ಫುಡ್ ಪಾಯಿಸನ್ ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದು..!
ರೋಗ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವ ಬೆಳ್ಳುಳ್ಳಿ ಕೂಡ ಫುಡ್ ಪಾಯಿಸನ್ಗೆ ಉತ್ತಮ ಮನೆಮದ್ದು. ಇದು ಅತಿಸಾರಕ್ಕೆ ಪರಿಹಾರ ನೀಡುತ್ತದೆ. ಬೆಳ್ಳುಳ್ಳಿಯ ಹಸಿ ಮೊಗ್ಗುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನಿಂದ ಸೇವಿಸಿದರೆ, ಶೀಘ್ರದಲ್ಲೇ ಪರಿಹಾರ ಕಾಣಬಹುದು.
news18-kannada Updated:January 13, 2021, 7:30 AM IST

ಸಾಂದರ್ಭಿಕ ಚಿತ್ರ
- News18 Kannada
- Last Updated: January 13, 2021, 7:30 AM IST
ಹೊರಗಿನ ಆಹಾರ ಸೇವಿಸುವ ಮುನ್ನ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಅದರಲ್ಲೂ ಮಾನ್ಸೂನ್ನಲ್ಲಿ ಗಾಳಿಯ ಮೂಲಕ ಬ್ಯಾಕ್ಟೀರಿಯಾಗಳು ದೇಹ ಸೇರುವುದರಿಂದ ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒಬ್ಬ ವ್ಯಕ್ತಿಯು ಹಾಳಾದ ಅಥವಾ ಸೋಂಕಿತ ಆಹಾರವನ್ನು ಸೇವಿಸಿದಾಗ, ಅದು ಫುಡ್ ಪಾಯಿಸನ್ಗೆ ಕಾರಣವಾಗುತ್ತದೆ. ಫುಡ್ ಪಾಯಿಸನ್ ಆಗಲು ಮುಖ್ಯ ಕಾರಣವೆಂದರೆ ಹಾನಿಕಾರಕ ಸೂಕ್ಷ್ಮಜೀವಿಗಳು. ಸಾಂಕ್ರಾಮಿಕ ಜೀವಿಗಳಾದ ಬ್ಯಾಕ್ಟೀರಿಯಾ, ವೈರಸ್ಗಳು ಇತ್ಯಾದಿಗಳ ಸೇವನೆಯಿಂದ ಅಥವಾ ಅವುಗಳಿಂದ ಕಲುಷಿತಗೊಂಡ ಆಹಾರದಿಂದ ಇದು ಸಂಭವಿಸಬಹುದು. ಫುಡ್ ಪಾಯಿಸನ್ ಆದಾಗ ಅತಿಸಾರ, ವಾಕರಿಕೆ, ಹೊಟ್ಟೆ ನೋವು ಮತ್ತು ವಾಂತಿ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಕೆಲ ಆಹಾರಗಳ ಸೇವನೆ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಎಳನೀರು: ಫುಡ್ ಪಾಯಿಸನ್ ಲಕ್ಷಣವೆಂದರೆ ವಾಂತಿ ಅಥವಾ ಅತಿಸಾರ. ಇದರಿಂದ ದೇಹದ ಖನಿಜಗಳಾದ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಫಾಸ್ಫೇಟ್ ಮತ್ತು ಸೋಡಿಯಂ ಬಿಡುಗಡೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತೆಂಗಿನ ನೀರು ಅಥವಾ ಎಳನೀರು ದ್ರವದ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಹೊಟ್ಟೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಶುಂಠಿ ಚಹಾ: ಫುಡ್ ಪಾಯಿಸನ್ ಆದಾಗ ಶುಂಠಿ ಚಹಾ ಕುಡಿಯುವುದು ಕೂಡ ಉತ್ತಮ. ಶುಂಠಿಯಲ್ಲಿರುವ ಆಂಟಿಮೈಕ್ರೊಬಿಯಲ್ ಏಜೆಂಟ್ಗಳು ಆಹಾರದಿಂದ ಹರಡುವ ರೋಗಕಾರಕಗಳ ವಿರುದ್ಧ ಹೋರಾಡಲು ಮತ್ತು ಚೇತರಿಕೆ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ 2-3 ಬಾರಿ ಶುಂಠಿ ಕುಡಿಯಬಹುದು.
ಮೊಸರು: ಮೊಸರು ಒಂದು ರೀತಿಯ ಪ್ರತಿಜೀವಕವಾಗಿದೆ, ಆದ್ದರಿಂದ ಇದನ್ನು ಫುಡ್ ಪಾಯಿಸನ್ಗೆ ಮನೆಮದ್ದಾಗಿ ಸೇರಿಸಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಕಪ್ಪು ಉಪ್ಪು ಸೇರಿಸಿ ಸೇವಿಸಿದರೆ ಇನ್ನೂ ಉತ್ತಮ. ಇದಲ್ಲದೆ ಮೊಸರಿಗೆ ನೀರು ಮತ್ತು ಸಕ್ಕರೆಯನ್ನು ಸೇರಿಸಿ ಲಸ್ಸಿಯಂತೆ ಕುಡಿಯಬಹುದು.
ಬೆಳ್ಳುಳ್ಳಿ: ರೋಗ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವ ಬೆಳ್ಳುಳ್ಳಿ ಕೂಡ ಫುಡ್ ಪಾಯಿಸನ್ಗೆ ಉತ್ತಮ ಮನೆಮದ್ದು. ಇದು ಅತಿಸಾರಕ್ಕೆ ಪರಿಹಾರ ನೀಡುತ್ತದೆ. ಬೆಳ್ಳುಳ್ಳಿಯ ಹಸಿ ಮೊಗ್ಗುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನಿಂದ ಸೇವಿಸಿದರೆ, ಶೀಘ್ರದಲ್ಲೇ ಪರಿಹಾರ ಕಾಣಬಹುದು.
ಬಾಳೆಹಣ್ಣು: ಫುಡ್ ಪಾಯಿಸನ್ ಆದಾಗ, ಬಾಳೆಹಣ್ಣು ತಿನ್ನಲು ವೈದ್ಯರಿಗೆ ಸೂಚಿಸುತ್ತಾರೆ. ಇದರಿಂದ ಆಹಾರ ವಿಷದಿಂದ ಉಂಟಾಗುವ ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ಸೆಳೆತ ಇತ್ಯಾದಿಗಳ ಸಮಸ್ಯೆಯನ್ನು ತಡೆಯುತ್ತದೆ.
ತುಳಸಿ: ತುಳಸಿಯಲ್ಲಿ ಅನೇಕ ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳಿವೆ. ತುಳಸಿಯಲ್ಲಿರುವ ಆಂಟಿಮೈಕ್ರೊಬಿಯಲ್ ಏಜೆಂಟ್ಗಳು ಸ್ಟ್ಯಾಫಿಲೋಕೊಕಸ್ ಬೆಳವಣಿಗೆಯನ್ನು ತಡೆಯುತ್ತದೆ. ಇದು ಬ್ಯಾಕ್ಟೀರಿಯಂ ಆಗಿದ್ದು ಅದು ಸಾಮಾನ್ಯವಾಗಿ ಫುಡ್ ಪಾಯಿಸನ್ ಉಂಟುಮಾಡುತ್ತದೆ. ತುಳಸಿ ಎಲೆಗಳು ಆಹಾರದಿಂದ ಹರಡುವ ಸೂಕ್ಷ್ಮಜೀವಿಗಳಿಗೆ ಸಂಬಂಧಿಸಿದ ಹೊಟ್ಟೆ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಳಸಿ ರಸವನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ.
ಎಳನೀರು: ಫುಡ್ ಪಾಯಿಸನ್ ಲಕ್ಷಣವೆಂದರೆ ವಾಂತಿ ಅಥವಾ ಅತಿಸಾರ. ಇದರಿಂದ ದೇಹದ ಖನಿಜಗಳಾದ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಫಾಸ್ಫೇಟ್ ಮತ್ತು ಸೋಡಿಯಂ ಬಿಡುಗಡೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತೆಂಗಿನ ನೀರು ಅಥವಾ ಎಳನೀರು ದ್ರವದ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಹೊಟ್ಟೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.