ಹುಡುಗೀರಿಗೆ ಹೇಗಿದ್ರೆ ಇಷ್ಟವಾಗುತ್ತೆ ಗೊತ್ತಾ?; ಹುಡುಗರಿಗೆ ಗೊತ್ತಿಲ್ಲದ 9 ಸೀಕ್ರೆಟ್​ಗಳು

ಹೆಣ್ಣುಮಕ್ಕಳ ಮನಸು ಯಾವಾಗ ಹೇಗಿರುತ್ತದೆ ಎಂದು ತಿಳಿಯೋದು ಬಹಳ ಕಷ್ಟ. ಪ್ರತಿಯೊಬ್ಬ ಹುಡುಗಿಯರೂ ಒಬ್ಬರಿಗಿಂತ ಒಬ್ಬರು ಭಿನ್ನ. ಕೆಲವೊಮ್ಮೆ ಒಬ್ಬಳು ಹುಡುಗಿ ಒಂದು ಸಮಯದಲ್ಲಿ ಇದ್ದ ಹಾಗೆ ಇನ್ನೊಂದು ಬಾರಿ ಇರುವುದಿಲ್ಲ. ಹುಡುಗರಿಗಿಂತ ಹುಡುಗಿಯ ಮನಸ್ಥಿತಿ ಬದಲಾಗುವುದು ಬಹು ಬೇಗ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • RedWomb
 • Last Updated :
 • Share this:
  ಎಷ್ಟೋ ವರ್ಷಗಳಿಂದ ಜೊತೆಗಿರುವ ಗಂಡ ಕೂಡ ಹೆಂಡತಿಗೆ ಇದೇ ಬೇಕು ಎಂದು ನಿರ್ಧಾರ ಮಾಡಲು ಸೋಲುತ್ತಾನೆ. ಹಾಗಾಗಿಯೇ, ತನ್ನ ಮನದರಸಿಯನ್ನು ಖುಷಿಪಡಿಸಲು ಏನು ಮಾಡಬೇಕೆಂದು ತಿಳಿಯಲು ಪುರುಷರು ಹರಸಾಹಸ ಪಡುತ್ತಾರೆ. ಸಾಮಾನ್ಯವಾಗಿ ತಮ್ಮ ಹುಡುಗಿಯ ಬಗ್ಗೆ ಹುಡುಗರಿಗೆ ಗೊತ್ತಿಲ್ಲದ ಕೆಲವು ಸಂಗತಿಗಳನ್ನು ನಾವು ಹೇಳ್ತೀವಿ. ಆದರೆ, ಇದು ಎಲ್ಲ ಹುಡುಗಿಯರ ವಿಷಯದಲ್ಲೂ ಅನ್ವಯವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಬಹುತೇಕ ಎಲ್ಲ ಹುಡುಗಿಯರನ್ನು ಅರ್ಥ ಮಾಡಿಕೊಳ್ಳಲು ಈ ರೀತಿ ಮಾಡಿ ನೋಡಿ...

  1. ನಿಮ್ಮ ಹುಡುಗಿ ಕೋಪಗೊಂಡಾಗ ಅಥವಾ ತುಂಬ ಒತ್ತಡದಲ್ಲಿದ್ದಾಗ, ಕೆಲಸ ಮಾಡಿ ಸುಸ್ತಾಗಿ ಬಂದಾಗ ಆಕೆಗೆ ನಿಮ್ಮ ಅಟೆನ್ಷನ್​ ಬೇಕಾಗಿರುತ್ತದೆ. ಆಕೆ ಕೋಪದಿಂದ ಕಿರುಚಾಡುವಾಗ ನೀವೂ ಧ್ವನಿ ಸೇರಿಸಲು ಹೋದರೆ ಅನಾಹುತವಾಗುತ್ತದೆ. ಆ ಸಮಯದಲ್ಲಿ ನೀವು ತಾಳ್ಮೆಯಿಂದಿದ್ದರೆ ನಂತರ ಆಕೆಯೇ ಸರಿಹೋಗುತ್ತಾಳೆ.

  2. ಐ ಲವ್​ ಯೂ ಎಂದು ಹೇಳಿದಾಗ ಆಕೆ ಒಪ್ಪಿಕೊಂಡ ಮೇಲೆ ಹಲವು ಪುರುಷರು ಮತ್ತೆ ಆ ಪದ ಬಳಕೆ ಮಾಡುವುದೇ ಕಡಿಮೆ. ಆದರೆ, ನೀವು ಆಕೆಯನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಆಗಾಗ ಆಕೆಗೆ ನೆನಪಿಸುತ್ತಲೇ ಇರಬೇಕು. ಇಲ್ಲವಾದರೆ, 'ನಿನಗೆ ನನ್ನ ಮೇಲೆ ಮೊದಲಿನಷ್ಟು ಪ್ರೀತಿಯಿಲ್ಲ' ಎಂಬ ಹಳೇ ಕ್ಯಾಸೆಟ್​ ಕೇಳಬೇಕಾಗುತ್ತದೆ. ನಿಮಗೆ ಆಕೆಯ ನೆನಪಾದಾಗಲೆಲ್ಲ ಐ ಲವ್​ ಯು ಎಂಬ ಒಂದು ಮೆಸೇಜ್​ ಹಾಕಿ. ಇಬ್ಬರ ನಡುವೆ ಜಗಳವಾದಾಗಲೆಲ್ಲ ಪ್ರೀತಿಯಿಂದ ಒಂದು ಹಗ್​ ಮಾಡಿ.

  ಬಾಚಣಿಗೆಯಲ್ಲಿ ಕೂದಲು ಕಿತ್ತುಬರುತ್ತಾ?; ಕೂದಲು ಉದುರುವಿಕೆಗೆ ಮನೆಯಲ್ಲೇ ಇದೆ ರಾಮಬಾಣ

  3. ನಿಮ್ಮ ಹುಡುಗಿ ಯಾವುದಾದರೂ ಕೆಲಸವನ್ನು ಮಾಡಬೇಡ ಎಂದರೆ ನೀವು ಅದಕ್ಕೆ ಬೆಲೆ ಕೊಡುತ್ತಿದ್ದೀರಿ ಎಂದು ಸಾಬೀತುಪಡಿಸಬೇಕು. ಒಮ್ಮೆ ಆಕೆಗೆ ನಿಮ್ಮ ಮೇಲೆ ನಂಬಿಕೆ ಬಂದರೆ ಆಮೇಲೆ ನೀವೇನು ಮಾಡಿದರೂ ಆಕೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ.

  4. ಆಕೆ ಬೆಳ್ಳಗಿರಲಿ, ಕಪ್ಪಗಿರಲಿ ಅಥವಾ ಎಣ್ಣೆಗೆಂಪು ಬಣ್ಣದವಳೇ ಆಗಿರಲಿ. ಪ್ರತಿಯೊಬ್ಬ ಹುಡುಗಿಗೂ ತನ್ನ ಸೌಂದರ್ಯದ ಬಗ್ಗೆ ಕಾಳಜಿ ಇದ್ದೇ ಇರುತ್ತದೆ. ನನ್ನ ಹುಡುಗನಿಗೆ ನಾನೀಗ ಮೊದಲಿನಷ್ಟು ಇಷ್ಟವಾಗುತ್ತಿಲ್ಲ, ನಾನು ಮೊದಲಿನಷ್ಟು ಚೆನ್ನಾಗಿ ಕಾಣುತ್ತಿಲ್ಲ ಎಂದು ಆಕೆಗೆ ಅನಿಸಿದರೆ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ಎಲ್ಲ ನಡವಳಿಕೆಗೂ ಅದನ್ನೇ ಲಿಂಕ್​ ಮಾಡುತ್ತಾಳೆ. ಹಾಗಾಗಿ, ನಿಮ್ಮ ಹುಡುಗಿ ಬೇರೆಯವರಿಗಿಂತ ಸುಂದರಳಾಗಿದ್ದಾಳೆ ಎಂದು ನೀವು ಹೇಳುತ್ತಿದ್ದರೆ ಆಕೆಗೂ ಕಂಫರ್ಟಬಲ್​ ಎನಿಸುತ್ತದೆ.

  ಪ್ರೇಮಿಗಳ​ ದಿನ ನಿಮ್ಮ ಪ್ರೀತಿಪಾತ್ರರಿಗೆ ಈ ಗಿಫ್ಟ್ ನೀಡಿ..!

  5. ನೀವು ಮೆಸೇಜ್​ ಮಾಡಿದಾಗ ಆಕೆ ಬ್ಯುಸಿ ಇದ್ದರೆ ಪರವಾಗಿಲ್ಲ. ಅದೇ ಅವಳು ಮೆಸೇಜ್​ ಮಾಡಿದಾಗ ನೀವು ರಿಪ್ಲೈ ಮಾಡದೆ ಇದ್ದರೆ ದೊಡ್ಡ ಪ್ರಮಾದವೇ ಆಗುತ್ತದೆ. ಆಕೆ ಒಂಟಿಯಾಗಿದ್ದಾಗ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತಾಳೆ. ಆಗ ನೀವು ಒಂದು ಕಾಲ್​ ಮಾಡಿ ಒಂದೆರಡು ಸೆಕೆಂಡ್​ ಮಾತನಾಡಿ ಅಥವಾ ಮೆಸೇಜ್​ ಮಾಡಿ. ಇಬ್ಬರ ನಡುವೆ ಜಗಳವಾದಾಗಲೂ ನೀವೇ ಮೊದಲು ಮೆಸೇಜ್​ ಮಾಡಲಿ ಎಂದು ಆಕೆ ನಿರೀಕ್ಷೆ ಮಾಡುತ್ತಿರುತ್ತಾಳೆ ಎಂಬುದನ್ನು ಮರೆಯಬೇಡಿ.

  6. ನಿಮ್ಮ ಗೆಳೆಯರ ಬಗ್ಗೆ ಅದರಲ್ಲೂ ಗೆಳತಿಯರ ಬಗ್ಗೆ ನಿಮ್ಮಾಕೆಯಿಂದ ಎಂದೂ ಮುಚ್ಚಿಡುವ ಪ್ರಯತ್ನ ಮಾಡಬೇಡಿ. ಅದೇನಾದರೂ ಆಕೆಗೆ ಗೊತ್ತಾಯಿತು ಎಂದರೆ ನಿಮ್ಮ ನಡುವೆ ಏನೂ ಇಲ್ಲದಿದ್ದರೂ ಆಕೆ ಬೇರೆಯದೇ ರೀತಿ ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ಗೆಳೆಯರ ಬಗ್ಗೆ ಆಕೆಯೊಂದಿಗೆ ಮುಕ್ತವಾಗಿ ಮಾತನಾಡಿ. ಆಗ ಆಕೆಯೂ ತನ್ನೆಲ್ಲ ವಿಷಯವನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತಾಳೆ.

  ನೀರಿಲ್ಲದೆ ಏನಿಲ್ಲ; ಜಿಮ್​ನಲ್ಲಿದ್ದಾಗ ಯಾಕೆ ನೀರು ಕುಡಿಯಬೇಕು ಗೊತ್ತಾ?

  7. ಆಗಾಗ ನಿಮ್ಮ ಹುಡುಗಿಗೆ ಸರ್​ಪ್ರೈಸ್​ ಕೊಡುವುದನ್ನು ಮರೆಯಬೇಡಿ. ಎಷ್ಟು ಮೌಲ್ಯದ ಗಿಫ್ಟ್​ ಕೊಡುತ್ತೀರಿ ಎಂಬುದಕ್ಕಿಂತ ಆಕೆಗೆ ಸರ್​​ಪ್ರೈಸ್​ ನೀಡುತ್ತಿದ್ದೀರಿ ಎಂಬುದಷ್ಟೇ ಆಕೆಗೆ ಮುಖ್ಯವಾಗಿರುತ್ತದೆ. ಹೀಗಾಗಿ, ದುಬಾರಿ ಉಡುಗೊರೆಗಳೇ ಬೇಕೆಂದೇನಿಲ್ಲ.

  8. ಒಮ್ಮೆ ನೀವು ಆಕೆಯನ್ನು ಮನಸ್ಫೂರ್ತಿಯಾಗಿ ಒಪ್ಪಿಕೊಂಡ ನಂತರ ಆಕೆಯ ಬಾಹ್ಯ ಸೌಂದರ್ಯದ ಬಗ್ಗೆ ಕಮೆಂಟ್​ ಮಾಡಬೇಡಿ. ಆಕೆಯೇನೂ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿಲ್ಲ. ಹಾಗಾಗಿ, ನಿಮ್ಮಾಕೆ ನಿಮ್ಮ ಜೊತೆಗೆ ಹೇಗೆ ಹೊಂದಿಕೊಳ್ಳುತ್ತಾಳೆ ಎಂಬುದಕ್ಕೆ ನೀವು ಆದ್ಯತೆ ನೀಡಬೇಕೇ ಹೊರತು ಆಕೆಯ ಸೌಂದರ್ಯದ ಬಗ್ಗೆಯಲ್ಲ.

  9. ನೀವು ನಿಮ್ಮ ಹುಡುಗಿಯ ಬಗ್ಗೆ ಎಷ್ಟು ಕೇರ್​ ಮಾಡುತ್ತೀರಿ ಎಂಬುದನ್ನು ತೋರಿಸಿಕೊಳ್ಳಲು ಸಣ್ಣ ಅವಕಾಶ ಸಿಕ್ಕರೂ ಬಿಡಬೇಡಿ.

  First published: