Food Waste: ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ಮನೆಯಲ್ಲಿ ಮಾಡಿರೋ ಅಡುಗೆ ವೇಸ್ಟ್​ ಆಗೋದೇ ಇಲ್ಲ..!

Food Waste: ಕೆಲವರು ತಮ್ಮ ಅಗತ್ಯದ ಎಷ್ಟಿದೆಯೋ ಅದಕ್ಕಿಂತ ಹೆಚ್ಚಿನ ವಸ್ತುಗಳನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಅವುಗಳನ್ನು ಬಳಸುವ ಪರಿಸ್ಥಿತಿ ಬರುವುದಿಲ್ಲ, ಹೀಗಾಗಿ ಕೊನೆಗೆ ಅವುಗಳನ್ನು ಬಿಸಾಡುವ ಸ್ಥಿತಿ ಬರುತ್ತದೆ.. ಹೀಗಾಗಿ ಅಗತ್ಯ ಎಷ್ಟಿದೆಯೋ ಅದಕ್ಕೆ ತಕ್ಕಂತೆ ಖರೀದಿ ಮಾಡುವುದು ಉತ್ತಮ.

ಆಹಾರ ವ್ಯರ್ಥ

ಆಹಾರ ವ್ಯರ್ಥ

  • Share this:
    ಒಂದು ಕಡೆ ನಾವು ಆಧುನಿಕತೆಯ(Modernity) ತುತ್ತ ತುದಿಯನ್ನು ತಲುಪಿದ್ದರೆ, ಮತ್ತೊಂದು ಕಡೆ ಊಟಕ್ಕೂ(Food) ಗತಿ ಇಲ್ಲದೆ ಜನರು ಹಸಿವಿನಿಂದ(Hunger) ಸಾಯುತ್ತಿದ್ದಾರೆ. ಒಂದು ಕಡೆ ಕೆಲವು ವ್ಯಕ್ತಿಗಳು ಕೋಟಿಗಳ ಲೆಕ್ಕದಲ್ಲಿ ಹಣ(Money) ಎಣೆಸುತ್ತಿದ್ದರೆ, ಇನ್ನೊಂದು ಕಡೆ ಊಟಕ್ಕಾಗಿ ಒಂದು ರೂಪಾಯಿಯನ್ನು ಸಹ ಖರ್ಚು ಮಾಡುವ ಸಾಮರ್ಥ್ಯವಿಲ್ಲದ ಮನುಷ್ಯ ಅರ್ಧ ಹೊಟ್ಟೆಯಲ್ಲೇ ದಿನ ಕಳೆಯುತ್ತಿದ್ದಾನೆ. ಹೌದು, ಹಲವು ಕಡೆ ಹಸಿವು ಎನ್ನುವುದು ಇಂದಿಗೂ ಸಹ ಬಹು ದೊಡ್ಡ ಸಮಸ್ಯೆಯಾಗಿದೆ(Problem). ತಿನ್ನಲು ಏನೂ ಸಿಗದೆ ಹಸಿವಿನಿಂದ ನರಳಿ ನರಳಿ ಜನ ಸಾಯುತ್ತಿದ್ದಾರೆ(Death). ಪ್ರತಿ ವರ್ಷ ಜಗತ್ತಿನಾದ್ಯಂತ ಸುಮಾರು 15 ಲಕ್ಷ ಜನ ಹಸಿವೆಗೆ ಸಂಬ೦ಧ ಪಟ್ಟ ಕಾರಣಗಳಿಂದ ಸಾಯುತ್ತಿದ್ದಾರೆ. ಇದರಲ್ಲಿ ಮಕ್ಕಳ ಸಂಖ್ಯೆ ಸುಮಾರು 16,000. ಇದರರ್ಥ, ಪ್ರತಿ ಐದು ಸೆಕೆಂಡಿಗೆ ಒಂದು ಮಗು ಹಸಿವಿನಿಂದ ಸಾಯುತ್ತಿದೆ. ಇನ್ನು ಜಗತ್ತಿನಾದ್ಯಂತ ಉತ್ಪಾದನೆಯಾಗುವ ಒಟ್ಟೂ ಆಹಾರದಲ್ಲಿ ಸುಮಾರು 33% ಆಹಾರ ಉಪಯೋಗಿಸದೆ ವ್ಯರ್ಥವಾಗಿ ಹೋಗುತ್ತಿದೆ. ಪ್ರತಿ ವರ್ಷ ಸುಮಾರು 130 ಕೋಟಿ ಟನ್‌ನಷ್ಟು ಆಹಾರ ವ್ಯರ್ಥವಾಗುತ್ತಿದೆ. ಹೀಗಾಗಿ ಮನ ಬಂದಂತೆ ಆಹಾರವನ್ನು ವ್ಯರ್ಥ ಮಾಡುವ ಮುನ್ನ ಒಮ್ಮೆ ಯೋಚನೆ ಮಾಡುವುದು ಒಳಿತು.. ಅಲ್ಲದೆ ಈ ರೀತಿ ನೀವು ಮಾಡಿದ್ರೆ ಆಹಾರ ವ್ಯರ್ಥ ಮಾಡುವುದನ್ನು ತಪ್ಪಿಸಬಹುದು ..

    1) ಅಗತ್ಯಕ್ಕೆ ತಕ್ಕಂತೆ ಖರೀದಿ: ಕೆಲವರು ತಮ್ಮ ಅಗತ್ಯದ ಎಷ್ಟಿದೆಯೋ ಅದಕ್ಕಿಂತ ಹೆಚ್ಚಿನ ವಸ್ತುಗಳನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಅವುಗಳನ್ನು ಬಳಸುವ ಪರಿಸ್ಥಿತಿ ಬರುವುದಿಲ್ಲ, ಹೀಗಾಗಿ ಕೊನೆಗೆ ಅವುಗಳನ್ನು ಬಿಸಾಡುವ ಸ್ಥಿತಿ ಬರುತ್ತದೆ.. ಹೀಗಾಗಿ ಅಗತ್ಯ ಎಷ್ಟಿದೆಯೋ ಅದಕ್ಕೆ ತಕ್ಕಂತೆ ಖರೀದಿ ಮಾಡುವುದು ಉತ್ತಮ.

    ಇದನ್ನೂ ಓದಿ: ಪ್ರತಿದಿನ ಹೀಗೆ ಮಾಡಿ ಸಾಕು, ಸುಲಭವಾಗಿ ಇಳಿಯುತ್ತೆ ದೇಹದ ತೂಕ..!

    2) ಸರಿಯಾದ ರೀತಿಯಲ್ಲಿ ಆಹಾರ ಸಂಸ್ಕರಣೆ: ನಾವು ಮಾರುಕಟ್ಟೆಯಿಂದ ತರುವ ಆಹಾರ ಪದಾರ್ಥಗಳು ತರಕಾರಿಗಳನ್ನು ಹೇಗೆ ಸಂಸ್ಕರಣೆ ಮಾಡಬೇಕು ಎನ್ನುವುದು ಬಹುತೇಕರಿಗೆ ತಿಳಿದಿರುವುದಿಲ್ಲ.. ಹೀಗೆ ಆಹಾರ ಪದಾರ್ಥಗಳನ್ನು ಸರಿಯಾಗಿ ಸಂಸ್ಕರಣೆ ಮಾಡದೆ ಇರುವುದರಿಂದ ಆಹಾರ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ.. ಅದರಲ್ಲೂ ಬಹುಮುಖ್ಯವಾಗಿ ತರಕಾರಿಗಳನ್ನು ಸರಿಯಾದ ಮಾರ್ಗದಲ್ಲಿ ಸಂಸ್ಕರಣೆ ಮಾಡುವುದರಿಂದ ಬಹುಕಾಲದವರೆಗೆ ಉಪಯೋಗ ಮಾಡಬಹುದು.

    3) ಆಹಾರ ಸಂರಕ್ಷಣೆ ಮಾಡುವುದು: ಕೆಲವೊಂದು ತರಕಾರಿಗಳು ಹಸಿಯಾಗಿ ಇದ್ದಾಗ ಅವುಗಳನ್ನು ಬಳಸುವ ರೂಢಿ ಕೆಲವರಲ್ಲಿರುತ್ತದೆ.. ಇಲ್ಲದಿದ್ದರೆ ಅವುಗಳನ್ನು ಬಿಸಾಡಲು ಮುಂದಾಗುತ್ತಾರೆ.. ಹೀಗಾಗಿ ಒಂದು ತರಕಾರಿ ಅಥವಾ ವಸ್ತುವಿನಿಂದ ಅದರ ಸ್ವಾದ ಮುಗಿದಮೇಲೆ ಬೇರೆ ಏನನ್ನಾದರೂ ಮಾಡಬಹುದು ಎಂಬ ಆಲೋಚನೆ ಇಟ್ಟುಕೊಂಡು ಆಹಾರ ಸಂರಕ್ಷಣೆ ಮಾಡುವುದು ಒಳಿತು..

    4) ರೈತರಿಂದ ನೇರವಾಗಿ ತರಕಾರಿ ಖರೀದಿಸಿ: ಇತ್ತೀಚಿನ ದಿನಗಳಲ್ಲಿ ಸೂಪರ್ ಮಾರ್ಕೆಟ್ ಇಂದ ತರಕಾರಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ.. ಇಲ್ಲಿ ಕಾಣಸಿಗುವ ತರಕಾರಿಗಳು ಫ್ರೆಶ್ ಎಂದು ಕಂಡರೂ ಹೌದು ಅಷ್ಟಾಗಿ ಫ್ರೆಶ್ ಆಗಿರುವುದಿಲ್ಲ.. ಹೀಗಾಗಿ ಮನೆಗೆ ತಂದ ಕೆಲವೇ ದಿನಗಳಲ್ಲಿ ಹಾಳಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ರೈತರಿಂದ ನೇರವಾಗಿ ಪ್ರಶ್ ತರಕಾರಿ ಖರೀದಿ ಮಾಡುವುದರಿಂದ ಹಲವಾರು ದಿನಗಳ ಕಾಲ ಮನೆಯಲ್ಲಿಯೇ ಸಂಗ್ರಹಣೆ ಮಾಡಿ ಇಟ್ಟುಕೊಳ್ಳಬಹುದು.

    5) ಉಳಿದ ಆಹಾರ ಮರುಬಳಕೆ ಮಾಡಿ: ಯಾವುದಾದರೂ ಊಟ ತಿಂಡಿ ಮನೆಯಲ್ಲಿ ಉಳಿದರೆ ಅದನ್ನು ಫ್ರಿಜ್ಜಿನಲ್ಲಿ ಇಟ್ಟು ಮರೆತು ಬಿಡುವವರೇ ಹೆಚ್ಚು.. ಹೀಗೆ ಮಾಡುವ ಬದಲು ಉಳಿದ ಆಹಾರವನ್ನು ಮತ್ತೆ ಸೇವನೆ ಮಾಡುವುದರಿಂದ ಆಹಾರ ವ್ಯರ್ಥವಾಗುವುದು ತಪ್ಪಲಿದೆ.

    6) ತರಕಾರಿ ಹಾಗೂ ಹಣ್ಣುಗಳ ಮೇಲ್ಮೈ ತೆಗೆಯದಿರಿ: ಅಡುಗೆ ಮಾಡುವಾಗ ತರಕಾರಿಗಳ ಸಿಪ್ಪೆ, ಹಾಗೂ ಹಣ್ಣುಗಳ ಸಿಪ್ಪೆ ತೆಗೆದು ಸೇವನೆ ಮಾಡುವವರೇ ಹೆಚ್ಚು.. ಹೀಗೆ ಮಾಡುವಾಗ ಬಹುತೇಕ ತರಕಾರಿ ಹಾಗೂ ಹಣ್ಣು ವ್ಯರ್ಥವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ತರಕಾರಿ ಹಾಗೂ ಹಣ್ಣಿನ ಸಿಪ್ಪೆ ತೆಗೆಯುವ ಬದಲು ಅದನ್ನು ಹಾಗೆಯೇ ಸೇವನೆ ಮಾಡುವುದು ಸೂಕ್ತ.

    7) ಹೆಚ್ಚಿನ ನೀರು ಸೇವನೆ ಮಾಡಿ: ಕೆಲವರು ಸರಿಯಾದ ಪ್ರಮಾಣದಲ್ಲಿ ನೀರು ಸೇವನೆ ಮಾಡುವುದಿಲ್ಲ.. ಊಟದ ಬಳಿಕವೂ ಊಟಕ್ಕೆ ಮೊದಲು ನೀರು ಕುಡಿಯದೆ ಇರುವುದರಿಂದ ಕೆಲವರು ಹೆಚ್ಚಿಗೆ ತಿನ್ನುವ ಸಾಧ್ಯತೆ ಇರುತ್ತದೆ... ಹೀಗಾಗಿ ಪ್ರತಿನಿತ್ಯ ಸರಿಯಾದ ಪ್ರಮಾಣದಲ್ಲಿ ನೀರು ಸೇವನೆ ಮಾಡುವುದು ಸೂಕ್ತ.. ನೀರು ಜೊತೆಗೆ ಅದನ್ನು ರುಚಿಯಾಗಿ ಮಾಡುವುದು. ಸಿಟ್ರಸ್ ಹಣ್ಣುಗಳು, ಸೇಬುಗಳು ಮತ್ತು ಸೌತೆಕಾಯಿಯಂತಹ ಹಣ್ಣು ಸೇವನೆ ಮಾಡುವುದರಿಂದ ಆಹಾರ ಉಳಿತಾಯ ಮಾಡಬಹುದು.

    ಇದನ್ನೂ ಓದಿ: ತಂದೆಯ ಫೋನ್​ನಿಂದ ₹64,900 ಐಸ್‌ಕ್ರೀಮ್, ಕೇಕ್ ಆರ್ಡರ್ ಮಾಡಿದ ಬಾಲಕ, ನಂತರ ಆಗಿದ್ದು ನೋಡಿ ಎಲ್ರಿಗೂ ಶಾಕ್!

    8) ನೀವು ಎಷ್ಟು ಆಹಾರ ಸೇವಿಸುತ್ತಿರಾ ಎಂಬುದನ್ನು ತಿಳಿದುಕೊಳ್ಳಿ: ಕೆಲವರು ತಮ್ಮ ಅಗತ್ಯಕ್ಕೆ ತಕ್ಕಂತೆ ಅಧಿಕಾರವನ್ನು ತಟ್ಟೆಯಲ್ಲಿ ಹಾಕಿಕೊಂಡು ಬಿಸಾಡುವ ಸಾಧ್ಯತೆ ಹೆಚ್ಚು.. ಹೀಗಾಗಿ ನೀವು ಊಟ ಮಾಡುವ ಮೊದಲು ನೀವು ಎಷ್ಟು ತಿನ್ನಲು ಶಕ್ತರಾಗಿದ್ದಾ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

    9) ಆಹಾರದ ಅವಧಿ ಮುಗಿಯುವ ಮುನ್ನ ಬಳಕೆ ಮಾಡಿ: ಸಾಮಾನ್ಯವಾಗಿ ಪ್ಯಾಕೆಟ್ ಗಳಲ್ಲಿ ಸಿಗುವ ಆಹಾರ ಪದಾರ್ಥಗಳಿಗೆ ನಿರ್ದಿಷ್ಟ ದಿನ ಎಂಬುದು ಇರುತ್ತದೆ.. ಹೀಗಾಗಿ ನೀವು ಕೊಂಡುತಂದ ಆಹಾರವನ್ನ ಅಧಿಕ ದಿನ ದವರೆಗೆ ಬಳಕೆ ಮಾಡಲು ಸಾಧ್ಯವಿಲ್ಲ.. ಹೀಗಾಗಿ ಆಹಾರದ ಅವಧಿ ಮುಗಿಯುವ ಮುನ್ನ ಬಳಕೆ ಮಾಡುವುದು ಸೂಕ್ತ
    Published by:ranjumbkgowda1 ranjumbkgowda1
    First published: