತ್ತದೆ.
ಉಂಚಳ್ಳಿ ಜಲಪಾತವು ಬೆಂಗಳೂರಿನಿಂದ 440 ಕಿ.ಮೀ ಮತ್ತು ಮಂಗಳೂರಿನಿಂದ 260 ಕಿ.ಮೀ ದೂರದಲ್ಲಿದೆ. ಹೆಗ್ಗರಣೆ ಉಂಚಳ್ಳಿ ಜಲಪಾತಕ್ಕೆ ಹತ್ತಿರದ ಹಳ್ಳಿಯಾಗಿದ್ದು, ಉಂಚಳ್ಳಿ ಜಲಪಾತದಿಂದ 5 ಕಿ.ಮೀ ದೂರದಲ್ಲಿದೆ ಮತ್ತು ಶಿರಸಿ ಉಂಚಳ್ಳಿ ಜಲಪಾತದಿಂದ 35 ಕಿ.ಮೀ ಇರುವ ಹತ್ತಿರದ ನಗರವಾಗಿದೆ.
ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಸುಮಾರು140 ಕಿ.ಮೀ ದೂರದಲ್ಲಿದೆ. ಸಾಗರ ಮತ್ತು ತಾಳಗುಪ್ಪ ಹತ್ತಿರದ ರೈಲು ನಿಲ್ದಾಣಗಳಾಗಿದ್ದು, ಶಿರಸಿಯವರೆಗೆ ತಲುಪಲು ಉತ್ತಮ ಬಸ್ಸಿನ ವ್ಯವಸ್ಥೆ ಇದೆ. ಇಲ್ಲಿಂದ ಟ್ಯಾಕ್ಸಿ ಬಾಡಿಗೆಗೆ ಪಡೆದು ಉಂಚಳ್ಳಿ ಜಲಪಾತಕ್ಕೆ ಹೋಗಬಹುದು.
ಇದನ್ನೂ ಓದಿ: ಧುಮ್ಮಿಕ್ಕುವ ಹಬ್ಬೆ ಜಲಪಾತ ನೋಡೋದೆ ಒಂದು ಸುಂದರ ಅನುಭವ, ಇಲ್ಲಿಗೆ ಹೋಗೋದು ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್
ಇನ್ನು ನೀವೇ ಸ್ವಂತ ವಾಹನದಲ್ಲಿ ಹೋಗುವುದಾದರೆ ಸಿದ್ದಾಪುರಕ್ಕೆ ಹೋಗಿ. ಅಲ್ಲಿಂದ ಹೆಗ್ಗರಣೆ 35 ಕಿ.ಮೀ ದೂರಅಲ್ಲಿಂದ 5 ಕಿ.ಮೀ. ದೂರದಲ್ಲಿ ಈ ಫಾಲ್ಸ್ ಇದೆ. ನೀವು ಸಿರಸಿಗೆ ಹೋಗಿ ಹೋಗಬೇಕು ಎಂದರೆ ಶಿರಸಿಯಿಂದ 39 ಕಿ.ಮೀ. ದೂರ ಒಂದು ದಾರಿ ಇದೆ. ಶಿರಸಿ -ಕುಮಟಾ ರಾಜ್ಯ ಹೆದ್ದಾರಿಯಲ್ಲಿ ಅಮ್ಮಿನಳ್ಳಿ ಎಂಬ ಊರು ಸಿಗುತ್ತದೆ, ಅದರ ಸಮೀಪ ಎಡಕ್ಕೆ ತಿರುಗಿದರೆ ಹೆಗ್ಗರಣೆ ಸಿಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ