• Home
 • »
 • News
 • »
 • lifestyle
 • »
 • Weight Loss: ಡಯಟ್, ವ್ಯಾಯಾಮ ಇಲ್ಲದೇ ಏಕಾಏಕಿ ಇಳಿದ ತೂಕ: ಸಂಭ್ರಮಿಸಿದ 28ರ ಗೃಹಿಣಿಗೆ ಈಗ ಶಾಕ್​ ಕೊಟ್ಟ ಭಯಾನಕ ಕಾಯಿಲೆ!

Weight Loss: ಡಯಟ್, ವ್ಯಾಯಾಮ ಇಲ್ಲದೇ ಏಕಾಏಕಿ ಇಳಿದ ತೂಕ: ಸಂಭ್ರಮಿಸಿದ 28ರ ಗೃಹಿಣಿಗೆ ಈಗ ಶಾಕ್​ ಕೊಟ್ಟ ಭಯಾನಕ ಕಾಯಿಲೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತನ್ನ ಆಪ್ತ ಸ್ನೇಹಿತ ಹೃದಯಾಘಾತದಿಂದ (Heart Attack) ಮರಣ ಹೊಂದಿದ್ದು,  ಚಿಕ್ಕಪ್ಪನ ಹಠಾತ್ ಸಾವಿನಿಂದ ಆಶ್ಲೇ ಕಂಗೆಟ್ಟಿದ್ದರು ಮತ್ತು ಕೊಂಚ ತೂಕವನ್ನು ಏರಿಸಿಕೊಂಡಿದ್ದರು. ಹೀಗಿದ್ದ ದೇಹದ ತೂಕ (Weight Loss) ಒಂದೇ ಬಾರಿ ಇಳಿಕೆಯಾಗತೊಡಗಿದಾಗ ತನ್ನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಿಸುತ್ತಿದೆ ಎಂದೇ ಆಶ್ಲೇ ಭಾವಿಸಿದ್ದರು.

ಮುಂದೆ ಓದಿ ...
 • Share this:

  2019 ರಲ್ಲಿ ದೇಹದ ತೂಕವನ್ನು ಕೊಂಚ ಕೊಂಚವೇ ಕಳೆದುಕೊಳ್ಳಲಾರಂಭಿಸಿದ್ದ ಆಶ್ಲೇ ಟೀಗ್‌, ತೂಕನಷ್ಟವನ್ನು ಅಷ್ಟೊಂದು ಮುಖ್ಯವೆಂದು ಪರಿಗಣಿಸಿರಲಿಲ್ಲ. ತನ್ನ ಆಪ್ತ ಸ್ನೇಹಿತ ಹೃದಯಾಘಾತದಿಂದ (Heart Attack) ಮರಣ ಹೊಂದಿದ್ದು,  ಚಿಕ್ಕಪ್ಪನ ಹಠಾತ್ ಸಾವಿನಿಂದ ಆಶ್ಲೇ ಕಂಗೆಟ್ಟಿದ್ದರು ಮತ್ತು ಕೊಂಚ ತೂಕವನ್ನು ಏರಿಸಿಕೊಂಡಿದ್ದರು. ಹೀಗಿದ್ದ ದೇಹದ ತೂಕ (Weight Loss) ಒಂದೇ ಬಾರಿ ಇಳಿಕೆಯಾಗತೊಡಗಿದಾಗ ತನ್ನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಿಸುತ್ತಿದೆ ಎಂದೇ ಆಶ್ಲೇ ಭಾವಿಸಿದ್ದರು.


  ಹಠಾತ್ ಆಗಿ ಇಳಿಕೆಯಾದ ತೂಕ


  ಬೌನ್ಸರ್ ಆಗಿ ತಡರಾತ್ರಿಯವರೆಗೂ ಕೆಲಸಮಾಡುತ್ತಿದ್ದ ಆಶ್ಲೇ ತಮ್ಮ ದಿನಚರಿ ಹಾಗೂ ಆಹಾರ ಅಭ್ಯಾಸಗಳನ್ನು ಬದಲಾಯಿಸಿರಲಿಲ್ಲ ಅದಾಗ್ಯೂ ಆಕೆಯ ತೂಕ ಇಳಿಯಲಾರಂಭಿಸಿತು. ಒಂದು ವರ್ಷ ಕಳೆದ ನಂತರ ಇಬ್ಬರು ಮಕ್ಕಳ ತಾಯಿಯಾಗಿದ್ದ ಆಶ್ಲೇ ತಮ್ಮ ಆರೋಗ್ಯದ ಕುರಿತು ಚಿಂತಿಸತೊಡಗಿದರು. ಸುಮಾರು 25 ಪೌಂಡ್‌ಗಳಷ್ಟು ಅವರು ತೂಕ ಕಳೆದುಕೊಂಡಿದ್ದರು.


  ಒಂದು ರೀತಿಯ ನೋವಿನಿಂದ ಆಕೆ ಬಳಲುತ್ತಿದ್ದರು. ಏನೇ ತಿಂದರೂ ಅದು ವಾಂತಿಯ ರೂಪದಲ್ಲಿ ಹೊರಬರಲಾರಂಭಿಸಿತು ದಿನಕ್ಕೆ ಏಳು ಬಾರಿ ಅತಿಸಾರದಿಂದ ಆಕೆ ಬಳಲಾರಂಭಿಸಿದರು. ಇದರಿಂದ ಕಂಗೆಟ್ಟ ಟೀಗ್‌, ತಮ್ಮ ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಎಂಬುದನ್ನು ನಿಧಾನವಾಗಿ ಮನಗಂಡರು ಹಾಗೂ ವೈದ್ಯರನ್ನು ಭೇಟಿಯಾಗಬೇಕು ಎಂದು ದೃಢಸಂಕಲ್ಪ ಮಾಡಿದರು.


  ಜನರಲ್ಲಿ ಜಾಗೃತಿ ಮೂಡಿಸಲು ಟೀಗ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ


  30 ರ ರ ಹರೆಯದ ಟೀಗ್‌ ಏಳು ತಿಂಗಳುಗಳ ಕಾಲ ಕೊಲೊನೋಸ್ಕೋಪಿ (ದೊಡ್ಡ ಕರುಳಿನ ಮುಖ್ಯಭಾಗವನ್ನು ಪರಿಶೀಲಿಸಲು ಗುದದ್ವಾರದ ಮೂಲಕ ಹೊಂದಿಕೊಳ್ಳುವ ಫೈಬರ್-ಆಪ್ಟಿಕ್ ಉಪಕರಣವನ್ನು ಸೇರಿಸುವ ವಿಧಾನ) ಚಿಕಿತ್ಸೆಗೆ ಒಳಗಾದರು. ಟೀಗ್‌ಗೆ ತನ್ನ ದೊಡ್ಡ ಕರುಳಿನಲ್ಲಿ ಬೇಸ್‌ಬಾಲ್ ಗಾತ್ರದ ಗಡ್ಡೆ ಇರುವುದು ತಿಳಿಯಿತು.


  ಟೀಗ್‌, ಲಿಂಚ್ ಸಿಂಡ್ರೋಮ್‌ ಅನ್ನು ಹೊಂದಿದ್ದರು ಹಾಗಾಗಿ ಕ್ಯಾನ್ಸರ್ ಇನ್ನಷ್ಟು ಭಾಗಕ್ಕೆ ಹರಡುವ ಮೊದಲೇ ಆಕೆಗೆ ಚಿಕಿತ್ಸೆ ನೀಡಲಾಯಿತು. ತಮಗಾದ ಅನುಭವ ಇತರರಿಗೆ ಉಂಟಾಗಬಾರದು ಎಂಬ ಕಾಳಜಿಯಿಂದ ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಸ್ಥಿತಿಯಾದ ಲಿಂಚ್ ಸಿಂಡ್ರೋಮ್‌ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಆಕೆ ತನ್ನದೇ ಆದ ಸ್ವಂತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಾಗೂ ರೋಗಲಕ್ಷಣ ಕಂಡುಬಂದಾಗ ಕೂಡಲೇ ಪರಿಶೀಲನೆಗೆ ಒಳಪಡಿ ಎಂದು ಸಲಹೆ ನೀಡಿದ್ದಾರೆ.


  ಕ್ಯಾನ್ಸರ್ ಇರುವುದನ್ನು ಪತ್ತೆಹಚ್ಚಲಾಗದ ವೈದ್ಯರು


  ಟೀಗ್ ಆರೋಗ್ಯವಂತಳಾಗಿರುವಳು ಪ್ರಾಯಶಃ ಐಬಿಎಸ್‌ಗೆ ಒಳಗಾಗಿದ್ದಾಳೆ ಎಂದು ವೈದ್ಯರು ಭಾವಿಸಿದ್ದರು. ಟೀಗ್ ಮೊದಲ ಬಾರಿಗೆ ವೈದ್ಯರನ್ನು ಭೇಟಿಯಾದಾಗ ಕರುಳಿನ ಲಕ್ಷಣ ಎಂದು ತೂಕ ನಷ್ಟ ಹಾಗೂ ಅತಿಸಾರದ ಕಾಯಿಲೆಗಳ ಬಗ್ಗೆ ಅಷ್ಟೊಂದು ಗಮನ ನೀಡಲಿಲ್ಲ ಹಾಗೂ ಇದಕ್ಕೆ ಚಿಂತಿಸಬೇಕಾದ್ದೇನೂ ಇಲ್ಲ ಎಂದು ವೈದ್ಯರು ಔಷಧಿ ನೀಡಿದರು. ಒಂದು ತಿಂಗಳ ನಂತರ ಆಕೆಯ ರಕ್ತದೊಂದಿಗೆ ಮಲವಿಸರ್ಜಿಸಲು ಪ್ರಾರಂಭಿಸಿದಾಗ ಟೀಗ್ ನಿಜಕ್ಕೂ ತುಂಬಾ ಭಯಪಟ್ಟರು ಮತ್ತೊಮ್ಮೆ ವೈದ್ಯರನ್ನು ಕಂಡರು.


  ಕೊಂಚ ದಿನದ ನಂತರ ಟೀಗ್‌ನ ಸ್ಥಿತಿ ಸುಧಾರಿಸಿಕೊಂಡಿತು ಹಾಗೂ ಆರೋಗ್ಯವಂತರಾಗುತ್ತಿದ್ದಾರೆ ಎಂದು ಆಸ್ಪತ್ರೆ ಭರವಸೆ ನೀಡಿತು. ಕೊಲೊನೋಸ್ಕೋಪಿಗಾಗಿ ಟೀಗ್ ಅವರ ವಿನಂತಿಯನ್ನು ಆಸ್ಪತ್ರೆ ಸಿಬ್ಬಂದಿಗಳು ನಿರಾಕರಿಸಿದರು. 48 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳಿಗೆ ಕೊಲೊನೋಸ್ಕೋಪಿಗಳನ್ನು ಮಾಡಲಾಗುವುದಿಲ್ಲ ಎಂದು ನರ್ಸ್ ಆಕೆಗೆ ತಿಳಿಸಿದ್ದರು ಎಂದು ಟೀಗ್ ಹೇಳಿದ್ದಾರೆ.


  ಟೀಗ್ ಜಗತ್ತನ್ನೇ ಬದಲಾಯಿಸಿದ ಮಾರಕ ಕ್ಯಾನ್ಸರ್


  ಪುನಃ ಬೇರೆ ವೈದ್ಯರುಗಳನ್ನು ಭೇಟಿಯಾದ ಟೀಗ್, ಲಿಂಚ್ ಸಿಂಡ್ರೋಮ್ ಇರುವುದನ್ನು ಕಂಡುಕೊಂಡರು. ಮಹಿಳೆಯರ ದೇಹದಲ್ಲಿ 40% ರಿಂದ 60% ದಷ್ಟು ಕರುಳಿನ ಕ್ಯಾನ್ಸರ್ ಅಭಿವೃದ್ಧಿಪಡಿಸಲು ಕಾರಣವಾಗುವ ರೂಪಾಂತರವನ್ನು ಟೀಗ್ ಹೊಂದುವ 50% ದಷ್ಟು ಅಪಾಯವಿತ್ತು. ಆಕೆಗೆ ಮಾಡಿದ ಸಿಟಿ ಸ್ಕ್ಯಾನ್‌ನಲ್ಲಿ ಏನೂ ಕಂಡುಬರದೇ ಇದ್ದ ಕಾರಣ ವೈದ್ಯರು ಆಕೆಯ ಆಹಾರದಲ್ಲಿ ಬದಲಾವಣೆ ಮಾಡಲು ಹೇಳಿದರು.


  ಆದರೆ 2020 ರಲ್ಲಿ ಮಾರಕ ಕ್ಯಾನ್ಸರ್ ಅವರ ದೇಹದಲ್ಲಿರುವುದನ್ನು ಪತ್ತೆಹಚ್ಚಲಾಯಿತು. ಆ ಸಮಯದಲ್ಲಿ ಪ್ರಪಂಚ ನಿಂತು ಹೋದ ಅನುಭವ ತಮಗಾಯಿತು ಎಂದು ಟೀಗ್ ನೆನಪಿಸಿಕೊಳ್ಳುತ್ತಾರೆ. ನನಗೆ ಏನೂ ಕೇಳಿಸುತ್ತಿರಲಿಲ್ಲ. ನಾನು ಮೌನವಾಗಿದ್ದೆ ಹಾಗೂ ಹತಾಶೆಯಲ್ಲಿದ್ದೆ ಎಂದು ಟೀಗ್ ಹೇಳಿದ್ದಾರೆ.


  ಟೀಗ್‌ ಲಿಂಚ್ ಸಿಂಡ್ರೋಮ್ ಅನ್ನು ಹೊಂದಿದ್ದರು


  ಟೀಗ್, ಐದು ಅಡಿ ಉದ್ದವಿದ್ದ ದೊಡ್ಡ ಕರುಳಿನ 4 1/2 ಫೀಟ್‌ಗಿಂತಲೂ ಹೆಚ್ಚಿನ ಭಾಗವನ್ನು ತೆಗೆದುಹಾಕಲು ಮತ್ತು ಸಣ್ಣ ಕರುಳಿನೊಂದಿಗೆ ಉಳಿದಿದ್ದನ್ನು ವಿಲೀನಗೊಳಿಸಲು ಆಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಶಸ್ತ್ರಚಿಕಿತ್ಸಕ ಲಿಂಚ್ ಸಿಂಡ್ರೋಮ್‌ಗಾಗಿ ಜೆನೆಟಿಕ್ ಸ್ಕ್ರೀನಿಂಗ್ ಅನ್ನು ಶಿಫಾರಸು ಮಾಡಿದರು.


  ವಿಶ್ವದಾದ್ಯಂತ ಸುಮಾರು 300 ಜನರಲ್ಲಿ ಒಬ್ಬರು ಮಾತ್ರವೇ ಈ ಸ್ಥಿತಿಯನ್ನು ಹೊಂದುತ್ತಾರೆ ಎಂಬುದಾಗಿ ಟೀಗ್ ಹೇಳಿದ್ದಾರೆ. ಆದರೆ ಇದನ್ನು ತುಂಬಾ ಕಡಿಮೆ ಪತ್ತೆಹಚ್ಚಲಾಗುತ್ತದೆ ಎಂಬುದು ಡಾನಾ-ಫಾರ್ಬರ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನಲ್ಲಿರುವ ಲಿಂಚ್ ಸಿಂಡ್ರೋಮ್ ಕೇಂದ್ರದ ನಿರ್ದೇಶಕ ಡಾ. ಮ್ಯಾಥ್ಯೂ ಯುರ್ಗೆಲುನ್ ಅವರ ಅಭಿಪ್ರಾಯವಾಗಿದೆ.


  ಲಿಂಚ್ ಸಿಂಡ್ರೋಮ್ ಇರುವವರು ಬೇರೆ ಬೇರೆ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸಿಕೊಳ್ಳುವ ಸ್ಥಿತಿ ಹೊಂದಿದ್ದರೂ ಇದನ್ನು ಆರಂಭದಲ್ಲಿ ಪತ್ತೆಹಚ್ಚುವುದರಿಂದ ಆ ಅಪಾಯವನ್ನು ತಗ್ಗಿಸಬಹುದು ಎಂಬುದು ಮ್ಯಾಥ್ಯೂ ಅವರ ಮಾತಾಗಿದೆ. ಕ್ಯಾನ್ಸರ್ ಅನ್ನು ತಗ್ಗಿಸುವ ಅತ್ಯಂತ ಪರಿಣಾಮಕಾರಿಯಾದ ಉಪಕರಣಗಳು ಲಭ್ಯವಿವೆ ಎಂದು ಹೇಳುವ ಮ್ಯಾಥ್ಯೂ ಅವುಗಳ ಹೆಚ್ಚಿನ ಅಪಾಯವು ಆರಂಭದಲ್ಲಿಯೇ ಸೂಚನೆಯನ್ನು ನೀಡುತ್ತವೆ, ಇದನ್ನು ಮನಗಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.


  ಆರು ವರ್ಷಗಳ ಮುನ್ನ ಟೀಗ್ ಪರೀಶೀಲಿಸಿಕೊಳ್ಳಬೇಕಿತ್ತು


  ಟೀಗ್ ತಮ್ಮ ತಾಯಿಗೆ ರೋಗನಿರ್ಣಯ ಮಾಡಿದ ಆರು ವರ್ಷಗಳ ಹಿಂದೆ ಪರೀಕ್ಷಿಸಿದ್ದರೆ, ಇದಕ್ಕೂ ಮುನ್ನವೇ ಕ್ಯಾನ್ಸರ್ ಅನ್ನು ಪತ್ತೆಹಚ್ಚಬಹುದಿತ್ತು ಎಂಬುದು ಮ್ಯಾಥ್ಯೂ ಅವರ ಹೇಳಿಕೆಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕರುಳಿನ ಮುಖ್ಯಭಾಗ ದೊಡ್ಡ ಕರುಳನ್ನು ಉಳಿಸಿಕೊಳ್ಳಬಹುದಿತ್ತು ಎಂಬುದು ಅವರ ಅಭಿಪ್ರಾಯವಾಗಿದೆ.


  ಟೀಗ್ ದೇಹದಲ್ಲಿದ್ದುದು ಲಿಂಚ್ ಸಿಂಡ್ರೋಮ್ ಆಗಿದ್ದರಿಂದ ಇದು ಆಕೆಯನ್ನು ಉಳಿಸುವ ಆಶಾಕಿರಣವಾಗಿದೆ. ಈ ಸಂದರ್ಭದಲ್ಲಿ ಬೆಳವಣಿಗೆಯಾಗುವ ಕ್ಯಾನ್ಸರ್‌ಗಳನ್ನು ಮೊದಲೇ ಪತ್ತೆಹಚ್ಚಬಹುದಾಗಿದೆ. ಇದು ರೋಗಿಯ ದೇಹದಲ್ಲಿರುವುದು ಸ್ವತಃ ಅವರಿಗೆ ತಿಳಿಯುವ ಮೊದಲೇ ಕ್ಯಾನ್ಸರ್ ಅನ್ನು ಪತ್ತೆಹಚ್ಚಬಹುದು ಎಂಬುದು ಮ್ಯಾಥ್ಯೂ ಅವರ ಮಾತಾಗಿದೆ.


  ಶಸ್ತ್ರಚಿಕಿತ್ಸೆಗೆ ಮುನ್ನ ಟೀಗ್ ಗೆಡ್ಡೆಯ ಗಾತ್ರ ನೋಡಿ ತಾನು ಕ್ಯಾನ್ಸರ್‌ನ 4 ನೇ ಹಂತದಲ್ಲಿ ತಾನಿರುವುದಾಗಿ ಭಾವಿಸಿದ್ದರು. ಆದರೆ, ಅವರು ಕ್ಯಾನ್ಸರ್‌ನ ಎರಡನೆಯ ಹಂತದಲ್ಲಿದ್ದರು. ಟೀಗ್, ಲಿಂಚ್ ಸಿಂಡ್ರೋಮ್ ಅನ್ನು ಹೊಂದಿದ್ದರಿಂದ ಆಕೆ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕ್ಯಾನ್ಸರ್ ಅನ್ನು ಹೊಂದಿದ್ದರೂ ಅದರೊಂದಿಗೆ ಜೀವಿಸುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ.


  ಯುವಜನರಲ್ಲಿ ಕರುಳಿನ ಕ್ಯಾನ್ಸರ್ ಹೆಚ್ಚುತ್ತಿದೆ


  ಕಳೆದ ಮೂರು ದಶಕಗಳಲ್ಲಿ, ಯುವಜನರಲ್ಲಿ ಕರುಳಿನ ಕ್ಯಾನ್ಸರ್ ಮತ್ತು ಗುದನಾಳದ ಕ್ಯಾನ್ಸರ್‌ನಂತಹ ಸಂಬಂಧಿತ ಕಾಯಿಲೆಗಳ ಹೆಚ್ಚುತ್ತಿರುವ ದರಗಳನ್ನು ಸಂಶೋಧನೆಯು ಸತತವಾಗಿ ಕಂಡುಹಿಡಿದಿದೆ. ಆರಂಭದಲ್ಲಿಯೇ ರೋಗಪತ್ತೆ ಮಾಡದಿರುವುದು ಹಾಗೂ ಕೆಟ್ಟಚಟಗಳಿಗೆ ಯುವಜನಾಂಗ ಬಲಿಯಾಗುತ್ತಿರುವುದು ಕರುಳಿನ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂಬುದು ವೈದ್ಯರ ಮಾತಾಗಿದೆ.


  50 ಕ್ಕಿಂತ ಮೇಲ್ಪಟ್ಟವರಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್


  50 ವರ್ಷಕ್ಕಿಂತ ಮೇಲ್ಪಟ್ಟ ಜನರು ಇನ್ನೂ ಒಟ್ಟಾರೆಯಾಗಿ ದೊಡ್ಡ ಕರುಳಿನ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯದಲ್ಲಿದ್ದಾರೆ. ಆದಾಗ್ಯೂ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಹೆಚ್ಚಾಗಿ ಚಿಕಿತ್ಸೆ ನೀಡಲು ಕಷ್ಟಕರವಾದ, ರೋಗದ ಮುಂದುವರಿದ ರೂಪಗಳೊಂದಿಗೆ ರೋಗನಿರ್ಣಯಕ್ಕೊಳಗಾಗುತ್ತಾರೆ.


  ಕರುಳಿನ ಕ್ಯಾನ್ಸರ್ ರೋಗನಿರ್ಣಯ ಮಾಡಲು ಕಷ್ಟವಾಗಬಹುದು ಏಕೆಂದರೆ ರೋಗಲಕ್ಷಣಗಳು - ಹೊಟ್ಟೆ ನೋವು, ಮಲಬದ್ಧತೆ, ಅತಿಸಾರ, ತೂಕ ನಷ್ಟ ಮತ್ತು ಆಯಾಸ - ಮೂಲವ್ಯಾಧಿ, ಉರಿಯೂತದ ಕರುಳಿನ ಕಾಯಿಲೆ, ಅಥವಾ ಕೆರಳಿಸುವ ಕರುಳಿನ ಕೆಲವೊಂದು ಸಾಮಾನ್ಯ ಲಕ್ಷಣಗಳನ್ನು ಪ್ರದರ್ಶಿಸುತ್ತವೆ, ಇದರಿಂದ ಕರುಳಿನ ಕ್ಯಾನ್ಸರ್ ದೇಹದಲ್ಲಿ ಅಭಿವೃದ್ಧಿಗೊಳ್ಳುವುದು ತಿಳಿಯುವುದೇ ಇಲ್ಲ ಎಂದು ವೈದ್ಯರು ಹೇಳುತ್ತಾರೆ.


  ಕೊಲೊರೆಕ್ಟಲ್ ಕ್ಯಾನ್ಸರ್ ಪತ್ತೆ ಹೇಗೆ?


  50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಸೂಚಿಸುವ ಚಿಹ್ನೆ ಇಲ್ಲವೇ ರೋಗಲಕ್ಷಣಗಳು ಕಂಡುಬಂದಾಗ ಮತ್ತು ಗುದನಾಳದಲ್ಲಿ ರಕ್ತಸ್ರಾವವುಂಟಾದಾಗ ಕೂಡಲೇ ವೈದ್ಯರು ಅದನ್ನು ಪರಿಶೀಲಿಸಬೇಕು. ಅದು ಕೇವಲ ಮೂಲವ್ಯಾಧಿ ಅಥವಾ ಸಾಮಾನ್ಯ ಎಂದು ತಳ್ಳಿಹಾಕಬಾರದು ಎಂಬುದು ತಜ್ಞರ ಸಲಹೆಯಾಗಿದೆ. ದೊಡ್ಡ ಕರುಳಿನ ಕ್ಯಾನ್ಸರ್ ಅನ್ನು ಆರಂಭದಲ್ಲಿ ಪತ್ತೆಹಚ್ಚಿದರೆ ಇದಕ್ಕೆ ಹೆಚ್ಚಿನ ಚಿಕಿತ್ಸೆ ಇದೆ ಹಾಗೂ 90% ಬದುಕುಳಿಯುವ ಸಾಧ್ಯತೆ ಇದೆ ಮತ್ತು ದೇಹದ ಇತರ ಭಾಗಗಳಿಗೆ ಕ್ಯಾನ್ಸರ್ ಹರಡುವುದಿಲ್ಲ ಎಂಬುದಾಗಿ ಅಮೇರಿಕನ್ ಕ್ಯಾನ್ಸರ್ ಸೊಸೈಟಿ ತಿಳಿಸಿದೆ.

  Published by:Precilla Olivia Dias
  First published: