ಶೇ.98 ರಷ್ಟು ಭಾರತೀಯರು ರಾತ್ರಿಯಲ್ಲಿ ಇದನ್ನು ನೋಡಲು ಇಚ್ಛಿಸುತ್ತಾರಂತೆ..!

ಈ ಹಿಂದೆ ವಿಶ್ವದಲ್ಲೇ ಅತಿ ಹೆಚ್ಚು ಪೋರ್ನ್​ ವೀಕ್ಷಿಸುವ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನವನ್ನು ಪಡೆದು ಸುದ್ದಿಯಾಗಿತ್ತು.

news18
Updated:January 14, 2019, 7:22 AM IST
ಶೇ.98 ರಷ್ಟು ಭಾರತೀಯರು ರಾತ್ರಿಯಲ್ಲಿ ಇದನ್ನು ನೋಡಲು ಇಚ್ಛಿಸುತ್ತಾರಂತೆ..!
ಮಲಗಿದ ಕೂಡಲೆ ಬಹುತೇಕರಿಗೆ ಮೊಬೈಲ್ ನೋಡುವ ಅಭ್ಯಾಸ ಇರುತ್ತದೆ. ಮೊಬೈಲ್​ನಲ್ಲಿ ವಿಡಿಯೋಗಳನ್ನು ನೊಡುತ್ತಾ ಮಲಗುವ ಅಭ್ಯಾಸ ಒಳ್ಳೆಯದಲ್ಲ. ಅದರಿಂದ ಕಣ್ಣು ಒಣಗಿದಂತಾಗಿ ನಿದ್ರೆಯೂ ದೂರ ಹೋಗುತ್ತದೆ.
  • News18
  • Last Updated: January 14, 2019, 7:22 AM IST
  • Share this:
ಭಾರತದಲ್ಲಿ ಸ್ಮಾರ್ಟ್​ಫೋನ್​ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಡಿಮೆ ದರದಲ್ಲಿ ಡೇಟಾ ಸೇವೆ ಸಿಗಲು ಪ್ರಾರಂಭಿಸಿದ ಬಳಿಕ ದೇಶದಲ್ಲಿ ವೀಡಿಯೊ ವೀಕ್ಷಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ಮುಖ್ಯವಾಗಿ ಯುಟ್ಯೂಬ್​, ಫೇಸ್​ಬುಕ್​ನಲ್ಲಿ ಭಾರತೀಯ ಬಳಕೆದಾರ ಪ್ರಮಾಣ ಕ್ಷೀಪ್ರಗತಿಯಲ್ಲಿ ಏರಿಕೆಯಾಗುತ್ತಿದೆ.

ಸ್ಮಾರ್ಟ್​ಫೋನ್​ಗಳು ಜನರನ್ನು ಯಾವ ಮಟ್ಟಕ್ಕೆ ಆವರಿಸಿದೆ ಎಂದರೆ ಮಲಗುವಾಗ ಇರಲೇಬೇಕು. ದಂಪತಿಗಳೂ ಕೂಡ ಇದಕ್ಕೆ ಹೊರತಾಗಿಲ್ಲ. ಗಂಡ ಮತ್ತು ಹೆಂಡತಿ ಮಲಗಿದಾಗ ಪರಸ್ಪರ ಮುಖ  ನೋಡಿಕೊಳ್ಳುವುದಕ್ಕಿಂತ  ಸ್ಮಾರ್ಟ್​ಫೊನ್​  ವೀಕ್ಷಿಸುವುದೇ ಹೆಚ್ಚು ಎಂಬಂತಾಗಿದೆ.

ಒಂದಾರ್ಥದಲ್ಲಿ ಸ್ಮಾರ್ಟ್​ಫೋನ್​ಗಳೇ ಸಂಗಾತಿಯಾಗಿವೆ ಎನ್ನಬಹುದು. ಅಷ್ಟರ ಮಟ್ಟಿಗೆ ಮೊಬೈಲ್​ನೊಂದಿಗೆ ಕಾಲ ಕಳೆಯುತ್ತಿದ್ದಾರೆ. ಬಿ2ಎಕ್ಸ್​ ಕೇರ್​ ಸೊಲ್ಯುಷನ್​ ನಡೆಸಿರುವ ಗ್ಲೋಬಲ್ ಸರ್ವೆ ನಡೆಸಿದ ಸಮೀಕ್ಷೆ ಪ್ರಕಾರ ಶೇ.58 ರಷ್ಟು ಭಾರತೀಯರು ಸ್ಮಾರ್ಟ್​ಫೋನ್ ಇಲ್ಲದೆ ಬದುಕಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಯಾವ ಸಮಯದಲ್ಲಿ ಲೈಂಗಿಕ ಕ್ರಿಯೆ ಉತ್ತಮ?: ಸಂಶೋಧನೆಯಿಂದ ತಿಳಿದು ಬಂತು ಹೊಸ ಸತ್ಯ

ಹಾಗೆಯೇ ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 98ರಷ್ಟು ಭಾರತೀಯರು ತಮ್ಮ ಮೊಬೈಲ್ ಫೋನ್ ಜತೆ ಮಲಗುತ್ತೇವೆ ಎಂದಿದ್ದಾರೆ. ಈ ಪೈಕಿ ಹೆಚ್ಚಿನ ಭಾರತೀಯರು ಮಲಗುವಾಗ ಫೋನ್​ನಲ್ಲೇ ಸಮಯ ಕಳೆಯುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಶೇ. 83ರಷ್ಟು ಜನರು ದಿನಪೂರ್ತಿ ಮೊಬೈಲ್​ ಅನ್ನು ಜೊತೆಯಲ್ಲಿಟ್ಟುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.  ಅದರಲ್ಲೂ ಕೈಗೆಟುಕುವ ದೂರದಲ್ಲೇ ಫೋನ್​ಗಳನ್ನು ಇರಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲೈಂಗಿಕ ಸಂಬಂಧದ ಕುರಿತು ನೀವು ತಿಳಿದಿರಲೇಬೇಕಾದ ಕೆಲ ಸಂಗತಿಗಳು

ಈ ಹಿಂದೆ ವಿಶ್ವದಲ್ಲೇ ಅತಿ ಹೆಚ್ಚು ಪೋರ್ನ್​ ವೀಕ್ಷಿಸುವ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನವನ್ನು ಪಡೆದು ಸುದ್ದಿಯಾಗಿತ್ತು. ಪೋರ್ನ್​ ಹಬ್​ ಹೊರ ತಂದಿದ್ದ ಈ ಲೀಸ್ಟ್​ನಲ್ಲಿ ಭಾರತದಲ್ಲಿ ಅಶ್ಲೀಲ ವೀಡಿಯೊ ವೀಕ್ಷಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ  ಎಂದು ತಿಳಿಸಲಾಗಿತ್ತು.ಇದನ್ನೂ ಓದಿ: ಲವ್ ಸೆಕ್ಸ್  ದೋಖಾ: ಕಾಮುಕನನ್ನು ನಂಬಿ ಜೀವ ಕಳೆದುಕೊಂಡ ಯುವ ಅಥ್ಲೀಟ್

ಈ ಸಮೀಕ್ಷೆ ಕೂಡ ಜನರಿಗೆ ಮಲಗುವಾಗ ಫೋನ್​ ಜತೆಯಲ್ಲಿರಬೇಕು ಎಂದು ತಿಳಿಸಿದೆ. ಆದರೆ ಸದ್ಯ ಭಾರತದಲ್ಲಿ ಅಶ್ಲೀಲ ವೆಬ್​ಸೈಟ್​ ಮೇಲೆ ನಿರ್ಬಂಧ ವಿಧಿಸಲಾಗಿದ್ದು, ಇದರಿಂದ ಅನೇಕ ಪೋರ್ನ್​ ಸೈಟ್​ಗಳ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಮೊಬೈಲ್​ ಫೋನ್​ಗಳನ್ನು ತಲೆಯ ಭಾಗದಲ್ಲಿ ಅಥವಾ ದೇಹದ ಹತ್ತಿರದಲ್ಲಿ ಇರಿಸುವುದರಿಂದ ಬ್ರೈನ್​ ಟ್ಯೂಮರ್​ನಂತಹ ಮಾರಕ ಕಾಯಿಲೆಗಳ ಅಪಾಯವಿದೆ ಎಂದು ವೈದ್ಯಲೋಕ ಎಚ್ಚರಿಸಿದೆ.

ಇದನ್ನೂ ಓದಿ: ಬೈಕ್​ ಸವಾರರಿಗೆ ಸಿಹಿ ಸುದ್ದಿ: ಟೆನ್ಶನ್​ ಇಲ್ಲದೆ ಈ ಹೆಲ್ಮೆಟ್​ ಧರಿಸಬಹುದು

First published: January 13, 2019, 9:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading