RBI Recruitment 2020: 926 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

2020ರ ಫೆಬ್ರವರಿ 14 ಮತ್ತು 15ರಂದು ಆನ್​ಲೈನ್​ ಪೂರ್ವಭಾವಿ ಪರೀಕ್ಷೆ ಏರ್ಪಡಿಸಲಾಗಿದೆ. ಅಂತಿಮ ಪರೀಕ್ಷೆಯನ್ನು 2020ರ ಮಾರ್ಚ್​ನಲ್ಲಿ ನಿಗದಿ ಮಾಡಲಾಗಿದೆ. ಆದರೆ ದಿನಾಂಕ ಬದಲಾಗುವ ಸಾಧ್ಯತೆಯಿದೆ ಎಂದು ಆರ್​ಬಿಐ ತಿಳಿಸಿದೆ.

news18-kannada
Updated:December 25, 2019, 2:32 PM IST
RBI Recruitment 2020: 926 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ರಿಸರ್ವ್​ ಬ್ಯಾಂಕ್
  • Share this:
ಭಾರತೀಯ ರಿಸರ್ವ್​ ಬ್ಯಾಂಕ್​ನಲ್ಲಿ ಖಾಲಿ ಇರುವ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು rbi.gov.in  ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 16 ರೊಳಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತೀಯ ರಿಸರ್ವ್​ ಬ್ಯಾಂಕ್​​ನಲ್ಲಿ 926 ಸಹಾಯಕ ಹುದ್ದೆ ಹುದ್ದೆಗಳು ಖಾಲಿ ಇವೆ. 20 ರಿಂದ 28 ವರ್ಷದವರು ಅರ್ಜಿ ಸಲ್ಲಿಸಲು ಅರ್ಹರು ಎಂದು ತಿಳಿಸಿದೆ. ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಯಾವುದೇ ಪದವಿಯಲ್ಲಿ ಶೇ. 50ರಷ್ಟು ಅಂಕ ಗಳಿಸಬೇಕಿದೆ.

2020ರ ಫೆಬ್ರವರಿ 14 ಮತ್ತು 15ರಂದು ಆನ್​ಲೈನ್​ ಪೂರ್ವಭಾವಿ ಪರೀಕ್ಷೆ ಏರ್ಪಡಿಸಲಾಗಿದೆ. ಅಂತಿಮ ಪರೀಕ್ಷೆಯನ್ನು 2020ರ ಮಾರ್ಚ್​ನಲ್ಲಿ ನಿಗದಿ ಮಾಡಲಾಗಿದೆ. ಆದರೆ ದಿನಾಂಕ ಬದಲಾಗುವ ಸಾಧ್ಯತೆಯಿದೆ ಎಂದು ಆರ್​ಬಿಐ ತಿಳಿಸಿದೆ.

ಹುದ್ದೆಗಳು: 926

ಆರ್ಜಿ ಸಲ್ಲಿಸುವುದು ಹೇಗೆ:

ಅರ್ಹ ಅಭ್ಯರ್ಥಿಗಳು  ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

 ಅರ್ಜಿಶುಲ್ಕ:-ಸಾಮಾನ್ಯ ಒಬಿಸಿ ಹಾಗೂ ಇಡಬ್ಲ್ಯೂಎಸ್​ ವರ್ಗಕ್ಕೆ ಆನ್​ಲೈನ್​ ಅರ್ಜಿ ಶುಲ್ಕ 450 ನಿಗದಿಪಡಿಸಲಾಗಿದೆ.

-ಮೀಸಲು ವರ್ಗಕ್ಕೆ 50 ರೂಪಾಯಿ ನಿಗದಿ ಪಡಿಸಲಾಗಿದೆ.

-ಅರ್ಜಿ ಶುಲ್ಕವನ್ನು ಆನ್​ಲೈನ್​ನಲ್ಲೇ ಪಾವತಿ ಮಾಡಬೇಕಿದೆ.

ವಯೋಮಿತಿ: 20 ರಿಂದ 28 ವರ್ಷದವರು ಅರ್ಜಿ ಸಲ್ಲಿಸಲು ಅರ್ಹರು ಎಂದು ತಿಳಿಸಿದೆ

ಪ್ರಮುಖ ದಿನಾಂಕ: 

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಜನವರಿ 16

ಪೂರ್ವಭಾವಿ ಪರೀಕ್ಷೆ:  2020ರ ಫೆವ್ರವರಿ 14 ಮತ್ತು 15ರಂದು ಆನ್​ಲೈನ್​ ಪೂರ್ವಭಾವಿ ಪರೀಕ್ಷೆ ಏರ್ಪಡಿಸಲಾಗಿದೆ.

ಇದನ್ನೂ ಓದಿ: Rakshit Shetty Interview: ಆ ಎರಡು ಸ್ಫೂರ್ತಿಗಳಿಂದ ಅವನೇ ಶ್ರೀಮನ್ನಾರಾಯಣ ಸಿನಿಮಾ ಆರಂಭವಾಯ್ತು; ರಕ್ಷಿತ್ ಶೆಟ್ಟಿ
Published by: Harshith AS
First published: December 25, 2019, 2:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading